Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಪಾನಿಪುರಿ ತಿಂದು ತೂಕ ಇಳಿಸಬಹುದಂತೆ, ಅಚ್ಚರಿಯಾದರೂ ಸತ್ಯ..!
ತೂಕ ಕಡಿಮೆ ಮಾಡಿಕೊಳ್ಳುವುದು ಇತ್ತೀಚೆಗೆ ಯುವಜನತೆ ಸೇರಿಂದತೆ ಎಲ್ಲರನ್ನೂ ಕಾಡುವ ಬಹುದೊಡ್ಡ ಸಮಸ್ಯೆಯಾಗಿದೆ. ಆದರೆ ತಮಗೆ ಇಷ್ಟವಾದ ಆಹಾರಗಳನ್ನು ತ್ಯಜಿಸಲು ಮಾತ್ರ ಯಾರೂ ಸಿದ್ಧರಿಲ್ಲ. ತೂಕ ಇಳಿಸಲು ವ್ಯಾಯಾಮ, ಯೋಗ, ಜಿಮ್ ಎಲ್ಲವನ್ನೂ ಮಾಡುತ್ತಾರೆ ಆದರೆ ಸಂಜೆಯ ನಂತರ ಬಾಯಿಯ ರುಚಿಗೆ ಇಷ್ಟವಾದ ಎಲ್ಲವನ್ನು ತಿನ್ನುವ ಮೂಲಕ ಕಸರತ್ತಿನ ಪ್ರಯೋಜನವೇ ಇಲ್ಲವಾಗಿಸುವಂತೆ ಮಾಡುತ್ತಾರೆ.
ಅಧಿಕ ತೂಕ ಇದ್ದು ತೂಕ ಕಡಿಮೆ ಮಾಡಿಕೊಳ್ಳುವ ಬಯಕೆ ಇರುವ ಪಾನಿಪೂರಿ ಪ್ರಿಯರಿಗೊಂದು ಸಿಹಿಸುದ್ದಿ ಕಾದಿದೆ. ಕೆಲವು ಅಧ್ಯಯನದ ಹಾಗೂ ಆಹಾರ ತಜ್ಞರ ಪ್ರಕಾರ ಸ್ಥೂಲಕಾಯ ಇರುವ ವ್ಯಕ್ತಿಗಳಿಗೆ ಅಥವಾ ತೂಕವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವವರಿಗೆ ಪಾನಿಪುರಿ ಅತ್ಯುತ್ತಮ ಆಯ್ಕೆಯಂತೆ. ಬೊಜ್ಜು ಹೊಂದಿರುವ ವ್ಯಕ್ತಿಗಳಿಗೆ ಅಥವಾ ತೂಕವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವವರಿಗೆ ಪಾನಿಪುರಿ ಅತ್ಯುತ್ತಮ ಆಯ್ಕೆಯಾಗಿದೆ.

1. ಬಾಯಿ ಕೆಟ್ಟಾಗ ಮೊದಲು ನೆನಪಾಗುವುದೇ ಪಾನಿಪುರಿ
ಪಾನಿಪುರಿ ಇಷ್ಟಪಡದವರುಂಟೆ......! ನಾಯಿ ಕೆಟ್ಟಾಗ ಅಥವಾ ಮಸಾಲೆಯುಕ್ತ ಏನನ್ನಾದರೂ ಹಂಬಲಿಸಿದಾಗ ನಮಗೆ ಮೊದಲು ನೆನಪಿಗೆ ಬರುವುದು ಪಾನಿಪುರಿ. ಪಾನಿಪುರಿ ಎಂಬ ಪದವೇ ನಮ್ಮ ರುಚಿಯನ್ನು ಪ್ರಚೋದಿಸುತ್ತದೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾದ ತಿಂಡಿ ಪಾನಿಪೂರಿ ಇದೀಗ ಆರೋಗ್ಯದ ವಿಚಾರದಲ್ಲೂ ಹೆಸರುಮಾಡುತ್ತಿದೆ.

