Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನಾವು ನಿದ್ದೆ ಮಾಡುವ ಸಮಯವೇ ವ್ಯರ್ಥವೇ?
ಮಾರ್ಚ್ 15ನೇ ತಾರೀಕನ್ನು ವಿಶ್ವ ನಿದ್ದೆಯ ದಿನವೆಂದು ಆಚರಿಸುತ್ತಾರೆ. ಹಾಗಂತ ಆಫೀಸ್ ನಲ್ಲಿ ನಿದ್ದೆ ಮಾಡಬೇಡಿ, ಬಾಸ್ ನೋಡಿದರೆ ಕಷ್ಟವಾಗಬಹುದು. ದಿನದ 24 ಗಂಟೆಯಲ್ಲಿ 7-8 ಗಂಟೆಗಳನ್ನು ನಿದ್ದೆಯಲ್ಲಿ ಕಳೆಯುತ್ತೇವೆ, ಆದ್ದರಿಂದ ದಿನದಲ್ಲಿ 7-8 ಗಂಟೆ ಸಮಯವೆಂದರೆ ನಮ್ಮ ಆಯಸ್ಸಿನಲ್ಲಿ ಸುಮಾರು ಕಾಲು ಭಾಗಕ್ಕಿಂತ ಹೆಚ್ಚಿನ ಸಮಯವನ್ನು ಸುಮ್ಮನೇ ನಿದ್ದೆಯಲ್ಲಿ ಕಳೆಯುತ್ತೀದ್ದೇವೆ ! ನಿಜವಾಗಲೂ ನಾವು ನಿದ್ದೆ ಮಾಡುವ ಸಮಯವೇ ವ್ಯರ್ಥವೇ? ವ್ಯರ್ಥವೆಂದು ನಿಮಗೆ ಅನಿಸಿದರೆ ಖಂಡಿತ ನೀವೊಬ್ಬ ಹಾರ್ಡ್ ವರ್ಕರ್ ಆಗೀರುತ್ತೀರಿ. ಗುರಿ ಮುಟ್ಟಲು ಸಮಯ ಕಳೆಯದೆ ಪ್ರಯತ್ನಿಸುತ್ತಿರುವ ನಿಮ್ಮ ಛಲಕ್ಕೆ ಒಂದು ಹ್ಯಾಟ್ಸಪ್.
ಆದರೆ ನಿಮಗೊಂದು ಸಲಹೆ ನೀಡಲು ಇಷ್ಟಪಡುತ್ತೇನೆ. ನೀವು ಸಮಯವನ್ನು ವ್ಯರ್ಥ ಮಾಡದಿರಲು, ಗುರಿಯನ್ನು ಸಾಧಿಸಲು ನಿಮ್ಮ ನಿದ್ದೆಯ ಸಮಯವನ್ನು ಮಾತ್ರ ಉಪಯೋಗಿಸಬೇಡಿ. ನೀವು ಮಲಗಿದ ಆ ಸಮಯದಲ್ಲಿ ನಿಮ್ಮ ದೇಹಕ್ಕೆ ವಿಶ್ರಾಂತಿ ದೊರೆಯುವುದು ಮಾತ್ರವಲ್ಲ ನೀವೂ ಕೂಡ ಈ ಕೆಳಗಿನ ಪ್ರಮುಖ ಗುಣಗಳನ್ನು ಪಡೆಯಬಹುದು:

ಒಳ್ಳೆಯ ಮೂಡ್
ಯಾವುದೇ ಕೆಲಸ ಮಾಡಲು ಮೂಡ್ ಚೆನ್ನಾಗಿರಬೇಕು. ದೇಹದಲ್ಲಿ ಚೈತನ್ಯ ಇರಬೇಕು. ಇವೆಲ್ಲಾ ನಿದ್ದೆ ಮಾಡಿದರೆ ಸಾಧ್ಯ.

ಮೆದುಳಿನ ಸಾಮರ್ಥ್ಯ ಹೆಚ್ಚಿಸುತ್ತದೆ
ಪರೀಕ್ಷೆಯಲ್ಲಿ ಉತ್ತಮ ಅಂಕ ಬೇಕೆಂದು ಬಯಸುವ ಮಕ್ಕಳಿಗೆ ಒಂದು ಆಪ್ತ ಸಲಹೆಯೆಂದರೆ ಚೆನ್ನಾಗಿ ನಿದ್ದೆ ಮಾಡಿ. ನಿದ್ದೆ ಮಾಡದೇ ತುಂಬಾ ಓದಿ ಪರೀಕ್ಷೆಯಲು ಕುಳಿತಾಗ ಉತ್ತರಗಳು ಮರೆತು ಹೋಗಬಹುದು. ಆದ್ದರಿಂದ ಎಕ್ಸಾಂ ಸಮಯದಲ್ಲಿ ಕಮ್ಮಿಯೆಂದರೂ 6 ಗಂಟೆ ನಿದ್ದೆ ಮಾಡಿ. ಇನ್ನು ದೊಡ್ಡವರೂ ಅಷ್ಟೇ ನಿದ್ದೆ ಸರಿಯಾಗಿ ಮಾಡದಿದ್ದರೆ ಜ್ಞಾಪಕ ಶಕ್ತಿ ಕಡಿಮೆಯಾಗುತ್ತಾ ಬರುತ್ತದೆ.

