Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅತಿಯಾದ ವ್ಯಾಯಾಮದ ಚಿಹ್ನೆಗಳು
ದೈನಂದಿನ ಜೀವನದಲ್ಲಿ ನಮ್ಮ ದೇಹವನ್ನು ಫಿಟ್ ಹಾಗೂ ಆರೋಗ್ಯವಾಗಿಡಲು ನಿಯಮಿತ ವ್ಯಾಯಾಮ ತುಂಬಾ ಮುಖ್ಯ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದ ಕೊಬ್ಬು ಕರಗುವುದಲ್ಲದೆ, ಅನಾರೋಗ್ಯದಿಂದ ದೂರವಿಡುತ್ತದೆ. ಆದರೆ ಅತಿಯಾದ ವ್ಯಾಯಾಮವು ಇದರ ತದ್ವಿರುದ್ಧ ಫಲಿತಾಂಶ ನೀಡಬಹುದು. ವಿಪರೀತ ವ್ಯಾಯಾಮದಿಂದ ಅದು ನಿಮ್ಮ ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಯಾವತ್ತೂ ನಿರೀಕ್ಷಿಸಬೇಡಿ. ವಿಪರೀತ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹವು ಅತಿಯಾಗಿ ದಣಿಯುತ್ತದೆ. ಇದು ನಿಮ್ಮ ಬಲವನ್ನು ಕಡಿಮೆ ಮಾಡಿ ಒತ್ತಡ ಹೆಚ್ಚಿಸಬಹುದು.
ನಿಮ್ಮ ದೈನಂದಿನ ಜೀವನದಲ್ಲಿ ವೈವಿಧ್ಯ ಫಿಟ್ ನೆಸ್ ಯೋಜನೆಯನ್ನು ಅಳವಡಿಸಲು ಎದುರು ನೋಡುತ್ತಿದ್ದರೆ, ಆಗ ನೀವು ಅರ್ಹ ಫಿಟ್ನೆಸ್ ತರಬೇತುದಾರನ ಮಾರ್ಗದರ್ಶನ ಪಡೆಯಿರಿ. ನಿಮ್ಮ ವ್ಯಾಯಾಮವು ಆರೋಗ್ಯಕರವಾಗಿರಬೇಕಾದರೆ ನಿಮ್ಮ ದೇಹವು ವ್ಯಾಯಾಮಕ್ಕೆ ಹೊಂದಿಕೊಳ್ಳುತ್ತಿದೆಯಾ ಎಂದು ನೋಡಬೇಕು. ಅತಿಯಾದ ವ್ಯಾಯಾಮವು ಆರಂಭದಲ್ಲೇ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಇದು ದೈಹಿಕ ಅಥವಾ ಮಾನಸಿಕ ಸೂಚನೆ ಮತ್ತು ಚಿಹ್ನೆಗಳಾಗಿರಬಹುದು.
ಅತಿಯಾದ ಒತ್ತಡದಿಂದ ನಿಮ್ಮ ದೇಹವು ತೋರಿಸುವ ಕೆಲವೊಂದು ಚಿಹ್ನೆಗಳತ್ತ ಗಮನಹರಿಸಿ. ನಿಮ್ಮ ದೇಹವು ವ್ಯಾಯಾಮ ಕ್ರಮಕ್ಕೆ ಒಗ್ಗಿಕೊಂಡಿದೆಯಾ ಎಂದು ಅರ್ಥಮಾಡಿಕೊಳ್ಳಲು ಅತಿಯಾದ ವ್ಯಾಯಾಮದಿಂದಾಗುವ ಕೆಲವೊಂದು ಸಾಮಾನ್ಯ ಚಿಹ್ನೆಗಳನ್ನು ಇಲ್ಲಿ ನೀಡಲಾಗಿದೆ.

