Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮುಟ್ಟಿನ ಚಕ್ರ ನಿಂತ ಬಳಿಕ ರಕ್ತಸ್ರಾವವಾಗುತ್ತಿದೆಯೇ? ನಿರ್ಲಕ್ಷ್ಯ ಮಾಡಲೇಬೇಡಿ
ಮಹಿಳೆಯ ಮುಟ್ಟಿನ ಚಕ್ರ ನಿಲ್ಲುವ ಹಂತವನ್ನು ಮೆನೋಪಾಸ್ ಎಂದು ಕರೆಯಲಾಗುವುದು. ಮೆನೋಪಾಸ್ ಸಾಮಾನ್ಯವಾಗಿ 50-55 ವರ್ಷದೊಳಗೆ ಕಂಡು ಬರುವುದು. ಮಹಿಳೆ ಮೆನೋಪಾಸ್ ಹಂತಕ್ಕೆ ತಲುಪಿದರೆ ಅವಳು ಸಂತಾನೋತ್ಪತ್ತಿನ ಸಾಮರ್ಥ್ಯ ಕಳೆದುಕೊಳ್ಳುತ್ತಾಳೆ.

ಆದರೆ ಕೆಲವರಿಗೆ ಮೆನೋಪಾಸ್ ಆದ ಸ್ವಲ್ಪ ಸಮಯದ ಬಳಿಕ ಮತ್ತೆ ರಕ್ತಸ್ರಾವ ಕಂಡು ಬರುವುದು. ಹೀಗೆ ಕಂಡು ಬಂದಾಗ ಕೆಲವರು ಇದು ಸಹಜ ಎಂದು ಭಾವಿಸಿ ಪ್ರಾರಂಭದಲ್ಲಿ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಈ ಬಗೆ ನಿರ್ಲಕ್ಷ್ಯ ಮಾಡಿ ತಮ್ಮ ಆರೋಗ್ಯ ಸಮಸ್ಯೆ ಹೆಚ್ಚಿಸಿಕೊಳ್ಳುತ್ತಾರೆ. ಮೆನೋಪಾಸ್ ಬಳಿಕ ರಕ್ತಸ್ರಾವ ಏಕೆ ನಿರ್ಲಕ್ಷ್ಯ ಮಾಡಬಾರದು ಎಂದು ನೋಡೋಣ:
ಮೆನೋಪಾಸ್ ಬಳಿಕ ರಕ್ತಸ್ರಾವ ಸಾಮಾನ್ಯವೇ?
ಮೆನೋಪಾಸ್ ಬಳಿಕ ಶೇ. 10ರಷ್ಟು ಮಹಿಳೆಯರಲ್ಲಿ ರಕ್ತಸ್ರಾವ ಕಂಡು ಬರುವುದು.
ಮೆನೋಪಾಸ್ ಬಳಿಕ ರಕ್ತಸ್ರಾವ ಕಂಡು ಬರಲು ಕಾರಣವೇನು?
* ಎಂಡೋಪೆಟಿರಿಯಲ್ ಅಥವಾ ಜನನೇಂದ್ರೀಯ ತೆಳುವಾಗುವುದು (vaginal atrophy)
* ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ (ಮೆನೋಪಾಸ್ ಹಂತ ಮುಂದೂಡಲು ಹಾರ್ಮೋನ್ ಥೆರಪಿ ಪಡೆದುಕೊಂಡಿದ್ದರೆ)
* ಗರ್ಭಕೋಶದಲ್ಲಿ ಸಮಸ್ಯೆ ಉಂಟಾಗಿದ್ದರೆ (Endometrial hyperplasi)
* ಗರ್ಭಕೋಶದ ಗಾತ್ರ ದೊಡ್ಡದಾದರೆ (Uterine polyps)
* ಗರ್ಭಕಂಠದ ಕ್ಯಾನ್ಸರ್ (Cervical cancer)
* ಗರ್ಭಕಂಠದ ಕ್ಯಾನ್ಸರ್ ಉಂಟಾಗಿದ್ದರೆ
ಮೆನೋಪಾಸ್ ನಂತರ ರಕ್ತಸ್ರಾವ ಕಂಡು ಬಂದರೆ ಏನು ಮಾಡಬೇಕು?
