Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬೇಸಿಗೆಯಲ್ಲಿ ಸುಖ ನಿದ್ದೆಗೆ ಆಯುರ್ವೇದ ಟಿಪ್ಸ್, ಮಲಗಿದ ತಕ್ಷಣ ಕಣ್ಣಿಗೆ ನಿದ್ದೆ ಹತ್ತುವುದು ನೋಡಿ
ಹಾಸಿಗೆ ಕಂಡ ತಕ್ಷಣ ನಿದ್ದೆ ಮಾಡುತ್ತಾರಲ್ಲಾ ಅವರು ನಿಜವಾಗಲೂ ಪುಣ್ಯವಂತರು. ತಲೆದಿಂಬಿನಲ್ಲಿ ತಲೆ ಇಟ್ಟ 5 ನಿಮಿಷಕ್ಕೆಲ್ಲಾ ಗಾಢ ನಿದ್ದೆಗೆ ಜಾರಿ ಬಿಡುತ್ತಾರೆ.
ಆದರೆ ಇನ್ನು ಕೆಲವರು ಮಾತ್ರ ನಿದ್ದೆಯಿಲ್ಲದೆ ಒದ್ದಾಡುತ್ತಾರೆ. ಮಧ್ಯರಾತ್ರಿ ಕಳೆದರೂ ನಿದ್ದೆ ಬರುವುದಿಲ್ಲ ಹೀಗೆ ಒದ್ದಾಡಿ ಒದ್ದಾಡಿ ಮುಂಜಾನೆ ಹೊತ್ತಿಗೆ ಸ್ವಲ್ಪ ನಿದ್ದೆ ಬರುತ್ತದೆ.

ಇದರಿಂದಾಗಿ ಸಾಕಷ್ಟು ನಿದ್ದೆ ಸಾಕಾಗುವುದಿಲ್ಲ. ಅದರಲ್ಲೂ ಸೆಕೆಯಲ್ಲಿ ನಿದ್ದೆ ಸುಲಭವಾಗಿ ಬರುವುದಿಲ್ಲ.
ನಿದ್ದೆ ಕಡಿಮೆಯಾದಾಗ ಆರೋಗ್ಯ ಸಮಸ್ಯೆ ಕೂಡ ಹೆಚ್ಚಾಗುವುದು. ನಿದ್ದೆ ಕಡಿಮೆಯಾದಾಗ ನಮಗೆ ಸುಸ್ತು ಹೆಚ್ಚಾಗುವುದು, ಕೆಲಸ ಕಾರ್ಯಗಳಲ್ಲಿ ಗಮನ ಕೊಡಲು ಸಾಧ್ಯವಾಗುವುದಿಲ್ಲ. ದೇಹದಲ್ಲಿ ಹಾರ್ಮೋನ್‌ಗಳ ಬದಲಾವಣೆಯಾಗುತ್ತದೆ. ಇದರಿಂದಾಗಿ ನಿದ್ದೆ ತುಂಬಾನೇ ಅವಶ್ಯ. ಅದರಲ್ಲೂ ದಿನದಲ್ಲಿ 8 ಗಂಟೆ ನಿದ್ದೆ ತುಂಬಾನೇ ಅವಶ್ಯಕ.
ನಿಮಗೆ ರಾತ್ರಿ ಸರಿಯಾಗಿ ನಿದ್ದೆ ಬರದಿದ್ದರೆ ಈ ಎಣ್ಣೆಯ ಮಸಾಜ್ ನಿಮಗೆ ಸುಖ ನಿದ್ದೆಗೆ ಸಹಾಯ ಮಾಡುತ್ತೆ:
ನಾಲ್ಪಾಮಾರ್ದಿ ಥೈಲ (Nalpamaradi Thailam)
ಇದು ನಿಮಗೆ ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ.
ಈ ಎಣ್ಣೆಯನ್ನು ಸ್ನಾನಕ್ಕೆ ಮೊದಲು ಹಚ್ಚಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ
ಈ ಎಣ್ಣೆಯ ಸ್ನಾನದಿಂದ ದೊರೆಯುವ ಪ್ರಯೋಜನಗಳು
* ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತದೆ
* ತ್ವಚೆಯನ್ನು ಮೃದುವಾಗಿಸುತ್ತದೆ
* ಸನ್ ಟ್ಯಾನ್ ಹೋಗಲಾಡಿಸಬಹುದು.
