Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಿಂಪಲ್ ರೈನ್ ಬೋ ಡಯಟ್ ನೀವೂ ಮಾಡಿ...

ನಮ್ಮ ಆಹಾರದಲ್ಲಿ ಬಳಸುವ ಪದಾರ್ಥಗಳು ಅಥವಾ ತರಕಾರಿಯ ಬಣ್ಣಗಳು ಒಂದೊಂದು ವಿಶೇಷ ಅಂಶವನ್ನು ಹೊಂದಿರುತ್ತದೆ. ಯಾವುದೇ ನಿಯಮಗಳ ಬಂಧನವಿಲ್ಲದೆ ನಮ್ಮ ಆಹಾರ ಕ್ರಮವನ್ನು ಉತ್ತಮಪಡಿಸಿಕೊಳ್ಳಬಹುದು. ಯಾವ ತರಕಾರಿ ಸೇವಿಸಿದರೆ ಏನು ಉಪಯೋಗ, ಹೆಚ್ಚಿನ ಶ್ರಮವಿಲ್ಲದೆ ಈ ರೈನ್ ಬೋ ಡಯಟ್ ನಿಂದ ಹೇಗೆ ಸುಲಭವಾಗಿ ಪೌಷ್ಟಿಕಾಂಶವನ್ನು ಪಡೆಯಬಹುದು ಎಂದು ಇಲ್ಲಿ ತಿಳಿದುಕೊಳ್ಳಿ..
ಕಡು ನೀಲಿ: ಕಡು ನೀಲಿ ಬಣ್ಣ ಸಹಸ್ರಚಕ್ರಕ್ಕೆ ಸಂಬಂಧಿಸಿದ್ದು, ಇದು ದೇಹಕ್ಕೆ ಚೈತನ್ಯ ನೀಡುತ್ತದೆ. ಈ ಬಣ್ಣದ ನೀಲಿ ದ್ರಾಕ್ಷಿ, ಬದನೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸೇವನೆ ದೇಹಕ್ಕೆ ಚೇತೋಹಾರಿ ಇದ್ದಂತೆ.
ನೇರಳೆ: ಈ ಬಣ್ಣ ಅಗ್ಯ ಚಕ್ರಕ್ಕೆ ಸಂಬಂಧಿಸಿದ್ದು. ಅಂದರೆ ಒಳ ಅರಿವು, ವಿವೇಕ ಮತ್ತು ಅಂತಃಶಕ್ತಿಯ ಸಂಕೇತ. ಈ ಬಣ್ಣದ ನೇರಳೆ ಹಣ್ಣು ಮತ್ತು ಆಲಿವ್ ಹಣ್ಣು ಹಲವು ಔಷಧೀಯ ಗುಣಗಳನ್ನು ಹೊಂದಿದ್ದು, ಇದನ್ನು ಆಗಿಂದಾಗಲಾದರೂ ಸೇವಿಸಿದರೆ ನಮ್ಮ ಅಂತಃಶಕ್ತಿ ಹೆಚ್ಚುತ್ತದೆ.
ನೀಲಿ: ಈ ಬಣ್ಣ ಗಂಟಲಿನ ಚಕ್ರಕ್ಕೆ ಸಂಬಂಧಿಸಿದ್ದು, ಫೆಂಗ್ ಶ್ಯೂ ನಲ್ಲೂ ಇದರ ಪ್ರಸ್ತಾಪವಿದ್ದು, ನಮ್ಮ ದೇಹದಲ್ಲಿ 2/3 ರಷ್ಟು ನೀರು ಇರುವುದರಿಂದ ಇದು ಅತಿ ಮುಖ್ಯ. ಬ್ಲೂಬೆರಿ ಮತ್ತು ಪಾಲಿಫೆನಾಲ್ ಅಂಶ ಹೊಂದಿರುವ ತರಕಾರಿಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು.
