Latest Updates
-
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್!
ಅಸಿಡಿಟಿಯನ್ನು ಕಮ್ಮಿ ಮಾಡುವ ಮಾರ್ಗಗಳು
ನಮ್ಮ ಹೊಟ್ಟೆಯಲ್ಲಿ ಸ್ವಾಭಾವಿಕವಾಗಿ ಆಸಿಡಿಕ್ ದ್ರಾವಣವಿರುತ್ತದೆ. ಇದು ಜೀರ್ಣಕ್ರಿಯೆಗೆ ಅವಶ್ಯಕ ಕೂಡ. ಆದರೆ ಈ ಆಸಿಡ್ ಅಧಿಕವಾದಾಗ ಮಾತ್ರ ತೊಂದರೆ ಉಂಟಾಗುವುದು. ಇದನ್ನೇ ನಾವು ಅಸಿಡಿಟಿ ಎಂದು ಕರೆಯುವುದು. ಹೊಟ್ಟೆಯಲ್ಲಿ ಆಸಿಡ್ ಹೆಚ್ಚಾದಾಗ ಎದೆಯಲ್ಲಿ ಉರಿ ಕಂಡು ಬರುವುದು.
ಈ ಆಸಿಡ್ ಅಂಶವನ್ನು ಕೆಲವೊಂದು ನೈಸರ್ಗಿಕ ವಿಧಾನಗಳ ಮುಖಾಂತರ ಕಮ್ಮಿ ಮಾಡಬಹುದು. ಇಲ್ಲಿ ನಾವು ಹೊಟ್ಟೆಯಲ್ಲಿ ಆಸಿಡ್ ಹೆಚ್ಚು ಉತ್ಪತ್ತಿಯಾಗುವುದನ್ನು ತಡೆಯುವ ವಿಧಾನಗಳನ್ನು ಹೇಳಿದ್ದೇವೆ, ಇವುಗಳನ್ನು ಪಾಲಿಸಿದರೆ ಖಂಡಿತ ಅಸಿಡಿಟಿಯ ತೊಂದರೆಯಿಲ್ಲದೆ ಆರೋಗ್ಯಕರ ಜೀವನ ನಡೆಸಬಹುದು:

* ಈ ರೀತಿಯ ಸಮಸ್ಯೆಗೆ ಪ್ರಮುಖ ಕಾರಣವೆಂದರೆ ಜೀವನ ಶೈಲಿ. ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದರೆ ಮತ್ತು ಸರಿಯಾದ ಆಹಾರಕ್ರಮ ಪಾಲಿಸಿದರೆ ಈ ಸಮಸ್ಯೆ ಕಂಡು ಬರುವುದಿಲ್ಲ.
* ನೀರನ್ನು ಕಮ್ಮಿ ಪ್ರಮಾಣದಲ್ಲಿ ಕುಡಿದರೆ ಈ ರೀತಿಯ ಸಮಸ್ಯೆ ಕಂಡು ಬರುವುದು. ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ.
* ಸುಲಭವಾಗಿ ಜೀರ್ಣವಾಗದ ಆಹಾರಗಳನ್ನು ತಿಂದಾಗಲೂ ಅಸಿಡಿಟಿ ಸಮಸ್ಯೆ ಕಂಡು ಬರುವುದು. ಇನ್ನು ಕೆಲವು ಆಹಾರಗಳಿವೆ ಇವುಗಳು ಅಸಿಡಿಟಿ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ, ಅಂತಹ ಆಹಾರಗಳನ್ನು ತಿನ್ನಬಾರದು. ಖಾರದ ಪದಾರ್ಥಗಳನ್ನು ಮುಟ್ಟಲೇಬಾರದು. ಆಹಾರದಲ್ಲಿ ಪ್ರಮುಖವಾಗಿ ಈ ಮೂರು ಅಂಶಗಳನ್ನು ಗಮನಿಸಿದರೆ ಅಸಿಡಿಟಿ ಸಮಸ್ಯೆಯನ್ನು ಸುಲಭದಲ್ಲಿ ಕಡಿಮೆ ಮಾಡಬಹುದು.
* ಉಪ್ಪು ಅಧಿಕವಿರುವ ಆಹಾರಗಳನ್ನು ತಿಂದಾಗ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಅಸಿಡಿಟಿ ಸಮಸ್ಯೆ ಕಂಡು ಬರುವುದು. ಒಂದು ವೇಳೆ ಈಗಾಗಲೇ ಅಸಿಡಿಟಿಯಿಂದ ತೊಂದರೆ ಅನುಭವಿಸಿದ್ದರೆ ಅಧಿಕ ಉಪ್ಪಿರುವ ಅಂಶಗಳನ್ನು ಮುಟ್ಟಲೇ ಬೇಡಿ.
ಮನೆಮದ್ದುಗಳು
* ಅಸಿಡಿಟಿ ಆದಾಗ ಒಂದು ಗ್ಲಾಸ್ ಕಾಯಿಸದ ಹಾಲನ್ನು ಕುಡಿದರೆ ತಕ್ಷಣ ಎದೆ ಉರಿ ಕಡಿಮೆಯಾಗುವುದು. ಅಸಿಡಿಟಿಯನ್ನು ಕಮ್ಮಿ ಮಾಡುವಲ್ಲಿ ಇದೊಂದು ಸೂಪರ್ ಮನೆ ಮದ್ದಾಗಿದೆ.
* ಪುದೀನಾ ಎಲೆಯನ್ನು ಜಗಿಯಿರಿ. ಇದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುವುದು ಹಾಗೂ ಎದೆ ಉರಿ ಕೂಡ ತಕ್ಷಣ ಕಡಿಮೆಯಾಗುವುದು.
* ಶುಂಠಿ, ಓಟ್ಸ್, ಲೋಳೆಸರ, ಬ್ರೊಕೋಲಿ, ಬೀನ್ಸ್, ಹೂಕೋಸು , ಸೊಪ್ಪು ಇವುಗಳು ಅಸಿಡಿಟಿಯನ್ನು ಕಮ್ಮಿ ಮಾಡುವ ಆಹಾರಗಳಾಗಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications