For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ಗುಣಪಡಿಸುವ ಶಕ್ತಿ ಏಪ್ರಿಕಾಟ್‌ ಬೀಜದಲ್ಲಿದೆಯೇ?

|

ನಾವು ಇದುವರೆಗೂ ಕೇವಲ ರಾಸಾಯನಿಕ ಅಂಶಗಳನ್ನು ಹೊಂದಿದ ಆಹಾರ ಪದಾರ್ಥಗಳು ಮಾತ್ರ ಮನುಷ್ಯನ ದೇಹಕ್ಕೆ ವಿಷಕಾರಿಯಾಗಿ ಪರಿಣಾಮ ಬೀರುತ್ತವೆ ಎಂದುಕೊಂಡಿದ್ದೆವು. ಆದರೆ ನಿಸರ್ಗದ ಮಡಿಲಲ್ಲಿ ಸೊಂಪಾಗಿ ಬೆಳೆಯುವ ಕೆಲವೊಂದು ಹಣ್ಣುಗಳು ಸಹ ಹುಟ್ಟುತ್ತಲೆ ತಮ್ಮಲ್ಲಿ ವಿಷಕಾರಿ ಗೂಡನ್ನು ಹೊತ್ತು ಬಂದಿರುತ್ತವೆ ಎಂದರೆ ನಿಜಕ್ಕೂ ಆಶ್ಚರ್ಯ ಪಡುವ ಸಂಗತಿಯೇ ಸರಿ.

Can Apricot Seeds Treat Cancer

ದಿನ ನಿತ್ಯ ಪ್ರಕೃತಿಯಲ್ಲಿ ಸಿಗುವ ಅನೇಕ ವಸ್ತುಗಳು ಇದುವರೆಗೂ ಮನುಷ್ಯನಿಗೆ ಜೀವನಾಡಿಯಾಗಿ ಪರಿಣಮಿಸಿವೆ. ಆದರೆ ಕೈಯಲ್ಲಿರುವ ಐದು ಬೆರಳುಗಳು ಸಮನಾಗಿಲ್ಲ ಎಂಬಂತೆ ಪ್ರಕೃತಿಯ ವಿಸ್ಮಯದಲ್ಲಿ ಸಹ ಒಳ್ಳೆಯ ಹಾಗೂ ಕೆಟ್ಟ ಅಂಶಗಳು ಸೇರ್ಪಡೆಗೊಂಡಿವೆ.

ಸಹಸ್ರಾರು ಸಂಖ್ಯೆಯ ಉತ್ತಮ ಫಲಗಳು ಪ್ರಕೃತಿಯಿಂದ ಮನುಷ್ಯನಿಗೆ ಲಭ್ಯವಾದರೆ ಬೆರಳೆಣಿಕೆಯಷ್ಟು ಮಾತ್ರ ಮನುಷ್ಯನ ಜೀವನಕ್ಕೆ ಕಂಟಕವಾಗುವಂತಹ ಅಂಶಗಳು ನಮ್ಮ ಸುತ್ತಮುತ್ತ ಇರುತ್ತವೆ.

ಪರ್ಫ್ಯೂಮ್, ಶಾಂಪು, ಔಷಧಿಗಳ ತಯಾರಿಕೆಯಲ್ಲಿ ಏಪ್ರಿಕಾಟ್

ಪರ್ಫ್ಯೂಮ್, ಶಾಂಪು, ಔಷಧಿಗಳ ತಯಾರಿಕೆಯಲ್ಲಿ ಏಪ್ರಿಕಾಟ್

ಅಂತಹ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾ ಹೋದರೆ ಏಪ್ರಿಕಾಟ್ ಬೀಜಗಳು ಸಹ ಸರತಿ ಸಾಲಿನಲ್ಲಿ ನಿಲ್ಲುತ್ತವೆ. ನೋಡಲು ಥೇಟ್ ಬಾದಾಮಿ ಬೀಜಗಳಂತೆ ಕಂಡು ಬರುವ ಏಪ್ರಿಕಾಟ್ ಬೀಜಗಳು ತಿನ್ನಲು ಬಾದಾಮಿ ಬೀಜಗಳಷ್ಟು ರುಚಿಕರ ಅಲ್ಲದಿದ್ದರೂ, ಇವುಗಳನ್ನು ಹಲವಾರು ಕಂಪನಿಗಳು ತಮ್ಮ ಪರ್ಫ್ಯೂಮ್, ಶಾಂಪು ಮತ್ತು ಔಷಧಿಗಳ ತಯಾರಿಕೆಯಲ್ಲಿ ಇಂದಿಗೂ ಬಳಸುತ್ತಿದ್ದಾರೆ.

