ಜೀವನದಲ್ಲಿ ಮತ್ತೆ ಶಾಂತಿ, ಸಂತೋಷ ಪಡೆದುಕೊಳ್ಳಲು ಏನು ಮಾಡಬೇಕು?

ಸೋಲು, ನೋವು, ದುಃಖ ಮನುಷ್ಯ ಜೀವನದ ಅವಿಭಾಜ್ಯ ಅಂಗ. ಆದರೆ, ಅವುಗಳನ್ನು ಹೇಳಿದಷ್ಟು ಸುಲಭವಾಗಿ ಎದುರಿಸಲು, ಜಯಿಸಲು ಸಾಧ್ಯವಿಲ್ಲ. ಒಂದು ಹೃದಯ ಚೂರಾದರೆ, ಅದರಿಂದ ಹೊರಬಂದು, ಹೊಸ ಜೀವನ ಆರಂಭಿಸುವುದು ದೊಡ್ಡ ಸವಾಲಿನ ಸಂಗತಿ. ಏಕೆಂದರೆ ನಮಗಾಗ ಮೋಸ, ಅವಮಾನಗಳು ಒಳಗೊಳಗೆ ನಮ್ಮನ್ನು ಕಾಡುತ್ತಿರುತ್ತವೆ. ಇದರಿಂದ ಹೊರಬಂದು, ಮತ್ತೆ ಶಾಂತಿ ಮತ್ತು ಸಂತೋಷದಾಯಕ ಜೀವನವನ್ನು ನಡೆಸಲು ಹೆಚ್ಚಿನವರು ಹೆಣಗಾಡುತ್ತಿರುತ್ತಾರೆ. ಅಂತಹವರಿಗಾಗಿ, ನಾವಿಂದು ಕೆಲ ಸಲಹೆಗಳನ್ನು ನೀಡಲಿದ್ದೇವೆ. ಈ ಮೂಲಕ ನೀವು ಹೊಸ ಜೀವನ ಆರಂಭಿಸಬಹುದು.

123
ಜೀವನವನ್ನು ಮತ್ತೆ ಹೊಸದಾಗಿ ಶಾಂತಿ ಮತ್ತು ಸಂತೋಷದಾಯಕವಾಗಿ ಆರಂಭಿಸಲು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ನಿಧಾನವಾಗಿ ಒಪ್ಪಿಕೊಳ್ಳಿ, ಮುಂದುವರೆಯಿರಿ

ನಿಧಾನವಾಗಿ ಒಪ್ಪಿಕೊಳ್ಳಿ, ಮುಂದುವರೆಯಿರಿ

ಹೌದು, ಸಾಮಾನ್ಯವಾಗಿ ಹೇಳೋದಿದೆ. ಆಗಿದ್ದು, ಆಗಿ ಹೋಯಿತು. ಅದನ್ನ ಒಪ್ಪಿಕೊಂಡು ಮುಂದುವರಿಯಬೇಕು ಅಂತ. ಇದು ನಿಜ ಕೂಡ. ಆಗಿದ್ದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಅದನ್ನು ಒಪ್ಪಿಕೊಳ್ಳಲೇಬೇಕು. ಆದರೆ, ಯಾರೋ ಹೇಳಿದ ತಕ್ಷಣವೇ, ಆದ ನೋವು, ದುಃಖವನ್ನೆಲ್ಲಾ ಮರೆತು ಒಮ್ಮೆಲೆ ಮುಂದೆ ಸಾಗುವುದು, ಸಾಮಾನ್ಯ ಜೀವನ ನಡೆಸುವುದು ಅಸಾಧ್ಯವಾದ ಮಾತು. ಏಕೆಂದರೆ, ನಿಮಗಷ್ಟೇ ಗೊತ್ತಿರುವುದು ಆ ನೋವಿನ ಹಿಂದಿರುವ ಹೋರಾಟ. ಆದ್ದರಿಂದ ಸಮಯ ತೆಗೆದುಕೊಳ್ಳಿ. ನಿಧಾನವಾಗಿ ಸನ್ನಿವೇಶ ಒಪ್ಪಿಕೊಂಡು, ಮುಂದುವರಿಯಲು ಪ್ರಯತ್ನಿಸಿ.