* ನೀವು ತಡಮಾಡದೆ ವೈದ್ಯರನ್ನು ಭೇಟಿ ಮಾಡಬೇಕು.
* ಪ್ಯಾಪ್ ಸ್ಮಿಯರ್ ಪರೀಕ್ಷೆ ಮಾಡಿಸಿದರೆ ಸಮಸ್ಯೆ ಕಂಡು ಹಿಡಿಯಬಹುದು.
* ಅಲ್ಟ್ರಾಸೌಂಡ್ ಕೂಡ ಸಮಸ್ಯೆ ಕಂಡು ಹಿಡಿಯಲು ಸಹಾಯ ಮಾಡುತ್ತೆ.
* ಬಯೋಸ್ಪೈ ಮಾಡುವ ಮೂಲಕ ಸಮಸ್ಯೆ ಕಂಡು ಹಿಡಿಯಲಾಗುವುದು.
ಮೆನೋಪಾಸ್ ಬಳಿಕ ರಕ್ರಸ್ರಾವ ಉಂಟಾದರೆ ಚಿಕಿತ್ಸೆಯೇನು?
* ಆ್ಯಂಟಿಬಯೋಟಿಕ್ಸ್: ಇದು ಗರ್ಭಕಂಠದ ಅಥವಾ ಗರ್ಭಕೋಶದ * ಕ್ಯಾನ್ಸರ್ ತಡೆಗಟ್ಟಲು ಸಹಕಾರಿ.
* ಈಸ್ಟ್ರೋಜನ್: ಕೆಲವೊಮ್ಮೆ ಜನನೇಂದ್ರೀಯ ತುಂಬಾ ಡ್ರೈಯಾಗಿದ್ದರೆ ರಕ್ತಸ್ರಾವ ಉಂಟಾಗುವುದು. ಈಸ್ಟ್ರೋಜನ್ ಥೆರಪಿಯಿಂದ ರಕ್ತಸ್ರಾವ ಉಂಟಾಗುವುದು ತಡೆಗಟ್ಟಬಹುದು.
* ಪ್ರೊಗೆಸ್ಟಿನ್: ಇದು ನಿಮಗೆ ಮಾತ್ರೆ, ಇಂಜೆಕ್ಷಬ್ ಅಥವಾ ಕ್ರೀಮ್ ಅಥವಾ ಐಯುಡಿ (ream or intrauterine device) ರೂಪದಲ್ಲಿ ಇರುತ್ತದೆ. ವೈದ್ಯರು ನಿಮಗೆ ಸೂಕ್ತವಾಗಿದ್ದನ್ನು ನಿರ್ಧರಿಸಿ ಚಿಕಿತ್ಸೆ ನೀಡುತ್ತಾರೆ.
ಸರ್ಜರಿ ಮಾಡಲಾಗುವುದೇ?
* ಹಿಸ್ಟ್ರೋಸ್ಕೋಪಿ: ಒಂದು ತೆಳುವಾದ ಟ್ಯೂಬ್‌ಗೆ ಕ್ಯಾಮೆರಾ ಇರುತ್ತದೆ ಅದನ್ನು ಜನನೇಂದ್ರೀಯ ಮುಖಾಂತರ ಒಳಗೆ ಹಾಕಿ ಗರ್ಭಕಂಠ ಹಾಗೂ ಗರ್ಭಕೋಶವನ್ನು ಪರೀಕ್ಷಿಸಲಾಗುವುದು. ಆವಾಗ ಏನಾದರೂ ಗಡ್ಡೆ ಬೆಳೆದಿದ್ದರೆ ಅಥವಾ ಇತರ ಸಮಸ್ಯೆಯಿದ್ದರೆ ಪತ್ತೆಹಚ್ಚಲಾಗುವುದು.
* D&C: ಹಿಸ್ಟ್ರೋಸ್ಕೋಪಿ ಮೂಲಕ ವೈದ್ಯರು ಈ ಚಿಕಿತ್ಸೆಯನ್ನು ನೀಡುತ್ತಾರೆ.
* ಹಿಸ್ಟೆರೆಕ್ಟೋಮಿ: ಈ ಚಿಕಿತ್ಸೆಯಲ್ಲಿ ಗರ್ಭಕೋಶ ಅಥವಾ ಗರ್ಭಕಂಠವನ್ನು ತೆಗೆಯಲಾಗುವುದು.
