Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾಯು ಮಾಲಿನ್ಯ: ಈ 5 ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ
ನಗರ ಪ್ರದೇಶದಲ್ಲಿ ವಾಯು ಮಾಲಿನ್ಯ ತುಂಬಾನೇ ಹೆಚ್ಚಾಗುತ್ತದೆ, ದೆಹಲಿ ಅಂತ ಪ್ರದೇಶದಲ್ಲಿ ಕೆಲವೊಂದು ಸೀಸನ್‌ಗಳಲ್ಲಿ ಬದುಕುವುದೇ ದುಸ್ತರವಾಗುವುದು. ಇನ್ನು ನಮ್ಮ ಬೆಂಗಳೂರಿನಲ್ಲಿಯೂ ವರ್ಷದಿಂದ ವರ್ಷಕ್ಕೆ ವಾಯು ಮಾಲಿನ್ಯ ಹೆಚ್ಚಗುತ್ತಿದೆ, ಗಾರ್ಡನ್ ಸಿಟಿ ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ಈ ಹಿಂದಿನ ಪರಿಸರದ ಸೊಬಗು ಈಗ ಇಲ್ಲ, ಹಸಿರುಗಳು ಕಣ್ಮರೆಯಾಗುತ್ತಿದೆ, ಕಾಂಕ್ರಿಟ್ ಬಿಲ್ಡಿಂಗ್‌ಗಳು ಹೆಚ್ಚಾಗುತ್ತಿದೆ.
ವಾಯುಮಾಲಿನ್ಯ ಹೆಚ್ಚಾದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಅಸ್ತಮಾ ಕಾಯಿಲೆ ಇರುವವರೆಗೆ ವಾಯು ಮಾಲಿನ್ಯ ಅಧಿಕವಾದರೆ ಆರೋಗ್ಯ ಸ್ಥಿತಿ ತುಂಬಾನೇ ಗಂಭೀರವಾಗುವುದು. ವಾಯುಮಾಲಿನ್ಯದಿಂದ ನಿಮ್ಮ ದೇಹದ ಮೇಲಾಗುವ ಕೆಟ್ಟ ಪರಿಣಾಮ ತಡೆಗಟ್ಟಲು ನೀವು ನಿಮ್ಮ ಆಹಾರದಲ್ಲಿ ಈ 5 ಆಹಾರಗಳನ್ನು ಸೇರಿಸಿದರೆ ತುಂಬಾನೇ ಒಳ್ಳೆಯದು:

ನಿಂಬೆ ಹಣ್ಣು
ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು
ಹೆಚ್ಚಿಸುತ್ತದೆ, ಅಲ್ಲದೆ ಶ್ವಾಸಕೋಶವನ್ನು ಆರೋಗ್ಯವಾಗಿಡಲು ತುಂಬಾನೇ ಸಹಾಯ ಮಾಡುತ್ತದೆ. ಬೆಳಗ್ಗೆ ಒಂದು ಲೋಟ ಬಿಸಿ ನೀರಿಗೆ ನಿಂಬೆಹಣ್ಣಿನ ರಸ ಹಾಕಿ ಕುಡಿದರೆ ತುಂಬಾನೇ ಒಳ್ಳೆಯದು. ನೀವು ಇದನ್ನು ಬಾಡಿ ಡಿಟಾಕ್ಸ್‌ನಲ್ಲಿ ಬಳಸಬಹುದು. ನೀವು ಕುಡಿಯುವ ನೀರಿಗೆ ಒಂದು ತುಂಡು ನಿಂಬೆ ಹಣ್ಣು ಹಾಕಿ ಆ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲು ಸಹಕಾರಿ.
