Latest Updates
-
ಭಾಯಿ ದೂಜ್ 2026: ಹಬ್ಬದ ಸಂಭ್ರಮಕ್ಕೆ ಪ್ಲಾನಿಂಗ್, ಬಜೆಟ್ ಮತ್ತು ಸಮಯ ನಿರ್ವಹಣೆಯ ಸರಳ ಟಿಪ್ಸ್ -
ಹಬ್ಬದ ಸಂಭ್ರಮದಲ್ಲಿ ಬೀದಿಬದಿ ಆಹಾರ ಸೇವಿಸುವ ಮುನ್ನ ಎಚ್ಚರ: ಆರೋಗ್ಯ ಸುರಕ್ಷತೆಗೆ ಇಲ್ಲಿದೆ 5 ಸರಳ ಸೂತ್ರಗಳು -
ಬಿಗ್ ಬಾಸ್ ಕನ್ನಡ 13: ಈ ವಾರ ಯಾರೂ ಎಲಿಮಿನೇಟ್ ಇಲ್ಲ! ಕಿಚ್ಚ ಸುದೀಪ್ ನೀಡಿದ ಅಚ್ಚರಿಯ ಟ್ವಿಸ್ಟ್ ಏನು? -
ದೀಪಾವಳಿ ನಂತರ ದೆಹಲಿಯಲ್ಲಿ ದಟ್ಟ ಹೊಗೆ: ಮಕ್ಕಳ ಆರೋಗ್ಯ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ -
ಲಕ್ಷ್ಮಿ ಪೂಜೆಯ ಮುಹೂರ್ತದ ಗೊಂದಲ: ಕುಟುಂಬದ ಶಾಂತಿಗಾಗಿ ಇಲ್ಲಿದೆ ಸರಳ ಪರಿಹಾರಗಳು -
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ -
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ!
ಕಡಿಮೆ ತಿನ್ನಲು ಕೆಲವೊಂದು ಟಿಪ್ಸ್
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೆ ಆರೋಗ್ಯವೆನ್ನುವುದು ಆದ್ಯತೆಯ ವಿಷಯವಾಗಿದೆ. ತಮ್ಮ ಫಿಗರ್ ಬಗ್ಗೆ ಜಾಗೃತರಾಗಿರುವ ಜನರು ಫಿಟ್ ಹಾಗೂ ಸೆಕ್ಸಿಯಾಗಿ ಕಾಣಿಸಲು ಬಯಸುತ್ತಾರೆ. ಇದಕ್ಕಾಗಿ ಜಿಮ್ ಮತ್ತು ಆಹಾರ ಪಥ್ಯ ಪಾಲಿಸುತ್ತಾರೆ. ಈ ವಿಧಾನವು ಹಲವರಿಗೆ ನೆರವಾಗಿದೆ. ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಆಹಾರ ಕ್ರಮ ಪಾಲಿಸುವುದು ತುಂಬಾ ಕಠಿಣ. ಆಹಾರ ಕ್ರಮ ತುಂಬಾ ಮುಖ್ಯ. ಇದಕ್ಕಾಗಿ ಸೂಕ್ತ ರೀತಿ ತಿನ್ನಬೇಕು ಮತ್ತು ಕಡಿಮೆ ತಿನ್ನಬೇಕು.
ಒಳ್ಳೆಯ ಆಹಾರ ಕ್ರಮಕ್ಕೆ ಆರೋಗ್ಯ ಮತ್ತು ಫಿಟ್ ನೆಸ್ ಮಾರ್ಗದರ್ಶಕರು ನೀಡುವ ಸಾಮಾನ್ಯ ಸಲಹೆಯೆಂದರೆ ಕೆಲವು ಗಂಟೆಗಳ ಅವಧಿಯಲ್ಲಿ ಸ್ವಲ್ಪ ಸ್ವಲ್ಪ ತಿನ್ನಿ. ಒಳ್ಳೆಯ ಫಲಿತಾಂಶ ಪಡೆಯಲು ಈ ಒಂದು ನೈಜಾಂಶವನ್ನು ಪಾಲಿಸಬೇಕಾಗುತ್ತದೆ. ಸರಳ ಆಹಾರ ಕ್ರಮಕ್ಕಾಗಿ ನೀವು ಕಡಿಮೆ ತಿಂದು ಹೆಚ್ಚು ನೀರು ಕುಡಿಯಬೇಕು. ಇದು ತೂಕ ಕಡಿಮೆ ಮಾಡಲು ಅದೇ ರೀತಿ ಹೆಚ್ಚಿಸಲು ನೆರವಾಗುತ್ತದೆ. ಕೆಲವು ಸಲ ನಾವು ತುಂಬಾ ಹಸಿವಾಗುವವರೆಗೆ ಏನೂ ತಿನ್ನುವುದಿಲ್ಲ. ನಾವು ಅಗತ್ಯಕ್ಕಿಂತ ಹೆಚ್ಚಿನ ಆಹಾರ ತಿಂದು ಕೊಬ್ಬು ಮತ್ತು ಕ್ಯಾಲರಿ ಹೆಚ್ಚಿಸಿಕೊಳ್ಳುತ್ತೇವೆ.

