ವಿಶ್ವ ಶೌಚಾಲಯ ದಿನ: ನಿಮ್ಮ ಮನೆಯ ಶೌಚಾಲಯವನ್ನು ಹೋಟೆಲ್‌ನಂತೆ ಸ್ವಚ್ಛವಾಗಿಡಲು ಈ 5 ಸರಳ ಟಿಪ್ಸ್ ಫಾಲೋ ಮಾಡಿ!

ಇಂದು, ಅಂದರೆ 2026ರ ನವೆಂಬರ್ 19ರಂದು ವಿಶ್ವ ಶೌಚಾಲಯ ದಿನ (World Toilet Day). ಈ ದಿನ ದೇಶಾದ್ಯಂತ ನೈರ್ಮಲ್ಯ ಮತ್ತು ಸ್ವಚ್ಛತೆ ಕುರಿತು ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಗರಾಡಳಿತದ ಪ್ರಚಾರಗಳು, ಶಾಲಾ-ಕಾಲೇಜುಗಳಲ್ಲಿ ಅಭಿಯಾನಗಳು ನಡೆಯುತ್ತಿವೆಯಾದರೂ, ನಿಜವಾದ ಬದಲಾವಣೆ ನಮ್ಮ ಮನೆ, ಕಚೇರಿ ಹಾಗೂ ಪ್ರಯಾಣದ ವೇಳೆಯಿಂದಲೇ ಆರಂಭವಾಗಬೇಕಿದೆ. ನೈರ್ಮಲ್ಯ, ಸುರಕ್ಷಿತ ತ್ಯಾಜ್ಯ ವಿಲೇವಾರಿ ಮತ್ತು ನೀರು ಉಳಿತಾಯಕ್ಕಾಗಿ ಪ್ರತಿಯೊಬ್ಬರೂ ತಕ್ಷಣ ಅನುಸರಿಸಬಹುದಾದ ಸುಲಭ ಗೈಡ್ ಇಲ್ಲಿದೆ. ಈ ಜಾಗೃತಿ ದಿನವನ್ನು ವಿಶ್ವಸಂಸ್ಥೆಯ 'ಯುಎನ್ ವಾಟರ್' ಸಂಸ್ಥೆಯು ಜಾಗತಿಕವಾಗಿ ಸಂಯೋಜಿಸುತ್ತದೆ.

ಮನೆಯಲ್ಲಿ ಶೌಚಾಲಯ ಶುಚಿಗೊಳಿಸುವಾಗ ನಾಲ್ಕು ಹಂತಗಳನ್ನು ನೆನಪಿಡಿ: ಸ್ವಚ್ಛಗೊಳಿಸುವುದು, ಕ್ರಿಮಿಮುಕ್ತಗೊಳಿಸುವುದು, ತೊಳೆದು ಒಣಗಿಸುವುದು. ಕ್ಲೀನ್ ಮಾಡುವಾಗ ಗ್ಲೌಸ್ ಧರಿಸಿ, ಸೂಕ್ತ ಗಾಳಿ-ಬೆಳಕು ಆಡುವಂತೆ ನೋಡಿಕೊಳ್ಳಿ. ಅಲ್ಲದೆ, ಬೇಸಿನ್ ಮತ್ತು ಶೌಚಾಲಯ ಕ್ಲೀನ್ ಮಾಡಲು ಬೇರೆ ಬೇರೆ ಬ್ರಷ್ ಬಳಸಿ. ಮೊದಲು ಟಾಯ್ಲೆಟ್ ಬೌಲ್ ಸ್ಕ್ರಬ್ ಮಾಡಿ, ನಂತರ ಹೆಚ್ಚು ಮುಟ್ಟುವ ಜಾಗಗಳನ್ನು 1 ಪ್ರತಿಶತ ಸೋಡಿಯಂ ಹೈಪೋಕ್ಲೋರೈಟ್ ಬಳಸಿ ಕ್ರಿಮಿಮುಕ್ತಗೊಳಿಸಿ. ಬ್ಲೀಚ್ ಅನ್ನು ಯಾವುದೇ ಕಾರಣಕ್ಕೂ ಆಸಿಡ್ ಅಥವಾ ಅಮೋನಿಯಾ ಜೊತೆ ಬೆರೆಸಬೇಡಿ. ನಿಗದಿತ ಸಮಯದ ನಂತರ ನೀರು ಹಾಕಿ ತೊಳೆದು, ಒಣಗಿಸಿ. ಕೊನೆಯಲ್ಲಿ 20 ರಿಂದ 40 ಸೆಕೆಂಡುಗಳ ಕಾಲ ಅಂಗೈ, ಹೆಬ್ಬೆರಳು ಹಾಗೂ ಬೆರಳ ತುದಿಯವರೆಗೆ ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ತೊಳೆಯುವುದನ್ನು ಮರೆಯಬೇಡಿ.