ಶುಂಠಿ
ಶುಂಠಿ ದೇಹ ಹಾಗೂ ಶ್ವಾಸಕೋಶದ ಆರೋಗ್ಯ ಕಾಪಾಡಲು ಶುಂಠಿ ತುಂಬಾನೇ ಪ್ರಯೋಜನಕಾರಿ. ಕೆಮ್ಮು ತಡೆಗಟ್ಟಲು ಸಹಕಾರಿ. ಶುಂಠಿಯನ್ನು ಮಿತಿಯಲ್ಲಿ ಬಳಸಿ, ಇಲ್ಲದಿದ್ದರೆ ದೇಹದ ಉಷ್ಣತೆ ಹೆಚ್ಚಾಗುವುದು. ನೀವು ಸ್ವಲ್ಪ ಶುಂಠಿಯನ್ನು ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಸೇರಿಸಿದರೆ ಸಾಕು. ಒಂದು ಶುಂಠಿ ಟೀ ದೂಳಿನಿಂದ ನಿಮ್ಮ ಆರೋಗ್ಯ ಕಾಪಾಡಲು ತುಂಬಾನೇ ಸಹಕಾರಿಯಾಗಿದೆ.
ಕುಂಬಳಕಾಯಿ ಬೀಜ
ಕುಂಬಳಕಾಯಿ ಬೀಜದಲ್ಲಿ ಅನೇಕ ಪೋಷಕಾಂಶಗಳಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದಿನಾ ಸ್ವಲ್ಪ ಕುಂಬಳಕಾಯಿ ಬೀಜ ತಿನ್ನಿ, ಇದು ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಲು ಸಹಾಯ ಮಾಡುವುದಲ್ಲದೆ, ದೇಹಕ್ಕೆ ಅಗ್ಯತವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಮಧುಮೇಹಿಗಳಂತೂ ತಮ್ಮ ಆಹಾರಕ್ರಮದಲ್ಲಿ ಇದನ್ನು ಸೇರಿಸುವುದರಿಂದ ತುಂಬಾನೇ ಪ್ರಯೋಜನ ಪಡೆಯಬಹುದು.
ಅರಿಶಿಣ
ಅರಿಶಿಣ ಗಂಟಲು ಹಾಗೂ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಲು ತುಂಬಾನೇ ಸಹಕಾರಿ. ಸ್ವಲ್ಪ ಅರಿಶಿಣವನ್ನು ಹಾಲು ಅಥವಾ ಬಿಸಿ ನೀರಿನಲ್ಲಿ ಹಾಕಿ ಕುಡಿಯಿರಿ. ಅಸ್ತಮಾ ಇರುವವರು ಈ ವಿಧಾನಾ ಅನುಸರಿಸುವುದರಿಂದ ಆರೋಗ್ಯ ಕಾಪಾಡಲು ತುಂಬಾನೇ ಸಹಕಾರಿಯಾಗಿದೆ. 21980-ಲ;ಕ156ಉಕಿಉ7ಯು8 ಇದು ಲಿವರ್‌ನ ಆರೋಗ್ಯ ಕಾಪಾಡಲು ಸಹಕಾರಿ, ದೇಹದಲ್ಲಿರುವ ಕಶ್ಮಲವನ್ನು ಲಿವರ್ ಹೊರಹಾಕಲು ಅರಿಶಿಣ ಸಹಾಯ ಮಾಡುತ್ತದೆ.
ಕ್ಯಾಬೇಜ್, ಹೂಕೋಸು, ಬ್ರೊಕೋಲಿ, ಪಾಲಾಕ್
ಈ ಬಗೆಯ ತರಕಾರಿ ಸೇವಿಸಿ. ಈ ತರಕಾರಿಗಳು ದೇಹದಲ್ಲಿನ ಕಶ್ಮಲಗಳನ್ನು ಹೊರಹಾಕಲು ತುಂಬಾನೇ ಸಹಕಾರಿ. ಈ ತರಕಾರಿಗಳು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ. ಕ್ಯಾನ್ಸರ್‌ನಂಥ ಅಪಾಯಕಾರಿ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ. ವಾಯು ಮಾಲಿನ್ಯ ಹೆಚ್ಚಾಗುವುದರಿಂದ ಶ್ವಾಸಕೋಶದ ಆರೋಗ್ಯ ಕಾಪಾಡುವುದರ ಜೊತೆಗೆ ನ್ಯೂಮೋನಿಯಾ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications