Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
Suicide Prevention: ಹೀಗೆ ಮಾಡಿ ಆತ್ಮಹತ್ಯೆಯ ಯೋಚನೆ ತಡೆಗಟ್ಟಬಹುದು
ಸೆಪ್ಟೆಂಬರ್ 10ನ್ನು ವಿಶ್ವ ಆತ್ಮಹತ್ಯೆ ನಿಯಂತ್ರಣ ದಿನವನ್ನಾಗಿ ಆಚರಿಸಲಾಗುವುದು. ಆತ್ಮಹತ್ಯೆ ಎಂಬ ಅಪಾಯಕರಿ ಯೋಚನೆ ತಡೆಗಟ್ಟಲು, ಜನರಲ್ಲಿ ಮತ್ತೆ ದುಕುವ ಛಲ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಆತ್ಮಹತ್ಯೆ ಎಂಬುವುದು ಸಮಸ್ಯೆಗೆ ಪರಿಹಾರವಲ್ಲ, ಆತ್ಮಹತ್ಯೆ ಎಂಬುವುದು ಒಂದು ಕ್ಷಣ ಬರುವ ಆಲೋಚನೆ. ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕಿಳಿದವರ ಬಳಿ ಮಾತನಾಡಿ ಆಗ ಅವರು ಛೇ ನಾನು ಎಂಥ ತಪ್ಪು ಆಲೋಚನೆ ಮಾಡಿದ್ದೆ, ನಾನು ಆತ್ಮಹತ್ಯೆಗೆ ಪ್ರಯತ್ನಿಸಬಾರದಿತ್ತು, ನನ್ನಿಂದ ತಪ್ಪಾಗಿದೆ ಎಂದು ಪಶ್ಚಾತಾಪ ಪಡುತ್ತಾರೆ.

ಆತ್ಮಹತ್ಯೆ ಯೋಚನೆ ಅನೇಕ ಕಾರಣಗಳಿಂದ ಬರಬಹುದು. ಸೋಲು, ಹತಾಶೆ, ಖಿನ್ನತೆ ಇವೆಲ್ಲಾ ಆತ್ಮಹತ್ಯೆಗೆ ಪ್ರೇರೇಪಿಸಬಹುದು, ಆದರೆ ಒಂದು ಕ್ಷನ ಆತ್ಮಹತ್ಯೆಯ ಆಲೋಚನೆ ಬಿಟ್ಟು ಬೇರೆ ಯೋಚಿಸಿದರೆ ಮತ್ತೆ ತಪ್ಪು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಇನ್ನು ನಮ್ಮಮನೆಯವರು ಅಥವಾ ಆತ್ಮೀಯರು ಏಕೋ ವಿಚಿತ್ರವಾಗಿ ವರ್ತಿಸುತ್ತಿದ್ದರೆ ಎಂದನಿಸಿದರೆ ಅವರತ್ತ ಗಮನ ನೀಡಿ, ಅವರ ಮಾತುಗಳನ್ನು ಆಲಿಸಿ, ಅವರಲ್ಲಿರುವ ಆತ್ಮಹತ್ಯೆಯ ಆಲೋಚನೆಯನ್ನು ದೂರ ಮಾಡಿ.
ಆತ್ಮಹತ್ಯೆ ಆಲೋಚನೆ ಬಂದಾಗ ಈ ಕೆಳಗೆ ಹೇಳಿರುವ ಅಂಶಗಳಂತೆ ನಡೆದುಕೊಂಡರೆ ಕೆಟ್ಟ ಆಲೋಚನೆ ದೂರಾಗಿ ಬದುಕಿನ ಬಗ್ಗೆ ಭರವಸೆ ಮೂಡುವುದು:

1. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ:
ಸಮಸ್ಯೆಗೆ ಸಾವು ಪರಿಹಾರವಲ್ಲ, ಎಲ್ಲರ ಬದುಕಿನಲ್ಲೂ ಸಮಸ್ಯೆಗಳಿರುತ್ತೆ, ಆದ್ದರಿಂದ ಸಮಸ್ಯೆ ಎದುರಾದಾಗ ಅದರಿಂದ ಪಾರಾಗುವುದು ಹೇಗೆ, ಪರಿಹಾರಗಳೇನು ಎಂದು ಯೋಚಿಸಿ, ಪಲಾಯನ ಮಾಡಲು ಆತ್ಮಹತ್ಯೆಯ ಆಲೋಚನೆ ಬೇಡ್ವೆ ಬೇಡ. ಅವಶ್ಯಕತೆ ಬಿದ್ದರೆ ಖಿನ್ನತೆಗೆ ಚಿಕಿತ್ಸೆ ಕೂಡ ಪಡೆಯಿರಿ.
ಬದುಕಲು ಒಂದು ಕಾರಣ ಹುಡುಕಿ: ಸಾಯಲು ಕಾರಣ ಹುಡುಕುವ ಬದಲಿಗೆ ಬದುಕಲು ಕಾರಣ ಹುಡುಕಬೇಕು, ಈಗ ಏನೇ ಆಗಿರಲಿ ಎಲ್ಲವನ್ನು ಸಮರ್ಥವಾಗಿ ಎದುರಿಸಿ ಬಾಳಿ ತೋರಿಸುತ್ತೇನೆ ಎಂದು ನಿರ್ಧರಿಸಿ, ಸುಂದರ ಬದುಕು ನಿಮಗೆ ಸಿಕ್ಕೇ ಸಿಗುವುದು.

ಬದುಕಲು ಒಂದು ಕಾರಣ ಹುಡುಕಿ:
ಸಾಯಲು ಕಾರಣ ಹುಡುಕುವ ಬದಲಿಗೆ ಬದುಕಲು ಕಾರಣ ಹುಡುಕಬೇಕು, ಈಗ ಏನೇ ಆಗಿರಲಿ ಎಲ್ಲವನ್ನು ಸಮರ್ಥವಾಗಿ ಎದುರಿಸಿ ಬಾಳಿ ತೋರಿಸುತ್ತೇನೆ ಎಂದು ನಿರ್ಧರಿಸಿ, ಸುಂದರ ಬದುಕು ನಿಮಗೆ ಸಿಕ್ಕೇ ಸಿಗುವುದು.

ಸ್ನೇಹಿತರು, ಕುಟುಂಬದವರ ಜೊತೆ ನಿಮ್ಮ ಬಾವನೆಗಳನ್ನು ಹಂಚಿಕೊಳ್ಳಿ
ಎಲ್ಲಾ ನೋವು ನೀವೇ ಅನುಭವಿಸಬೇಡಿ. ನಿಮ್ಮ ನೋವು, ಹತಾಶೆ ಎಲ್ಲವನ್ನೂ ಮನೆಯವರು ಅಥವಾ ಆಪ್ತರ ಬಳಿ ಹೇಳಿಕೊಳ್ಳಿ, ಮನಸ್ಸು ಹಗುರವಾಗುತ್ತದೆ, ನಿಮಗೂ ನೀವು ಒಂಟಿ ಅಂತ ಅನಿಸಲ್ಲ, ಮನಸ್ಸಿಗೆ ದೈರ್ಯ ಸಿಗುವುದು.

ನಿಮ್ಮ ಆಲೋಚನೆಗೆ ವಿರುದ್ಧ ಮಾಡಿ
ನಿಮಗೆ ಒಂಟಿಯಾಗಿರಬೇಕೆಂದು ಅನಿಸಿದಾಗ ಒಂಟಿಯಾಗಿ ಇರಬೇಡಿ, ಬದಲಿಗೆ ಫ್ರೆಂಡ್ಸ್ ಜೊತೆ ಇರಿ, ಆಗ ನಿಮಗೆ ನಿಮ್ಮ ಮನಸ್ಸಿನ ತುಮುಲ ಗೆಲ್ಲಲು ಸಾಧ್ಯವಾಗುವುದು.

