For Quick Alerts
ALLOW NOTIFICATIONS  
For Daily Alerts

ಹೆಚ್‌ಐವಿ/ಏಡ್ಸ್ ರೋಗಿಗಳ ತೂಕ ಇಳಿಕೆ ತಡೆಗಟ್ಟಲು ಆಹಾರಕ್ರಮ

|

ಏಡ್ಸ್ ಅಥವಾ ಹೆಚ್‌ಐವಿ ಎಂಬುವುದು ಗುಣಪಡಿಸಲಾಗದ ಕಾಯಿಲೆಯಾಗಿದ್ದರೂ ಇದು ಬಂದ ಮೇಲೂ 20 ವರ್ಷಕ್ಕಿಂತ ಹೆಚ್ಚಿನ ಸಮಯ ಜೀವಿಸಿದವರು ಇದ್ದಾರೆ. ಅದಕ್ಕೆ ಅವರಿಗೆ ನೆರವಾಗಿದ್ದು ಅವರ ಜೀವನಶೈಲಿ. ವ್ಯಾಯಾಮ ಹಾಗೂ ಆಹಾರಶೈಲಿಯಿಂದ ಹೆಚ್‌ಐವಿಯಿದ್ದರೂ ಇತರರಂತೆ ಜೀವನ ನಡೆಸಬಹುದಾಗಿದೆ.

ಪೋಷಕಾಂಶದ ಆಹಾರ ಪ್ರತಿಯೊಬ್ಬರಿಗೂ ಮುಖ್ಯವಾಗಿದೆ. ದೇಹ ಆರೋಗ್ಯವಾಗಿರಲು ಈ 6 ಬಗೆಯ ಪೋಷಕಾಂಶಗಳು ಅವಶ್ಯಕವಾಗಿದೆ.
* ಪ್ರೊಟೀನ್: ಸ್ನಾಯುಗಳನ್ನು ಬಲಪಡಿಸುತ್ತೆ, ರೋಗನಿರೋಧಕ ಶಕ್ತಿ ಹೆಚ್ಚುವುದು.
* ಕಾರ್ಬ್ಸ್: ದೇಹಕ್ಕೆ ಶಕ್ತಿಯನ್ನು ನೀಡುತ್ತದೆ
* ವಿಟಮಿನ್‌ಗಳು: ದೇಹ ತನ್ನ ಕಾರ್ಯವನ್ನು ನಿರ್ವಹಿಸಲು ಅವಶ್ಯಕ
* ಖನಿಜಾಂಶ : ದೇಹದ ಸ್ನಾಯುಗಳು ಬಲವಾಗಿರಲು ಹಾಗೂ ದೇಹದ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಅವಶ್ಯಕ
* ನೀರು: ದೇಹದ ಎಲ್ಲಾ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಅವಶ್ಯಕ

ಹೆಚ್‌ಐವಿ ಇರುವವರಿಗೆ ಸ್ಪೆಷಲ್‌ ಡಯಟ್‌ ಇದೆಯೇ?

ಹೆಚ್‌ಐವಿ ಇರುವವರಿಗೆ ಸ್ಪೆಷಲ್‌ ಡಯಟ್‌ ಇದೆಯೇ?

ಹೆಚ್‌ಐವಿ ಇರುವವರಿಗೆ ಸ್ಪೆಷಲ್‌ ಡಯಟ್‌ ಏನೂ ಇಲ್ಲ, ಪೋಷಕಾಂಶವಿರುವ ಆಹಾರವನ್ನು ಸೇವಿಸಿದರೆ ಸಾಕು, ರೋಗ ನಿರೋಧಕ ಶಕ್ತಿ ಹೆಚ್ಚುವುದು. ಹೆಚ್‌ಐವಿ ಸೋಂಕು ತಗುಲಿದಾಗ ಇತರ ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆಯಾಗುವುದು. ಕೆಲವರಿಗೆ ಸಾಮಾನ್ಯವಾಗಿ ತಿನ್ನುವುದಕ್ಕಿಂತ ಹೆಚ್ಚು ತಿನ್ನಬೇಕಾಗುತ್ತದೆ.

ತೂಕ ಕಡಿಮೆಯಾಗುವುದನ್ನು ತಡೆಗಟ್ಟುವುದು ಹೇಗೆ?

ತೂಕ ಕಡಿಮೆಯಾಗುವುದನ್ನು ತಡೆಗಟ್ಟುವುದು ಹೇಗೆ?

ಹೆಚ್ಐವಿ ಸೋಂಕು ತಗುಲಿದವರಿಗೆ ತೂಕ ನಷ್ಟ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಅದರಲ್ಲೂ ಅಡ್ವಾನ್ಸ್‌ ಸ್ಟೇಜ್‌ನಲ್ಲಿದ್ದರೆ ತುಂಬಾನೇ ತೂಕ ನಷ್ಟವಾಗುವುದು, ತೂಕ ನಷ್ಟವಾಗುವುದು ಅಪಾಯಕಾರಿ, ಏಕೆಂದರೆ ದೇಹಕ್ಕೆ ಕಾಯಿಲೆಗಳ ವಿರುದ್ಧ ಹೋರಾಡಲು ಕಷ್ಟವಾಗುವುದು.

ಹೆಚ್‌ಐವಿ ಇರುವವರಿಗೆ ಈ ಕಾರಣಗಳಿಂದಾಗಿ ಸರಿಯಾಗಿ ತಿನ್ನಲು ಸಾಧ್ಯವಾಗುವುದಿ;f;

*ಹಸಿವು ಕಡಿಮೆಯಾಗಿರುತ್ತದೆ, ಆಹಾರವೂ ರುಚಿಸುವುದಿಲ್ಲ

* ಬಾಯಿ ಹುಣ್ಣು, ವಾಂತಿ, ತಲೆಸುತ್ತು ಮುಂತಾದ ಸಮಸ್ಯೆಗಳು ಕಂಡು ಬರುವುದು

* ಸುಸ್ತು, ತೆಗೆದುಕೊಳ್ಳುವ ಔಷಧಿಗಳು ಈ ಕಾರಣದಿಂದಾಗಿ ಆಹಾರ ಸರಿಯಾಗಿ ಸೇವಿಸಲು ಸಾಧ್ಯವಾಗುವುದಿಲ್ಲ.

ಹಾಗಂತ ಸರಿಯಾಗಿ ತಿನ್ನದಿದ್ದರೆ ಸುಸ್ತು ಅಧಿಕವಾಗುವುದು. ಆಹಾರದಲ್ಲಿ ಪೋಷಕಾಂಶಗಳನ್ನು ಈ ರೀತಿ ಮಾಡಿ ಸೇರಿಸಬಹುದ ನೋಡಿ:

ಪ್ರೊಟೀನ್‌ ಅನ್ನು ಆಹಾರದಲ್ಲಿ ಸೇರಿಸಲು ಟಿಪ್ಸ್:

* ಹಣ್ಣುಗಳು, ತರಕಾರಿ, ಟೋಸ್ಟ್‌ಗೆ ನಟ್‌ ಬಟರ್ ಸೇರಿಸಿ.

* ಹಣ್ಣು, ತರಕಾರಿಗಳಿಗೆ ಕಾಟೇಜ್‌ ಚೀಸ್ ಸೇರಿಸಿ.

* ತುನಾ ಮೀನು ಸೇವಿಸಿ

* ಸೂಪ್, ಆಮ್ಲೆಟ್‌, ಬೇಯಿಸಿದ ಆಲೂಗಡ್ಡೆ, ತರಕಾರಿಗಳನ್ನು ಸೇರಿಸಿ.

* ಧಾನ್ಯಗಳು, ಮೊಸರು ಸೇವಿಸಿ

* ನಿಮ್ಮ ಸಲಾಡ್‌ನಲ್ಲಿ ಬೇಯಿಸಿದ ಮೊಟ್ಟೆಗಳನ್ನು ಸೆರಿಸಿ

* ತೆಳು ಮಾಂಸದಿಂದ ಸೂಪ್‌ಗಳನ್ನು, ಮಾಡಿ ಕುಡಿಯಿರಿ.