World Toilet Day 2026: Essential Hygiene, Cleaning Hacks, and Water Saving Tips for Your Home

ಶೌಚಾಲಯ ನೈರ್ಮಲ್ಯ ಮತ್ತು ಸಾರ್ವಜನಿಕ ಬಳಕೆ ನಿಯಮಗಳು

ಪ್ರಯಾಣಿಸುವಾಗ ನಿಮ್ಮ ಬಳಿಯೊಂದು ಸಣ್ಣ ಹೈಜೀನ್ ಕಿಟ್ ಇರಲಿ. ಅದರಲ್ಲಿ ಟಿಶ್ಯೂ, ಸ್ಯಾನಿಟೈಸರ್, ಪ್ಯಾಡ್‌ಗಳು, ಡಿಸ್ಪೋಸಬಲ್ ಬ್ಯಾಗ್‌ಗಳು ಹಾಗೂ ಸೋಪ್ ಸ್ಟ್ರಿಪ್‌ಗಳಿರಲಿ. ಅಗತ್ಯವಿದ್ದರೆ ಸಾರ್ವಜನಿಕ ಶೌಚಾಲಯದ ಸೀಟ್‌ಗಳನ್ನು ಒರೆಸಿ ಅಥವಾ ಟಿಶ್ಯೂ ಹಾಕಿ ಬಳಸಿ. ಒದ್ದೆಯಾದ ಜಾಗಗಳಲ್ಲಿ ಮೊಬೈಲ್ ಫೋನ್ ಇಡಬೇಡಿ. ಶೌಚಾಲಯ ಸ್ವಚ್ಛವಾಗಿದ್ದರೆ ದ್ರವ ತ್ಯಾಜ್ಯಕ್ಕೆ ಹಾಫ್-ಫ್ಲಶ್ ಬಳಸಿ. ಬಳಸಿದ ನಂತರ ಕನಿಷ್ಠ 20 ಸೆಕೆಂಡುಗಳ ಕಾಲ ಕೈಗಳನ್ನು ಚೆನ್ನಾಗಿ ತೊಳೆದು, ಪೂರ್ತಿಯಾಗಿ ಒಣಗಿಸಿಕೊಂಡೇ ಹೊರಬನ್ನಿ.

