Latest Updates
-
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್
ಎಐಎಫ್‌ಡಬ್ಲ್ಯು- ವಸ್ತ್ರ ವಿನ್ಯಾಸಕರ ಕೈಚಳಕಕ್ಕೆ ಭೇಷ್ ಎನ್ನಲೇಬೇಕು
ಫ್ಯಾಷನ್ ಕಾಲಕಾಲಕ್ಕೆ ಬದಲಾಗುತ್ತಾ ಇರುತ್ತದೆ. ಈ ಬದಲಾವಣೆ ಫ್ಯಾಷನ್ ಶೋಗಳ ಮೂಲಕ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಚಳಿಗಾಲ ಶುರುವಾಗುತ್ತಿದ್ದಂತೆಯೇ ಹೊಸ ಫ್ಯಾಷನ್ ಪ್ರಾರಂಭವಾಗುತ್ತಿದೆ. ಈ ವರ್ಷದ ಹೊಸ ವಿನ್ಯಾಸಗಳೂ The Road To Chanderi ಎಂಬ ಮೇಳದ ಮೂಲಕ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡುತ್ತಿವೆ.

ಖ್ಯಾತ ವಸ್ತ್ರ ವಿನ್ಯಾಸಕಿಯರಾದ ಅನಿತಾ ಡೋಂಗ್ರೆ, ಪಾಯಲ್ ಪ್ರತಾಪ್, ರುಚಿಕಾ ಮೊದಲಾದವರು ಈಗಾಗಲೇ ತಮ್ಮ ಅದ್ಭುತ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ.
ಹೆಚ್ಚಿನ ಗಮನ ಸೆಳೆಯುವ ಅನಿತಾ ಡೋಂಗ್ರೆಯವರ ಗ್ರಾಸ್ ರೂಟ್ ಅಥವಾ ಹುಲ್ಲಿನ ಬೇರಿನ ವಿನ್ಯಾಸದಲ್ಲಿ ಬೇರಿನ ಬಣ್ಣದ ನಸುಗಾಢ ವರ್ಣದ ಹೊಸ ಉಡುಗೆಗಳೇ ಹೆಚ್ಚಾಗಿ ಸಂಗ್ರಹದಲ್ಲಿವೆ. ಅದರಲ್ಲೂ ನೆಲವನ್ನು ಗುಡಿಸುತ್ತಾ ಸಾಗುವ ನೀಳವಸ್ತ್ರವಂತೂ ಅತ್ಯಂತ ಆಕರ್ಷಕವಾಗಿದ್ದು ಹೆಚ್ಚಿನ ಗಮನ ಸೆಳೆಯುತ್ತಿದೆ.
ಇದರ ಜೊತೆಗೇ ವಿವಿಧ ವಿನ್ಯಾಸದ ಪ್ಯಾಂಟ್, ಶರ್ಟ್, ಜ್ಯಾಕೆಟ್ ಮೊದಲಾದವೂ ಪ್ರದರ್ಶನದಲ್ಲಿವೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಇವರ ಮಹತ್ವಾಕಾಂಕ್ಷೆಯ ಚಿನ್ನದ ಎಳೆಗಳಿಂದ ನೇದಿರುವ ನೆರಿಗೆ ಬಟ್ಟೆ ಗಮನ ಸೆಳೆಯುತ್ತದೆ. ಇವರ ನಿಕಟ ಪ್ರತಿಸ್ಪರ್ಧಿಯಾಗಿರುವ ರಾಗಿಣಿ ಅಹುಜಾರವು ತಮ್ಮ ಐಕಾಯಿ ಸಂಗ್ರಹದಿಂದ ಅತಿ ನಾಜೂಕಿನ ಕಸೂತಿ ಕೆಲಸದ ಹಲವು ಬಟ್ಟೆಗಳನ್ನು ಪ್ರದರ್ಶಿಸಿದ್ದಾರೆ.
ಇದರಲ್ಲಿ ನೆರಿಗೆಗಳಿರುವ ವಿನ್ಯಾಸ ಹೆಚ್ಚು ಗಮನ ಸೆಳೆಯುತ್ತಿದೆ. ಇದರೊಂದಿಗೆ ಜ್ಯಾಕೆಟ್ಟು, ಅರೆಪಾರದರ್ಶಕ ಮತ್ತು ಪಟ್ಟೆಪಟ್ಟಿ ವಿನ್ಯಾಸದ ಬಟ್ಟೆಗಳು ಹೆಚ್ಚು ಗಮನ ಸೆಳೆಯುತ್ತಿವೆ.
