Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವೃಷಣಗಳಲ್ಲಿ ನೋವು, ಉರಿಯೂತಕ್ಕೆ ಮನೆಮದ್ದು
ವೃಷಣಗಳಲ್ಲಿ ನೋವು, ಉರಿಯೂತ ಉಂಟಾದರೆ ಇದರಿಂದ ಅಸಾಧ್ಯವಾದ ನೋವು ಉಂಟಾಗುವುದರ ಜೊತೆಗೆ ಕೆಲವರಿಗೆ ಆ ನೋವಿಗೆ ಸುಸ್ತು, ವಾಂತಿ, ಜ್ವರ ಕೂಡ ಬರುವುದು.
ವೃಷಣಗಳಲ್ಲಿ ನೋವು ಉಂಟಾಗಲು ಸಾಮಾನ್ಯ ಕಾರಣವೆಂದರೆ ಬ್ಯಾಕ್ಟಿರಿಯಾ ಅಥವಾ ವೈರಲ್ ಸೋಂಕಾಗಿದೆ. ಕೆಲವೊಂದು ಎಸ್‌ಟಿಡಿ(sexually transmitted diseases) ಕೂಡ ವೃಷಣಗಳಲ್ಲಿ ನೋವು ಹಾಗೂ ಉರಿಯೂತಕ್ಕೆ ಕಾರಣವಾಗಿದೆ. ಆದ್ದರಿಂದಲೇ ಈ ಸಮಸ್ಯೆ ತಡೆಗಟ್ಟಲು ಸುರಕ್ಷಿತ ಲೈಂಗಿಕಕ್ರಿಯೆಯಲ್ಲಿ ತೊಡಗುವಂತೆ ವೈದ್ಯರು ಸಲಹೆ ನೀಡುತ್ತಾರೆ.
ವೃಷಣಗಳಲ್ಲಿ ನೋವು ಕಂಡು ಬಂದರೆ ಕೆಲವೊಂದು ಮನೆಮದ್ದು ಆ ನೋವು ಹಾಗೂ ಉರಿಯೂತ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದ್ದು, ಆ ಮನೆಮದ್ದುಗಳ ಬಗ್ಗೆ ಮಾಹಿತಿ ನೋಡಿ ಇಲ್ಲಿದೆ:

1. ಕೋಲ್ಡ್ ಕಂಪ್ರೆಸ್
ಕೋಲ್ಡ್ ಕಂಪ್ರೆಸ್ ನೋವು ಹಾಗೂ ಊತ ಕಡಿಮೆ ಮಾಡುತ್ತದೆ. ಕೋಲ್ಡ್ ಕಂಪ್ರೆಸ್ ಇಟ್ಟಾಗ ಆ ಭಾಗದಲ್ಲಿ ಊತ ಮತ್ತು ನೋವು ಕಡಿಮೆಯಾಗುವುದು. ಸ್ವಲ್ಪ ಐಸ್‌ಕ್ಯೂಬ್ಸ್ ತೆಗೆದುಕೊಂಡು ಅದನ್ನು ಶುದ್ಧವಾದ ಹತ್ತಿಯ ಬಟ್ಟೆಯಲ್ಲಿ ಸುತ್ತಿ ನೋವು ಇರುವ ಕಡೆ 20 ನಿಮಿಷ ಇಡಿ. ಈ ರೀತಿ ಪ್ರತೀ ಎರಡು ಗಂಟೆಗೊಮ್ಮೆ ಮಾಡಿದರೆ ನೋವು ಕಡಿಮೆಯಾಗುವುದು.

2. ಬೆಳ್ಳುಳ್ಳಿ
ಬೆಳ್ಳುಳ್ಳಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪರಿಣಾಮಕಾರಿ, ಇದು ನೋವು ಹಾಗೂ ಊತವನ್ನು ಕೂಡ ಕಡಿಮೆ ಮಾಡುತ್ತದೆ. 2-3 ಎಸಳು ಬೆಳ್ಳುಳ್ಳಿ ತೆಗೆದುಕೊಂಡು ಅದನ್ನು ಸಾಸಿವೆ ಎಣ್ಣೆಯಲ್ಲಿ ಹಕಿ ಬಿಸಿ ಮಾಡಿ, ನಂತರ ಆ ಎಣ್ಣೆ ತಣ್ಣಗಾದ ಮೇಲೆ, ಆ ಎಣ್ಣೆಯಿಂದ ನೋವು ಇರುವ ಕಡೆ ಮೆಲ್ಲನೆ ಮಸಾಜ್ ಮಾಡಿದರೆ ನೋವು ಕಡಿಮೆಯಾಗುವುದು.