2. ಅನೇಕರು ಇಷ್ಟವಿದ್ದರೂ ಆರೋಗ್ಯಕ್ಕಾಗಿ ಪಾನಿಪುರಿ ಸೇವಿಸುವುದಿಲ್ಲ?
ತುಂಬಾ ಜನ ಪಾನಿಪುರಿ ತಿನ್ನುವುದನ್ನು ತಪ್ಪಿಸುತ್ತಾರೆ, ಅದಕ್ಕೆ ಕಾರಣ ಅವರ ಕಟ್ಟುನಿಟ್ಟಾದ ಆಹಾರಕ್ರಮ ಮತ್ತು ಪಾನಿಪೂರಿ ಅನಾರೋಗ್ಯಕರ ಎಂದು. ಆದರೆ ಇದು ತಪ್ಪು ಕಲ್ಪನೆ. ತೂಕ ನಷ್ಟ ಮಾಡಲು ಬಯಸುವರು ಪಾನಿಪುರಿ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆಯಂತೆ.
ಆದರೆ ನೆಪಿರಲಿ, ಹೊರಗೆ ಸ್ಟಾಲ್‌ಗಳಲ್ಲಿ ಸಿಗುವ ಪಾನಿಪೂರಿ ಆರೋಗ್ಯಕರ ಎಂಬುದರ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲದಿದ್ದರೂ, ನಿಮ್ಮ ಮನೆಯಲ್ಲಿಯೇ ತಯಾರಿಸುವ ಮೂಲಕ ನೀವು ರುಚಿಯಾದ ಹಾಗೂ ಆರೋಗ್ಯಕರ ಪಾನಿಪೂರಿ ಆನಂದಿಸಬಹುದು.

3. ಪಾನಿಪೂರಿ ಹೇಗೆ ತೂಕ ಇಳಿಕೆಗೆ ಸಹಕಾರಿ?
ಬೊಜ್ಜು ಇರುವವರಿಗೆ ಅಥವಾ ತೂಕ ಕಡಿಮೆ ಮಾಡಿಕೊಳ್ಳುವ ಗುರಿ ಹೊಂದಿರುವವರಿಗೆ ಪಾನಿಪುರಿ ಅತ್ಯುತ್ತಮ ಆಯ್ಕೆಯಾಗಿದೆ. ನೀವು ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಬಯಸಿದರೆ ನಿತ್ಯ ಆರು ಪಾನಿಪುರಿಗಳನ್ನು ಸೇವಿಸುವುದು ಉತ್ತಮ ಟ್ರಿಕ್ ಆಗಬಹುದು. ಪಾನಿಪುರಿಯ ಪಾನಿ ಜೀರಿಗೆ, ಮೆಣಸು, ಹುಣಸೆಹಣ್ಣು, ಹಿಂಗು, ಪುದೀನದಂಥ ಮನೆಮದ್ದುಗಳಿಂದ ಮಾಡಲಾಗಿದ್ದು ಜತೆಗೆ ಬಿಸಿ-ಬಿಸಿಯ ಮಸಾಲೆಯು ನಿಮ್ಮ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಅಂತಿಮವಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ ಎನ್ನಲಾಗುತ್ತದೆ.
* ಅಷ್ಟೇ ಅಲ್ಲದೆ, ನೀವು ವಾಕರಿಕೆ, ಕಿರಿಕಿರಿ ಅಥವಾ ಮೂಡ್ ಸ್ವಿಂಗ್‌ಗಳಿಂದ ಬಳಲುತ್ತಿದ್ದರೆ ಪಾನಿಪುರಿ ಸೇವನೆಯು ನಿಮಗೆ ತಕ್ಷಣವೇ ಮೂಡ್ ಬದಲಾಯಿಸಲು ಸಹಾಯ ಮಾಡುತ್ತದೆ.
* ಆಯಾಸವನ್ನು ತಗ್ಗಿಸಲು ಮತ್ತು ತೂಕ ನಷ್ಟವನ್ನು ಹೆಚ್ಚಿಸಲು ಮನೆಯಲ್ಲಿ ತಯಾರಿಸಿದ ಪಾನಿಪುರಿಗಳನ್ನು ಆಹಾರ ತಜ್ಞರು ಶಿಫಾರಸು ಮಾಡುತ್ತಾರೆ. ಮನೆಯಲ್ಲಿ ಪಾನಿಪುರಿಗಳನ್ನು ತಯಾರಿಸುವುದರ ಒಂದು ಪ್ರಯೋಜನವೆಂದರೆ ನೀವು ಅವುಗಳನ್ನು ಕಡಿಮೆ ಎಣ್ಣೆಯಿಂದ ಫ್ರೈ ಮಾಡಬಹುದು. ಹೆಚ್ಚುವರಿ ಆರೋಗ್ಯ ಪ್ರಯೋಜನಗಳಿಗಾಗಿ, ಪಾನಿಗೆ ನಿಮಗೆ ಅಗತ್ಯವಾದ ಮಸಾಲೆಗಳನ್ನು ಸಹ ಬಳಸಬಹುದು.



Click it and Unblock the Notifications