ಕ್ಯಾಲೋರಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಲು

ಕ್ಯಾಲೋರಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಲು

ಕ್ಯಾಲೋರಿಯನ್ನು ತಮ್ಮ ಆಹಾರದಲ್ಲಿ ಸೇರಿಸಿದರೆ ತೂಕ ನಷ್ಟವನ್ನು ತಡೆಗಟ್ಟಬಹುದು

* ಬೆಣ್ಣೆ, ಚೀಸ್‌, ಪೀನಟ್ ಬಟರ್‌

* ಬೆಣ್ಣೆಹಣ್ಣು, ಆಲೀವ್

* ತಾಜಾ ಅಥವಾ ಡ್ರೈಫ್ರೂಟ್ಸ್

* ಜೇನು

ಯಾವ ಬಗೆಯ ಆಹಾರ ಸೇವಿಸಬಾರದು:

* ಉಪ್ಪಿನಂಶವಿರುವ ಆಹಾರ

* ಹೆಚ್ಚು ಸಕ್ಕರೆಯಂಶವಿರುವ ಆಹಾರ

* ಅನಾರೋಗ್ಯಕರ ಕೊಬ್ಬು

* ಮದ್ಯ

ಹಸಿವು ಹೆಚ್ಚಿಸುವುದು ಹೇಗೆ?

ಹಸಿವು ಹೆಚ್ಚಿಸುವುದು ಹೇಗೆ?

* ಪ್ರತಿನಿತ್ಯ ಲಘು ವ್ಯಾಯಾಮ ಮಾಡಿ.

* ಮೂರು ಬಾರಿ ತಿನ್ನುವ ಬದಲು ಸ್ವಲ್ಪ-ಸ್ವಲ್ಪವೆಂಬಂತೆ ಹಲವು ಬಾರಿ ತಿನ್ನಿ.

ವಾಂತಿ ತಡೆಗಟ್ಟಲು ಏನು ಮಾಡಬೇಕು?

* ಆಹಾರದ ಜೊತೆ ನೀರು ಸೇವಿಸಬೇಡಿ, ಆಹಾರ ತಿಂದು ಸ್ವಲ್ಪ ಹೊತ್ತು ಆದ ಬಳಿಕ ನೀರು ಕುಡಿಯಿರಿ.

* ಸ್ವಲ್ಪ ಶುಂಠಿ ತಿನ್ನಿ

* ಕಟು ವಾಸನೆಯ ಆಹಾರ ಸೇವಿಸಬೇಡಿ.

* 2 ಗಂಟೆ ಅಂತರದಲ್ಲಿ ಸ್ವಲ್ಪ-ಸ್ವಲ್ಪ ಆಹಾರ ಸೇವಿಸಿ.

ಬೇಧಿ ತಡೆಗಟ್ಟಲು ಏನು ಮಾಡಬೇಕು?

ಬೇಧಿ ತಡೆಗಟ್ಟಲು ಏನು ಮಾಡಬೇಕು?

* ಹಾಲಿನ ಉತ್ಪನ್ನಗಲನ್ನು ತಡೆಗಟ್ಟಿ

* ಸೋಡಾ, ಇತರ ಕೃತಕ ಸಿಹಿಯ ಉತ್ಪನ್ನಗಳನ್ನು ಕಡಿಮೆ ಸೇವಿಸಿ

* ಸಾಕಷ್ಟು ನೀರು ಕುಡಿಯಿರಿ.

 ನುಂಗಲು ಕಷ್ಟವಾದರೆ ಏನು ಮಾಡಬೇಕು?

ನುಂಗಲು ಕಷ್ಟವಾದರೆ ಏನು ಮಾಡಬೇಕು?

* ತುಂಬಾ ಕಷ್ಟವಾದ ಆಹಾರವನ್ನು ಸೇವಿಸಬೇಡಿ

* ತುಂಬಾ ಬಿಸಿಯಾದ ಆಹಾರ ಸೇವಿಸಬೇಡಿ, ಆಹಾರ ಸ್ವಲ್ಪ ತಣ್ಣಗಾದ ಮೇಲೆ ಸೇವಿಸಿ.

* ಅಸಿಡಿಟಿ ಉಂಟು ಮಾಡುವ ಆಹಾರ ಸೇವಿಸಬೇಡಿ.

ಹೆಚ್‌ಐವಿ ಇರುವವರು ತೂಕ ನಷ್ಟವಾಗುವುದನ್ನು ತಡೆಗಟ್ಟುವುದು ಹೇಗೆ?

* ಪ್ರೊಟೀನ್ ಅಧಿಕವಿರುವ ಆಹಾರ ಸೇವಿಸಿ

* ಅಧಿಕ ಕ್ಯಾಲೋರಿಯ ಆಹಾರ ಸೇವಿಸಿ

English summary

HIV/AIDS Diet Plan: Healthy eating for people living with HIV

HIV/AIDS Diet Plan: Healthy eating for people living with HIV, Read on.......
X
Desktop Bottom Promotion