ವಿಷಕಾರಿ ಆಂಶ ಇದೆ

ವಿಷಕಾರಿ ಆಂಶ ಇದೆ

ಏಪ್ರಿಕಾಟ್ ಬೀಜಗಳಲ್ಲಿ ಕಂಡುಬರುವ ಅಮಿಗ್ಡಾಲಿನ್ ಮತ್ತು ಲೇಟ್ರಿಲ್ ಸಂಯುಕ್ತಗಳು ವಿಷಕಾರಿ ಎಂದು ಗುರುತಿಸಿಕೊಂಡಿವೆ. ಈ ಕಾರಣದಿಂದ ಕ್ಯಾನ್ಸರ್ ಕಾಯಿಲೆಗೆ ಪರ್ಯಾಯ ಚಿಕಿತ್ಸೆಯಾಗಿ ಏಪ್ರಿಕಾಟ್ ಬೀಜಗಳನ್ನು ಬಳಸುವ ವಿಷಯದಲ್ಲಿ ಗೊಂದಲಗಳು ಉಂಟಾಗಿವೆ.

ಈ ಲೇಖನದಲ್ಲಿ ಏಪ್ರಿಕಾಟ್ ಬೀಜಗಳ ಪೌಷ್ಟಿಕ ಸತ್ವಗಳ ವಿವರ, ಮನುಷ್ಯನ ಸೇವನೆಯ ಮಿತಿ ಮತ್ತು ಕ್ಯಾನ್ಸರ್ ಕೋಶಗಳ ಮೇಲೆ ವೈಜ್ಞಾನಿಕ ಅಧ್ಯಯನಗಳ ಪ್ರಭಾವ ಹೇಗಿರಲಿದೆ ಎಂಬುದನ್ನು ತಿಳಿಯೋಣ.

ಏಪ್ರಿಕಾಟ್ ಬೀಜಗಳಲ್ಲಿ ಅಡಗಿರುವ ಪೌಷ್ಟಿಕ ಸತ್ವಗಳ ವಿವರ ಹೀಗಿದೆ

ಏಪ್ರಿಕಾಟ್ ಬೀಜಗಳಲ್ಲಿ ಅಡಗಿರುವ ಪೌಷ್ಟಿಕ ಸತ್ವಗಳ ವಿವರ ಹೀಗಿದೆ

ಏಪ್ರಿಕಾಟ್ ಬೀಜಗಳು ಎಣ್ಣೆಯ ಅಂಶಗಳಲ್ಲಿ ಹೇರಳವಾಗಿದ್ದು, ಇವುಗಳ ಒಟ್ಟು ಅರ್ಧದಷ್ಟು ಎಣ್ಣೆಯ ಅಂಶವೇ ತುಂಬಿದೆ. ಇವುಗಳಲ್ಲಿ ಆರೋಗ್ಯಕರ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಮ್ಲ ಗಳಾದ ಲಿನೊಲಿಕ್ ಮತ್ತು ಒಲಿಕ್ ಆಮ್ಲಗಳಿವೆ.

