Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೆನಪಿರಲಿ ಇರುವುದೊಂದೇ ಹೃದಯ, ನಿರ್ಲಕ್ಷಿಸದಿರಿ
ನಮ್ಮ ಸಂಪೂರ್ಣ ದೇಹದಕ್ಕೆ ರಕ್ತ ಪರಿಚಲನೆಯಾಗಬೇಕಾದರೆ ಹೃದಯವು ಸರಿಯಾಗಿ ಕೆಲಸ ಮಾಡಬೇಕು. ಹೃದಯಕ್ಕೆ ಸ್ವಲ್ಪ ಸಮಸ್ಯೆಯಾದರೂ ಅದು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ....
ನಮ್ಮ ಹೃದಯವನ್ನು ಆರೋಗ್ಯದಿಂದಿಟ್ಟುಕೊಳ್ಳುವುದು ಮತ್ತು ಅದಕ್ಕೆ ಯಾವುದೇ ರೀತಿಯ ಸಮಸ್ಯೆ ಬಾರದಂತೆ ಸಂರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಹೃದ್ರೋಗಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ತಡೆಗಟ್ಟವ ವಿಧಾನಗಳ ಬಗ್ಗೆ ಅರಿತುಕೊಳ್ಳಬೇಕು. ಮೊಟ್ಟ ಮೊದಲನೆಯದಾಗಿ, ಹೃದಯಕ್ಕೆ ಯಾವುದೇ ರೀತಿ ಸಮಸ್ಯೆ ಎದುರಾಗದೇ ಇರುವಂತೆ ನೋಡಿಕೊಳ್ಳಲು ನಮ್ಮ ಜೀವನದಿಂದ ಒತ್ತಡವನ್ನು ತೆಗೆದು ಹಾಕಬೇಕು. ನೆನಪಿಡಿ: ಪುಟ್ಟ ಹೃದಯದ ಆರೋಗ್ಯವನ್ನು ಕಡೆಗಣಿಸದಿರಿ!

ನಮ್ಮ ಜೀವನದಿಂದ ಒತ್ತಡವನ್ನು ಅಷ್ಟು ಸುಲಭವಾಗಿ ತೆಗೆದು ಹಾಕಲು ಸಾಧ್ಯವಾಗುವುದಿಲ್ಲ. ಸತತವಾಗಿ ಒತ್ತಡದಿಂದ ಬಳಲುತಿದ್ದರೆ, ರಕ್ತ ನಾಳಕ್ಕೆ ಕಿರಿಕಿರಿಯಾಗಿ ರಕ್ತ ಹೆಪ್ಪುಗಟ್ಟುತ್ತದೆ. ಒತ್ತಡ ನಿವಾರಣ ತಂತ್ರಗಳು ನಿಮಗೆ ಒತ್ತಡದ ಸಂದರ್ಭಗಳಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ಬದಲಾಯಿಸುತ್ತದೆ. ಎದೆ ಬಡಿತ, ವೇಗವಾಗದಂತೆ ದೇಹವು ಒತ್ತಡ ವಿರುದ್ಧ ಹೋರಾಟವನ್ನು ಮಾಡಲು ಸಿದ್ಧವಾಗುತ್ತದೆ.
10 ರಿಂದ 15 ನಿಮಿಷಗಳ ಕಾಲ ನಿಶ್ಯಬ್ಧವಾಗಿ ಕುಳಿತುಕೊಂಡು, ಉಸಿರಾಟದ ಮೇಲೆ ಗಮನವಿಡಬೇಕು. ಯೋಗಾಭ್ಯಾಸದ ಕೋರ್ಸ್ ಅನ್ನು ಒಂದು ವಾರದ ಮಟ್ಟಿಗೆ,ತಿಂಗಳಿಗೊಮ್ಮೆ ಮಸಾಜ್ ತೆಗೆದುಕೊಳ್ಳಬೇಕು. ದಿನವಿಡೀ ಕುಳಿತುಕೊಂಡೇ ಇದ್ದರೆ ಹೃದಯಕ್ಕೆ ಅಪಾಯ!
ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಪತ್ರಿಕೆ ನಡೆಸಿದ ಅಧ್ಯಯನದ ಪ್ರಕಾರ, ದಿನಂಪ್ರತಿ ಹೆಚ್ಚಿನ ಒಂದು ಗಂಟೆಯ ಕಾಲ ಆರಾಮ ಮಾಡಿದರೆ, ಮಧ್ಯ ವಯಸ್ಕರು ರಾತ್ರಿಯ ವಿಶ್ರಾಂತಿ ಪಡೆಯಲೇಬೇಕಾದ ಲೆಕ್ಕಕ್ಕೆ ಸೇರಿಕೊಂಡು ರಕ್ತನಾಳಕ್ಕೆ ಸಮಸ್ಯೆಯಾಗುವ ತೊಂದರೆಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ನಿಮಗೆ, ನಿದ್ರಾಹೀನತೆಯ ಸಮಸ್ಯೆ ಇದ್ದರೆ, ಅದನ್ನು ಸರಿಪಡಿಸಲು ನಿಮಗೆ ಸಾಕಷ್ಟು ಉತ್ತಮವಾದ ವಿಧಾನಗಳು ದೊರೆಯುತ್ತವೆ. ನಿದ್ರಾಹೀನತೆ ಸಂಬಂಧವಾಗಿ ಒಮ್ಮೆ ವೈದ್ಯರನ್ನು ಭೇಟಿ ಮಾಡಿ ಅವರಿಂದ ಸಲಹೆ ಸೂಚನೆಗಳನ್ನು ಪಡೆಯುವುದು ಸೂಕ್ತ ಏಕೆಂದರೆ, ನಿದ್ರಾಹೀನತೆಯಿಂದ ಹೃದ್ರೋಗದ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ತಡೆಗಟ್ಟಲು ಚೆನ್ನಾಗಿ ನಿದ್ದೆ ಮಾಡುವುದು ಅತ್ಯಾವಶ್ಯಕ. ಇದೇ ಕಾರಣಕ್ಕೆ 'ಹೃದ್ರೋಗ ಸಮಸ್ಯೆ' ಕಾಣಿಸಿಕೊಳ್ಳುವುದು!
ಸೋಡಿಯಮ್ ಪ್ರಮಾಣ ಹೆಚ್ಚಾದರೆ, ರಕ್ತದೊತ್ತಡವೂ ಹೆಚ್ಚಾಗುತ್ತದೆ. ಇದರಿಂದ ಹೃದಯಕ್ಕೆ ಭಾರಿ ಪ್ರಮಾಣದಲ್ಲಿ ಹಾನಿಯಾಗುವ ಸಂಭವವಿರುತ್ತದೆ. ಅದನ್ನು ನೀವು ತಗೆದು ಹಾಕಿದಂತೆಯೇ, ಹೃದಯದಿಂದ ಮೇಲಾಗುವ ಒತ್ತಡವನ್ನೂ ತೆಗೆದಂತಾಗುತ್ತದೆ. ಇದರಿಂದ ಹೃದಯಕ್ಕೆ ಸಂಬಂಧ ಸಮಸ್ಯೆಗಳು ಎದುರಾಗುವುದಿಲ್ಲ. ಹೃದಯದ ಆರೋಗ್ಯಕ್ಕೆ- ಪುರಾತನ ಕಾಲದ ಆಯುರ್ವೇದ ಚಿಕಿತ್ಸೆ
ಆಹಾರ ಪದ್ಧತಿಯ ಸೂಚನೆಗಳ ಪ್ರಕಾರ ಮಯಸ್ಕರಿಗೆ, ದಿನ ನಿತ್ಯವೂ ಎರಡು ಕಪ್ ಗಳಷ್ಟು ಹಣ್ಣುಗಳು ಮತ್ತು ಎರಡುವರೆಯಿಂದ ಮೂರು ಕಪ್ ನಷ್ಟು ತರಕಾರಿ ಸೇವನೆ ಬಹಳ ಮುಖ್ಯ. ಒಂದು ಕಪ್ ಎಂದರೆ, ಒಂದು ದೊಡ್ಡ ಕಿತ್ತಳೆ ಅಥವಾ ಒಂದು ಚಿಕ್ಕ ಸೇಬು ಅಂದಾಜಿಗೆ ಸರಿಸಮಾನ. ಆದ್ದರಿಂದ ಹೃರ್ರೋಗವನ್ನು ದೂರವಿಡಲು ಆರೋಗ್ಯಕರ ಆಹಾರವನ್ನು ಸೇವಿಸಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



