Latest Updates
-
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ
60 ನಂತರ ಮೈ ತೂಕ ಕಡಿಮೆ ಮಾಡಿಕೊಳ್ಳಬೇಕೆ? ಈ ಟಿಪ್ಸ್ ಪಾಲಿಸಿ
ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ, ಅರುವತ್ತು ದಾಟಿದ ಮೇಲೆ ಕೆಲವರಲ್ಲಿ ದೇಹದ ತೂಕ ಹೆಚ್ಚಾಗುತ್ತಾ ಹೋಗುತ್ತದೆ. ಸುಮ್ಮನೇ ಕೆಲಸವಿಲ್ಲದೇ ಕುಳಿತುಕೊಳ್ಳುವುದು, ಸಿಕ್ಕಿದ ತಿಂಡಿ ತಿನಿಸುಗಳನ್ನೆಲ್ಲಾ ತಿನ್ನೋದು ಒಂದು ಕಾರಣವಾದರೆ ನೀವು ತಿನ್ನುವ ಆಹಾರ ಸರಿಯಾಗಿ ಚಯಾಪಚಯ ಆಗದೇ ಕೊಬ್ಬು ದೇಹದಲ್ಲಿ ಶೇಖರಣೆಯಾಗಿ ಬೊಜ್ಜಿಗೆ ಕಾರಣವಾಗುತ್ತದೆ.

ದೇಹದ ಹೆಚ್ಚಿದ ತೂಕ ಮಂಡಿ ನೋವು, ಹಿಮ್ಮಡಿ ನೋವು, ಸೊಂಟ ನೋವಿಗೆ ಕಾರಣವಾಗಿ ಕೊನೆಗೆ ವೈದ್ಯರು ತೂಕ ಇಳಿಸಿಕೊಳ್ಳಬೇಕಮ್ಮ ಎನ್ನುತ್ತಾರೆ. ಅರುವತ್ತರ ನಂತರ ತೂಕ ಇಳಿಸಿಕೊಳ್ಳೋದು ಹೇಗೆ ಎನ್ನುವುದು ನಿಮ್ಮ ಪ್ರಶ್ನೆಯಾದರೆ, ಸರಳ ಉತ್ತರ ಇಲ್ಲಿದೆ ನೋಡಿ.
1. ಹೆಚ್ಚು ನೀರು ಕುಡಿಯಿರಿ
ಉತ್ತಮ ಆರೋಗ್ಯಕ್ಕೆ ದೇಹವು ಹೈಡ್ರೇಟ್ ಆಗಿರುವುದು ಮುಖ್ಯ. ಅಲ್ಲದೇ ತೂಕ ಇಳಿಸಿಕೊಳ್ಳೋದಿಕ್ಕೂ ನೀರು ಕುಡಿಯಬೇಕು. 60ವರ್ಷಗಳ ನಂತರ ನಿಮ್ಮ ದೇಹದ ತೂಕ ಕಡಿಮೆಯಾಗಬೇಕೆಂದರೆ ನೀರು ಕುಡಿಯೋದು ಅನಿವಾರ್ಯ. ವಯಸ್ಸಾದಂತೆ ತಾಪಮಾನ ಹೆಚ್ಚಳ, ಅಸಮರ್ಪಕ ನೀರಿನ ಸೇವನೆಯಿಂದಾಗಿ ನೀವು ಡಿಹೈಡ್ರೇಟ್ ಆಗುವಿರಿ. ತೂಕ ಇಳಿಸಿಕೊಳ್ಳುವ ಕಾರ್ಯಕ್ಕೆ ನೀವು ಮುಂದೆ ಹೆಜ್ಜೆ ಇಟ್ಟಿರೆಂದರೆ ಹೆಚ್ಚು ನೀರು ಕುಡಿಯಲೇಬೇಕು. ಏಕೆಂದರೆ ಅದು ನಿಮ್ಮನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ಕೊಬ್ಬನ್ನು ಸುಡುವ ಸಾಮರ್ಥ್ಯವನ್ನು ಉತ್ತಮಗೊಳಿಸುತ್ತದೆ.
