Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ದುಃಖದ ಕಹಿಯನ್ನು ಕರಗಿಸುವ ನಗುವೆಂಬ ದಿವ್ಯೌಷಧ
ನೀನು ನಕ್ಕರೆ ಜಗತ್ತು ನಿನ್ನೊಂದಿಗೆ ನಗುವುದು, ನೀನು ಅತ್ತರೆ ನೀನೊಬ್ಬನೇ ಅಳಬೇಕಾಗಿ ಬರುವುದು ಎಂಬುದೊಂದು ಸುಭಾಷಿತ. ಎಷ್ಟೇ ಆಭರಣ ಧರಿಸಿದರೂ ನಗುವಿಲ್ಲದ ಮೊಗದಲ್ಲಿ ಸೊಗಡಿರದು ಎಂಬುದು ಇನ್ನೊಂದು ಸುಭಾಷಿತ. ನಗು ಮನುಷ್ಯನಿಗೆ ವಿಶೇಷವಾಗಿ ಒದಗಿಬಂದ ಒಂದು ವರದಾನವಾಗಿದೆ. ಮನಸ್ಸನ್ನು ನಿರಾಳಗೊಳಿಸುವಲ್ಲಿ, ಪ್ರಫುಲ್ಲಗೊಳಿಸುವಲ್ಲಿ, ತಿಳಿಗೊಳಿಸುವಲ್ಲಿ ನಗುವಿನ ಪಾತ್ರ ಮಹತ್ತರ. ಸುಂದರ ನಗುವಿನಿಂದ ಕಷ್ಟ- ಸುಖದ ಜಗತ್ತನ್ನೇ ಗೆಲ್ಲಿರಿ!
ಪ್ರತಿದಿನ ನಗುನಗುತ್ತಾ ಇರುವುದರಿಂದ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಎಂದು ವಿಜ್ಞಾನ ತಿಳಿಸುತ್ತದೆ. ಬಲವಂತದ ನಗುಬರಿಸಲು ನಮಗೆ ಕೆಲವೇ ಸ್ನಾಯುಗಳ ಅವಶ್ಯಕತೆ ಇದ್ದರೆ ಮನಃಪೂರ್ವಕವಾಗಿ ನಗಲು ಬಹುತೇಕ ಮುಖದ ಎಲ್ಲಾ ಸ್ನಾಯುಗಳ ಅಗತ್ಯವಿದೆ. ನಗುವಿನ ಮೂಲಕ ನಮ್ಮ ನೆರೆಯವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲೂ ಸಾಧ್ಯವಾಗುತ್ತದೆ. ಬನ್ನಿ ನಗು ನಮ್ಮ ಆರೋಗ್ಯವನ್ನು ಯಾವ ವಿಧಾನಗಳಲ್ಲಿ ಸುಧಾರಿಸುತ್ತದೆ ಎಂಬುದನ್ನು ಸ್ಲೈಡ್ ಶೋ ಮೂಲಕ ನೋಡೋಣ...

ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ
ದಿನನಿತ್ಯ ನಾವೆಲ್ಲಾ ಒಂದಲ್ಲ ಒಂದು ಜಂಜಾಟಗಳನ್ನು ಅನುಭವಿಸುತ್ತಲೇ ಇರುತ್ತೇವೆ. ಇದರಿಂದ ದೈಹಿಕ ಮತ್ತು ಮಾನಸಿಕ ಒತ್ತಡದಲ್ಲಿರುತ್ತೇವೆ. ನಡುನಡುವೆ ಸಮಯ ಸಿಕ್ಕಾಗಲೆಲ್ಲಾ ನಗುವ ಮೂಲಕ ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ನಗುವ ಸಮಯದಲ್ಲಿ ದೇಹದಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್ ಎಂಬ ಹಾರ್ಮೋನು ಈ ಬದಲಾವಣೆಗೆ ಕಾರಣ.

ಮನೋಭಾವವನ್ನು ಉತ್ತಮಗೊಳಿಸುತ್ತದೆ
ಕೆಲವೊಮ್ಮೆ ಯಾವುದೋ ವಿಷಯದಿಂದ ಮನಸ್ಸು ಅಲ್ಲೋಲಕಲ್ಲೋಲವಾಗಿ ಯಾವುದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ. ನಿತ್ಯದ ಊಟ ನಿದ್ರೆಗಳಿಗೂ ಸಂಚಕಾರ ಉಂಟಾಗುತ್ತದೆ. ಆಗ ಮುಕ್ತಮನಸ್ಸಿನಿಂದ ನಕ್ಕು ಹಗುರಾಗುವ ಮೂಲಕ ಮನೋಭಾವ (mood) ಪ್ರಫುಲ್ಲಗೊಂಡು ಇನ್ನಿತರ ಕೆಲಸಗಳನ್ನು ಎಂದಿನಂತೆ ಮುಂದುವರೆಸಲು ಚೈತನ್ಯ ನೀಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ನಗುವಿನ ಮೂಲಕ ಸಡಿಲಗೊಳ್ಳುವ ದೇಹದಲ್ಲಿ ರಕ್ತಸಂಚಾರ ಸುಗಮಗೊಂಡು ಎಲ್ಲಾ ರಾಸಾಯನಿಕ ವಸ್ತುಗಳು ಸಕಾಲದಲ್ಲಿ ತಮ್ಮ ಸ್ಥಾನವನ್ನು ತಲುಪುತ್ತವೆ. ಇದರಿಂದ ರೋಗಗಳ ವಿರುದ್ಧ ಹೋರಾಡಲು ದೇಹ ಎಂದಿಗಿಂತಲೂ ಹೆಚ್ಚು ಸಜ್ಜಾಗಿರುತ್ತದೆ.

