Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಪ್ರಾನ್ಸ್ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ಧಿ
ಸೀಗಡಿ ಮೀನಿನ ಪ್ರಿಯರೇ ನೀವು? ಹಾಗಾದರೆ ನಿಮಗೊಂದು ಖುಷಿಯ ವಿಷಯ ಹೇಳಲು ಇಚ್ಚಿಸುತ್ತೇವೆ. ಸೀಗಡಿ ತಿನ್ನುವುದರಿಂದ ನಾನಾ ಬಗೆಯ ಆರೋಗ್ಯಕರ ಲಾಭವನ್ನು ಪಡೆಯಬಹುದು. ಸೀಗಡಿ ಮೀನಿನಿಂದ ಆರೋಗ್ಯಯುತ ಮೂಳೆ, ಮಿದುಳಿನ ಅರೋಗ್ಯ ,ಸಮತೋಲಿತ ತೂಕ ,ಹೃದಯ ಸಂಬಂಧಿ ಕಾಯಿಲೆಗಳು ಇವುಗಳನ್ನೆಲ್ಲ ಹತೋಟಿಯಲ್ಲಿಡಬಹುದು. ಸೀಗಡಿ ಉರಿಯೂತ ತಡೆಯುತ್ತದೆ,ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ ಮತ್ತು ತಾರುಣ್ಯವನ್ನು ಕಾಪಾಡುತ್ತದೆ.ಸೀಗಡಿ ತಾರುಣ್ಯ ಕಾಪಾಡುತ್ತದೆ ಮತ್ತು ಕಣ್ಣಿನ ಆಯಾಸವನ್ನು ನಿವಾರಿಸುತ್ತದೆ,ಮುಟ್ಟಿನ ಸಮಯದಲ್ಲಿ ಕಾಣುವ ನೋವನ್ನು ಕೂಡ ಹೋಗಲಾಡಿಸುತ್ತದೆ.ಒಟ್ಟಾರೆಯಾಗಿ ಸೀಗಡಿಯಿಂದ ಅರೋಗ್ಯಯುತವಾಗಿ ಇರಬಹುದು.
ಆಹಾರದಲ್ಲಿ ಹೆಚ್ಚುವರಿ ಕಾರ್ಬೋಹೈಡ್ರೇಟ್ ಅನ್ನು ತಡೆಯಲು ಬಯಸುವವರು ಸೀಗಡಿ ಬಳಸಬಹುದು ಇದರಲ್ಲಿ ಅತಿ ಕಡಿಮೆ ಕ್ಯಾಲೋರಿ ಹೊಂದಿದ್ದು ಇದರಲ್ಲಿ ಕಾರ್ಬೋಹೈಡ್ರೇಟ್ ಇರುವುದಿಲ್ಲ.ಜೈವಿಕ ಅಹಾರವಾಗಿರುವ ಸೀಗಡಿಯಲ್ಲಿ ಪ್ರೋಟಿನ್ ಅಧಿಕವಾಗಿದ್ದು,ಸ್ವಲ್ಪ ಮಟ್ಟಿಗೆ ಕೊಬ್ಬು ಕೂಡ ಇದೆ.ಸೀಗಡಿಯಿಂದಾಗುವ ಅತಿ ಹೆಚ್ಚು ಅನುಕೂಲವೆಂದರೆ ಇದರಲ್ಲಿ ಹೆಚ್ಚು ವಿಟಮಿನ್ ಮತ್ತು ಪೋಷಕಾಂಶಗಳು ದೊರೆಯುತ್ತವೆ. ಸೀಗಡಿಯಲ್ಲಿ ಕ್ಯಾಲ್ಸಿಯಂ,ಸೋಡಿಯಂ,ರಂಜಕ, ಸತು,ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂ ವಿಟಮಿನ್ ಇ,ಮತ್ತು B6 ಜೊತೆಗೆ,ಮತ್ತು ವಿಟಮಿನ್ ಬಿ 12,ಥಯಮಿನ್,ರಿಬೋಫ್ಲಾವಿನ ಮತ್ತು ನಿಯಾಸಿನ್ ಅಯೋಡಿನ್ ದೊರೆಯುತ್ತದೆ.ಸೀಗಡಿಯಿಂದ ಸಮತೋಲಿತ ಪೋಷಕಾಂಶ ಮತ್ತು ಆರೋಗ್ಯಕರ ದೇಹ ಪಡೆಯಲು ಸಹಾಯಕವಾಗುವುದು, ಬನ್ನಿ ಇದರ ಆರೋಗ್ಯಕರ ಗುಣಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:

ತೂಕ ಕಮ್ಮಿಮಾಡುತ್ತೆ
ಸೀಗಡಿಯಲ್ಲಿ ಪ್ರೋಟಿನ್ ಮತ್ತು ವಿಟಮಿನ್ ಡಿ ಅಧಿಕವಿದೆ.ತೂಕವನ್ನು ಕಡಿಮೆ ಮಾಡಲು ಈ ಸಮುದ್ರ ಆಹಾರ ಉತ್ತಮ ವಿಧಾನ ಎನ್ನಬಹುದು.ಸೀಗಡಿಯಲ್ಲಿ ಅಧಿಕ ಪ್ರಮಾಣದಲ್ಲಿ ಅಸ್ತಾಕ್ಸಾಂತಿನ್ ಎಂಬ ಉತ್ತಮ ಉತ್ಕರ್ಷಣಾ ನಿರೋಧಕವಿದೆ.ಇದು ವಯಸ್ಸನ್ನು ಮರೆಮಾಚಲು ಸಹಾಯಕವಾಗುತ್ತದೆ.ಚರ್ಮದಲ್ಲಿ ನೆರಿಗೆಗಳಾಗಿದ್ದರೆ ವಾರದಲ್ಲಿ ಎರಡು ಭಾರಿ ಸಿಗಡಿ ಬಳಸುವುದರಿಂದ ಹೋಗಲಾಡಿಸಬಹುದು.

ವಯಸ್ಸಿಗೆ ಸಂಬಂಧಿಸಿದ ಮಸ್ಕ್ಯುಲರ್ ಅನ್ನು ನಿವಾರಿಸುತ್ತದೆ
ಅಧ್ಯಯನಗಳು ತಿಳಿಸುವ ಪ್ರಕಾರ ಸೀಗಡಿಯಲ್ಲಿ ಇರುವ ಹೆಪರಿನ್ ಎಂಬ ಅಂಶ neovascular AMD ಹೊಂದಿದ್ದು ತಾರುಣ್ಯ ಕಾಪಾಡುತ್ತದೆ.ಜೊತೆಗೆ ಕಂಪ್ಯೂಟರ್ ಅನ್ನು ಹೆಚ್ಚು ಸಮಯ ಬಳಸುವವರಿಗೆ ಕಣ್ಣಿನ ಅರೋಗ್ಯ ಕಾಪಾಡಲು ಇದು ಸಹಾಯಕವಾಗಿದೆ.

ಕೂದಲು ಉದುರುವಿಕೆ ತಡೆಯುತ್ತದೆ
ಸೀಗಡಿಯಲ್ಲಿರುವ ಖನಿಜಾಂಶ ಅರೋಗ್ಯ ಕಾಪಾಡುತ್ತದೆ. ಸತುವಿನ ಕೊರತೆಯಿಂದ ಕೂದಲು ಉದುರಬಹುದು ಸೀಗಡಿಯಲ್ಲಿ ಇದರ ಅಂಶ ಹೆಚ್ಚು ಇರುವುದರಿಂದ ಕೂದಲು ಉದುರುವಿಕೆಯನ್ನು ಅಥವಾ ಕೂದಲ ಬೆಳವಣಿಗೆಯಲ್ಲಿ ತೊಂದರೆ ಇದ್ದರೆ ಅದನ್ನು ತಡೆಯುತ್ತದೆ.