ನೀಲಾಭೃಂಗಾದಿ ತೈಲ
ನೀಲಾಭೃಂಗಾದಿ ತೈಲ ತಲೆಗೆ ಹಚ್ಚಿ ಮಸಾಜ್ ಮಾಡಿ ಇದರಿಂದ ತಲೆಗೆ ತಂಪು ಸಿಗುವುದು.
ಈ ಎಣ್ಣೆಯನ್ನು ಹಚ್ಚುವುದರಿಂದ ದೊರೆಯುವ ಪ್ರಯೋಜನಗಳು
* ತಲೆ ಬುಡದಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತದೆ
* ತಲೆಹೊಟ್ಟು ತಡೆಗಟ್ಟುತ್ತದೆ.
* ಕೂದಲು ಉರುವುದು ಕಡಿಮೆಯಾಗುತ್ತದೆ
* ಕೂದಲಿನ ಬುಡ ಬಲಪಡಿಸುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು.
ಈ ಎಣ್ಣೆಯ ಮಸಾಜ್ ಕೂಡ ನಿಮಗೆ ಸುಖ ನಿದ್ದೆಯನ್ನು ನೀಡುತ್ತದೆ.
ಲ್ಯಾವೆಂಡರ್ ಎಣ್ಣೆ
ಲ್ಯಾವಂಡರ್ ಎಣ್ಣೆ ನಿದ್ರಾಹೀನತೆ ಸಮಸ್ಯೆ ತಡೆಗಟ್ಟುತ್ತದೆ. ನೀವು ಕಾಟನ್‌ಗೆ ಎರಡು ಹನಿ ಲ್ಯಾವೆಂಡರ್ ಎಣ್ಣೆ ಹಾಕಿ ಮಲಗುವ ತಲೆ ದಿಂಬಿನ ಬಳಿ ಇಡಿ, ಇದರ ಸುವಾಸನೆಗೆ ಬೇಗನೆ ನಿದ್ದೆ ಬರುವುದು.
ಶ್ರೀಗಂಧದ ಎಣ್ಣೆ
ಇದು ಕೂಡ ನಿಮಗೆ ಸುಖ ನಿದ್ದೆಯನ್ನು ತಂದು ಕೊಡುತ್ತದೆ. ಶ್ರೀಗಂಧದ ಎಣ್ಣೆಯ ಒಂದು ಹನಿ ನಿಮ್ಮ ಅಂಗೈ ಅಥವಾ ಬಟ್ಟೆಗೆ ಹಾಕಿ ಇದರ ಸುವಾಸನೆಗೆ ಕಣ್ಣಿಗೆ ಬೇಗನೆ ನಿದ್ದೆ ಹತ್ತುವುದು.
ನೀಲಗಿರಿ ಎಣ್ಣೆ
ನೀಲಗಿರಿ ಎಣ್ಣೆ ಕೂಡ ನಿದ್ರಾಹೀನತೆ ಹೋಗಲಾಡಿಸಲು ತುಂಬಾನೇ ಸಹಕಾರಿ. 2 ಹನಿ ನೀಲಗಿರಿ ಎಣ್ಣೆಯನ್ನು ಕಾಟನ್‌ಗೆ ಹಾಕಿ ತಲೆದಿಂಬಿನ ಬಳಿ ಇಟ್ಟರೆ ಇದರ ಸುವಾಸನೆಗೆ ಒಳ್ಳೆಯ ನಿದ್ದೆ ಬರುವುದು.
ಹರಳೆಣ್ಣೆ
ಬೇಸಿಗೆಯಲ್ಲಿ ನೀವು ತಲೆಗೆ ಹಚ್ಚಿವ ಎಣ್ಣೆ ಜೊತೆ ಹರಳೆಣ್ಣೆ ಮಿಕ್ಸ್ ಮಾಡಿ ಹಚ್ಚಿ, ಇದರಿಂದ ತಲೆಗೆ ತಂಪಾಗುವುದು, ಇದರಿಂದ ಕೂಡ ಬೇಗ ನಿದ್ದೆ ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