ಆತ್ಮಹತ್ಯೆ ತಡೆಗಟ್ಟಲು ಹೀಗೆ ಮಾಡಿ
* ಖಿನ್ನತೆಗೆ ಚಿಕಿತ್ಸೆ ಪಡೆಯಿರಿ: ಎಷ್ಟೋ ಜನರು ಖಿನ್ನತೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಖಿನ್ನತೆಯ ಲಕ್ಷಣಗಳು ಅಂದರೆ ಯಾರ ಸಂಪರ್ಕ ಬೇಡ, ಒಂಟಿಯಾಗಿರಬೇಕು ಎಂದೆಲ್ಲಾ ಅನಿಸಲಾರಂಭಿಸಿದರೆ ಖಿನ್ನತೆಗೆ ಚಿಕಿತ್ಸೆ ಪಡೆಯಿರಿ

ಯಾವ ಕಾರಣಕ್ಕೆ ಹಾಗೆ ಅನಿಸುತ್ತಿದೆಯೋ ಅದರಿಂದ ದೂರವಿರಿ
ಆತ್ಮಹತ್ಯೆ ಆಲೋಚನೆ ಬರಲು ಕಾರಣವಾಗಿರುವ ಅಂಶಗಳಿಂದ ದೂರವಿರಿ. ಪ್ರೀತಿಯಲ್ಲಿ ಮೋಸ, ಬ್ಯುಸ್‌ನೆಸ್ ಲಾಸ್ ಹೀಗೆ ಏನೇ ಸಮಸ್ಯೆಯಾಗಿದ್ದರೂ ಸಾವೇ ಪರಿಹಾರವಲ್ಲ ಎಂದು ಪದೇ-ಪದೇ ನಿಮ್ಮ ಮನಸ್ಸಿಗೆ ಹೇಳಿಕೊಳ್ಳಿ.
* ನಿಮ್ಮ ಬಗ್ಗೆ ಹೆಚ್ಚಿನ ಆರೈಕೆ ಮಾಡಿ
* ಚೆನ್ನಾಗಿ ತಿನ್ನಿ
* ಪ್ರತಿದಿನ ಸ್ವಲ್ಪ ವ್ಯಾಯಾಮ ಮಾಡಿ
* ಚೆನ್ನಾಗಿ ನಿದ್ದೆ ಮಾಡಿ
* ಒಳ್ಳೆಯ ಆಲೋಚನೆಗಳನ್ನು ಮಾಡಿ.

ನಿಮಗೆ ಇಷ್ಟವಾಗಿದ್ದನ್ನು ಮಾಡಿ
ಎಲ್ಲಾ ಕೈ ಬಿಟ್ಟು ಹೋಯ್ತು ಎಂದನಿಸಿದಾಗ ನಿಮ್ಮ ಮನಸ್ಸಿಗೆ ಖುಷಿ ಕೊಡುವ ವಿಷಯಗಳತ್ತ ಗಮನಹರಿಸಿ. ಒಂದು ಟ್ರಿಪ್ ಹೋಗುವುದು ಅಥವಾ ಏನಾದರೂ ಒಳ್ಳೆಯ ಹವ್ಯಾಸಗಳತ್ತ ಗಮನ ಹರಿಸುವುದು ಇವೆಲ್ಲಾ ಆತ್ಮಹತ್ಯೆ ಆಲೋಚನೆ ತಡೆಗಟ್ಟಲು ಸಹಕಾರಿ.
ಕೊನೆಯದಾಗಿ: ಸಾವು ಯಾವುದಕ್ಕೂ ಪರ್ಯಾಯವಲ್ಲ, ಒಂದು ಆತ್ಮಹತ್ಯೆ ಇಡೀ ಕುಟುಂಬದ ಸಂತೋಷವನ್ನೇ ಕಿತ್ತುಕೊಳ್ಳುತ್ತೆ. ಕಷ್ಟ, ಸವಾಲುಗಳು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ, ನಿಮಗೆ ಈಗ ಬಂದಿರುವ ಕಷ್ಟ, ಸವಾಲುಗಳು ಯಾವುದೂ ಶಾಶ್ವತವಲ್ಲ ಎಂಬುವುದು ನೆನಪಿರಲಿ, ನಿಮ್ಮ ಮನಸ್ಸಿಗಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ, ಎಲ್ಲಾ ಸವಾಲು ನಾನು ಸಮರ್ಥವಾಗಿ ಎದುರಿಸುತ್ತೇನೆ ಎಂದು ನಿಮ್ಮ ಮನಸ್ಸಿಗೆ ದೃಢವಾಗಿ ಹೇಳಿಕೊಳ್ಳಿ. ಖಂಡಿತ, ಮುಂದೆ ಒಳ್ಳೆಯ ಬದಲಾವಣೆ ಕಾಣುವಿರಿ.



Click it and Unblock the Notifications











