ಮಧುಮೇಹ ನಿಯಂತ್ರಣ ಮತ್ತು ತೂಕ ಇಳಿಕೆಗೆ-ಹಾಗಲಕಾಯಿ ಜ್ಯೂಸ್ ಕುಡಿಯಿರಿ

Subscribe to Boldsky

ನಮ್ಮಲ್ಲಿ ಹೆಚ್ಚಿನವರು ಮೆಚ್ಚದೇ ಇರುವ ತರಕಾರಿಯಾದ ಹಾಗಲಕಾಯಿ ವಾಸ್ತವವಾಗಿ ಒಂದು ಹಣ್ಣು ಎಂದು ನಿಮಗೆ ಗೊತ್ತಿತ್ತೇ? ಟೊಮಾಟೋ ತರಹವೇ ಸಸ್ಯಶಾಸ್ತ್ರದ ಪ್ರಕಾರ ಹಾಗಲಕಾಯಿಯೂ ಒಂದು ಹಣ್ಣು ಆಗಿದೆ, ಆದರೆ ನಾವು ಇವುಗಳನ್ನು ತರಕಾರಿಯ ರೂಪದಲ್ಲಿ ಬಳಸುತ್ತಿದ್ದೇವೆ. ಕಹಿಯಾದರೂ ಇದರ ಔಷಧೀಯ ಗುಣಗಳನ್ನು ಕಂಡ ನಮ್ಮ ಹಿರಿಯರು ಇದನ್ನು ಹಲವಾರು ಕಾಯಿಲೆಗಳಿಗೆ ಔಷಧಿಯಂತೆ ಬಲಸುತ್ತಾ ಬಂದಿದ್ದಾರೆ. ಇಂದಿನ ಲೇಖನದಲ್ಲಿ ಹಾಗಲಕಾಯಿಯ ರಸವನ್ನು ಸೇವಿಸುವ ಮೂಲಕ ಮಧುಮೇಹವನ್ನು ಹೇಗೆ ನಿಯಂತ್ರಣದಲ್ಲಿರಿಸಬಹುದು ಎಂಬುದನ್ನು ನೋಡೋಣ.

ಮಧುಮೇಹಕ್ಕೆ ಹೇಳಿ ಮಾಡಿಸಿದಂತಹ ಔಷಧಿ ಮತ್ತು ಆಹಾರವೆಂದರೆ ಹಾಗಲಕಾಯಿ. ಪ್ರತಿದಿನ ಮುಂಜಾನೆದ್ದ ಬಳಿಕ ಪ್ರಥಮ ಆಹಾರವಾಗಿ ಹಾಗಲಕಾಯಿಯ ತಾಜಾ ರಸವನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಿ ಮಧುಮೇಹಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ವಿಶೇಷವಾಗಿ ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಅಧಿಕ ಕೊಲೆಸ್ಟ್ರಾಲ್ ಇತ್ಯಾದಿ.

how to make bitter gourd juice for diabetes

ಹಾಗಲಕಾಯಿಯ ರುಚಿ ನಮಗೆ ಹಿಡಿಸದೇ ಇದ್ದರೂ ಇದರಲ್ಲಿರುವ ಅಮೂಲ್ಯ ಪೋಷಕಾಂಶಗಳು ನಮ್ಮ ದೇಹಕ್ಕೆ ಅತ್ಯಮೂಲ್ಯವಾಗಿವೆ. ಕಬ್ಬಿಣ, ಮೆಗ್ನೇಶಿಯಂ, ಪೊಟ್ಯಾಶಿಯಂ, ವಿಟಮಿನ್ ಸಿ ಸಹಿತ ಹಲವರು ಪೋಷಕಾಂಶಗಳು ಇದರಲ್ಲಿವೆ. ಇದರ ಹೊರತಾಗಿ ಅತ್ಯುತ್ತಮ ಪ್ರಮಾಣದ ಕರಗುವ ನಾರು, ದುಪ್ಪಟ್ಟು ಪ್ರಮಾಣದ ಕ್ಯಾಲ್ಸಿಯಂ, ಪೊಟ್ಯಾಶಿಯಂ ಹಾಗೂ ಅಧಿಕ ಬೀಟಾ ಕ್ಯಾರೋಟೀನ್ ಮಟ್ಟ ಹಾಗಲಕಾಯಿಯ ರಸದಲ್ಲಿದೆ.

