Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವಿಟಮಿನ್ ಎಣ್ಣೆಯ ಟಾಪ್ 10 ಪ್ರಯೋಜನಗಳು
ದೇಹದಕ್ಕೆ ಅಗತ್ಯವಿರುವ ವಿಟಮಿನ್ ಗಳಲ್ಲಿ ವಿಟಮಿನ್ ಇ ಕೂಡ ಪ್ರಮುಖವಾದ ಪೋಷಕಾಂಶವಾಗಿದೆ. ಇದು ಮಾತ್ರೆ ರೂಪದಲ್ಲಿ ಕೂಡ ದೊರೆಯುತ್ತದೆ. ಈ ವಿಟಮಿನ್ ಇ ದೇಹದಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸಲು ಅವಶ್ಯಕ. ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇವು ನಮ್ಮ ಆರೋಗ್ಯದ ಮೇಲೆ ತುಂಬಾ ಕಟ್ಟ ಪರಿಣಾಮವನ್ನು ಬೀರುತ್ತದೆ. ಅನಿಯಮಿತ ಮುಟ್ಟು, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು, ಕಣ್ಣಿನಲ್ಲಿ ಉರಿ, ಅಲ್ಜೈಮರ್ಸ್ ಈ ರೀತಿಯ ಅನೇಕ ಕಾಯಿಲೆಗಳು ಪರಿಸರ ಮಾಲಿನ್ಯದಿಂದ ಬರುತ್ತವೆ.
ವಿಟಮಿನ್ ಈ ನಮ್ಮ ದೇಹವನ್ನು ಸೇರಿದ ಬೇಡದ ರಾಸಾಯನಿಕಗಳನ್ನು ಹೊರಹಾಕುತ್ತದೆ. ಗರ್ಭಿಣಿಯರಿಗೆ ವಿಟಮಿನ್ ಇ ಅವಶ್ಯಕ. ವಿಟಮಿನ್ ಇ ಇರುವ ಆಹಾರಗಳನ್ನು ತಿನ್ನುವುದರಿಂದ ಅಥವಾ ವಿಟಮಿನ್ ಇ ಮಾತ್ರೆಗಳನ್ನು ಸೇವಿಸುವುದರಿಂದ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.

1. ಕಾಯಿಲೆಯನ್ನು ದೂರವಿಡುತ್ತದೆ
ಇದರಲ್ಲಿ antioxidants ಅಂಶವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಿ ಕಾಯಿಲೆಯನ್ನು ದೂರವಿಡುತ್ತದೆ.

2. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಇದರ ಪ್ರಮುಖ ಪ್ರಯೋಜನವೆಂದರೆ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ. ಹೃದಯದ ಆರೋಗ್ಯ ಹೆಚ್ಚಿಸುತ್ತದೆ.

3. ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ
ಸ್ನಾಯು ಸೆಳೆತ ಉಂಟಾಗದಂತೆ ತಡೆಯುತ್ತದೆ. ಇದು ರಕ್ತ ಹೆಪ್ಪುಗಟ್ಟದಂತೆ ಮಾಡಿ, ಪಾರ್ಶ್ವವಾಯು ಬರದಂತೆ ತಡೆಯುತ್ತದೆ. ರಕ್ತ ಹೆಪ್ಪುಗಟ್ಟಿದರೆ ಮೆದುಳಿಗೆ ರಕ್ತ ಸರಿಯಾಗಿ ಪೂರೈಕೆಯಾಗದೆ ಪಾರ್ಶ್ವವಾಯು ಉಂಟಾಗುವುದು.

4. ಸೌಂದರ್ಯವರ್ಧಕ
ಇದು ತ್ವಚೆ ರಕ್ಷಣೆಯನ್ನು ಮಾಡುತ್ತದೆ. ಕಲೆ ಇರುವ ಜಾಗಕ್ಕೆ ವಿಟಮಿನ್ ಇ ಹಚ್ಚಿದರೆ ಕಲೆ ಕಡಿಮೆಯಾಗುವುದು. ತ್ವಚೆಯನ್ನು ಸೂರ್ಯನ ಕಿರಣಗಳಿಂದ ಕಾಪಾಡುತ್ತದೆ. ಇದನ್ನು ತಲೆಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುವುದು.

5. ಗಾಯವನ್ನು ಗುಣಪಡಿಸುತ್ತದೆ
ವಿಟಮಿನ್ ಇಯಲ್ಲಿರುವ ಪ್ರಮುಖವಾದ ಗುಣವೆಂದರೆ ಗಾಯವನ್ನು ಗುಣಪಡಿಸುತ್ತದೆ. ವಿಟಮಿನ್ ಇ ಎಣ್ಣೆಯಿಂದ ಮಸಾಜ್ ಮಾಡಿದರೆ ಅಕಾಲಿಕ ಮುಪ್ಪನ್ನು ಪಡೆಯುತ್ತದೆ. ಬೆನ್ನು ನೋವಿಗೆ ಮಸಾಜ್ ಮಾಡಿದರೆ ಬೆನ್ನು ನೋವು ಕಡಿಮೆಯಾಗುತ್ತದೆ.

7. ಮೊಡವೆಯನ್ನು ಹೋಗಲಾಡಿಸುತ್ತದೆ
ಮೊಡವೆ ಸಮಸ್ಯೆ ಇರುವವರು ವಿಟಮಿನ್ ಇ ಹಚ್ಚಿದರೆ ಮೊಡವೆ ಕಡಿಮೆಯಾಗುವುದು, ಕಲೆಯೂ ಕಡಿಮೆಯಾಗುವುದು. ಕಣ್ಣಿನ ಸುತ್ತ ಕಪ್ಪು ವರ್ತುಲವಿದ್ದರೆ ಕಡಿಮೆಯಾಗುತ್ತದೆ.

8. ಮಾಯಿಶ್ಚರೈಸರ್
ವಿಟಮಿನ್ ಇ ಹಚ್ಚಿದರೆ ತ್ವಚೆಯ ಮಾಯಿಶ್ಚರೈಸರ್ ಕಾಪಾಡುತ್ತದೆ. ಉಗುರುಗಳನ್ನು ವಿಟಮಿನ್ ಇಯಿಂದ ಮಸಾಜ್ ಮಾಡಿದರೆ ಉಗುರು ಕಟ್ಟಾಗುವುದಿಲ್ಲ, ಆಕರ್ಷಕವಾಗಿ ಕಾಣುವುದು.



Click it and Unblock the Notifications