ಲಕ್ಷ್ಯವನ್ನು ಹೆಚ್ಚಿಸುತ್ತದೆ
ನಗುನಗುತ್ತಲೇ ಇರುವುದರಿಂದ ನಮ್ಮ ಲಕ್ಷ್ಯಗೊಡುವ ಸಾಮರ್ಥ್ಯ ಹೆಚ್ಚುತ್ತದೆ. ಸಾಮಾನ್ಯವಾಗಿ ನಾವು ಹೆಚ್ಚಿನ ಸಮಯದಲ್ಲಿ ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುತ್ತೇವೆ. ನಡೆದು ಹೋಗುತ್ತಿರುವಾವ ಮೊಬೈಲಿನಲ್ಲಿ ಮಾತನಾಡುವುದು ಒಂದು ಉದಾಹರಣೆ. ಇದರಲ್ಲಿ ನಡೆಯುವ ಕಾರ್ಯವನ್ನು ಮೆದುಳುಬಳ್ಳಿ ವಹಿಸಿಕೊಂಡರೆ ಮಾತನಾಡುತ್ತಿರುವಾಗ ನೀಡುವ ಗಮನವನ್ನು ಮೆದುಳು ವಹಿಸಿಕೊಳ್ಳುತ್ತದೆ. ನಗುವಿನ ಮೂಲಕ ಈ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಆರೋಗ್ಯ ವೃದ್ಧಿಸಲು ಸಹಾಯಕ
ಅನಾರೋಗ್ಯದಿಂದರೆ ನಿಮ್ಮ ಜೀವನವನ್ನು ಆನಂದಿಸಲು ಸಾಧ್ಯವಿಲ್ಲ. ನಗುವ ಯೋಗ ನಿಮ್ಮ ದೇಹದಲ್ಲಿ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸಿ ಅನಾರೋಗ್ಯ ಬೀಳದಂತೆ ನಿಮ್ಮನ್ನು ತಡೆಯುವುದು ಮಾತ್ರವಲ್ಲದೆ, ಅಧಿಕ ರಕ್ತದೊತ್ತಡ, ಹೃದಯ ರೋಗ, ಮಧುಮೇಹ, ಖಿನ್ನತೆ, ಸಂಧಿವಾತ, ಅಲರ್ಜಿ, ಅಸ್ತಮಾ, ಗಂಟಲೂತ, ಬೆನ್ನುನೋವು, ಫೈಬ್ರೊಮ್ಯಾಲ್ ಗಿಯ , ಮೈಗ್ರೇನ್ ತಲೆನೋವು, ಮುಟ್ಟಿನ ನಂತಹ ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಆಕರ್ಷಣೆಯನ್ನು ಹೆಚ್ಚಿಸುತ್ತದೆ
ಸದಾ ನಗುತ್ತಿರುವ ನಿಮ್ಮ ಮೊಗ ಆಕರ್ಷಣೀಯವಾಗಿರುತ್ತದೆ. ಖಂಡಿತವಾಗಿಯೂ ಹೆಚ್ಚಿನವರು ನಗುಮೊಗದ ವ್ಯಕ್ತಿಗಳ ಸಂಗವನ್ನೇ ಬಯಸುತ್ತಾರೆಯೇ ವಿನಃ ಗಂಟುಮುಖದವರನ್ನಲ್ಲ.

ಮನಸ್ಸಿನ ನೆಮ್ಮದಿಗೆ
ನಗು ಅಥವಾ ತಮಾಷೆಯಿಂದ ನಿಮ್ಮ ಮನಸ್ಸು ಯಾವಾಗಲೂ ಶಾಂತವಾಗಿರುತ್ತದೆ. ಇದು ಒತ್ತಡ, ಚಿಂತೆ ಹಾಗೂ ನೋವಿನ ಸಮಸ್ಯೆಗಳಿಗೆ ಒಳ್ಳೆಯ ಮದ್ದು. ನಗುವು ಕೋಪ ಮತ್ತು ಹತಾಶೆಯನ್ನು ನಿಯಂತ್ರಿಸುತ್ತದೆ. ನಗುವಾಗ ಹಾರ್ಮೋನ್ ಬಿಡುಗಡೆಗೊಂಡು ನೀವು ಒಳ್ಳೆಯ ಭಾವನೆಯಿಂದ ಇರುವಂತೆ ಮಾಡುತ್ತದೆ. ನಗುವಿನಿಂದಲೇ ಎಲ್ಲಾ ಸಮಸ್ಯೆಗಳನ್ನು ದೂರಕ್ಕೆ ಅಟ್ಟುವುದರಿಂದ ನೀವು ಹೆಚ್ಚಿನ ಕಾಲ ಬಾಳಬಹುದು. ಜನರು ತುಂಬಾ ಬೇಸರದಲ್ಲಿ ಇರುವಾಗ ಕಾಮಿಡಿ ಷೋ ಮತ್ತು ಸಿನಿಮಾಗಳನ್ನು ನೋಡಲು ಬಯಸುತ್ತಾರೆ. ಯಾಕೆಂದರೆ ಇದರಲ್ಲಿ ಇರುವ ತಮಾಷೆ ಮತ್ತು ಕಾಮಿಡಿ ಅವರು ನಗುವಂತೆ ಮಾಡುತ್ತದೆ. ನಗುವಾಗ ಒತ್ತಡದ ಹಾರ್ಮೋನು ಕಡಿಮೆಯಾಗಿ, ಒಳ್ಳೆಯ ಭಾವನೆಯ ಹಾರ್ಮೋನುಗಳು ಹೆಚ್ಚಾಗುತ್ತದೆ.



Click it and Unblock the Notifications