ಮಧುಮೇಹಕ್ಕೆ ಹಾಗಲಕಾಯಿಯ ರಸ ಹೇಗೆ ಒಳ್ಳೆಯದು ಮಾಡುತ್ತದೆ?

ಹಾಗಲಕಾಯಿಯಲ್ಲಿರುವ ಮೂರು ಪ್ರಮುಖ ಗುಣಗಳು ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ. ಪ್ರಮುಖವಾಗಿ ಇದರಲ್ಲಿರುವ ಕ್ಯಾರಂಟಿನ್ ಎಂಬ ಪೋಷಕಾಂಶ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ, ವೈಸೀನ್ ಎಂಬ ಪೋಷಕಾಂಶಕ್ಕೆ (polypeptide-P) ಇನ್ಸುಲಿನ್ ಗೆ ಸಮನಾದ ಗುಣಗಳಿವೆ. ಇವೆರಡೂ ಗುಣಗಳು ಟೈಪ್ 2 ಮಧುಮೇಹಿಗಳ ಸಹಿತ ಎಲ್ಲಾ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಟೈಪ್ 2 ಮಧುಮೇಹಿಗಳ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿಯಾದರೂ ಇದನ್ನು ದೇಹದ ಜೀವಕೋಶಗಳು ಬಳಸಿಕೊಳ್ಳಲು ವಿಫಲವಾಗುವ ಕಾರಣ ರಕ್ತದಲ್ಲಿರುವ ಗ್ಲುಕೋಸ್ ಬಳಕೆಯಾಗದೇ ಹೊರಹೋಗುತ್ತದೆ. ಟೈಪ್ 1 ಮಧುಮೇಹಿಗಳ ದೇಹದಲ್ಲಿ ಅಗತ್ಯ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗುವುದೇ ಇಲ್ಲ. ಹಾಗಾಗಿ ಗ್ಲುಕೋಸ್ ಬಳಕೆಯಾಗಲು ಸಾಧ್ಯವಾಗದೇ ಹೋಗುತ್ತದೆ.

Ethnopharmacolgy ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಿಯಮಿತವಾಗಿ ಸುಮಾರು 2000 ಮಿಲಿಗ್ರಾಂ ನಷ್ಟು ಹಾಗಲಕಾಯಿಯ ರಸವನ್ನು ಸೇವಿಸುತ್ತಾ ಬಂದ ಟೈಪ್ 2 ಮಧುಮೇಹಿಗಳ ರಕ್ತದಲ್ಲಿ ಗ್ಲುಕೋಸ್ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೇ ಹಾಗಲಕಾಯಿಯಲ್ಲಿರುವ ಸಸ್ಯಜನ್ಯ ಇನ್ಸುಲಿನ್ ಟೈಪ್ 1 ಮಧುಮೇಹಿಗಳ ರಕ್ತದಲ್ಲಿ ಇನ್ಸುಲಿನ್ ಬದಲಿಯಾಗಿ ಕಾರ್ಯನಿರ್ವಹಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟ ಇಳಿಯಲು ನೆರವಾಗುತ್ತದೆ. Chemistry and Biology ಎಂಬ ಇನ್ನೊಂದು ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಹಾಗಲಕಾಯಿಯ ಕಹಿತನ ಮಧುಮೇಹಿಗಳ ರಕ್ತದಿಂದ ಗ್ಲೂಕೋಸ್ ಅನ್ನು ಬಳಸಿಕೊಳ್ಳಲು ನೆರವಾಗುವ ಮೂಲಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಹಾಗೂ ಗ್ಲೈಸೆಮಿಕ್ ಕೋಷ್ಟಕವನ್ನು ಸಹಾ ಉತ್ತಮಗೊಳಿಸುತ್ತದೆ.

ಮಧುಮೇಹಿಗಳು ದಿನಕ್ಕೆಷ್ಟು ಪ್ರಮಾಣದ ಹಾಗಲಕಾಯಿಯ ರಸ ಸೇವಿಸಬೇಕು?

