For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗೆ ಇನ್ಸುಲಿನ್ ಬಳಕೆ ಎಬಿಸಿಡಿ

By Dr Arpandev Bhattacharyya
|
Insulin dosage diabetes-
ಪ್ರತಿದಿನ ಇನ್ಸುಲಿನ್ ಅನ್ನು ಎಷ್ಟು ಬಾರಿ ತೆಗೆದುಕೊಳ್ಳಬೇಕು?

ಇನ್ಸುಲಿನ್ ಪ್ರಮಾಣ ಹಾಗೂ ತೆಗೆದುಕೊಳ್ಳಬೇಕಾದ ಅವಧಿಯನ್ನು ವೈದ್ಯರೇ ನಿರ್ಧರಿಸಿ ಸಲಹೆ ನೀಡುತ್ತಾರೆ, ಮೂರು ಬಾರಿ ಅಲ್ಪ ಪ್ರಮಾಣದ ಇನ್ಸುಲಿನ್ ಅನ್ನು ಊಟಕ್ಕೆ ಮೊದಲು ಸೇವಿಸಬೇಕು ಹಾಗೂ ಮಲಗುವ ಮುನ್ನ ಹೆಚ್ಚು ಪ್ರಮಾಣದ ಇನ್ಸುಲಿನ್ ಅನ್ನು ತೆಗೆದುಕೊಳ್ಳಬೇಕು.

ಈ ಮೂಲಕ ದಿನವೊಂದಕ್ಕೆ ನಾಲ್ಕು ಬಾರಿ ಇಂಜೆಕ್ಷನ್ ತೆಗೆದುಕೊಳ್ಳಬೇಕು. ಆದರೆ, ಈಗ ಮಿಶ್ರಣ ರೂಪದ ಇನ್ಸುಲಿನ್ ಲಭ್ಯವಿದ್ದು ದಿನಕ್ಕೆ ಎರಡು ಬಾರಿ ಇಂಜೆಕ್ಷನ್ ಚುಚ್ಚಿಕೊಂಡರೆ ಸಾಕು. ಬೆಳಗ್ಗಿನ ತಿಂಡಿ ಹಾಗೂ ರಾತ್ರಿ ಊಟಕ್ಕೂ ಮೊದಲು ತೆಗೆದುಕೊಳ್ಳಬೇಕು.

ಇನ್ಸುಲಿನ್ ಹಾಗೂ ಮಾತ್ರೆ ಎರಡನ್ನೂ ಸೇವಿಸುತ್ತಿದ್ದರೆ, ಒಮ್ಮೆ ಮಾತ್ರ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳಬಹುದು. ಬೆಳಗಿನ ಉಪಾಹಾರಕ್ಕಿಂತ ಮೊದಲು ಇನ್ಸುಲಿನ್ ಪಡೆಯುವುದಕ್ಕಿಂತ ರಾತ್ರಿ ಊಟಕ್ಕೆ ಮೊದಲು ಇನ್ಸುಲಿನ್ ತೆಗೆದುಕೊಳ್ಳುವುದು ಉತ್ತಮ. ಇದೀಗ 24 ಗಂಟೆಗಳ ಸಕ್ರಿಯವಾಗಿರಬಲ್ಲ ಇನ್ಸುಲಿನ್ ಕೂಡಾ ಲಭ್ಯವಿದೆ.


ನನಗೆ ಟೈಪ್ 2 ಡಯಾಬಿಟಿಸ್ ಇದೆ. ಇನ್ಸುಲಿನ್ ನಾನು ತಪ್ಪದೇ ತೆಗೆದುಕೊಳ್ಳಬೇಕಾ?

ಈ ರೀತಿ ಯೋಚಿಸುವುದರಲ್ಲಿ ಅರ್ಥವಿಲ್ಲ. ಮೇಲಿನ ಪ್ರಶ್ನೆಗೆ ಉತ್ತರಿಸಿದಂತೆ,ಇನ್ಸುಲಿನ್ ಸೇವನೆಯಿಂದ ಪ್ಯಾಂಕ್ರಿಯಾಸ್ ನ ಕಾರ್ಯಕ್ಷಮತೆ ಹೆಚ್ಚಳ ವಾಗುತ್ತದೆ. ಡಯಾಬಿಟಿಸ್ ನಿಯಂತ್ರಣದಲ್ಲಿದ್ದರೆ ಇನ್ಸುಲಿನ್ ಸೇವನೆ ಪ್ರಮಾಣವೂ ಕಮ್ಮಿಯಾಗುತ್ತದೆ. ಮಾತ್ರೆ ಸೇವನೆಯನ್ನು ಕೊಂಚ ಕಾಲ ನಿಲ್ಲಿಸಿ ಪರೀಕ್ಷಿಸಬಹುದು. ಅದು ಹೆಚ್ಚಿನ ಪರಿಣಾಮ ಬೀರದಿದ್ದರೆ ಇನ್ಸುಲಿನ್ ಪ್ರಮಾಣ ಹೆಚ್ಚಿಸಬಹುದು. ಒಟ್ಟಿನಲ್ಲಿ ಇನ್ಸುಲಿನ್ ಸೇವನೆ ಅಗತ್ಯದ ಅರಿವಿರಬೇಕು.