ದಣಿಯುವುದು
ನೀವು ಶಕ್ತಿ ಪಡೆಯುವ ಬದಲು ದಣಿದರೆ ನಿಮ್ಮ ದೇಹವು ಅತಿಯಾದ ವ್ಯಾಯಾಮದ ಚಿಹ್ನೆ ತೋರಿಸುತ್ತಿದೆ ಎಂದು ಅರ್ಥ ಮಾಡಿಕೊಳ್ಳಿ. ದಣಿವಿನಿಂದ ನಿಮ್ಮ ಸಾಮಾನ್ಯ ವ್ಯಾಯಾಮವನ್ನು ಮಾಡಲು ಸಾಧ್ಯವಾಗುತ್ತಿಲ್ಲವೆಂದಾದರೆ ಅತಿಯಾದ ವ್ಯಾಯಾಮದ ಪ್ರಯತ್ನದಿಂದ ನಿಮ್ಮ ದೇಹ ದಣಿಯುತ್ತಿದೆ ಎಂದರ್ಥ.

ಬಳಲಿಕೆ
ವ್ಯಾಯಾಮದಿಂದ ನಿಮ್ಮ ಶಕ್ತಿ ವರ್ಧಿಸುವ ಬದಲು ಬಳಲಿಕೆಯಾಗುತ್ತಿದ್ದರೆ ಇದು ಅತಿಯಾದ ವ್ಯಾಯಾಮದ ಲಕ್ಷಣವೆಂದು ನೀವು ಅರ್ಥಮಾಡಿಕೊಳ್ಳಿ. ಬಳಲಿಕೆಯಿಂದ ನಿಮ್ಮ ಪ್ರದರ್ಶನ ಮತ್ತು ಏಕಾಗ್ರತೆ ಕಳಕೊಳ್ಳಬಹುದು. ಇದು ಅತಿಯಾದ ವ್ಯಾಯಾಮದ ಸಾಮಾನ್ಯ ಲಕ್ಷಣ.

ಹಾರ್ಮೋನಿನ ಅಸಮತೋಲನ
ಅತಿಯಾದ ವ್ಯಾಯಾಮದಿಂದ ಪುರುಷರು ಹಾಗೂ ಮಹಿಳೆಯರಲ್ಲಿ ಹಾರ್ಮೋನಿನ ಅಸಮತೋಲವಾಗಬಹುದು. ಇದರಿಂದ ಮಹಿಳೆಯರ ಋತುಚಕ್ರದ ಮೇಲೂ ಪರಿಣಾಮವಾಗಬಹುದು. ಅತಿಯಾದ ವ್ಯಾಯಾಮದಿಂದ ಒತ್ತಡದ ಹಾರ್ಮೋನ್, ಕೊರ್ಟಿಸೊಲ್ ಹೆಚ್ಚಾಗಿ ಹಾರ್ಮೋನ್ ಅಸಮತೋಲನ ಉಂಟು ಮಾಡುತ್ತದೆ.

ಸ್ನಾಯು ನೋವು
ಮೊದಲ ಸಲ ವ್ಯಾಯಾಮ ಮಾಡಲು ಆರಂಭಿಸಿದಾಗ ಸ್ನಾಯು ನೋವು ಆಗುವುದು ಸಾಮಾನ್ಯ. ಆದರೆ ಈ ನೋವು ನಿಮ್ಮನ್ನು ದೀರ್ಘಾವಧಿಗೆ ಕಾಡುತ್ತಿದ್ದರೆ ಆಗ ನೀವು ವ್ಯಾಯಾಮದ ಬಗ್ಗೆ ಮತ್ತೊಮ್ಮೆ ಗಮನಿಸಬೇಕಾಗುತ್ತದೆ. ಇದು ಅತಿಯಾದ ವ್ಯಾಯಾಮಕ್ಕೆ ದೇಹ ತೋರಿಸುತ್ತಿರುವ ಚಿಹ್ನೆಯಾಗಿರಬಹುದು.

ಭಾವನಾತ್ಮಕ ಒತ್ತಡ
ಅತಿಯಾದ ಒತ್ತಡವು ನಿಮ್ಮ ದೇಹದ ಮೇಲೆ ಮಾತ್ರವಲ್ಲದೆ, ಮನಸ್ಸಿನ ಮೇಲೆಯೂ ಪರಿಣಾಮ ಬೀರಬಹುದು. ನೀವು ಸರಿಯಾಗಿ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲವೆಂದು ಭಾವನಾತ್ಮಕವಾಗಿ ಒತ್ತಡಕ್ಕೊಳಗಾಗಬಹುದು. ಇದು ಅತಿಯಾದ ವ್ಯಾಯಾಮದ ಮಾನಸಿಕ ಹಾಗೂ ದೈಹಿಕ ಚಿಹ್ನೆಗಳು.