ಉತ್ತಮ ಆರೋಗ್ಯಕ್ಕಾಗಿ ಮಧುಮೇಹಿಗಳು ನಿತ್ಯವೂ ಐವತ್ತರಿಂದ ನೂರು ಮಿಲಿಲೀಟರ್ ತಾಜಾ ಹಾಗಲಕಾಯಿಯ ರಸವನ್ನು ಸೇವಿಸಲು ಸಲಹೆ ಮಾಡಲಾಗುತ್ತದೆ. ಅಂದರೆ ಸುಮಾರು 900 ಮಿಲಿಗ್ರಾಂ ನಷ್ಟು ಹಾಗಲಕಾಯಿಯ ಸಾಂದ್ರೀಕೃತ ರಸ ಅಥವಾ 10-50 ml/day tincture ನಷ್ಟು ಔಷಧೀಯ ಪ್ರಮಾಣದಷ್ಟು ಸೇವಿಸಲು ವೈದ್ಯರು ಸಲಹೆ ಮಾಡುತ್ತಾರೆ. ಹಾಗಲಕಾಯಿಯ ರಸದ ಸೇವನೆಯ ಇತರ ಪ್ರಯೋಜನಗಳು:

1. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ:

ಹಾಗಲಕಾಯಿಯಲ್ಲಿರುವ ಉರಿಯೂತ ನಿವಾರಕ ಗುಣ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಇದು ಹೃದಯಾಘಾತ ಮತ್ತು ಸ್ತಂಭನದ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ. ಅಲ್ಲದೇ ಹಾಗಲಕಾಯಿ ರಕ್ತದ ಒತ್ತಡವನ್ನೂ ಆರೋಗ್ಯಕರ ಮಿತಿಗಳಲ್ಲಿರಿಸಲು ನೆರವಾಗುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಸಮೃದ್ದ ಪ್ರಮಾಣದಲ್ಲಿರುವ ಕಾರಣ ದೇಹಕ್ಕೆ ಆಗಮಿಸುವ ಸೋಡಿಯಂ ಲವಣಗಳ ಪ್ರಭಾವ ರಕ್ತದೊತ್ತಡದ ಮೇಲೆ ಆಗದೇ ಇರುವ ಮೂಲಕ ಇದು ಸಾಧ್ಯವಾಗುತ್ತದೆ.

2. ಯಕೃತ್ ಅನ್ನು ಸ್ವಚ್ಛಗೊಳಿಸುತ್ತದೆ

ಹಾಗಲಕಾಯಿಯ ರಸದ ಸೇವನೆಯಿಂದ ಜೀರ್ಣಾಂಗಗಳು ಸ್ವಚ್ಛಗೊಳ್ಳುತ್ತವೆ ಹಾಗೂ ಯಕೃತ್ ಗೆ ಸಂಬಂಧಿಸಿದ ಹಲವಾರು ತೊಂದರೆಗಳಿಂದ ರಕ್ಷಿಸುತ್ತದೆ. ಒಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಹಾಗಲಕಾಯಿ ರಸದ ಸೇವನೆಯಿಂದ ಯಕೃತ್ ನಲ್ಲಿ ಆಂಟಿ ಆಕ್ಸಿಡೆಂಟು ಚಟುವಟಿಕೆಗಳು ಇನ್ನಷ್ಟು ಬಲಗೊಳ್ಳುತ್ತವೆ.

3. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಹಾಗಲಕಾಯಿ ರಸದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣ ಹಲವಾರು ಬ್ಯಾಕ್ಟೀರಿಯಾ ಮತ್ತು ವೈರಸ್ ನಿರೋಧಕ ಗುಣ ಹೊಂದಿದ್ದು ಅಲರ್ಜಿಗಳನ್ನು ಗುಣಪಡಿಸುತ್ತದೆ ಹಾಗೂ ಕಣ್ಣಿನ ದೃಷ್ಟಿಯನ್ನೂ ಉತ್ತಮಗೊಳಿಸುತ್ತದೆ. ಅಲ್ಲದೇ ಇದರ ಪ್ರಬಲ ಆಂಟಿ ಆಕ್ಸಿಡೆಂಟ್ ಗಳು ಡಿಎನ್ಎ ಹಾನಿ ಎಸಗುವ ಆಕ್ಸಿಜನ್ ರ್‍ಯಾಡಿಕಲ್ ಎಂಬ ಕಣಗಳ ಮೂಲಕ ಆಗುವ ಹಾನಿಯನ್ನು ತಡೆಯುತ್ತವೆ ಹಾಗೂ ಜೀವಕೋಶಗಳು ಸೂಕ್ತವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಈ ರಸದಲ್ಲಿರುವ ಕ್ಯಾನ್ಸರ್ ನಿರೋಧಕ ಮತ್ತು ಗಡ್ಡೆಯಾಗುವುದನ್ನು ತಡೆಯುವ ಗುಣಗಳು ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್ ಆವರಿಸುವುದರಿಂದ ತಡೆಯುತ್ತದೆ.

