For Quick Alerts
ALLOW NOTIFICATIONS  
For Daily Alerts

  ಕಡಿಮೆ ರಕ್ತದೊತ್ತಡ ಸಮಸ್ಯೆಯೇ? ತಪ್ಪದೇ ಈ ಲೇಖನ ಓದಿ...

  By Hemanth
  |

  ಆಧುನಿಕ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವ ಪ್ರತಿಯೊಬ್ಬರಲ್ಲೂ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯೆಂದರೆ ರಕ್ತದೊತ್ತಡ ಮತ್ತು ಮಧುಮೇಹ. ಆಹಾರ ಕ್ರಮ ಸರಿಯಾಗಿ ಇಲ್ಲದೆ ಇರುವುದು, ವ್ಯಾಯಾಮದ ಕೊರತೆ ಮತ್ತು ಇಡೀ ದಿನ ಕುಳಿತುಕೊಂಡೇ ಇರುವುದು ರಕ್ತದೊತ್ತಡ ಬರಲು ಪ್ರಮುಖ ಕಾರಣವಾಗಿದೆ. ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಇರುವಂತಹದ್ದು. ಆದರೆ ರಕ್ತದೊತ್ತಡ ಕಡಿಮೆಯಾದರೆ ಅದರಿಂದ ಹಲವಾರು ಸಮಸ್ಯೆಗಳು ಉಂಟಾಗಬಹುದು. ಕಡಿಮೆ ರಕ್ತದೊತ್ತಡ ಸಮಸ್ಯೆಯ ಲಕ್ಷಣ ಮತ್ತು ಕಾರಣ 

  ರಕ್ತದೊತ್ತಡ ಕಡಿಮೆಯಾದಾಗ ಆಯಾಸ, ಚಳಿ, ನಿರಾಸಕ್ತಿ ಮತ್ತು ನಿತ್ರಾಣ ಮತ್ತು ಸರಿಯಾಗಿ ಉಸಿರಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಕೆಲವರಲ್ಲಿ ರಕ್ತದೊತ್ತಡ ಕಡಿಮೆ ಇರುವ ಸಮಸ್ಯೆ ಇರುತ್ತದೆ. ಆದರೆ ಆಯಾಸ ಮತ್ತು ಕಣ್ಣಿನಲ್ಲಿ ಮಂಜು ಕವಿದಂತೆ ಆಗದಿದ್ದರೆ ನೀವು ಚಿಂತೆ ಮಾಡಬೇಕಿಲ್ಲ. ದೀರ್ಘ ಸಮಯದವರೆಗೆ ರಕ್ತದೊತ್ತಡ ಕಡಿಮೆ ಇದ್ದರೆ ಅಂಗಾಂಗಳಿಗೆ ಸರಿಯಾಗಿ ರಕ್ತ ಸಂಚಲನವಾಗದೆ ಹೃದಯ ಮತ್ತು ಯಕೃತ್‌ಗೆ ಸಮಸ್ಯೆಯಾಗಬಹುದು. ಕಡಿಮೆ ರಕ್ತದೊತ್ತಡದಿಂದ ಬಳಲುತ್ತಲಿದ್ದರೆ ಆಗ ಆಲ್ಕೋಹಾಲ್ ಮತ್ತು ರಿಫೈನ್ಡ್ ಕಾರ್ಬ್ ನಿಂದ ದೂರವಿರುವುದು ಉತ್ತಮ. ಕಡಿಮೆ ರಕ್ತದೊತ್ತಡ ಸಮಸ್ಯೆ-ಮಾತ್ರೆ ಬಿಡಿ, ವೃಕ್ಷಾಸನ ಮಾಡಿ

  ಸರಿಯಾದ ಪ್ರಮಾಣದಲ್ಲಿ ಉಪ್ಪು ಸೇವನೆ ಮಾಡಬೇಕು. ಆದರೆ ವೈದ್ಯರು ನಿಮ್ಮ ಜೀವನ ಶೈಲಿ ಮತ್ತು ರಕ್ತದೊತ್ತಡ ಕಡಿಮೆ ಆಗಿರುವ ಲಕ್ಷಣಗಳನ್ನು ನೋಡಿಕೊಂಡು ಸರಿಯಾದ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಇಲ್ಲಿ ಕೆಲವೊಂದು ಮನೆಮದ್ದುಗಳನ್ನು ಸೂಚಿಸಲಾಗಿದೆ. ಇದನ್ನು ನೀವು ಪ್ರಯತ್ನಿಸಬಹುದು. ನೈಸರ್ಗಿಕವಾಗಿ ಬಿಪಿ ತಗ್ಗಿಸುವ ವಿಧಾನಗಳು

  ಬೀಟ್‌ರೂಟ್ ಜ್ಯೂಸ್

  ಬೀಟ್‌ರೂಟ್ ಜ್ಯೂಸ್

  ಹಸಿ ಬೀಟ್‌ರೂಟ್‌‌ನ ಜ್ಯೂಸ್ ಮಾಡಿದರೆ ತುಂಬಾ ಆರೋಗ್ಯಕಾರಿ. ಇದು ರಕ್ತಕ್ಕೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ದಿನದಲ್ಲಿ ಎರಡು ಸಲ ಇದನ್ನು ಪ್ರಯತ್ನಿಸಿ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಬೀಟ್ ರೂಟ್ ಜ್ಯೂಸ್ ಕುಡಿಯಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಬೀಟ್‌ರೂಟ್ ಜ್ಯೂಸ್‌ ಮಾಡುವ ವಿಧಾನ

  ಬೀಟ್‌ರೂಟ್ ಜ್ಯೂಸ್‌ ಮಾಡುವ ವಿಧಾನ

  *ಬೀಟ್‌ರೂಟ್ ಅನ್ನು ಮೊದಲು ಚೆನ್ನಾಗಿ ತೊಳೆದುಕೊಂಡು, ಸಣ್ಣ ಸಣ್ಣ ಹೋಳು ಮಾಡಿಕೊಳ್ಳಿ. ನಂತರ ಇದನ್ನು ಶೋಧಿಸಿಕೊಳ್ಳಿ. ನಿಮಗೆ ಅಗತ್ಯವಾದರೆ ಇದಕ್ಕೆ ಐಸ್ ಕ್ಯೂಬ್ ಸಹ ಬೆರೆಸಿಕೊಳ್ಳಬಹುದು.