  • ಶೇಕಡ 25 % ರಷ್ಟು ಏಪ್ರಿಕಾಟ್ ಬೀಜಗಳಲ್ಲಿ ಪ್ರೊಟೀನ್ ಅಂಶವಿದೆ ಮತ್ತು ಇದು ಪ್ರಮುಖವಾಗಿ ಅಲ್ಬುಮಿನ್ ಎಂದು ಗುರುತಿಸಲ್ಪಟ್ಟಿದೆ.
  • ಒಂದು ಏಪ್ರಿಕಾಟ್ ಬೀಜದ ಒಟ್ಟು ನಾರಿನ ಅಂಶ ಕೇವಲ 5 % ರಷ್ಟು ಮಾತ್ರ
  • ಏಪ್ರಿಕಾಟ್ ಬೀಜಗಳಲ್ಲಿ ಅಮಿಗ್ಡಾಲಿನ್ ಎಂಬ ವಿಟಮಿನ್ ' ಬಿ17 ' ಅಂಶ ಯಥೇಚ್ಛವಾಗಿದೆ. ಇದನ್ನು ಏಪ್ರಿಕಾಟ್ ತಿರುಳಿನ ಅತ್ಯಗತ್ಯ ಎಂಜೈಮ್ ಎಂದು ಗುರುತಿಸಲಾಗಿದೆ.
  • ಏಪ್ರಿಕಾಟ್ ಬೀಜಗಳನ್ನು ಜನರು ಸೇವಿಸಬೇಕೋ ಅಥವಾ ಬೇಡವೋ ಎಂಬ ವಿಷಯದಲ್ಲಿ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ. ಈಗಾಗಲೇ ಕೆಲವೊಂದು ಅಧ್ಯಯನಗಳು ಹೇಳಿರುವ ಪ್ರಕಾರ ಏಪ್ರಿಕಾಟ್ ಬೀಜಗಳು ಜೀವಕ್ಕೆ ಮಾರಕ ಎಂದು ತಿಳಿದು ಬಂದಿದೆ.
  • ಈ ವಿಷಯದಲ್ಲಿ ಕೆಳಗೆ ಸೂಚಿಸಿರುವ ಕೆಲವೊಂದು ಸತ್ಯಾಸತ್ಯತೆಗಳ ಬಗ್ಗೆ ಗಮನ ಹರಿಸಿ
  • ಏಪ್ರಿಕಾಟ್ ಬೀಜಗಳು ಜೀವಕ್ಕೆ ಮಾರಕ ಎನ್ನಲು ಕಾರಣಗಳೇನು?

    ಏಪ್ರಿಕಾಟ್ ಬೀಜಗಳು ಜೀವಕ್ಕೆ ಮಾರಕ ಎನ್ನಲು ಕಾರಣಗಳೇನು?

    • ಏಪ್ರಿಕಾಟ್ ತಿರುಳುಗಳ ದೀರ್ಘಕಾಲದ ಸೇವನೆ ಮನುಷ್ಯನ ದೇಹದಲ್ಲಿ ಸೈನೈಡ್ ತರಹದ ವಿಷತ್ವವನ್ನು ಉಂಟು ಮಾಡುತ್ತದೆ. ಏಕೆಂದರೆ ಏಪ್ರಿಕಾಟ್ ಬೀಜಗಳಲ್ಲಿ ಹಲವಾರು ವಿಷಕಾರಿ ಅಂಶಗಳಾದ ಸಯನೈಡ್, ಸಿಯಾನೊಜೆನ್ ಎಂದು ಗುರುತಿಸಲಾದ ಅಮಿಗ್ಡಾಲಿನ್ ಮತ್ತು ಎಂಜೈಮ್ ಕೆಟಲಿಸ್ಟ್ ಆದ ಬೀಟಾ ಗ್ಲೂಕೋಸೈಡ್ಸ್ ಎಂಬ ಅಂಶಗಳು ಇವೆ.
    • ಹಲ್ಲುಗಳಿಂದ ಏಪ್ರಿಕಾಟ್ ಬೀಜಗಳನ್ನು ಕಚ್ಚಿದ ತಕ್ಷಣ ಅಮಿಗ್ಡಾಲಿನ್ ಮತ್ತು ಬೀಟಾ ಗ್ಲೂಕೋಸೈಡ್ಸ್ ಅಂಶಗಳು ಜಲ ವಿಚ್ಛೇದನಗೊಂಡು ಏಪ್ರಿಕಾಟ್ ತಿರುಳುಗಳ ವಿಷಕಾರಿ ಪ್ರಭಾವವನ್ನು ಹೆಚ್ಚು ಮಾಡುತ್ತದೆ. ಇದುವರೆಗೂ ಇಂತಹ ಹಲವಾರು ಸೈನೈಡ್ ವಿಷತ್ವಗಳ ಪ್ರಕರಣಗಳು ವರದಿಯಾಗಿವೆ
    • ಈ ಹಿಂದೆ ಸುಮಾರು 13 ಮಕ್ಕಳಲ್ಲಿ ಏಪ್ರಿಕಾಟ್ ಬೀಜಗಳನ್ನು ತಿನ್ನುವುದರಿಂದ ಉಂಟಾಗುವ ಸೈನೈಡ್ ಮಾದಕತೆಯ ಬಗ್ಗೆ 'ಆನ್ನಲ್ಸ್ ಆಫ್ ಟ್ರಾಪಿಕಲ್ ಪೀಡಿಯಾಟ್ರಿಕ್ಸ್ ' ಸಹ ಒಂದು ರೋಗ ನಿರ್ಣಯದ ಅಧ್ಯಯನವನ್ನು ಪ್ರಕಟಿಸಿದೆ.
    • ಆದರೆ ಏಪ್ರಿಕಾಟ್ ಬೀಜಗಳನ್ನು ತಿನ್ನುವುದರಿಂದ ಉಂಟಾಗುವ ವಿಷತ್ವದ ಪ್ರಭಾವ ಮತ್ತು ರೋಗ ಲಕ್ಷಣಗಳು ತಕ್ಷಣ ಗೋಚರಿಸದಿದ್ದರೂ ನಿಧಾನವಾಗಿ ವಾಕರಿಕೆ, ವಾಂತಿ, ತಲೆ ನೋವು, ಆಲಸ್ಯ, ನಿದ್ರಾಹೀನತೆ, ಕಡಿಮೆ ರಕ್ತದ ಒತ್ತಡ, ಮಾಂಸ - ಖಂಡಗಳಲ್ಲಿ ಮತ್ತು ಕೀಲುಗಳಲ್ಲಿ ನೋವು ಕಾಣಿಸುವಂತಹ ಪ್ರಕರಣಗಳು ದಾಖಲಾಗಿವೆ.
    • ಈ ವಿಷಯವಾಗಿ ಕೆಲವೊಂದು ಸಾವಿನ ಪ್ರಕರಣಗಳು ಸಹ ಕಂಡು ಬಂದಿವೆ. ಅವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳುಗಳೇ ಇದ್ದಾರೆ ಎಂಬುದು ಆಘಾತಕಾರಿ ವಿಷಯ. ಈಗಾಗಲೇ ಎಫ್ ಡಿ ಎ ಈ ವಿಷಯದಲ್ಲಿ ಏಪ್ರಿಕಾಟ್ ಬೀಜಗಳು ಆಹಾರವಾಗಿ ಮತ್ತು ಔಷಧಿಯಾಗಿ ಸೇವಿಸಲು ಅಸುರಕ್ಷಿತ ಎಂಬ ಸ್ಪಷ್ಟ ನಿಲುವನ್ನು ತಾಳಿದೆ.
    • ಏಪ್ರಿಕಾಟ್ ಬೀಜಗಳು ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸುತ್ತವೆಯೇ?