ಆಹಾರ ಕ್ರಮ ನಿಯಮಿತವಾಗಿರಬೇಕು ಹಾಗೂ ಹೆಚ್ಚು ತಿನ್ನುವುದನ್ನು ಕಡೆಗಣಿಸಬೇಕು. ಕಡಿಮೆ ಆಹಾರ ತಿನ್ನಲು ಕೆಲವೊಂದು ಆಹಾರ ಕ್ರಮದ ಟಿಪ್ಸ್ ಗಳನ್ನು ಕೆಳಗೆ ನೀಡಲಾಗಿದೆ.
1. ಗಾತ್ರ ಕಿರಿದಾಗಿರಲಿ
ನಿಮಗೆ ನೀವೇ ಬಡಿಸಿಕೊಳ್ಳುತ್ತಿದ್ದರೆ ಆಗ ಸಣ್ಣ ಗಾತ್ರದ ಪಾತ್ರೆ ಮತ್ತು ಸೌಟುಗಳನ್ನು ಬಳಸಿ. ನೀವು ಬಳಸುವ ಪ್ಲೇಟ್ ಮತ್ತು ಬಟ್ಟಲುಗಳ ಬಗ್ಗೆ ಗಮನವಿರಲಿ. ಅಗತ್ಯವಿರುವ ಆಹಾರ ಹಾಕಬಹುದಾದಷ್ಟು ಮಾತ್ರ ಇದರ ಗಾತ್ರವಿರಲಿ. ದೊಡ್ಡ ಗಾತ್ರದ ಪ್ಲೇಟ್ ಗಳಿಂದ ನೀವು ಹೆಚ್ಚು ಬಡಿಸಿಕೊಂಡು ಹೆಚ್ಚಿಗೆ ತಿನ್ನಬಹುದು. ಅದೇ ರೀತಿ ಬಟ್ಟಲುಗಳು ಕೂಡ. ಕಡಿಮೆ ತಿನ್ನಲು ಇದು ಒಳ್ಳೆಯ ಆಹಾರ ಕ್ರಮದ ಟಿಪ್ಸ್.
2. ಗಮನ ಕೇಂದ್ರೀಕರಿಸಿ
ಊಟ ಮಾಡುವಾಗ ಬೇರೆ ಯಾವುದೇ ಕೆಲಸ ಮಾಡುವುದು ಬೇಡ. ಟಿವಿ ವೀಕ್ಷಿಸುತ್ತಾ, ಮೊಬೈಲ್ ನಲ್ಲಿ ಮಾತನಾಡುತ್ತಾ ಅಥವಾ ಪುಸ್ತಕ ಓದುತ್ತಾ ನೀವು ಊಟ ಮಾಡಿದರೆ ಆಗ ನಿಮಗೆ ಹಸಿವಾಗಿರುವುದಕ್ಕಿಂತ ಹೆಚ್ಚು ತಿನ್ನುಬಹುದು. ನಿಮ್ಮ ಆಹಾರದ ಮೇಲೆ ನಿಮಗೆ ಗಮನವಿಲ್ಲದ ಕಾರಣ ಹೀಗೆ ಆಗಬಹುದು ಮತ್ತು ಹಸಿವು ತೃಪ್ತಿಗೊಳ್ಳಬಹುದು. ಮುಂದಿನ ಸಲ ನೀವು ಊಟ ಮಾಡುವಾಗ ಯಾವುದೇ ಬೇರೆ ಚಟುವಟಿಕೆಗಳಲ್ಲಿ ಭಾಗಿಯಾಗಬೇಡಿ.