  *ವಾರಕ್ಕೆ 3-4 ಬಾರಿ ಈ ರಸವನ್ನು ಸೇವಿಸಿ. ಆಗ ನೋಡಿ, ನಿಮ್ಮ ಸಾಮರ್ಥ್ಯವು ಹೇಗೆ ಸುಧಾರಿಸುತ್ತದೆ ಎಂದು. ಆದರೆ ಒಂದು ಮಾತು ನೆನಪಿಡಿ. ಇದನ್ನು ಒಂದೇ ಬಾರಿಗೆ ಸೇವಿಸುವ ಮೊದಲು ಸ್ವಲ್ಪ ಸೇವಿಸಿ, ರುಚಿ ನೋಡಿ. ಇದರ ರುಚಿಯು ನಿಮಗೆ ಒಗ್ಗಿದರೆ ಮುಂದುವರಿಯಿರಿ. ಇಲ್ಲವಾದರೆ ಬೇಡ.

  ಉಪ್ಪು ನೀರು

  ಉಪ್ಪು ನೀರು

  ಉಪ್ಪಿನಲ್ಲಿ ಸೋಡಿಯಂ ಎನ್ನುವ ಅಂಶವಿದ್ದು ಅದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಸ್ವಲ್ಪ ಉಪ್ಪನ್ನು ನೀರಿಗೆ ಹಾಕಿಕೊಂಡು ಕುಡಿಯಿರಿ. ಆದರೆ ಇದರ ಅತಿಯಾದ ಸೇವನೆ ಒಳ್ಳೆಯದಲ್ಲ.

  ಒಣದ್ರಾಕ್ಷಿ

  ಒಣದ್ರಾಕ್ಷಿ

  ಕೆಲವು ಒಣದ್ರಾಕ್ಷಿಗಳನ್ನು ರಾತ್ರಿ ವೇಳೆ ನೀರಿಗೆ ಹಾಕಿ ನೆನೆಸಿಡಿ. ಬೆಳಿಗ್ಗೆ ಎದ್ದ ಬಳಿಕ ಅದನ್ನು ತಿನ್ನಿ ಮತ್ತು ನೀರನ್ನು ಕುಡಿಯಿರಿ.

  ಕಾಫಿ

  ಕಾಫಿ

  ಕಾಫಿ ಕುಡಿಯುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು. ಆದರೆ ಇದು ತಾತ್ಕಾಲಿಕ. ನಿಮಗೆ ಕೆಫಿನ್ ಚಟವಾಗಿದ್ದರೆ ಈ ಮದ್ದಿನಿಂದ ದೂರವಿರಿ.

  ಲಿಂಬೆ

  ಲಿಂಬೆ

  ನಿರ್ಜಲೀಕರಣದಿಂದ ರಕ್ತದೊತ್ತಡ ಕಡಿಮೆಯಾಗಿದ್ದರೆ ಆಗ ಲಿಂಬೆಹಣ್ಣು ನೆರವಿಗೆ ಬರಲಿದೆ. ನಿಂಬೆಹಣ್ಣಿನ ರಸವನ್ನು ಕಬ್ಬಿನ ಹಾಲಿನೊಂದಿಗೆ ಕುಡಿಯಿರಿ.

  ಕ್ಯಾರೆಟ್ ಜ್ಯೂಸ್

  ಕ್ಯಾರೆಟ್ ಜ್ಯೂಸ್

  ಒಂದು ಲೋಟ ಕ್ಯಾರೆಟ್ ಜ್ಯೂಸ್‌ಗೆ ಎರಡು ಹನಿ ಜೇನುತುಪ್ಪ ಹಾಕಿ ಕುಡಿದರೆ ಇದು ಕಡಿಮೆ ರಕ್ತದೊತ್ತಡಕ್ಕೆ ಒಳ್ಳೆಯ ಮದ್ದು.

  ಬಾದಾಮಿ

  ಬಾದಾಮಿ

  ಮೂರು ಬಾದಾಮಿಯನ್ನು ರಾತ್ರಿ ಹಾಲಿನಲ್ಲಿ ಹಾಕಿ ನೆನೆಸಿಡಿ. ಬೆಳಿಗ್ಗೆ ಇದರ ಪೇಸ್ಟ್ ಮಾಡಿಕೊಂಡು ಹಾಲಿನೊಂದಿಗೆ ಕುಡಿಯಿರಿ.

   

  English summary

  How To Deal With Low BP

  Most of us discuss a lot about high blood pressure and its dangers but we tend to ignore low blood pressure. High BP is hypertension whereas low BP is hypotension. When your BP is low, you tend to feel dizzy, weak, cold, cloudy, tired and may also find it difficult to breathe properly. Some of us may have low BP but unless you have alarming symptoms like dizziness and blurred vision, you don't need to worry much. But what happens if your BP is low for too long? Well, there wouldn't be adequate blood flow to various parts of your body and this may put organs like heart and liver at risk.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more