      ಏಪ್ರಿಕಾಟ್ ಬೀಜಗಳು ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸುತ್ತವೆಯೇ?

      • ಲೇಟ್ರಿಲ್ ಅಥವಾ ವಿಟಮಿನ್ ' ಬಿ17 ', ಅಮಿಗ್ಡಾಲಿನ್ ಅಂಶದ ಸಂಶ್ಲೇಷಿತ ರೂಪ ಎಂದು ಗುರುತಿಸಿಕೊಂಡಿದೆ. ಅಂದರೆ ಏಪ್ರಿಕಾಟ್ ಬೀಜಗಳಲ್ಲಿ ಸಿಯಾನೋಜೆನಿಕ್ ಗ್ಲೈಕೋಸೈಡ್ ಅಂಶಗಳಿವೆ. ಕ್ಯಾನ್ಸರ್ ರೋಗವನ್ನು ಗುಣ ಪಡಿಸಲು ಲೇಟ್ರಿಲ್ ರೂಪವನ್ನು ಪರ್ಯಾಯ ಚಿಕಿತ್ಸೆಯಾಗಿ ಬಳಸಲಾಗುತ್ತದೆ.
      • ಆಹಾರ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಪ್ರಕಟಗೊಂಡ ಒಂದು ಅಧ್ಯಯನ ಹೇಳುವ ಪ್ರಕಾರ ಸಿಹಿಯಾದ ಏಪ್ರಿಕಾಟ್ ಮತ್ತು ಕಹಿಯಾದ ಬಾದಾಮಿ ತಿರುಳುಗಳ ಸಾರದಲ್ಲಿ ಆಂಟಿ - ಆಕ್ಸಿಡೆಂಟ್, ಆಂಟಿ - ಮೈಕ್ರೋಬಿಯಲ್ ಮತ್ತು ಆಂಟಿ - ಟ್ಯೂಮರ್ ಗುಣ ಲಕ್ಷಣಗಳು ಹೆಚ್ಚಿವೆ. ಆದ್ದರಿಂದ ಏಪ್ರಿಕಾಟ್ ಸಾರಗಳು ಮನುಷ್ಯನ ಸ್ತನ ಕ್ಯಾನ್ಸರ್, ಲಿವರ್ ಕ್ಯಾನ್ಸರ್ ಮತ್ತು ಕರುಳು ಸಂಬಂಧಿತ ಕ್ಯಾನ್ಸರ್ ಕಾಯಿಲೆಗಳನ್ನು ಗುಣ ಪಡಿಸುತ್ತವೆ.
      • ಈ ಅಧ್ಯಯನ ಹೇಳಿದ ಇನ್ನೊಂದು ವಿಷಯ ಎಂದರೆ ಡಯೆಟರಿ ಆಂಟಿ - ಕ್ಯಾನ್ಸರ್ ತೆರಪಿಗಳಲ್ಲಿ ಬಳಸಲಾಗುವ ಏಪ್ರಿಕಾಟ್ ತಿರುಳುಗಳು, ಏಪ್ರಿಕಾಟ್ ಬೀಜಗಳಲ್ಲಿ ಕಂಡು ಬರುವ ಅಮಿಗ್ಡಾಲಿನ್ ಅಂಶಗಳು ಹೆಚ್ ಟಿ - 29 ಕರುಳಿನ ಕ್ಯಾನ್ಸರ್ ಕೋಶಗಳಲ್ಲಿ ಕ್ಯಾನ್ಸರ್ ಕಾಯಿಲೆ ಅಭಿವೃದ್ಧಿ ಆಗುವುದನ್ನು ತಡೆಯುತ್ತದೆ.
      • ಏಪ್ರಿಕಾಟ್ ಬೀಜಗಳಲ್ಲಿನ ಅಮಿಗ್ಡಾಲಿನ್ ಅಂಶವು ಕೋಶ ಚಕ್ರದಲ್ಲಿ ಭಾಗಿಯಾಗುವ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಅಪಾಪ್ತೋಸಿಸ್ ಎಂಬ ಪ್ರಕ್ರಿಯೆಯ ಮುಖಾಂತರ ತಡೆಯುತ್ತವೆ.