ಹಸಿರು: ಹಸಿರು ಎಂದರೆ ಸಮೃದ್ಧಿ ಸಂಕೇತ ಇದು ಹೃದಯ ಚಕ್ರಕ್ಕೆ ಸಂಬಂಧಿಸಿದೆ. ಕಬ್ಬಿಣಾಂಶ ಹೆಚ್ಚಿರುವ ಹಸಿರು ತರಕಾರಿಗಳು ರಕ್ತದಲ್ಲಿ ಕೆಂಪುಕಣಗಳನ್ನು ಉತ್ಪತ್ತಿ ಮಾಡುತ್ತದೆ. ನಾರಿನಾಂಶ, ವಿಟಮಿನ್, ಮಿನರಲ್ ಗಳು ಹೆಚ್ಚಾಗಿ ಇರುವುದರಿಂದ ಸಂಧಿವಾತ ಮತ್ತು ಕ್ಯಾನ್ಸರ್ ನಂತಹ ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಅಗಾಧ ಪ್ರಮಾಣದಲ್ಲಿರುವ ಹಸಿರು ತರಕಾರಿಗಳು, ಸೊಪ್ಪುಗಳು ಇದಕ್ಕೆ ಪೂರಕ. ಅದನ್ನು ಹೆಸರಿಸುವ ಅಗತ್ಯವೇ ಇಲ್ಲ.
ಹಳದಿ: ಹಳದಿ ಬಣ್ಣ ಮಣಿಪುರ ಚಕ್ರದ ಸಂಕೇತ. ಈ ಬಣ್ಣ ನರ ಮತ್ತು ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದ್ದು. ಇದು ಮೂಳೆಗೂ ತುಂಬಾ ಅವಶ್ಯಕ. ಅರಿಶಿನ, ಜೋಳ, ಧಾನ್ಯಗಳು, ಪೈನಾಪಲ್ ಇವುಗಳು ಮೂಳೆಯನ್ನು ಗಟ್ಟಿಗೊಳಿಸುವುದಲ್ಲದೆ ಸುಲಭವಾಗಿ ಜೀರ್ಣಕ್ರಿಯೆಯನ್ನು ನಡೆಸುತ್ತದೆ.
ಕೇಸರಿ: ಈ ಬಣ್ಣ ಸ್ವದಿಷ್ಟಾನ ಚಕ್ರ. ದೇಹದ ಭಾವನೆಗಳು ಮತ್ತು ನೀರಿನ ಗುಣವನ್ನು ಸಮತೋಲನ ಮಾಡುವ ಎರಡನೇ ಚಕ್ರ ಇದಾಗಿದೆ. ಕ್ಯಾರೆಟ್, ಕಿತ್ತಳೆ, ಸಿಹಿಕುಂಬಳಕಾಯಿ ಇನ್ನೂ ಮುಂತಾದವು ರಕ್ತ ಸಂಚಲನ ಸಮತೋಲನ ಕಾಯ್ಡುಕೊಳ್ಳುವುದಲ್ಲದೆ ದೇಹಕ್ಕೆ ಸಾಕಷ್ಟು ಮಿನರಲ್ಸ್ ನೀಡುತ್ತದೆ.
ಕೆಂಪು: ಇದು ಎಲ್ಲದಕ್ಕೂ ಮೂಲ ಚಕ್ರ. ಹಸಿವು ಮತ್ತು ದೈಹಿಕ ಶಕ್ತಿಯನ್ನು ಇದು ಪ್ರತಿಬಿಂಬಿಸುತ್ತದೆ. ಟೊಮೊಟೊ, ಸ್ಟ್ರಾಬೆರಿ, ಸೇಬು, ದಾಳಿಂಬೆ ಇದಕ್ಕೆ ಸೇರುತ್ತದೆ. ಇದು ಜೀವಕಣಗಳ ಪುನರ್ ಸೃಷ್ಟಿಗೆ ಸಹಾಯ ಮಾಡುತ್ತದೆ.
ಈ ರೈನ್ ಬೋ ಡಯಟ್ ತುಂಬಾ ಸಿಂಪಲ್. ಯಾವುದೇ ನಿಯಮಗಳ ಪಾಲನೆಯಿಲ್ಲದೆ ಪಾಲಿಸಬಹುದಾದ ಈ ಆಹಾರಕ್ರಮ ಬಾಯಿಗೆ ಹಿತ, ದೇಹಕ್ಕೆ ತಂಪು.. ದಿನನಿತ್ಯವೂ ಇದರಲ್ಲಿನ ಒಂದು ಅಂಶವಿರುವ ಒಂದೊಂದು ತರಕಾರಿ ಅಥವಾ ಹಣ್ಣನ್ನು ಸೇವನೆ ಮಾಡುತ್ತಾ ಬಂದರೆ ಆರೋಗ್ಯ ಸಮತೋಲನ ಕಾಯ್ದುಕೊಳ್ಳುತ್ತದೆ. ಶ್ರಮವೇ ಇಲ್ಲದೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