2. ಹೆಚ್ಚು ಸಂಸ್ಕರಿಸಿದ ಆಹಾರ ಸೇವನೆಯನ್ನು ಬಿಟ್ಟುಬಿಡಿ
ಯಾವುದೇ ವಯಸ್ಸಿನಲ್ಲಾದರೂ ತೂಕವನ್ನು ಇಳಿಸಿಕೊಳ್ಳುವಿರಾದರೂ ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದು. ಸಂಸ್ಕರಿಸಿದ ಆಹಾರಗಳನ್ನು ಹೆಚ್ಚು ಸೇವಿಸುವ ಜನರು ತೂಕದಲ್ಲಿ ಹೆಚ್ಚಳವನ್ನು ಅನುಭವಿಸುತ್ತಾರೆ. ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸುವವರಲ್ಲಿ ದಿನಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿ ದೇಹಕ್ಕೆ ಸಿಗುತ್ತದೆ. ಹೆಚ್ಚಿದ ಕ್ಯಾಲೋರಿ ಮಟ್ಟ ಸಹಜವಾಗಿ ತೂಕ ಹೆಚ್ಚಳಕ್ಕೆ ಕಾರಣ. ಪ್ಯಾಕ್ ಮಾಡಿದ ಆಹಾರ, ಫ್ರೀಜ್ ಮಾಡಿದ ಆಹಾರ, ಪೇಸ್ಟ್ರೀ, ಕುಕೀಸ್ ಮತ್ತು ಪ್ಲೇವರ್, ಬಣ್ಣ ಮತ್ತು ಫಿಲ್ಲರ್‌ಗಳು ಬಳಸಿದ ತಿನಿಸು ಮತ್ತು ಪ್ರಿಸರ್ವೇಟಿವ್‌ಗಳು ಇವು ಸಂಸ್ಕರಿಸಿದ ಆಹಾರಗಳಲ್ಲಿರುತ್ತದೆ. ಈ ಆಹಾರಗಳಲ್ಲಿ ಹೆಚ್ಚಿನ ಆರೋಗ್ಯಕರ ಪದಾರ್ಥಗಳು ಮತ್ತು ಜೀವಕೋಶಗಳು ಮತ್ತು ಅಂಗಾಂಶಗಳ ಆರೋಗ್ಯರ ಕಾರ್ಯಚಟುವಟಿಕೆಗೆ ಬೇಕಾದ ಪೋಷಕಾಂಶಗಳು ಇರುವುದಿಲ್ಲ. ಸಂಸ್ಕರಿಸಿದ ಆಹಾರಗಳಲ್ಲಿ ಕಾರ್ಬೋಹೈಡ್ರೇಟ್ಸ್, ಸಕ್ಕರೆಯ ಪ್ರಮಾಣ ಹೆಚ್ಚಾಗಿರುತ್ತದೆ. ಇದು ತೂಕ ಹೆಚ್ಚಾಗಲು ಮತ್ತು ಪೌಷ್ಟಿಕಾಂಶದ ಅಸಮತೋಲನಕ್ಕೆ ದಾರಿ ಮಾಡಿಕೊಡುತ್ತದೆ.
3. ವಿವಿಧ ತರಕಾರಿಗಳು ನಿಮ್ಮ ಆಹಾರದಲ್ಲಿರಲಿ
ನೀವು ಅರುವತ್ತು ವರ್ಷದವರಾಗಿದ್ದರೆ ನೀವು ತಿನ್ನುವ ಆಹಾರದಲ್ಲಿ ವಿವಿಧ ರೀತಿಯ ತರಕಾರಿಗಳಿರಲಿ. ಪ್ರತಿ ತರಕಾರಿ, ಹಣ್ಣುಗಳೂವಿವಿಧ ವಿಟಮಿನ್‌ಗಳು, ಖನಿಜಗಳು, ಫೈಬರ್‌ಗಳು ಮತ್ತು ದ್ರವಗಳನ್ನು ಒದಗಿಸುತ್ತದೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ, ಇದು ನಿಮ್ಮ ವೇಯ್ಟ್ ಲಾಸ್ ಜರ್ನಿಯಲ್ಲಿ ನಿಮಗೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಹೆಚ್ಚಿದ ತರಕಾರಿ ಸೇವನೆಯು ತೂಕ ಹೆಚ್ಚಾಗುವ ಅಪಾಯವನ್ನು 82% ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯೂ ಹೇಳುತ್ತದೆ. ಅಲ್ಲದೆ, ಪ್ರತಿ ತರಕಾರಿ ಸೇವನೆಯೊಂದಿಗೆ ಐದು ವರ್ಷಗಳ ಅವಧಿಯಲ್ಲಿ ಮಹಿಳೆಯರ ಸೊಂಟದ ಸುತ್ತಳತೆಯು 0.36 ಸೆಂಟಿಮೀಟರ್‌ಗಳಷ್ಟು (ಸೆಂ) ಕುಗ್ಗುತ್ತದೆ ಎಂದು ಮತ್ತೊಂದು ಅಧ್ಯಯನವು ಕಂಡುಹಿಡಿದಿದೆ. ಹಾಗಾಗಿ ನೀವು ತೂಕ ಇಳಿಸಿಕೊಳ್ಳಲೇಬೇಕೆಂದರೆ ವಿವಿಧ ತರಕಾರಿಗಳು ನಿಮ್ಮ ಹೊಟ್ಟೆ ಸೇರಲೇಬೇಕು.