      • ಕೆಲ ಬರಹಗಾರರು ಹೇಳಿರುವ ಪ್ರಕಾರ ಏಪ್ರಿಕಾಟ್ ಬೀಜಗಳಲ್ಲಿ ಇರುವ ಅಮಿಗ್ಡಾಲಿನ್ ಅಂಶ ಸೈನೈಡ್ ವಿಷತ್ವವನ್ನು ಉಂಟು ಮಾಡುತ್ತದೆ ಎಂಬುದು ಒಂದು ತಪ್ಪು ತಿಳುವಳಿಕೆಯಾಗಿದೆ. ಆದರೆ ಈ ವಿಷಯದಲ್ಲಿ ಮನುಷ್ಯನ ದೇಹದ ಮೇಲೆ ಏಪ್ರಿಕಾಟ್ ಬೀಜಗಳ ಪ್ರಭಾವ ಹೇಗಿರಲಿದೆ ಎಂಬುದರ ಸಮಗ್ರ ಚಿಂತನೆ ನಡೆಯಬೇಕಾಗಿದೆ.
      • ಸುಮಾರು 36 ಅಧ್ಯಯನಗಳು ತಮ್ಮ ವರದಿಯನ್ನು ಪ್ರಸ್ತುತ ಪಡಿಸಿದ ಬಳಿಕ ಕ್ಯಾನ್ಸರ್ ಚಿಕಿತ್ಸೆಗಾಗಿ ಲೇಟ್ರೈಲ್ (ಏಪ್ರಿಕಾಟ್ ಬೀಜಗಳಲ್ಲಿ ಕಂಡು ಬರುತ್ತದೆ) ನ ಸಂಭಾವ್ಯ ಪ್ರಯೋಜನಗಳು ಅನಿರ್ದಿಷ್ಟವಾಗಿದೆ ಎಂದು ತಿಳಿದು ಬಂದಿದೆ.
      • ಇವುಗಳಲ್ಲಿ ಕೆಲವು ಮಾನ್ಯ ಕ್ಲಿನಿಕಲ್ ಡೇಟಾದ ಕೊರತೆಯಿಂದಾಗಿ ಅಮಿಗ್ಡಾಲಿನ್ ಅಥವಾ ಲ್ಯಾಟ್ರೈಲ್ನ ಆಂಟಿ - ಕಾನ್ಸರ್ ಪರಿಣಾಮಗಳು ಸುಳ್ಳು ಹಲವಾರು ಸಂಶೋಧನಾ ವಿಮರ್ಶೆ ಲೇಖನಗಳು ಹೇಳಿಕೊಂಡಿವೆ.
      • ಏಪ್ರಿಕಾಟ್ ಬೀಜಗಳ ಆಂಟಿ - ಕಾನ್ಸರ್ ಪರಿಣಾಮದ ಕುರಿತು ಲಭ್ಯವಿರುವ ಹೆಚ್ಚಿನ ಮಾಹಿತಿಯು ಉಪಾಖ್ಯಾನವಾಗಿರುವುದರಿಂದ, ಈ ಚಿಕಿತ್ಸೆಯ ಯಶಸ್ಸಿನ ಪ್ರಮಾಣವು ಸಾರ್ವಜನಿಕ ವಲಯದಲ್ಲಿ ವರದಿಯಾಗಿಲ್ಲ.
      • ಏಪ್ರಿಕಾಟ್ ಬೀಜಗಳ ವಿಷತ್ವದ ಮಿಶ್ರ ಸಂಶೋಧನೆ ಪ್ರಸ್ತುತ ಪಡಿಸಿದ ಸಂಬಂಧ ಪಟ್ಟ ಹಕ್ಕುಗಳು ಮತ್ತು ವರದಿಗಳಲ್ಲಿ ಕ್ಯಾನ್ಸರ್ ಗೆ ಸೂಕ್ತವಾದ ಚಿಕಿತ್ಸೆಗಿಂತ ಇದು ಬಹಳಷ್ಟು ಕಡಿಮೆ ಎಂದು ಹೇಳಿದೆ. ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಎನ್ ಸಿ ಐ) ಸಹ ಇದನ್ನು ಅನುಮೋದನೆ ಮಾಡಿಲ್ಲ.
      • ಏಪ್ರಿಕಾಟ್ ಬೀಜಗಳ ವಿಷಯಗಳಲ್ಲಿ ಇದುವರೆಗೂ ಕಂಡು ಬಂದಿರುವ ಮಿಶ್ರ ಸಂಶೋಧನೆಗಳ ಪ್ರಕಾರ ಇವುಗಳನ್ನು ನೀವು ಅಲ್ಪ ಪ್ರಮಾಣದಲ್ಲಿ ಸೇವಿಸಬಹುದು.
      • ಏಪ್ರಿಕಾಟ್ ಬೀಜಗಳನ್ನು ಹೇಗೆ ತಿನ್ನಬೇಕು?