4. ತೂಕ ಇಳಿಯಲು ನೆರವಾಗುತ್ತದೆ

ಹಾಗಲಕಾಯಿಯ ರಸದಲ್ಲಿ ವಿಟಮಿನ್ನುಗಳು, ಖನಿಜಗಳು ಹಾಗೂ ಕರಗುವ ನಾರು ಸಮೃದ್ದವಾಗಿದೆ. ಈ ಕರಗುವ ನಾರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಅಲ್ಲದೇ ವಿಟಮಿನ್ನು ಗಳು ಮತ್ತು ಖನಿಜಗಳು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಅಲ್ಲದೇ ಇದರಲ್ಲಿ ಅತಿ ಕಡಿಮೆ ಇರುವ ಕ್ಯಾಲೋರಿಗಳು, ಕೊಬ್ಬು ಮತ್ತು ಕಾರ್ಬೋಹೈಡ್ರೆಟುಗಳು ತೂಕ ಇಳಿಸಲು ನೆರವಾಗುತ್ತವೆ.

5. ಕಣ್ಣಿನ ದೃಷ್ಟಿ ಉತ್ತಮಗೊಳಿಸುತ್ತದೆ

ನಿತ್ಯವೂ ಹಾಗಲಕಾಯಿಯ ರಸವನ್ನು ಸೇವಿಸುವ ಮೂಲಕ ದೃಷ್ಟಿಗೆ ಸಂಬಂಧಿಸಿದ ತೊಂದರೆಗಳಾದ ಕ್ಯಾಟರಾಕ್ಟ್ ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ. ಈ ರಸದಲ್ಲಿರುವ ಬೀಟ್ಯಾ ಕ್ಯಾರೋಟೀನ್ ಮತ್ತು ವಿಟಮಿನ್ ಎ ಕಣ್ಣುಗಳಿಗೆ ಉತ್ತಮವಾಗಿ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಅಲ್ಲದೇ ಕಣ್ಣುಗಳ ಸುತ್ತ ಮೂಡುವ ಕಪ್ಪು ವರ್ತುಲಗಳನ್ನು ಸರಿಪಡಿಸಲು ಹಾಗಲಕಾಯಿಯ ರಸ ನೆರವಾಗುತ್ತದೆ.

6. ತ್ವಚೆ ಮತ್ತು ಕೂದಲಿನ ಆರೋಗ್ಯ ವೃದ್ಧಿಸುತ್ತದೆ

ಹಾಗಲಕಾಯಿಯ ರಸದಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ಚರ್ಮದ ಸೆಳೆತ ಹೆಚ್ಚಿಸಿ ವೃದ್ದಾಪ್ಯದ ಚಿಹ್ನೆಗಳು ಮೂಡುವುದನ್ನು ತಡವಾಗಿಸುತ್ತದೆ ಹಾಗೂ ಸೂಕ್ಷ್ಮ ನೆರಿಗೆಗಳು ಮೂಡುವುದನ್ನು ತಡೆಯುತ್ತದೆ. ಅಲ್ಲದೇ ಚರ್ಮದ ಮೇಲೆ ಮೂಡುವ ಮೊಡವೆ, ಎಕ್ಸಿಮಾ, ಸೋರಿಯಾಸಿಸ್ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ ಹಾಗೂ ಸೂರ್ಯನ ಹಾನಿಕಾರಕ ಅತಿನೇರಳೆ ಕಿರಣಗಳಿಂದಲೂ ರಕ್ಷಿಸುತ್ತದೆ. ತಲೆಯ ಚರ್ಮಕ್ಕೆ ಹಾಗಲಕಾಯಿಯ ರಸವನ್ನು ಹಚ್ಚಿಕೊಳ್ಳುವ ಮೂಲಕ ಕೂದಲು ಉದುರುವುದನ್ನು ಹಾಗೂ ಕೂದಲ ತುದಿಗಳ ಸೀಳುವಿಕೆ ಹಾಗೂ ಕೂದಲು ದೃಢವಾಗುವುದನ್ನು ತಡೆಯುತ್ತದೆ.