ಹೃದಯದ ಆರೋಗ್ಯ
Thrombolytic ಥೆರಪಿ ಗೆ ಬಳಸಲಾಗುವ fibrinolytic ಕಿಣ್ವ ಸೀಗಡಿಯಿಂದ ದೊರೆಯುವುದರಿಂದ ಹೃದಯದ ಅರೋಗ್ಯ ಕಾಪಾಡುವಲ್ಲಿ ಇದು ಸಹಾಯಕ.ಇದು ರಕ್ತದ ಹೆಪ್ಪುಗಟ್ಟುವಿಕೆ ತಡೆಯುತ್ತದೆ.ಸಿಗಡಿಯಲ್ಲಿ ದೊರೆಯುವ ಒಮೇಗಾ - 3 ಅಂಶ ಕೊಲೆಸ್ತ್ರೋಲ್ ಕಡಿಮೆ ಮಾಡಲು ಸಹಾಯಕವಾಗಿದೆ.ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಬರದಂತೆ ತಡೆಯುತ್ತದೆ.
ಹಾರ್ಟ್ ಬೀಟ್ ಬಗ್ಗೆ ಅಚ್ಚರಿಯ ಸಂಗತಿ ತಿಳಿಯಬೇಕೆ? ಇಲ್ಲಿ ನೋಡಿ

ಮೂಳೆಯ ಅರೋಗ್ಯ
ಸೀಗಡಿಯಲ್ಲಿ ದೊರೆಯುವ ಪ್ರೋಟಿನ್,ಮ್ಯಾಗ್ನಿಶಿಯಂ,ಕ್ಯಾಲ್ಸಿಯಂ ಮುಂತಾದವುಗಳು ಮೂಳೆಯನ್ನು ಗಟ್ಟಿಯಾಗಿ ಇಡುತ್ತದೆ.ಇದು ಮೂಳೆಯ ಬಲವನ್ನು ಹೆಚ್ಚಿಸಲು ಸಹಾಯಕವಾಗಿದೆ.

ಮಿದುಳಿನ ಅರೋಗ್ಯ
ಸೀಗಡಿಯಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ ಆಮ್ಲಜನಕ ಮತ್ತು ಹಿಮೊಗ್ಲೋಬಿನ್ ಹೆಚ್ಚು ದೊರೆಯುತ್ತದೆ. ಇದು ಮಿದುಳಿನಲ್ಲಿ ಆಮ್ಲಜನಕವನ್ನು ಹೆಚ್ಚು ಒದಗಿಸುವುದರಿಂದ ಮಿದುಳಿನ ಅರೋಗ್ಯ ಕಾಪಾಡುತ್ತದೆ. ಅಧ್ಯಯನದ ಪ್ರಕಾರ ಸೀಗಡಿಯಲ್ಲಿ ಇರುವ ಅಸ್ತಾಕ್ಸಿನ್ ಅಂಶ ನೆನಪಿನ ಶಕ್ತಿ ಹೆಚ್ಚಿಸುತ್ತದೆ, ಮಿದುಳಿನ ಊತವನ್ನು ತಡೆಯುತ್ತದೆ.
.

ಥೈರಾಯ್ಡ್ ಹಾರ್ಮೋನ್
ಸೀಗಡಿಯಲ್ಲಿ ಇರುವ ಅಯೋಡಿನ್ ಅಂಶ ಥೈರಾಯ್ಡ್ ಹಾರ್ಮೋನ್ ಬಿಡುಗಡೆಗೆ ಸಹಾಯಕ. ಮಗು ಮತ್ತು ಗರ್ಭಿಣಿ ಮೆದುಳಿನ ಬೆಳವಣಿಗೆಗೆ ಈ ಹಾರ್ಮೋನ್ ಅತಿ ಅವಶ್ಯಕ.