        ಏಪ್ರಿಕಾಟ್ ಬೀಜಗಳನ್ನು ಹೇಗೆ ತಿನ್ನಬೇಕು?

        ಏಪ್ರಿಕಾಟ್ ಹಣ್ಣುಗಳ ಮಧ್ಯ ಭಾಗದಲ್ಲಿ ಅದರ ಬೀಜ ಅಥವಾ ತಿರುಳು ಕಂಡು ಬರುತ್ತದೆ. ಸುತ್ತಲಿನ ತೊಗಟೆಯನ್ನು ತೆಗೆದು ಒಳಗಿನ ಏಪ್ರಿಕಾಟ್ ಬೀಜವನ್ನು ಸೇವಿಸಬಹುದು. ಸೇವಿಸಿದ ತಕ್ಷಣ ನಿಮಗೆ ಏನಾದರೂ ತಲೆ ಸುತ್ತುವುದು ಕಣ್ಣು ಮಂಜಾಗುವುದು ಅಥವಾ ವಾಕರಿಕೆ, ವಾಂತಿ ರೀತಿಯ ಅಡ್ಡ ಪರಿಣಾಮಗಳು ಉಂಟಾದ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆದುಕೊಳ್ಳಿ.

        ಒಂದು ದಿನಕ್ಕೆ ಎಷ್ಟು ಏಪ್ರಿಕಾಟ್ ಬೀಜಗಳು ತಿನ್ನಲು ಸೂಕ್ತ?