ವಿಳಂಬವಾಗಿ ಚೇತರಿಕೆ
ಸಾಮಾನ್ಯವಾಗಿ ವ್ಯಾಯಾಮಕ್ಕೆ ಸ್ವಲ್ಪ ಸಮಯದ ಚೇತರಿಕೆ ಬೇಕಾಗುತ್ತದೆ. ಆದರೆ ಬಳಲಿಕೆ ಮತ್ತು ಆಯಾಸದಿಂದ ಚೇತರಿಸಿಕೊಳ್ಳಲು ನಿಮ್ಮ ದೇಹಕ್ಕೆ ಹೆಚ್ಚಿನ ಸಮಯ ಬೇಕಾದರೆ ಅದು ಅತಿಯಾದ ವ್ಯಾಯಾಮದ ಚಿಹ್ನೆಯೆನ್ನುವುದು ಸ್ಪಷ್ಟ.

ನಿದ್ರಾಹೀನತೆ
ಅತಿಯಾದ ವ್ಯಾಯಾಮದಿಂದ ನಿಮ್ಮ ಸಾಮಾನ್ಯ ನಿದ್ರೆಯ ಮೇಲೆ ಪರಿಣಾಮವಾಗಬಹುದು. ಅತಿಯಾದ ವ್ಯಾಯಾಮದಿಂದ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಒಳ್ಳೆಯ ನಿದ್ರೆ ಬದಲು ನಿಮಗೆ ನಿದ್ರಾಭಂಗ ಮತ್ತು ಆಯಾಸವಾಗಬಹುದು.

ಆಸಕ್ತಿ ಕಳಕೊಳ್ಳುವುದು
ಅತಿಯಾದ ವ್ಯಾಯಾಮದಿಂದಾಗಿ ವ್ಯಾಯಾಮ ಮಾಡುವ ಆಸಕ್ತಿಯೇ ಕಳಕೊಳ್ಳಬಹುದು. ಅತಿಯಾದ ಒತ್ತಡದ ದೈಹಿಕ ಮತ್ತು ಮಾನಸಿಕ ಚಿಹ್ನೆಗಳಿಂದಾಗಿ ನೀವು ವ್ಯಾಯಾಮ ಮಾಡುವುದನ್ನೇ ಬಿಡುವ ಬಗ್ಗೆ ಯೋಚಿಸಬಹುದು.

ನಿರ್ಜಲೀಕರಣ
ವ್ಯಾಯಾಮದ ವೇಳೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ತುಂಬಾ ಮುಖ್ಯ. ಅತಿಯಾದ ವ್ಯಾಯಾಮದಿಂದ ನಿಮ್ಮ ದೇಹವು ನಿರ್ಜಲೀಕರಣವಾಗಬಹುದು. ಇದು ನಿರ್ಜಲೀಕರಣದೊಂದಿಗೆ ಅತಿಯಾದ ವ್ಯಾಯಾಮದ ಮತ್ತೊಂದು ಚಿಹ್ನೆಯಾಗಿದೆ.

ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು
ಅತಿಯಾದ ವ್ಯಾಯಾಮದಿಂದ ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ನಿಮಗೆ ಸೋಂಕು ಅಥವಾ ಉರಿಯೂತ ಆಗಾಗ ಕಾಡುತ್ತಿರಬಹುದು. ಇದರಿಂದ ಚೇತರಿಕೆಗೆ ನಿಮಗೆ ಹೆಚ್ಚಿನ ಸಮಯ ಬೇಕಾಗಬಹುದು. ರೋಗನಿರೋಧಕ ಶಕ್ತಿಯ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದಿರುವುದು ಅತಿಯಾದ ವ್ಯಾಯಾಮದ ಒಂದು ಸೂಚನೆ.



Click it and Unblock the Notifications