ಮನೆ, ಹಾಸ್ಟೆಲ್ ಹಾಗೂ ಕಚೇರಿಗಳಲ್ಲಿ ಮುಟ್ಟಿನ ತ್ಯಾಜ್ಯ ಮತ್ತು ಡೈಪರ್‌ಗಳನ್ನು ನೇರವಾಗಿ ಕಮೋಡ್‌ಗೆ ಹಾಕಬೇಡಿ. ಅವುಗಳನ್ನು ನೈರ್ಮಲ್ಯ ತ್ಯಾಜ್ಯ (Sanitary waste) ಎಂದೇ ವಿಂಗಡಿಸಬೇಕು. ಪೇಪರ್‌ನಲ್ಲಿ ಸರಿಯಾಗಿ ಸುತ್ತಿ, ಕಟ್ಟಿ, ಮುಚ್ಚಳವಿರುವ ಡಸ್ಟ್‌ಬಿನ್‌ಗೆ ಹಾಕಿ. ಪ್ರಸ್ತುತ ಜಾರಿಯಲ್ಲಿರುವ ನಾಲ್ಕು ಹಂತದ ತ್ಯಾಜ್ಯ ವಿಂಗಡಣೆ (four-stream segregation) ನಿಯಮದಂತೆ ಪೌರಾಡಳಿತದ ವಿಲೇವಾರಿಗೆ ನೀಡಿ. ಡಸ್ಟ್‌ಬಿನ್ ಬಳಿ ಹೆಚ್ಚುವರಿ ಕವರ್‌ಗಳು ಮತ್ತು ದುರ್ವಾಸನೆ ತಡೆಯುವ ಸ್ಯಾಚೆಟ್‌ಗಳನ್ನು ಇಡಿ. ಜೊತೆಗೆ, ಅತಿಥಿಗಳಿಗಾಗಿ ಡಸ್ಟ್‌ಬಿನ್ ಬಳಕೆಯ ಸರಳ ನಿಯಮಗಳನ್ನು ಬರೆದಿಡಿ.

ಶೌಚಾಲಯದಲ್ಲಿ ನೀರು ಉಳಿಸಲು ಸರಳ ಉಪಾಯಗಳು

ಅಗತ್ಯಕ್ಕೆ ತಕ್ಕಂತೆ ಡ್ಯುಯಲ್-ಫ್ಲಶ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ತಿಂಗಳಿಗೊಮ್ಮೆ ಶೌಚಾಲಯದಲ್ಲಿ ನೀರು ಸೋರುತ್ತಿದೆಯೇ ಎಂದು ಪರೀಕ್ಷಿಸಿ (Silent-leak test): ಫ್ಲಶ್ ಟ್ಯಾಂಕ್‌ಗೆ ಸ್ವಲ್ಪ ಫುಡ್ ಕಲರ್ ಹಾಕಿ, 10–15 ನಿಮಿಷ ಕಾಯ್ದು, ಕಮೋಡ್‌ಗೆ ಬಣ್ಣ ಬಂದಿದೆಯೇ ಎಂದು ಗಮನಿಸಿ. ನಲ್ಲಿಗಳಿಗೆ ಏರೇಟರ್‌ಗಳನ್ನು ಅಳವಡಿಸಿ ಮತ್ತು ಸೋರುವ ನಲ್ಲಿಗಳನ್ನು ತಕ್ಷಣ ರಿಪೇರಿ ಮಾಡಿಸಿ. ಅವಕಾಶವಿದ್ದರೆ, ಬಟ್ಟೆ ತೊಳೆದ ಕೊನೆಯ ನೀರನ್ನು (ಗ್ರೇ-ವಾಟರ್) ನೆಲ ಒರೆಸಲು ಅಥವಾ ಫ್ಲಶ್ ಮಾಡಲು ಬಳಸಿ. ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA) ಶೌಚಾಲಯ ನಿರ್ವಹಣಾ ವೇಳಾಪಟ್ಟಿ, ಸಂಪರ್ಕ ಸಂಖ್ಯೆ ಹಾಗೂ "ಕೈ ತೊಳೆಯಿರಿ 20–40 ಸೆಕೆಂಡ್, ಅರ್ಧ ಫ್ಲಷ್ ಬಳಸಿ" ಎಂಬ ಕನ್ನಡ ಜಾಗೃತಿ ಫಲಕಗಳನ್ನು ಅಳವಡಿಸಬೇಕು.

Story first published: Thursday, November 19, 2026, 12:24 [IST]
X
Desktop Bottom Promotion