        ಒಂದು ದಿನಕ್ಕೆ ಎಷ್ಟು ಏಪ್ರಿಕಾಟ್ ಬೀಜಗಳು ತಿನ್ನಲು ಸೂಕ್ತ?

        ಹಲವು ಅಂಶಗಳ ಪ್ರಕಾರ ಅಂದರೆ ನಿಮ್ಮ ವಯಸ್ಸು, ನಿಮ್ಮ ತೂಕ ಮತ್ತು ನಿಮ್ಮ ಆರೋಗ್ಯ ಸಂಬಂಧಿತ ವಿಷಯಗಳ ಪ್ರಕಾರ ಏಪ್ರಿಕಾಟ್ ಬೀಜಗಳ ಒಂದು ದಿನದ ಸರಾಸರಿ ಸೇವನೆಯ ಬಗ್ಗೆ ಮಾಹಿತಿ ತಿಳಿದಿಲ್ಲ.

        ಆದರೂ ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ ವರದಿ ಮಾಡಿರುವ ಪ್ರಕಾರ ವಯಸ್ಕರು ಮೂರು ಸಣ್ಣ ಹಸಿ ಏಪ್ರಿಕಾಟ್ ತಿರುಳುಗಳು ಅಥವಾ ಒಂದುವರೆ ದೊಡ್ಡ ಏಪ್ರಿಕಾಟ್ ತಿರುಳಿನ ಸೇವನೆ ಮಾಡಬಹುದು. ಮಕ್ಕಳು ಮತ್ತು ಸಣ್ಣ ಮಕ್ಕಳು ಏಪ್ರಿಕಾಟ್ ಬೀಜಗಳ ಸೇವನೆಯಿಂದ ಸಂಪೂರ್ಣವಾಗಿ ದೂರವಿರುವುದು ಒಳ್ಳೆಯದು. ಏಕೆಂದರೆ ಏಪ್ರಿಕಾಟ್ ತಿರುಳುಗಳಲ್ಲಿ ಕಂಡು ಬರುವ ಸೈನೈಡ್ ವಿಷಕಾರಿ ಅಂಶ ಮಕ್ಕಳ ದೈಹಿಕ ತೂಕದ ಮೇಲೆ ಅವಲಂಬಿತವಾಗಿ ಅವರ ಆರೋಗ್ಯಕ್ಕೆ ಮಾರಕವಾಗಿ ಪರಿಣಾಮ ಬೀರುತ್ತದೆ.

        ಕೊನೆಯ ಮಾತು

        ಕೊನೆಯ ಮಾತು

        ಏಪ್ರಿಕಾಟ್ ಬೀಜಗಳಲ್ಲಿ ಕೆಲವೊಂದು ಪೌಷ್ಟಿಕಾಂಶಗಳು ಇರುವುದರಿಂದ ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಗೆ ಪರ್ಯಾಯ ತೆರಪಿಯಾಗಿ ಬಳಸಬಹುದು.

        ಇವುಗಳಲ್ಲಿ ಕಂಡು ಬರುವ ಅಮಿಗ್ಡಾಲಿನ್ ಅಂಶವು ಕೆಲವು ಆಂಟಿ ಕ್ಯಾನ್ಸರ್ ಗುಣ ಲಕ್ಷಣಗಳನ್ನು ತೋರಿಸುವುದರಿಂದ ಕ್ಯಾನ್ಸರ್ ಕಾಯಿಲೆಯ ವಿರುದ್ಧ ಹೋರಾಡುವ ಸ್ವಭಾವವನ್ನು ಹೊಂದಿರುತ್ತವೆ. ಆದರೆ ಏಪ್ರಿಕಾಟ್ ಬೀಜಗಳ ಸೇವನೆಯ ನಂತರ ದೇಹದಲ್ಲಿ ಸೈನೈಡ್ ಅಂಶ ಬಿಡುಗಡೆಗೊಳ್ಳುತ್ತದೆ ಎಂಬ ಅಂಶ ನೆನಪಿನಲ್ಲಿರಲಿ.

English summary

Can Apricot Seeds Treat Cancer

Here we are discussing about can apricot seeds treat cancer, what are the side effects of it and what reaserch says. Let us look at the nutrient content, recommended dosage, and the scientific studies on the effect of apricot seeds on cancer cells. Read more.
X
Desktop Bottom Promotion