4. ಸಸ್ಯ ಜನ್ಯ ಪ್ರೋಟೀನ್ ಆಯ್ಕೆಮಾಡಿ.
ಪ್ರೋಟೀನ್ ತೂಕ ನಷ್ಟಕ್ಕೆ ಪ್ರಯೋಜನಕಾರಿ ಪೋಷಕಾಂಶವಾಗಿದೆ ಏಕೆಂದರೆ ಇದು ಹೊಟ್ಟೆ ಫುಲ್ ಆಗಿರುವಂತೆ ಮಾಡುತ್ತದೆ, ಇದು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ನಿಮ್ಮ ಪ್ಲೇಟ್‌ನಲ್ಲಿ ನೀವು ಹಾಕುವ ಪ್ರೋಟೀನ್‌ನ ವಿಧವು ಅದರ ಪ್ರಮಾಣಕ್ಕೆ ಸಮಾನವಾಗಿರಬೇಕು. ನೀವು ತೂಕ ಇಳಿಸಿಕೊಳ್ಳಲು ಮಾಂಸಹಾರ ಮಾತ್ರ ಸೇವಿಸಬೇಕೆಂದಿಲ್ಲ ನೀವು ಸಸ್ಯಗಳಿಂದಲೂ ಪ್ರೋಟೀನ್ ಪಡೆಯಬಹುದು. ಸಸ್ಯ ಆಧಾರಿತ ಪ್ರೋಟೀನ್‌ಗಳಲ್ಲಿ ಮಸೂರ, ಬೀನ್ಸ್, ಗಾರ್ಬನ್ಜೋಸ್, ಕ್ವಿನೋವಾ, ಸೋಯಾಬೀನ್ ಮತ್ತು ತೋಫು ಸೇರಿವೆ. ಸಸ್ಯ ಆಧಾರಿತ ಪ್ರೋಟೀನ್‌ಗಳ ಪ್ರಯೋಜನವೆಂದರೆ ಇದು ಸ್ಯಾಚುರೇಟೆಡ್ ಕೊಬ್ಬು ಮತ್ತು ಹೆಚ್ಚುವರಿ ಕ್ಯಾಲೊರಿಗಳಿಲ್ಲದ ಪ್ರೋಟೀನ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
5. ಸಂಪೂರ್ಣ ಗೋಧಿ ಧಾನ್ಯಗಳು ಮತ್ತು ಫೈಬರ್ ಅನ್ನು ಆರಿಸಿ.
