Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಆರೋಗ್ಯ ರಕ್ಷಣೆ

ಹದಿಹರೆಯದ ಹೆಣ್ಣು ಮಕ್ಕಳು ಉತ್ತಮ ಆರೋಗ್ಯಕ್ಕಾಗಿ ಈ ಕೆಳಗಿ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
1. ತಿನ್ನುವ ಆಹಾರದಲ್ಲಿ ಗಮನವಿರಬೇಕು: ಈಗ ತೆಳ್ಳಗೆ ಬೆಳ್ಳಗೆ ಹೆಣ್ಣು ಮಕ್ಕಳು ಇರಬೇಕೆಂದು ಬಯಸುವ ಕಾಲ, ಆದ್ದರಿಂದ ಆರೋಗ್ಯಪೂರ್ಣ ಆಹಾರದ ಸೇವನೆ ಜೊತೆ ಹಣ್ಣು ಹಂಪಲುಗಳ ಸೇವನೆ ದೇಹಕ್ಕೆ ಒಳ್ಳೆಯದು. ಆದರೆ ಅದಕ್ಕೆ ವಿರುದ್ಧವಾಗಿ ಹೀಗಿನ ಹೆಣ್ಣು ಮಕ್ಕಳು ಹೊರಗಿನ ಕುರುಕಲು ತಿಂಡಿಗಳನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುವುದು.
2.ಎಲುಬಿನ ತೂಕ: ಹದಿಹರೆಯದ ನಂತರ ವಯಸ್ಸಾಗುತ್ತಿದ್ದಂತೆ ಎಲುಬಿನಲ್ಲಿ ಕ್ಯಾಲ್ಸಿಯಂ ಕಮ್ಮಿಯಾಗುವುದು ಆದ್ದರಿಂದ ಒಳ್ಳೆಯ ಪ್ರಾಯದಲ್ಲಿ ದಿನಾಲೂ ಬಾಳೆಹಣ್ಣು, ಹಾಲನ್ನು ಕುಡಿಯುವುದು ಒಳ್ಳೆಯದು.
3. ಶುದ್ಧತೆ: ಮುಟ್ಟಿನ ಸಂದರ್ಭದಲ್ಲಿ ಹೆಚ್ಚು ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಸೋಂಕಿನಿಂದ ಕಾಯಿಲೆಗಳು ಬರುತ್ತವೆ, ಆ ಸಂದರ್ಭದಲ್ಲಿ ಧರಿಸುವ ಬಟ್ಟೆಯನ್ನು ಶುದ್ಧವಾಗಿ ಒಣಗಿಸಿ ಇಸ್ತ್ರಿ ಹಾಕಬೇಕು.
4. ಆಹಾರ: ಮುಟ್ಟಿನ ಸಮಯದಲ್ಲಿ ಲಘು ಆಹಾರವನ್ನು ಮತ್ತು ದ್ರವ ರೂಪದ ಆಹಾರವನ್ನು ಸೇವಿಸುವುದು ಒಳ್ಳೆಯದು. ಈ ಸಂದರ್ಭದಲ್ಲಿ ಖಾರ ಆಹಾರವನ್ನು ಹೆಚ್ಚಾಗಿ ಸೇವಿಸಬಾರದು.
5. ಅನಿನಿಯಮಿತ ಮುಟ್ಟು: ಹಾರ್ಮೋನ್ ಸಮಸ್ಯೆ, ಆರೋಗ್ಯಕರವಲ್ಲದ ಆಹಾರ ಕ್ರಮ, ಜೀವನ ಶೈಲಿ, ಬೊಜ್ಜು ಇವುಗಳಿಂದ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಅನಿನಿಯಮಿತ ಮಟ್ಟು ಆಗುತ್ತಿದ್ದರೆ ಸ್ತ್ರೀರೋಗ ತಜ್ಞರನ್ನು ಕಾಣವುದು ಒಳ್ಳೆಯದು.
6. ಲೈಂಗಿಕತೆ: ಮದುವೆಗೆ ಮುಂಚೆ ಲೈಂಗಿಕತೆ ಒಳ್ಳೆಯದಲ್ಲ. ಲೈಂಗಿಕ ಶಿಕ್ಷಣವನ್ನು ನೀಡುವುದರಿಂದ ಲೈಂಗಿಕ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ.
ಈ ರೀತಿ ಸಲಹೆಗಳನ್ನು ಪಾಲಿಸಿದರೆ ಹೆಣ್ಣು ಮಕ್ಕಳು ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