3. ಅರಿಶಿಣ
ಬ್ಯಾಕ್ಟಿರಿಯಾ ಹಾಗೂ ವೈರಲ್ ಸೋಂಕಿನಿಂದಾಗಿ ಉಂಟಾದ ನೋವು ಹಾಗೂ ಉರಿಯೂತ ಕಡಿಮೆ ಮಾಡಲು ಅರಿಶಿಣವನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಉರಿಯೂತ ಕಡಿಮೆ ಮಾಡಲು ಆಹಾರದಲ್ಲಿ 500-1000ಮಿಗ್ರಾಂ ಆದರೂ ಅರಿಶಿಣ ಇರಬೇಕು.

4. ಆಲೀವ್ ಎಣ್ಣೆ
ಆಲೀವ್ ಎಣ್ಣೆಯಲ್ಲಿ ಆ್ಯಂಟಿಆಕ್ಸಿಡೇಟಿವ್ ಅಧಿಕವಿದೆ. ಇದು ರೋಗನಿರೋಧಕ ಶಕ್ತಿ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಸಹಕಾರಿ, ಇದು ಆ್ಯಂಟಿ ಬಾಡಿಗಳ ಉತ್ಪತ್ತಿಗೆ ಸಹಕಾರಿ. ಪ್ರತಿದಿನ 3 ಚಮಚದಷ್ಟು ಆಲೀವ್ ಎಣ್ಣೆ ಸೇವನೆ ಮಾಡುವುದು ಒಳ್ಳೆಯದು.

5. ಮೊಸರು
ಇನ್ನು ಮೊಸರು ಹೊಟ್ಟೆಯ ಆರೋಗ್ಯಕ್ಕೆ ಸಹಕಾರಿ. ಇದು ವಾಂತಿ, ತಲೆಸುತ್ತು ಈ ರೀತಿಯ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿ. ಪ್ರತಿದಿನ ಆಹಾರದ ಜೊತೆ ಮೊಸರು ಸೇವಿಸಿ.

6.ಆ್ಯಪಲ್ ಸೈಡರ್ ವಿನೆಗರ್
ಆ್ಯಪಲ್ ಸೈಡರ್ ವಿನೆಗರ್ ವೃಷಣ ನೋವು ಕಡಿಮೆ ಮಾಡುವಲ್ಲಿ ಸಹಕಾರಿಯಾದರೂ ಇದನ್ನು ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಒಂದು ಚಮಚ ಆ್ಯಪಲ್ ಸೈಡರ್ ವಿನೆಗರ್‌ಗೆ ಅಷ್ಟೇ ಪ್ರಮಾಣದ ನೀರು ಬೆರೆಸಿ ನೋವು ಇರುವ ಕಡೆ ಹಚ್ಚಬಹುದು. ಇನ್ನು ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಆ್ಯಪಲ್ ಸೈಡರ್ ವಿನೆಗರ್ ಹಾಕಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುವುದು.

7. ನೀಲಗಿರಿ ಎಣ್ಣೆ
ನೀಲಗಿರಿ ಎಣ್ಣೆಯಲ್ಲಿ ಆ್ಯಂಟಿಬ್ಯಾಕ್ಟಿರಿಯಾ, ಆ್ಯಂಟಿವೈರಲ್, ಆ್ಯಂಟಿ ಇನ್‌ಫ್ಲೇಮಟರಿ ಗುಣವಿದೆ. ಇದು ನೋವು ಕಡಿಮೆ ಮಾಡುವಲ್ಲಿ ತುಂಬಾನೇ ಸಹಕಾರಿ. ಒಂದು ಟಬ್ ಬಿಸಿ ನೀರಿಗೆ ನೀಲಗಿರಿ ಎಣ್ಣೆ ಹಾಕಿ, ಅದರಲ್ಲಿ ಒಂದು 10 ನಿಮಿಷ ಕೂರಿ, ಈ ರೀತಿ ಮೂರು ದಿನ ಮಾಡಿ, ನೋವು ಕಡಿಮೆಯಾಗುವುದಾದರೆ ಸಂಪೂರ್ಣ ಕಡಿಮೆಯಾಗುವವರೆಗೆ ಮಾಡಿ.
ನೋವು ಕಡಿಮೆಯಾಗದಿದ್ದರೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.



Click it and Unblock the Notifications
