For Quick Alerts
ALLOW NOTIFICATIONS  
For Daily Alerts

ಈ 16 ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಖರೀದಿಸಬಹುದು: ಸದ್ಯದಲ್ಲಿಯೇ ಬರಲಿದೆ ಈ ನಿಯಮ

|

ಜನರ ಅನುಕೂಲಕ್ಕಾಗಿ ಔಷಧಿ ಖರೀದಿಸುವ ನಿಯಮದಲ್ಲಿ ಕೆಲವೊಂದು ಚಿಕ್ಕ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಎಷ್ಟೋ ಜನರಿಗೆ ಅನುಕೂಲವಾಗಲಿದೆ. ಹೌದು ಮೆಡಿಕಲ್‌ ಹೋಗಿ ಏನಾದರೂ ಔಷಧಿ ಖರೀದಿಸುವಾಗ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಮುಖ್ಯವಾಗಿತ್ತು. ಆದರೆ ಹೊಸ ನಿಯಮ ಜಾರಿಗೆ ಬಂದ ಮೇಲೆ ಯಾವುದೇ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಇಲ್ಲದೆಯೇ 16 ಬಗೆಯ ಔಷಧಿಯನ್ನು ಖದೀದಿಸಬಹುದಾಗಿದೆ.

medicines to buy without prescription

ಸರ್ಕಾರ ತಂದಿರುವ ಹೊಸ ನಿಯಮಗಳೇನು? ಯಾವೆಲ್ಲಾ ಔಷಧಿಗಳನ್ನು ಡಾಕ್ಟರ್ ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್‌ನಿಂದ ಖರೀದಿಸಬಹುದು ಎಂದು ನೋಡೋಣ ಬನ್ನಿ:

ಔಷಧ ಹಾಗೂ ಕಾಸ್ಮೆಟಿಕ್ ರೂಲ್‌ ಬದಲಾಗಲಿದೆ

ಔಷಧ ಹಾಗೂ ಕಾಸ್ಮೆಟಿಕ್ ರೂಲ್‌ ಬದಲಾಗಲಿದೆ

ಮನಿಕಂಟ್ರೋಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ ಕೇಂದ್ರ ಸರ್ಕಾರವು ಔಷಧ ಹಾಗೂ ಕಾಸ್ಮೆಟಿಕ್‌ ರೂಲ್‌ನಲ್ಲಿ ಕೆಲವೊಂದು ಬದಲಾವಣೆ ತರಲು ಮುಂದಾಗಿದೆ. ಇದರ ಕುರಿತು ಕೇಂದ್ರ ಇಲಾಖೆ ಕರಡು ಪ್ರತಿ ಸಲ್ಲಿಸಿದ್ದು ಅದರಲ್ಲಿ 16 ಬಗೆಯ ಔಷಧಗಳನ್ನು ಸೇರಿಸಲಾಗಿದೆ. ಆ ನಿಯಮ ಜಾರಿಗೆ ಬಂದ ಮೇಲೆ ಯಾವುದೇ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಯನ್ನು ಖರೀದಿಸಬಹುದಾಗಿದೆ.

ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿ ನೀಡುವುದರ ಬಗ್ಗೆ ಕಾನೂನು ಬಂದಿರಲಿಲ್ಲ

ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿ ನೀಡುವುದರ ಬಗ್ಗೆ ಕಾನೂನು ಬಂದಿರಲಿಲ್ಲ

ಕೆಲವೊಂದು ಔಷಧಿಗಳು ಯಾವುದೇ ಪ್ರಿಸ್ಕ್ರಿಪ್ಷನ್ ಇಲ್ಲದೆ ನೀಡಲಾಗುತ್ತಿತ್ತು, ಆದರೆ ಅದರ ಬಗ್ಗೆ ಯಾವುದೇ ಕಾನೂನು ಬಂದಿರಲಿಲ್ಲ. ಆದರೆ ಸದ್ಯದಲ್ಲಿಯೇ ಆ ಕಾನೂನು ಬರಲಿದ್ದು ಆ ಔಷಧಗಳನ್ನು ನೀವು ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್‌ನಿಂದ ನೇರವಾಗಿ ಪಡೆದುಕೊಳ್ಳಬಹುದು.

 ಆದರೆ ಕಂಡೀಷನ್‌ ಇದೆ

ಆದರೆ ಕಂಡೀಷನ್‌ ಇದೆ

OTC ಕೆಟಗರಿಯಲ್ಲಿ ಬರುವ ಔಷಧಿಗಳನ್ನು ಮೆಡಿಕಲ್‌ನಿಂದ ಪಡೆಯಬಹುದು ಆದರೆ ಕಂಡೀಷನ್ ಇದೆ, ಈ ಔಷಧಿಗಳನ್ನು ಮೆಡಿಕಲ್‌ನಲ್ಲಿಷ್ಟೇ ಮಾರಬೇಕು ಜೊತೆಗೆ 5 ದಿನಗಳಿಗಿಂತ ಹೆಚ್ಚಿನ ದಿನಕ್ಕೆ ಔಷಧಿ ತೆಗೆದುಕೊಳ್ಳಬಾರದು. 5 ದಿನದಲ್ಲಿ ಕಡಿಮೆಯಾಗದಿದ್ದರೆ ವೈದ್ಯರಿಗೆ ತೋರಿಸಬೇಕು.

 ಯಾವೆಲ್ಲಾ ಔಷಧಿಗಳು ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿಗಲಿದೆ?

ಯಾವೆಲ್ಲಾ ಔಷಧಿಗಳು ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿಗಲಿದೆ?

ಈ 16 ಬಗೆಯ ಔಷಧಿಗಳು ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್‌ನಿಂದ ನೇರವಾಗಿ ಪಡೆಯಬಹುದಾಗಿದೆ.

English summary

16 Medicines You Can Now Buy Without a Prescription; New Rules Soon

16 Medicines You Can Now Buy Without a Prescription; New Rules Soon
Story first published: Friday, May 27, 2022, 22:18 [IST]
X
Desktop Bottom Promotion