ಮಧುಮೇಹಿಗಳಿಗಾಗಿ ಹಾಗಲಕಾಯಿಯ ರಸವನ್ನು ತಯಾರಿಸುವ ವಿಧಾನ:

ಅಗತ್ಯವಿರುವ ಸಾಮಾಗ್ರಿಗಳು:

• 1-2 ತಾಜಾ ಹಾಗಲಕಾಯಿಗಳು

• ½ ಲಿಂಬೆ

• ¼ ಚಿಕ್ಕ ಚಮಚ ಅರಿಶಿನ ಪುಡಿ

• ಚಿಟಿಕೆಯಷ್ಟು ಉಪ್ಪು

ವಿಧಾನ:

* ಹಾಗಲಕಾಯಿಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ಸುಲಿಯಿರಿ

*ಇದನ್ನು ಸೀಳಿ ಒಳಗಿನ ಬೀಜ ಮತ್ತು ಸಡಿಲವಾದ ತಿರುಳನ್ನು ನಿವಾರಿಸಿ.

* ಒಂದು ಬೋಗುಣಿಯಲ್ಲಿ ನೀರು ತುಂಬಿಸಿ ಇದಕ್ಕೆ ಕೊಂಚ ಉಪ್ಪು ಬೆರೆಸಿ ಈ ನೀರಿನಲ್ಲಿ ಹತ್ತು ನಿಮಿಷಗಳ ಕಾಲ ನೆನೆಸಿಡಿ

*ಬಳಿಕ ನೀರಿನಿಂದ ಹೊರತೆಗೆದು ಜ್ಯೂಸರ್ ನಲ್ಲಿ ಹಾಕಿ ಕೊಂಚವೇ ನೀರು ಬೆರೆಸಿ ಕಡೆಯಿರಿ.

* ಈ ದ್ರವವನ್ನು ಒಂದು ಲೋಟಕ್ಕೆ ಬಗ್ಗಿಸಿಕೊಳ್ಳಿ, ಇದಕ್ಕೆ ಕೊಂಚ ಉಪ್ಪು, ಲಿಂಬೆರಸ ಮತ್ತು ಉಪ್ಪು ಬೆರೆಸಿ ಚೆನ್ನಾಗಿ ಕಲಕಿ ಕುಡಿಯಿರಿ.ರುಚಿಗಾಗಿ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿ ಮತ್ತು ಹಸಿಶುಂಠಿಯನ್ನು ಬೆರೆಸಿ ಇದರ ಕಹಿತನವನ್ನು ಕಡಿಮೆ ಮಾಡಬಹುದು.

ಎಚ್ಚರಿಕೆ:

ಈ ರಸದ ಪ್ರಮಾಣ ಮಿತವಾಗಿ ಸೇವಿಸಬೇಕು. ಅಧಿಕ ಪ್ರಮಾಣದ ಸೇವನೆಯಿಂದ ಹೊಟ್ಟೆಯಲ್ಲಿ ನೋವು ಮತ್ತು ಅತಿಸಾರ ಎದುರಾಗಬಹುದು. ಗರ್ಭವತಿಯರು ಅತಿ ಕಡಿಮೆ ಪ್ರಮಾಣದಲ್ಲಿ ಮಾತ್ರವೇ ಸೇವಿಸಬೇಕು, ಏಕೆಂದರೆ ಇದು ಗರ್ಭಕೋಶಕ್ಕೆ ಪ್ರಚೋದನೆ ನೀಡುವ ಮೂಲಕ ಅವಧಿಪೂರ್ವ ಪ್ರಸವವಾಗುವ ಸಂಭವವಿದೆ.

ಒಂದು ವೇಳೆ ನಿಮಗೆ ಈ ಲೇಖನ ಇಷ್ಟವಾದರೆ ನಿಮ್ಮ ಆಪ್ತರು, ಸ್ನೇಹಿತರೊಂದಿಗೆ ಲೇಖನದ ಕೊಂಡಿಯನ್ನು ಹಂಚಿಕೊಳ್ಳಿ.

ಹಾಗಲಕಾಯಿ ಜ್ಯೂಸ್‌ನಲ್ಲಿದೆ 15 ಆರೋಗ್ಯಕರ ಪ್ರಯೋಜನಗಳು

For Quick Alerts
ALLOW NOTIFICATIONS
For Daily Alerts

    English summary

    Bitter Gourd Juice For Diabetes And Weight Loss

    Did you know that karela or bitter gourd is not a vegetable but a fruit? Karela is also known as bitter melon which is used for consumption and for various medicinal purposes. In this article, we will discuss about karela or bitter gourd juice for diabetes. Bitter gourd juice is the best natural medicine for diabetes. And drinking it early in the morning on an empty stomach helps lower the blood sugar levels and reduces the possibility of diabetes-related health complications like weight gain, high blood pressure, heart disease, high cholesterol, and so on.
    Story first published: Tuesday, August 14, 2018, 13:30 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more