ಇನ್ಸುಲಿನ್ ಜೊತೆಜೊತೆಗೆ ಮಾತ್ರೆ ಸೇವಿಸಬಹುದೇ?

ತೊಂದರೆ ಏನಿಲ್ಲ. ಮಾತ್ರೆ ಜೊತೆಗೆ ಇನ್ಸುಲಿನ್ ತೆಗೆದುಕೊಳ್ಳಬಹುದು. ಮಾತ್ರೆ ಹಾಗೂ ಇನ್ಸುಲಿನ್ ಎರಡನ್ನೂ ತೆಗೆದುಕೊಳ್ಳುವುದರಿಂದ ಇನ್ಸುಲಿನ್ ಸೇವನೆ ಪ್ರಮಾಣ ತಗ್ಗಿಸಬಹುದು. ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ದಿನವೊಂದಕ್ಕೆ ಒಮ್ಮೆ ಮಾತ್ರ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಂಡರೆ ಸಾಕಾಗುತ್ತದೆ. ಈ ರೀತಿ ಒಟ್ಟಿಗೆ ಸೇವಿಸುವ ವಿಧಾನ ವಿಶ್ವದೆಲ್ಲೆಡೆ ಬಳಕೆಯಲ್ಲಿದ್ದು ಇದನ್ನು BIDS(Bedtime Insulin Daytime Sulfonyluria) regimen ಎಂದು ಕರೆಯಲಾಗುತ್ತದೆ.

ಇನ್ಸುಲಿನ್ ಸರಿ ಪ್ರಮಾಣ ಯಾವುದು?

ಸರಿಯಾದ ಇನ್ಸುಲಿನ್ ಡೋಸ್ ಸ್ಪಷ್ಟಪಡಿಸಲು ಕಷ್ಟ. ನಿಮ್ಮ ದೇಹಕ್ಕೆ ಅಗತ್ಯವಾದ ಪ್ರಮಾಣಕ್ಕೆ ಅನುಗುಣವಾಗಿ ತೆಗೆದುಕೊಳ್ಳಬೇಕು. ಒಟ್ಟಿನಲ್ಲಿ ನಿಯಂತ್ರಣ ಮುಖ್ಯ. ಮುಕ್ತ ಮನಸ್ಸಿನಿಂದ ಸರಿಯಾದ ಕ್ರಮವನ್ನು ಅನುಸರಿಸಿ ವೈದ್ಯರ ಸಲಹೆಯಂತೆ ಇನ್ಸುಲಿನ್ ಸೇವನೆ ಮಾಡುವುದು ಮುಖ್ಯ.

ಇನ್ಸುಲಿನ್ ಪ್ರಮಾಣಕ್ಕೆ ನಾನು ಹೇಗೆ ಹೊಂದಿಕೊಳ್ಳಬಲ್ಲೇ?

ಹೊಂದಾಣಿಕೆ ಬಹುಮುಖ್ಯ. ನಿಮ್ಮ ದೇಹಪ್ರಕೃತಿಯ ಬಗ್ಗೆ ನಿಮಗೆ ಅರಿವಿರಬೇಕು. ಅದಕ್ಕೆ ಅನುಗುಣವಾಗಿ ವೈದ್ಯರ ಡೋಸೆಜ್ ತನ್ನ ಕ್ರಿಯೆಯನ್ನು ಆರಂಭಿಸಲು ಅವಕಾಶ ನೀಡಬೇಕು. 2 ರಿಂದ 3 ಯೂನಿಟ್ ಗಳಷ್ಟು ಮೊದಮೊದಲು ತೆಗೆದುಕೊಂಡರೆ ಸಾಕು. ಇನ್ಸುಲಿನ್ ಡೋಸೆಜ್ ನಲ್ಲಿ ಬದಲಾವಣೆ ಮಾಡಬೇಕಾದಲ್ಲಿ ನಿಧಾನ ಗತಿಯನ್ನು ಅನುಸರಿಸಬೇಕು.

X
Desktop Bottom Promotion