ಆಯಸ್ಸು ಹೆಚ್ಚುತ್ತದೆ
ನಿದ್ದೆ ಸರಿಯಾಗಿ ಮಾಡದಿದ್ದರೆ ಆಯಸ್ಸು ಕಮ್ಮಿಯಾಗುವುದು. 5 ಗಂಟೆಗಳಿಗಿಂತ ಕಡಿಮೆ 8 ಗಂಟೆಗಳಗಿಂತ ಅಧಿಕ ನಿದ್ದೆ ಮಾಡುವವರು ಬೇಗನೆ ಸಾಯುತ್ತಾರೆ ಎಂದು 2010ರಲ್ಲಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಸ್ನಾಯು ಸೆಳೆತ
ನಿಮಗೆ ಸ್ನಾಯು ಸೆಳೆತ ಉಂಟಾದರೆ ನಿದ್ದೆ ಕಡಿಮೆಯಾಗಿರುವುದು ಕೂಡ ಒಂದು ಕಾರಣವಾಗಿರಬಹುದು.

ಕ್ರಿಯೇಟಿವಿಟಿ
ಕ್ರಿಯೇಟಿವಿಟಿಗೆ ಮೆದುಳು ಚುರುಕಾಗಿ ಕೆಲಸ ಮಾಡಬೇಕು. ನಿದ್ದೆ ಸರಿಯಾಗಿ ಮಾಡದಿದ್ದರೆ ನಿಮ್ಮ ಮೆದುಳು ಚಿಂತನಾ ಸಾಮರ್ಥ್ಯವನ್ನು ಕಳೆದುಕೊಳ್ಳುವುದು.

ಪ್ರತಿಭೆ
ನಿದ್ದೆ ಸರಿಯಾಗ ಮಾಡದಿದ್ದರೆ ನಿಮ್ಮ ಪ್ರತಿಭೆಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ. ಸ್ಪೋರ್ಟ್ಸ್ ನಲ್ಲಿರುವವರು ನಿಗದಿತ ಸಮಯದ ನಿದ್ದೆಯನ್ನು ಮಾಡುವುದು ಗೆಲ್ಲಲು ಅವಶ್ಯಕ.

ಸರಿಯಾದ ತೂಕ
ತೂಕದ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ ಸರಿಯಾಗಿ ನಿದ್ದೆ ಮಾಡದಿದ್ದರೆ ಕೆಲವರು ವಿಪರೀತ ದಪ್ಪಗಾಗುತ್ತಾರೆ, ಮತ್ತೆ ಕೆಲವು ವಿಪರೀತ ತೆಳ್ಳಗಾಗುತ್ತಾರೆ. ಸರಿಯಾದ ನಿದ್ದೆ ಆರೋಗ್ಯದ ಮೈಕಟ್ಟನ್ನು ನೀಡುತ್ತದೆ.

ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ
ನಿದ್ದೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಸರಿಯಾಗಿ ನಿದ್ದೆ ಮಾಡದಿದ್ದರೆ ಖಿನ್ನತೆ ಉಂಟಾಗುತ್ತದೆ. ಸಂತೋಷವಾಗಿ ಇರಲು ನಿದ್ದೆ ಅವಶ್ಯಕ.

ಶೀತ, ಕೆಮ್ಮಿಗೂ ನಿದ್ದೆ ಇಲ್ಲದಿರುವುದು ಕಾರಣ
ನಿದ್ದೆ ಸರಿಯಾಗಿ ಮಾಡದಿದ್ದರೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಾಗುವುದು. ಶೀತ, ಕೆಮ್ಮು, ತಲೆನೋವು ಕಾಣಿಸಿಕೊಳ್ಳುವುದು.

ಹೃದಯದ ಆರೋಗ್ಯಕ್ಕೆ
ತುಂಬಾ ನಿದ್ದೆ ಕೆಡುವವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ.

ಮಧುಮೇಹಕ್ಕೂ ನಿದ್ದೆಗೂ ಸಂಬಂಧವಿದೆ
ನಿದ್ದೆ ಕಡಿಮೆ ಮಾಡಿದರೆ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಕಡಿಮೆಯಾಗಿ ಸಕ್ಕರೆಯಂಶ ಅಧಿಕವಾಗುತ್ತದೆ. ಇದರಿಂದ ಟೈಪ್ 2 ಮಧುಮೇಹ ಉಂಟಾಗುತ್ತದೆ.



Click it and Unblock the Notifications