ಮೆನೋಪಾಸ್ ನಂತರ ಮತ್ತೆ ಮುಟ್ಟಾಗುವುದೇ?
ಮೆನೋಪಾಸ್ ನಂತರ ಒಂದು ವರ್ಷದೊಳಗೆ ಕೆಲವರಿಗೆ ರಕ್ತಸ್ರಾವ ಕಂಡು ಬರುವುದು. ಈ ರೀತಿಯಾದಾಗ ಕೆಲವೊಮ್ಮೆ ಅತ್ಯಧಿಕ ರಕ್ತಸ್ರಾವ ಕಂಡು ಬರುವುದು. ಆದರೆ ಮೆನೋಪಾಸ್ ನಿಂತ ಬಳಿಕ ಒಂದು ವರ್ಷದ ಬಳಿಕ ಅಂದರೆ 12 ತಿಂಗಳ ಬಳಿಕ ರಕ್ತಸ್ರಾವ ಕಂಡು ಬಂದರೆ ಅದು ಸಹಜ ಅಲ್ವೇ ಅಲ್ಲ. ಈ ರೀತಿಯಾದಾಗ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಮಾತ್ರ ರಕ್ತಸ್ರಾವ ಕಂಡು ಬರುವುದು.ಆದ್ದರಿಂದ ನಿರ್ಲಕ್ಷ್ಯ ಮಾಡಬಾರದು, ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಕ್ಯಾನ್ಸರ್‌ನಂಥ ಅಪಾಯದ ಸಾಧ್ಯತೆ ಹೆಚ್ಚು.
ಮಾನಸಿಕ ಒತ್ತಡದಿಂದ ಮತ್ತೆ ರಕ್ತಸ್ರಾವ ಕಂಡು ಬರುವುದೇ?
ಅತ್ಯಧಿಕ ಮಾನಸಿಕ ಒತ್ತಡ ಮೆನೋಪಾಸ್‌ಗೆ ಕಾರಣವಾಗಬಹುದು. ಆದರೆ ಮೆನೋಪಾಸ್ ಆಗಿ ಒಂದು ವರ್ಷದ ಬಳಿಕ ರಕ್ತಸ್ರಾವ ಕಂಡು ಬಂದರೆ ಅದು ಒತ್ತಡದಿಂದ ಎಂದು ಸುಮ್ಮನಾಗದೆ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಕೊಡಿಸಿ.
ಮೆನೋಪಾಸ್ ನಂತರ ಆರೋಗ್ಯವಾಗಿರುವುದು ಹೇಗೆ?
* ನೀವು ಹಾರ್ಮೋನ್ ಬದಲಾಯಿಸುವ ಚಿಕಿತ್ಸೆ ಪಡೆಯುವುದಾದರೆ ಅದರ ಪರಿಣಾಮ ಹಾಗೂ ಅಡ್ಡಪರಿಣಾಮಗಳ ಬಗ್ಗೆ ಸರಿಯಾದ ಮಾಹಿತಿ ಪಡೆದ ಬಳಿಕವಷ್ಟೇ ಮಾಡಿಸಿ.
* ಧೂಮಮಾನ ಮಾಡಬೇಡಿ, ಇದು ಹೃದಯ ಸಂಬಂಧಿ ಸಮಸ್ಯೆ ಹೆಚ್ಚಿಸುತ್ತದೆ.
* ಪ್ರತಿದಿನ ವ್ಯಾಯಾಮ ಮಾಡಿ. ದಿನದಲ್ಲಿ ಅರ್ಧ ಗಂಟೆ ವ್ಯಾಯಾಮ ಮಾಡಿ.
* ಆರೋಗ್ಯಕರ ಮೈ ತೂಕ ಕಾಪಾಡಿ.
* ಅತ್ಯಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಿ.
* ಮಾನಸಿಕ ಒತ್ತಡ ಕಡಿಮೆ ಮಾಡಲು ಪ್ರತಿದಿನ ಧ್ಯಾನ ಮಾಡಿ. ಆರೋಗ್ಯಕರ ಹವ್ಯಾಸ ರೂಢಿಸಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