ಇತರರ ಅತಿ ಅವಲಂಬನೆ ಬೇಡ, ನಿಮಗೆ ಬೇಕಾದುದನ್ನು ನಿರ್ಧರಿಸಿ

ಇತರರ ಅತಿ ಅವಲಂಬನೆ ಬೇಡ, ನಿಮಗೆ ಬೇಕಾದುದನ್ನು ನಿರ್ಧರಿಸಿ

ಇತರರ ಅಥವಾ ನಿಮ್ಮ ಒಳಿತನ್ನು ಬಯಸುವವರ ಮಾತನ್ನು ಕೇಳುವುದು, ಅವರ ಸಲಹೆಗಳನ್ನು ಅನುಸರಿಸುವುದು ಒಳ್ಳೆಯದೇ.. ಆದರೆ ನೀವು ಸೋತು ಕೂತಾಗ ಅಥವಾ ನೋವಿನಲ್ಲಿದ್ದಾಗ ಇಂತಹವರ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಮನಸ್ಸಿಗೆ ಏನು ಸರಿ ಅನಿಸುವುದೋ ಅದನ್ನೇ ಮಾಡಿ, ಬೇರೆಯವರ ಮಾತಿಗೆ ಹೆಚ್ಚು ಅವಲಂಬನೆ ಬೇಡ. ನಿಮಗೆ ಏನು ತಿನ್ನಬೇಕು? ಯಾವ ಬಟ್ಟೆ ಧರಿಸಬೇಕು? ಯಾವ ಸಿನಿಮಾ ನೋಡಬೇಕು? ಇದೆಲ್ಲವೂ ನಿಮಗೆ ಅನಿಸಿದಂತೆಯೇ ಮಾಡಿ. ಏಕೆಂದರೆ, ಇತರರ ಬಗ್ಗೆ ಕಾಳಜಿ ಮಾಡುವ ಮೊದಲು ನೀವು ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಈ ಸಮಯದಲ್ಲಿ ಮಖ್ಯ.

ಭೂತ ಕಾಲದಲ್ಲೇ ಬದುಕಬೇಡಿ

ಭೂತ ಕಾಲದಲ್ಲೇ ಬದುಕಬೇಡಿ

ಜೀವನದ ಭೂತ ಕಾಲದಲ್ಲಿ ನಡೆದದ್ದು ನಡೆದು ಹೋಗಿದೆ. ಹಾಗಂದ ಮಾತ್ರಕ್ಕೆ ಅದನ್ನೇ ನೆನೆಸಿಕೊಂಡು ಕೊರಗುವುದು ಸರಿಯಲ್ಲ. ಅದರಿಂದ ಕಲಿತ ಪಾಠವನ್ನು ಮನಸ್ಸಲ್ಲಿಟ್ಟುಕೊಂಡು, ನಿಮ್ಮ ಮುಂದಿನ ಜೀವನದ ಕಡೆಗೆ ಮುಂದುವರಿಯರಿ. ಆದರೆ, ಅದೇ ತಪ್ಪನ್ನು ಮತ್ತೆಮತ್ತೆ ಮಾಡುವ ಸಾಹಸ ಬೇಡ. ಒಂದು ಕಹಿ ಘಟನೆಯಿಂದ ಹೊರಬರಲು ಸಮಯ ಹಿಡಿಯುವುದು ಸಾಮಾನ್ಯ. ಇದಕ್ಕೆ ಕೊರಗುವುದು ಬೇಕಾಗಿಲ್ಲ. ನಿಮ್ಮ ಬದುಕು, ಗುರಿ, ಹವ್ಯಾಸದ ಕಡೆಗೆ ಗಮನಕೊಟ್ಟು, ಮುಂದೆ ಸಾಗಬೇಕು.

