Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಚಾಕಲೇಟ್, ಐಸ್ ಕ್ರೀಮ್ ತರಬಹುದೆ ತಲೆನೋವು?

ಚಾಕಲೇಟ್: ಚಾಕಲೇಟ್ ತುಂಬಾ ಪ್ರಿಯವೇ? ಹಾಗದರೆ ಮಿತಿ ಮೀರಿ ಚಾಕಲೇಟ್ ತಿನ್ನುವಾಗ ಸ್ವಲ್ಪ ಯೋಚಿಸಬೇಕಾಗುತ್ತದೆ. ಏಕೆಂದರೆ ಚಾಕಲೇಟ್ ನಲ್ಲಿ phenylethylamine (ಫೀನೈಲ್ ಈಥೈಲ್ ಮೈನ್) ಮತ್ತು ಥಿಯೋಬ್ರೊಮೈನ್ (theobromine) ಅಂಶವಿದ್ದು ಇದು ತಲೆನೋವು ತರುತ್ತದೆ.
ಚೀಸ್: ಹಳೆಯ ಚೀಸ್ ನಲ್ಲಿ ಥೈರಾಮೈನ್(thyramine)ಅಂಶ ಅಧಿಕವಿರುತ್ತದೆ. ಇಂತಹ ಚೀಸ್ ತಿಂದರೆ ತಲೆನೋವು ಉಂಟಾಗಬಹುದು. ಆದ್ದರಿಂದ ಚೀಸ್ ತಿನ್ನುವುದಾದರೆ ತಾಜಾ ಚೀಸ್ ಮಾತ್ರ ತಿನ್ನಿ.
ಮದ್ಯ: ಮದ್ಯ ಅದರಲ್ಲೂ ವೈನ್ ತಲೆನೋವು ಹೆಚ್ಚಾಗಲು ಕಾರಣವಾಗಿದೆ. ಮದ್ಯದ ಅಂಶ ರಕ್ತವನ್ನು ಮತ್ತಷ್ಟು ತೆಳ್ಳಗೆ ಮಾಡುವುದರಿಂದ ಅಧಿಕ ರಕ್ತ ಮೆದುಳಿಗೆ ಸಂಚಾರವಾಗಿ ಈ ರೀತಿಯ ತಲೆನೋವು ಕಂಡುಬರುತ್ತದೆ.
ಕಾಫಿ: ಕಾಫಿಯಲ್ಲಿ ಟೀಗಿಂತ ಕೆಫೀನ್ ಅಂಶ ಅಧಿಕವಿರುವುದರಿಂದ ದಿನದಲ್ಲಿ ಎರಡು ಲೋಟಕ್ಕಿಂತ ಹೆಚ್ಚು ಕಾಫಿ ಕುಡಿದರೆ ಅಧಿಕ ಕೆಫೀನ್ ಅಂಶ ದೇಹವನ್ನು ಸೇರಿ ತಲೆನೋವು ಉಂಟಾಗುವುದು.
ಐಸ್ ಕ್ರೀಮ್: ಐಸ್ ಕ್ರೀಮ್ ತಿಂದರೆ ಕೂಡ ತಲೆನೋವು ಬರಬಹುದಾ ಎಂದು ಆಶ್ಚರ್ಯವಾಗುತ್ತದೆ ಅಲ್ಲವೇ? ಸಮಸ್ಯೆ ಇರುವುದು ಕ್ರೀಮ್ ನಲ್ಲಿ ಅಲ್ಲ, ಅದರ ಐಸ್ ನಲ್ಲಿ. ತುಂಬಾ ಬಾಯಾರಿಕೆಯಾದಾಗ ಐಸ್ ಕ್ರೀಮ್ ಅಥವಾ ತಣ್ಣನೆಯ ಜ್ಯೂಸ್ ಅನ್ನು ಬೇಗನೆ ತಿಂದರೆ ಮೆದುಳಿಗೆ ರಕ್ತ ಸಂಚರವಾಗುವುದರಲ್ಲಿ ಸ್ವಲ್ಪ ವ್ಯತ್ಯಾಸವಾಗುತ್ತದೆ. ಈ ರೀತಿಯಾದರೆ ತಲೆನೋವು ಕಂಡುಬರುತ್ತದೆ.
ಸೋಯಾ ಸಾಸ್: ಸೋಯಾಸಾನ್ ನಲ್ಲಿ ಮೋನೊ ಸೋಡಿಯಂ ಗುಲ್ಟಾಮೇಟ್ (monosodium glutamate) ಅಂಶವಿರುವುದರಿಂದ ಇದನ್ನು ಮಿತಿಯಲ್ಲಿ ತಿಂದರೆ ತಲೆನೋವು ಬರುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
