For Quick Alerts
ALLOW NOTIFICATIONS  
For Daily Alerts

ಅಸಿಡಿಟಿ ಸಮಸ್ಯೆಗೆ 8 ಉತ್ತಮ ಪರಿಹಾರ

|
Home Remedies For Acidity
ಅಸಿಡಿಟಿ ಸಮಸ್ಯೆ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಇದು ಬಂದರೆ ಹೊಟ್ಟೆನೋವು, ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳು ಪ್ರಾರಂಭವಾಗಿ, ಸಾಕಷ್ಟು ಕಿರಿಕಿರಿ ಅನುಭವಿಸಬೇಕಾಗುತ್ತದೆ.

ಅಸಿಡಿಟಿ ಮುಖ್ಯವಾಗಿ ಕಡಿಮೆ ನಾರಿನಂಶವಿರುವ ಆಹಾರಗಳ ಸೇವನೆ, ಮಾನಸಿಕ ಮತ್ತು ಕೆಲಸದ ಒತ್ತಡ, ಮದ್ಯಪಾನ ಮತ್ತು ಧೂಮಪಾನದಿಂದ ಅಥವಾ ಖಾರಪದಾರ್ಥಗಳನ್ನು ತಿನ್ನುವುದು, ಕುರುಕಲು ತಿಂಡಿಗಳು, ಅಧಿಕ ಎಣ್ಣೆ ಪದಾರ್ಥ, ಬೆಳಗಿನ ತಿಂಡಿ ಬಿಡುವುದು ಅಥವಾ ಊಟ ಬಿಡುವುದು ಈ ಎಲ್ಲಾ ಕಾರಣಗಳಿಂದ ಉಂಟಾಗುತ್ತದೆ.

ಅಸಿಡಿಟಿ ಸಮಸ್ಯೆ ಕಾಣಿಸಿಕೊಂಡರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಉತ್ತಮವಾದ ಪ್ರಯೋಜನ ದೊರೆಯುತ್ತದೆ.

1. ಈ ಅಸಿಡಿಟಿ ಕಾಯಿಲೆಗೆ ಆರ್ಯುವೇದದಲ್ಲಿ ನೀಡುವ ಔಷಧಿ ಅಂದರೆ ಗುಲ್ಕಾನ್. ಇದನ್ನು ನಾಡ ಔಷಧಿ ಎಂದು ಕೂಡ ಹೇಳಬಹುದು. ಇದನ್ನು ತಿಂದರೆ ರಕ್ತ ಶುದ್ಧವಾಗುತ್ತದೆ, ಸ್ನಾಯುಗಳ ನೋವು ಕಡಿಮೆಯಾಗುತ್ತೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು antioxidant ಪ್ರಮಾಣ ಅಧಿಕವಿರುವುದರಿಂದ ಸಂಧಿವಾತ ಮತ್ತು ಪಿತ್ತಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

2. ಅಸಿಡಿಟಿ ಹೆಚ್ಚಾದರೆ ಮಲದಲ್ಲಿ ರಕ್ತ ಬರುವುದು, ಆದ್ದರಿಂದ ಅಸಿಡಿಟಿ ಕಾಣಿಸಿದರೆ ಮೊಸರನ್ನ ಊಟ ಮತ್ತು ಬಾಳೆಹಣ್ಣು ಸೇವನೆ ಒಳ್ಳೆಯದು.

3. ಅಸಿಡಿಟಿ ಮತ್ತು ಹೃದಯದ ಉರಿ ಕಡಿಮೆಯಾಗಲು ಖರ್ಜೂರ ಸಹಾಯಮಾಡುತ್ತದೆ

4. ಆಲೀವ್ ಎಲೆಯಲ್ಲಿ anti-inflammatory ಗುಣವಿರುವುದರಿಂದ ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್, ಹೊಟ್ಟೆ ಉರಿ ಹಾಗೂ ಹೊಟ್ಟೆ ನೋವಿನಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.

5. ಅಸಿಡಿಟಿ ಕಾಣಿಸಿಕೊಂಡರೆ ಸ್ವಲ್ಪ ಜೀರಿಗೆ ಬಾಯಿಗೆ ಹಾಕಿಕೊಂಡರೆ ಸಾಕು ಗುಣಮುಖವಾಗುವುದು.

6. ಅಸಿಡಿಟಿ ಇದ್ದವರು ಒಂದು ಲೋಟ ನೀರಿಗೆ ಒಂದು ತುಂಡು ಬೆಲ್ಲ ಹಾಕಿ ಕರಗಿಸಿ ಊಟವಾದ ಮೇಲೆ ಕುಡಿಯುವುದು ಒಳ್ಳೆಯದು.

7. ಗ್ಯಾಸ್ಟ್ರಿಕ್, ಅಸಿಡಿಟಿ, ಅಜೀರ್ಣ ಮುಂತಾದ ಕಾರಣದಿಂದ ಹೊಟ್ಟೆ ನೋವು ಬಂದಾಗ ಬಿಸಿ ನೀರಿನೊಂದಿಗೆ ಓಮು ಕಾಳನ್ನು ತಿನ್ನುವುದರಿಂದ ಉಪಶಮನಗೊಳ್ಳುತ್ತದೆ.

8. ಒಂದು ಹಿಡಿ ಪಾಲಕ್ ಸೊಪ್ಪು, ಸಣ್ಣ ಹಸಿ ಶುಂಠಿ, ಒಂದು ಹಿಡಿ ಕೊತ್ತಂಬರಿ, ಜೀರಿಗೆ 1 ಚಮಚ ಈ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ಎರಡು ಗ್ಲಾಸ್ ನೀರು ಹಾಕಿ ಚೆನ್ನಾಗಿ ಜ್ಯೂಸ್ ಮಾಡಬೇಕು. ಒಂದು ಬಿಳಿ ಬಟ್ಟೆಯಲ್ಲಿ ಜ್ಯೂಸ್ ಅನ್ನು ಸೋಸಿ, ಲಿಂಬೆ ಹಣ್ಣಿನ ರಸ ಸೇರಿಸಿ ಕುಡಿದರೆ ಅಸಿಡಿಟಿ ಕಡಿಮೆಯಾಗುವುದು. ಸಿದ್ಧಪಡಿಸಿದ ಗ್ರೀನ್ ಜ್ಯೂಸ್ ಅನ್ನು ಬಹಳ ಹೊತ್ತು ಇಡಬಾರದು.

English summary

How To Get Rid From Acidity | Tips For Health | ಅಸಿಡಿಟಿ ಸಮಸ್ಯೆಗೆ ಪರಿಹಾರವೇನು? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Acidity one of the common disease. When the secretion is more than usual, we feel, what is commonly known as heartburn, which is normally triggered off by consumption of spicy foods, consumption of less fiber food. Here are few home remedies for acidity.
X
Desktop Bottom Promotion