Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಮೈ ಬೊಜ್ಜು ಬರದಿರಲು 5 ಸರಳ ಸಲಹೆ

ಆರೋಗ್ಯವಾಗಿರಬೇಕೆಂದರೆ ದೈಹಿಕ ಶ್ರಮ ಪಟ್ಟು ಮೈಯಿಂದ ಬೆವರು ಬರಬೇಕು. ಕೆಲವೊಮ್ಮೆ ಕೂತು ತಿನ್ನಲು ಪುರುಸೊತ್ತು ಇಲ್ಲದಿರುವಾಗ ವ್ಯಾಯಾಮ ಮಾಡುವುದು ಎಲ್ಲಿಂದ? ಅಂತಹ ಸಮಯದಲ್ಲಿ ಈ ಕೆಳಗಿನ ಸರಳ ವಿಧಾನಗಳನ್ನು ಅನುಸರಿಸಿದರೆ ದೇಹದ ಸ್ವಾಸ್ಥ್ಯ ಕಾಪಾಡಬಹುದು.
1. ಕೆಲಸದ ಜಾಗ ಹತ್ತಿರವಿದ್ದರೆ ನಡೆದುಕೊಂಡು ಹೋಗುವುದು: ಕೆಲಸದ ಜಾಗ ಅರ್ಧ ಕಿ. ಮೀ ಅಥವಾ ಒಂದು ಕಿ. ಮೀ ಹತ್ತಿರವಿದ್ದರೆ ನಡೆದುಕೊಂಡ ಹೋಗುವುದು ಒಳ್ಳೆಯದು. ಅಲ್ಲದೆ ಲಿಫ್ಟ್ ಬಳಸದೆ ಮೆಟ್ಟಿಲುಗಳನ್ನು ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
2. ಊಟದ ಸಮಯ ಉಪಯೋಗಿಸಿಕೊಳ್ಳಿ: ಅರ್ಧ ಗಂಟೆ ಗಾಸಿಪ್ ಹೇಳುತ್ತಾ ಊಟ ಮಾಡಿ ಊಟದ ಸಮಯ ಕಳೆಯುವ ಬದಲು ಸ್ವಲ್ಪ ಬೇಗನೆ ತಿಂದು ಒಂದು 10 ನಿಮಿಷ ನಡೆದರೆ ಬೊಜ್ಜ ಬರದಂತೆ ತಡೆಯಬಹುದು.
3. ಮಾಮೂಲಿ ಸಮಯಕ್ಕಿಂತ ಸ್ವಲ್ಪ ಬೇಗ ಎದ್ದೇಳುವುದು: ಮಾಮೂಲಿ ಎದ್ದೇಳುವ ಸಮಯಕ್ಕಿಂತ ಸ್ವಲ್ಪ ಬೇಗ ಎದ್ದು ವ್ಯಾಯಾಮ ಮಾಡಿದ್ದೇ ಆದರೆ ಬೊಜ್ಜಿನ ಸಮಸ್ಯೆ ಕಾಡುವುದಿಲ್ಲ.
4. ಮಿನಿ ಬ್ರೇಕ್: ವೀಕೆಂಡ್ ಗಳಲ್ಲಿ ಚೆನ್ನಾಗಿ ತಿಂದು ಒಂದು ಸಿನಿಮಾ ನೋಡಿ ಬಂದು ಆ ದಿನ ಕಳೆದರೆ ಇದರಿಂದ ನಿಮ್ಮ ದೇಹಕ್ಕೆ ಯಾವುದೇ ಪ್ರಯೋಜನವಿಲ್ಲ. ಇದರ ಬದಲು ಒಂದು ಗಂಟೆ ಕಾಲ ಫ್ರೆಂಡ್ಸ್ ಗಳ ಜೊತೆ ಸೇರಿ ಸೈಕ್ಲಿಂಗ್ ಹೋಗಿ. ಇದರಿಂದ ಮನಸ್ಸಿಗೆ ಖುಷಿ, ಆರೋಗ್ಯಕ್ಕೂ ಒಳ್ಳೆಯದು.
5. ಸೂಪರ್ ಮಾರ್ಕೆಟ್ ಗೆ ಭೇಟಿ ಕೊಡುವುದು: ಸೂಪರ್ ಮಾರ್ಕೆಟ್ ಗೆ ಹೋದರೆ ಡಬಲ್ ಬೆನಿಫಿಟ್. ಸಾಮಾನುಗಳನ್ನು ಕೊಳ್ಳಬಹುದು, ಜೊತೆಗೆ ಸೂಪರ್ ಮಾರ್ಕೆಟ್ ಸುತ್ತಿ ಬರುತ್ತೇವೆ. ಇದರಿಂದ ಆರೋಗ್ಯಕ್ಕೆ ಒಳ್ಳೆಯದು.
ಈ ರೀತಿಯೆಲ್ಲಾ ಮಾಡಿದ್ದೇ ಆದರೆ ಆಕರ್ಷಕ ಮೈಕಟ್ಟನ್ನು ಉಳಿಸಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