ಕ್ಯಾನ್ಸರ್ ವಿರೋಧಿ
ಸೀಗಡಿಯಲ್ಲಿ ಕ್ಯಾನ್ಸರ್ ತಡೆಗಟ್ಟುವ ಗುಣವಿದೆ. ಇದರಲ್ಲಿರುವ ಸೆಲೆನಿಯಮ್ ಅಂಶ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವ ಗುಣ ಹೊಂದಿದೆ.

ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ
ಸೀಗಡಿಯಲ್ಲಿ ಇರುವ ಸಮತೋಲಿತ ಕೊಲೆಸ್ಟ್ರಾಲ್ ಮತ್ತು ಒಮೆಗಾ -3 ಅಂಶ ಹೊಟ್ಟೆ ನೋವನ್ನು ಕಡಿಮೆ ಮಾಡುವಲ್ಲಿ ಸಹಾಯಕ. ರಕ್ತನಾಳದಲ್ಲಿ ಆಗುವ ಇತರ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ ರಕ್ತ ಸಂಚಲನವನ್ನು ಸುಲಭವಾಗಿಸುತ್ತದೆ.

ವಯಸ್ಸನ್ನು ಮರೆಮಾಚುತ್ತದೆ:
ಸೂರ್ಯನ ಕಿರಣಗಳು ವಯಸ್ಸಗುವಿಕೆಗೆ ಮುಖ್ಯ ಕಾರಣ.ಯಾವುದೇ ರೀತಿಯ ರಕ್ಷಣೆ ಇಲ್ಲದೆ ಸೂರ್ಯನ ಕಿರಣಕ್ಕೆ ಮೈ ಒಡ್ಡಿದರೆ ನೆರಿಗೆಗಳು ಸುಕ್ಕು ಕಾಣಿಸಿಕೊಳ್ಳುವುದು ಖಂಡಿತ.ವಾರದಲ್ಲಿ ಒಮ್ಮೆ ಅಥವಾ ದಿನದಲ್ಲಿ ಸೀಗಡಿ ಬಳಸುವುದರಿಂದ ಚರ್ಮವನ್ನು ಸುಂದರವಾಗಿ ಇಟ್ಟುಕೊಳ್ಳಬಹುದು ಜೊತೆಗೆ ತಾರುಣ್ಯ ಕಾಪಾಡಿಕೊಳ್ಳಬಹುದು.
ಸೀಗಡಿಯಲ್ಲಿ ಅಧಿಕ ಪ್ರಮಾಣದಲ್ಲಿ ಅಸ್ತಾಕ್ಸಾಂತಿನ್ ಎಂಬ ಉತ್ತಮ ಉತ್ಕರ್ಷಣಾ ನಿರೋಧಕವಿದೆ.ಇದು ವಯಸ್ಸನ್ನು ಮರೆಮಾಚಲು ಸಹಾಯಕವಾಗುತ್ತದೆ.ಚರ್ಮದಲ್ಲಿ ನೆರಿಗೆಗಳಾಗಿದ್ದರೆ ವಾರದಲ್ಲಿ ಎರಡು ಭಾರಿ ಸೀಗಡಿ ಬಳಸುವುದರಿಂದ ಹೋಗಲಾಡಿಸಬಹುದು.

ಅಲರ್ಜಿ ಬಗ್ಗೆ ಎಚ್ಚರ
ವಿವಿಧ ಸಮುದ್ರಾಹಾರಗಳು ಅಲರ್ಜಿ ತರಬಹುದು. ನೀವು ಹೊಸ ರೀತಿಯ ಮೀನನ್ನು ಬಳಸುವ ಮೊದಲು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸಮುದ್ರಾಹಾರವನ್ನು ಹೆಚ್ಚು ಬಳಸುವುದರಿಂದ ಅನಿರೀಕ್ಷಿತ ಅಲರ್ಜಿ ಕಂಡು ಬರಬಹುದು.



Click it and Unblock the Notifications