3. ನೀರು ಕುಡಿಯಿರಿ
ಕೆಲವೊಂದು ಸಲ ನಿಮಗೆ ಬಾಯಾರಿಕೆಯಾಗಿರಬಹುದು. ಆದರೆ ಹಸಿವಾದ ಭಾವನೆಯಾಗಿ ಏನಾದರೂ ತಿನ್ನುತ್ತೀರಿ. ಇದು ಪ್ರತಿಯೊಬ್ಬರಿಗೂ ಆಗುತ್ತದೆ. ನಿಮಗೆ ಯಾವುದೇ ಸಮಯದಲ್ಲಿ ಬಾಯಾರಿಕೆಯಾದರೆ ಆಗ ಒಂದು ಗ್ಲಾಸ್ ನೀರು ಕುಡಿಯರಿ. ಈಗಲೂ ನಿಮಗೆ ಹಸಿವಾಗುತ್ತಿದ್ದರೆ ಆಗ ಏನಾದರೂ ತಿನ್ನಿ. ಊಟದ ಮಧ್ಯೆ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮಗೆ ಕಡಿಮೆ ತಿನ್ನಲು ಸಾಧ್ಯವಾಗುತ್ತದೆ. ನೀರು ಕುಡಿಯುವುದರಿಂದ ಎಷ್ಟು ತಿನ್ನಬೇಕು ಎನ್ನುವುದನ್ನು ನೀವು ತಿಳಿದುಕೊಳ್ಳಬಹುದು. ಪ್ರತೀ ಸಲ ಊಟಕ್ಕೆ ಮೊದಲು ನೀರು ಕುಡಿಯುವುದು ಒಳ್ಳೆಯ ಆಹಾರ ಕ್ರಮದ ಟಿಪ್ಸ್.
4. ನಿಧಾನವೇ ಪ್ರಧಾನ
ಅವಸರದಲ್ಲಿ ಯಾವುದೇ ಆಹಾರ ತಿನ್ನಬೇಡಿ. ಅವಸರದಲ್ಲಿ ತಿಂದರೆ ನಿಮಗೆ ಯಾವುದೇ ನಿಯಂತ್ರಣ ಮತ್ತು ತಿನ್ನುವ ಆಹಾರದ ಪ್ರಮಾಣದ ಬಗ್ಗೆ ತಿಳಿಯುವುದಿಲ್ಲ. ನಿಧಾನವಾಗಿ ಜಗಿದು ತುಂಬಾ ಸಮಯ ತೆಗೆದುಕೊಂಡು ಊಟ ಮಾಡುವುದು ಆರೋಗ್ಯ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು. ಆಹಾರ ಸಣ್ಣಸಣ್ಣ ತುಂಡುಗಳಾಗಿ ಹೊಟ್ಟೆಯೊಳಗೆ ಹೋದರೆ ಆಗ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಆಹಾರವನ್ನು ಸರಿಯಾಗಿ ಜಗಿಯದಿದ್ದರೆ ಕೊಬ್ಬು ಸಣ್ಣ ತುಂಡಾಗಿ ಜೀರ್ಣಿಸಿಕೊಳ್ಳಲು ಸುಲಭವಾಗದು. ಕಡಿಮೆ ತಿನ್ನಲು ಸರಳ ವಿಧಾನವೆಂದರೆ ಚೆನ್ನಾಗಿ ಜಗಿಯಿರಿ.
5. ಪ್ಯಾಕೇಜ್ ಆಹಾರ ಕಡೆಗಣಿಸಿ
ಪ್ಯಾಕ್ ಮಾಡಿರುವ ಡಬ್ಬಿ ಮತ್ತು ಬಾಕ್ಸ್ ಗಳಲ್ಲಿ ಆಹಾರ ತಿನ್ನುವುದನ್ನು ಕಡೆಗಣಿಸಿ. ಇದು ನೀವು ತಿನ್ನುವ ಆಹಾರದ ಪ್ರಮಾಣಕ್ಕೆ ನಿಯಂತ್ರಣ ಹಾಕುವುದಿಲ್ಲ. ಪ್ಲೇಟ್, ಬಟ್ಟಲು ಅಥವಾ ಟಿಶ್ಯೂನಲ್ಲಿ ಹಾಕಿ ತಿನ್ನಿ. ಪ್ಯಾಕೆಟ್ ಮತ್ತು ಬಾಕ್ಸ್ ಗಳನ್ನು ಸಂಪೂರ್ಣವಾಗಿ ಕಡೆಗಣಿಸಿ. ಕಡಿಮೆ ತಿನ್ನಲು ಇದು ತುಂಬಾ ಸುಲಭ ಆರೋಗ್ಯಕ್ರಮದ ಟಿಪ್ಸ್.
ಕಡಿಮೆ ತಿನ್ನುವುದು ಎಂದರೆ ಯಾವಾಗಲೂ ಹಸಿದಿರುವುದು ಎಂದಲ್ಲ. ಆಹಾರ ಕ್ರಮದ ಟಿಪ್ಸ್ ಗಳು ನೀವು ಕಡಿಮೆ ತಿಂದು ನಿಮ್ಮ ಆಹಾರ ಕ್ರಮ ಪಾಲಿಸುವಂತೆ ಮಾಡುತ್ತದೆ ಮತ್ತು ಹೆಚ್ಚು ತಿನ್ನುವುದನ್ನು ತಡೆಯುತ್ತದೆ. ಈ ಟಿಪ್ಸ್ ಗಳನ್ನು ಬಳಸಿಕೊಂಡು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನೀವು ಆರೋಗ್ಯಕರವಾಗಿರಬಲ್ಲಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