ಸ್ವಯಂ ದೂಷಣೆ ಮಾಡುವುದನ್ನು ನಿಲ್ಲಿಸಿ

ಸ್ವಯಂ ದೂಷಣೆ ಮಾಡುವುದನ್ನು ನಿಲ್ಲಿಸಿ

ಮನುಷ್ಯ ಅಂದಮೇಲೆ ತಪ್ಪು ಮಾಡುವುದು ಸಹಜ. ಹಾಗಂತ ತಪ್ಪು ಮಾಡಿದ ತಕ್ಷಣ ನೀವು ಕೆಟ್ಟವರಾಗುವುದಿಲ್ಲ. ಆದ್ದರಿಂದ ತಪ್ಪಿತಸ್ಥ ಭಾವನೆ ಬೇಡ. ಆ ತಪ್ಪನ್ನು ಸರಿ ಮಾಡಿಕೊಂಡು, ತಿದ್ದಿ ನಡೆದರೆ ಸಾಕು, ನಿಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಸಿಕ್ಕಹಾಗೇ. ಅದು ಬಿಟ್ಟು, ಬೇರೆಯವರು ಏನೆಂದುಕೊಳ್ಳುತ್ತಾರೋ ಎನ್ನುವ ಚಿಂತೆ ಬೇಡ. ನಿಮ್ಮನ್ನ ಪ್ರೀತಿಸುವವರು ನಿಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಆದ್ದರಿಂದ ನಿಮ್ಮಿಂದಾದ ತಪ್ಪಿಗೆ ನಿಮ್ಮನ್ನು ದೂಷಣೆ ಮಾಡಿಕೊಳ್ಳುವುದು ಬೇಡ. ಪ್ರತಿಯೊಬ್ಬರಿಗೂ ಎರಡನೇ ಅವಕಾಶವಿದೆ. ಅದೇ ರೀತಿ ನಿಮಗಿರುವ ಎರಡನೇ ಅವಕಾಶವನ್ನು ಬಳಸಿಕೊಳ್ಳಿ.

ನಿಮ್ಮನ್ನು ಅಪ್ಪಿಕೊಂಡು, ಬೆಳೆಯಲು ಪ್ರಾರಂಭಿಸಿ

ನಿಮ್ಮನ್ನು ಅಪ್ಪಿಕೊಂಡು, ಬೆಳೆಯಲು ಪ್ರಾರಂಭಿಸಿ

ನೋವಿನಿಂದ ಹೊರಬರಲು, ಮೊದಲು ನಿಮಗೆ ಸಂತೋಷ ನೀಡುವ ಕಾರ್ಯಗಳತ್ತ ಗಮನಹರಿಸಿ. ಆ ಮೂಲಕ ನಿಮ್ಮ ಜೀವನದಲ್ಲಿ ಯಶಸ್ಸು ಗಳಿಸಲು ಮುಂದಾಗಿ. ನಿಮ್ಮನ್ನು ನೀವು ಒಪ್ಪಿಕೊಂಡು, ಅಪ್ಪಿಕೊಂಡು, ನಿಮ್ಮದೇ ದಾರಿಯಲ್ಲಿ ಬೆಳೆಯಲು ಪ್ರಾರಂಭಿಸುವುದು ಹೊಸ ಜೀವನ ಆರಂಭಿಸುವ ಉತ್ತಮ ದಾರಿಯಾಗಿದೆ. ಅದು ಬಿಟ್ಟು ನೋವನ್ನು ಮರೆಯಲು ಯಾವುದೋ ಕೆಟ್ಟ ದಾರಿ ಹಿಡಿಯುವುದು ಸರಿಯಲ್ಲ.

ಆಂತರಿಕ ಶಾಂತಿ ಕಂಡುಕೊಳ್ಳಲು ಹೆಚ್ಚುವರಿ ಮಾರ್ಗಗಳು

ಆಂತರಿಕ ಶಾಂತಿ ಕಂಡುಕೊಳ್ಳಲು ಹೆಚ್ಚುವರಿ ಮಾರ್ಗಗಳು

  • ಧ್ಯಾನ ಮಾಡುವುದು
  • ಪ್ರಕೃತಿಯ ಜೊತೆ ಸಮಯ ಕಳೆಯುವುದು
  • ಯಾವುದೇ ರೂಪದ ವ್ಯಾಯಾಮ ಮಾಡುವುದು
  • ಕೃತಜ್ಞತೆಯ ಜರ್ನಲ್ ಬರೆಯುವುದು
  • ಆರೋಗ್ಯಕರ ಆಹಾರ ಸೇವಿಸುವುದು
  • ಸಾಕುಪ್ರಾಣಿಗಳೊಂದಿಗ ಕಾಲ ಕಳೆಯವುದು
  • ಸಂಗೀತ ಕೇಳುವುದು
  • ಸ್ವಯಂ ಪ್ರೀತಿ ಅಭ್ಯಾಸ ಮಾಡುವುದು
  • ಇತರರಿಗೆ ಸಹಾಯ ಮಾಡುವುದು

English summary

How to find Peace and Happiness in your Life Again Kannada

Here we talking about How to find Peace and Happiness in your Life Again Kannada, read on
X
Desktop Bottom Promotion