ತೂಕ ನಷ್ಟಕ್ಕೆ ಹಾನಿಕಾರಕ ಎಂದು ಅನೇಕ ಜನರು ಕಾರ್ಬೋಹೈಡ್ರೇಟ್‌ಗಳನ್ನು ಸಂಪೂರ್ಣ ಬಿಟ್ಟುಬಿಡುತ್ತಾರೆ.ಸಂಸ್ಕರಿಸಿದ ಆಹಾರಗಳಲ್ಲಿನ ಕಡಿಮೆ-ಗುಣಮಟ್ಟದ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ತೂಕ ಹೆಚ್ಚಾಗಲು ಕೊಡುಗೆ ನೀಡುತ್ತವೆ. ಆರೋಗ್ಯಕರ, ಉತ್ತಮ-ಗುಣಮಟ್ಟದ ಕಾರ್ಬೋಹೈಡ್ರೇಟ್‌ಗಳು ಮತ್ತು ಸಂಪೂರ್ಣ ಗೋಧಿ ಧಾನ್ಯಗಳಲ್ಲಿ ಕಂಡುಬರುವ ಫೈಬರ್‌ಗಳು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಸಂಪೂರ್ಣ ಗೋಧಿ ಧಾನ್ಯಗಳು ಎಂದರೆ ಫೈಬರ್ ಅಂಶ ತೆಗೆಯದ ಪದಾರ್ಥಗಳಾದ ಸಂಪೂರ್ಣ-ಧಾನ್ಯದ ಪಾಸ್ಟಾ, ಬ್ರೌನ್ ರೈಸ್, ಹೋಲ್ ವೀಟ್ ಬ್ರೆಡ್ ಮತ್ತು ಸಂಪೂರ್ಣ ಗೋಧಿ ಟೋರ್ಟಿಲ್ಲಾಗಳು ಸೇರಿವೆ. ಇಡೀ ಗೋಧಿ ಧಾನ್ಯಗಳನ್ನು ಒಳಗೊಂಡಿರುವ ಆಹಾರಗಳು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಫೈಬರ್ ಅನ್ನು ಒದಗಿಸುತ್ತವೆ, ಇದು ನಿಮಗೆ ಹೊಟ್ಟೆ ಹಸಿವು ಕಡಿಮೆ ಮಾಡಲು ಮತ್ತು ಕಡಿಮೆ ತಿನ್ನಲು ಸಹಾಯ ಮಾಡುತ್ತದೆ."
6. ದೈಹಿಕ ಚಟುವಟಿಕೆಗಳು
ತೂಕ ನಷ್ಟಕ್ಕೆ ಯಾವುದೇ ರೀತಿಯ ದೈಹಿಕ ಚಟುವಟಿಕೆ ಅತ್ಯಗತ್ಯ. 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ನಿಯಮಿತ ವ್ಯಾಯಾಮವು ಸ್ನಾಯುವಿನ ದೃಢತೆ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ವಾಕಿಂಗ್ ಮತ್ತು ಈಜುವಂತಹ ಸುಲಭವಾದ ಚಟುವಟಿಕೆಗಳನ್ನು ನೀವು ಮಾಡಬಹುದು. ಯೋಗ ಕೂಡ ಸಹಾಯ ಮಾಡಬಹುದು.
7. ಧನಾತ್ಮಕ ವರ್ತನೆ
ನೀವು ಹಿರಿಯರಾಗಿರಲಿ ಅಥವಾ ಇಲ್ಲದಿರಲಿ, ತೂಕ ಇಳಿಸಿಕೊಳ್ಳಬೇಕೆಂದರೆ ಸಕಾರಾತ್ಮಕ ಮನೋಭಾವವು ಅತ್ಯಗತ್ಯವಾಗಿರುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ತಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಬೇಕು ಮತ್ತು ಸ್ವಲ್ಪ ತೂಕ ಇಳಿಸಿಕೊಂಡಾಗ ಖುಷಿ ಪಡಿ, ಬದಲಿಗೆ ಹಿನ್ನಡೆಗಳಿಂದ ನಿರಾಶೆಗೊಳ್ಳಬೇಡಿ.
8. ಸಾಕಷ್ಟು ನಿದ್ರೆ
ತೂಕ ನಷ್ಟಕ್ಕೆ ಸಾಕಷ್ಟು ನಿದ್ರೆ ಪಡೆಯುವುದು ಅತ್ಯಗತ್ಯ, ಏಕೆಂದರೆ ಇದು ಹಸಿವು ಮತ್ತು ಚಯಾಪಚಯ ಕ್ರಿಯೆಯ ಮೇಲೆ ಪ್ರಭಾವ ಬೀರುವ ಹಾರ್ಮೋನುಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಪ್ರತಿ ರಾತ್ರಿ ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆಯನ್ನಂತೂ ಮಾಡಲೇಬೇಕು.
ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಈ ಸಂಗತಿ ಮರೆಯಬೇಡಿ
ಅರುವತ್ತರ ನಂತರ ತೂಕ ಇಳಿಸಿಕೊಳ್ಳುವವರು ಕೆಲವೊಂದು ಅಂಶಗಳ ಮೇಲೆ ಗಮನ ವಹಿಸಿ. ಯಾಕೆಂದರೆ ಈ ವಯಸ್ಸಿನಲ್ಲಿ ತೂಕ ಇಳಿಸಿಕೊಳ್ಳುವುದರ ಜೊತೆಗೆ ದೇಹದ ಆರೋಗ್ಯವನ್ನೂ ನೋಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಈ ಕೆಲವೊಂದು ಟಿಪ್ಸ್ ತಪ್ಪದೇ ಅಳವಡಿಸಿಕೊಳ್ಳಿ.
1. ತ್ವರಿತ ತೂಕ ನಷ್ಟಕ್ಕೆ ಒಳಗಾಗಬೇಡಿ
ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ನಿಧಾನವಾಗಿ ಹಂತ ಹಂತವಾಗಿ ತೂಕ ಇಳಿಸಿಕೊಳ್ಳಬೇಕು. ಒಮ್ಮೆಲೇ ಒಂದೆರಡು ವಾರದಲ್ಲಿ ತೂಕ ಇಳಿಸಿಕೊಳ್ಳಲು ಹೋಗಬೇಡಿ. ಯಾಕೆಂದರೆ ಇದು ಸ್ನಾಯುವಿನ ನಷ್ಟ ಮತ್ತು ಇತರ ಪ್ರತಿಕೂಲ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು. 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ವಾರಕ್ಕೆ ಒಂದರಿಂದ 2 ಪೌಂಡ್‌ಗಳಷ್ಟು ನಿಧಾನ ಮತ್ತು ಸ್ಥಿರವಾದ ತೂಕ ನಷ್ಟಕ್ಕೆ ಶ್ರಮಿಸಬೇಕು.
2. ವೈದ್ಯರನ್ನು ಸಂಪರ್ಕಿಸಿ
60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ತೂಕ ನಷ್ಟ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಅವರು ಯಾವುದೇ ಹೊಸ ಆಹಾರ ಅಥವಾ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ನೀವು ಬಯಸಿದ ಫಲಿತಾಂಶಗಳನ್ನು ಸುರಕ್ಷಿತವಾಗಿ ಸಾಧಿಸಲು ಫಿಟ್‌ನೆಸ್ ತರಬೇತುದಾರರ ಸಹಾಯವನ್ನು ಪಡೆಯುವುದು ಸಹ ಮುಖ್ಯವಾಗಿದೆ.
3. ಕ್ರಿಯಾತ್ಮಕತೆಯ ಮೇಲೆ ಕೇಂದ್ರೀಕರಿಸಿ
ತೂಕ ನಷ್ಟದ ಮೇಲೆ ಕೇಂದ್ರೀಕರಿಸುವ ಬದಲು, 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ತಮ್ಮ ಒಟ್ಟಾರೆ ಆರೋಗ್ಯ ಮತ್ತು ಕ್ರಿಯಾತ್ಮಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರಬೇಕು. ಇದು ಸ್ನಾಯುಗಳನ್ನು ಮರು ನಿರ್ಮಿಸುವುದು, ಸಮತೋಲನವನ್ನು ಸುಧಾರಿಸುವುದು ಮತ್ತು ಮೂಳೆ ಸಾಂದ್ರತೆಯನ್ನು ಕೂಡಾ ಉಳಿಸಿಕೊಳ್ಳಬೇಕು.
4. ಅತಿಯಾದ ದೈಹಿಕ ಪರಿಶ್ರಮ
60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಗಾಯವನ್ನು ಉಂಟುಮಾಡುವ ಅತಿಯಾದ ದೈಹಿಕ ಪರಿಶ್ರಮವನ್ನು ತಪ್ಪಿಸಬೇಕು. ನಿಮ್ಮ ದೇಹದ ಬಗ್ಗೆ ಗಮನ ವಹಿಸುವುದು ಮತ್ತು ಅಗತ್ಯವಿದ್ದಾಗ ವಿಶ್ರಾಂತಿ ಪಡೆಯುವುದು ಅವಶ್ಯಕ. ಒಟ್ಟಾರೆಯಾಗಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ನಿಮಗಿರಲಿ. ಆದಷ್ಟು ಪಾಸಿಟಿವ್ ಆಗಿ ಮುಂದುವರೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