ಅನಿತಾ ಅರೋರಾರವರ ಪೆರೋ ಸಂಗ್ರಹ ಹೆಚ್ಚು ಜನಪ್ರಿಯವಾಗಿದ್ದು ಈ ವರ್ಷವೂ ಆಸಕ್ತರ ಕುತೂಹಲವನ್ನು ಹೆಚ್ಚಿಸಲು ಸಫಲವಾಗಿದೆ. ಈ ವರ್ಷ ಇವರ ಸಂಗ್ರಹದಲ್ಲಿ ತಿಳಿಬಣ್ಣಗಳೇ ಹೆಚ್ಚು ಪ್ರಾಮುಖ್ಯತೆ ಪಡೆದಿವೆ.
ಇವರ ಪೆರೋ ಸಂಗ್ರಹ ಹೆಚ್ಚಾಗಿ ಪರ್ಶಿಯನ್ ವಿನ್ಯಾಸಗಳನ್ನೇ ಹೋಲುತ್ತಿದ್ದು ಈ ವರ್ಷವೂ ತಮ್ಮ ಎಂದಿನ ಲವಲವಿಕೆಯ ವಿನ್ಯಾಸದೊಂದಿಗೆ ಕೊಂಚ ನೆರಿಗೆಗಳು ಮತ್ತು ನಡುನಡುವೆ ಚಿನ್ನದ ಬಣ್ಣದಿಂದ ಹೆಚ್ಚಿನ ಆಕರ್ಷಣೆ ಪಡೆಯಲು ಯತ್ನಿಸಿರುವುದು ಗಮನಕ್ಕೆ ಬರುತ್ತದೆ.
ರುಚಿಕಾರವರ ಬಾಡೀಸ್ ಸಂಗ್ರಹದಲ್ಲಿ ಹೆಚ್ಚಾಗಿ ಸ್ಕರ್ಟ್ ಮತ್ತು ದೊಗಲೆ ಟಾಪ್ ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಇವರ ಸಂಗ್ರಹದಲ್ಲಿಯೂ ಎಲ್ಲರೂ ಮಾತನಾಡಿಕೊಂಡು ಬಂದರೋ ಎಂಬಂತೆ ತಿಳಿಬಣ್ಣಗಳೇ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ.
ಆದರೆ ಇವರ ವಸ್ತ್ರಗಳಲ್ಲಿ ಬೇಸಿಗೆಯಲ್ಲಿ ತೊಡುವ ವಸ್ತ್ರಗಳು ಹೆಚ್ಚು ಕಂಡುಬರುತ್ತವೆ. ಚಳಿಗಾಲದಲ್ಲಿ ಬೇಸಿಗೆಯ ಉಡುಪುಗಳು! ಎಲ್ಲರ ಹುಬ್ಬು ಇದನ್ನು ಕಂಡು ಕೊಂಚ ಮೇಲೇರಿದರೂ ಇವರ ಸಂಗ್ರಹದಲ್ಲಿರುವ ಜ್ಯಾಕೆಟ್, ಪ್ಯಾಂಟ್, ಮೊದಲಾದವು ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ.
ಇವರಿಗೆ ಭಿನ್ನವಾಗಿ ಯೋಚಿಸಿರುವ ಪಾಯಲ್ ಪ್ರತಾಪ್‌ರವರು ತಮ್ಮ ಸಂಗ್ರಹದಲ್ಲಿ ಸೀರೆಗಳನ್ನೇ ಪ್ರಮುಖವಾಗಿ ಆಯ್ದುಕೊಂಡಿದ್ದಾರೆ. ವಿಶೇಷವಾಗಿ ನೀಲಿ ಬಣ್ಣವನ್ನೇ ಕೇಂದ್ರೀಕರಿಸಿರುವ ಇವರು ಭಾರತೀಯ ಸೀರೆಯ ಪರಂಪರೆಗೆ ಒಂದು ಹೊಸ ಆಯಾಮ ನೀಡುವ ಹುಮ್ಮಸ್ಸು ತೋರುತ್ತಿದ್ದಾರೆ.
ಯೋಗೇಶ್ ರವರ ಸುರೇಂದ್ರಿ ವಿನ್ಯಾಸಗಳಲ್ಲಿಯೂ ನೆರಿಗೆಗಳಿರುವ ವಸ್ತ್ರಗಳೇ ಹೆಚ್ಚು ಕಂಡುಬಂದಿದ್ದು ನೀಳವಾದ ವಿನ್ಯಾಸ ಹೆಚ್ಚಿನ ಆಕರ್ಷಣೆ ಪಡೆಯುತ್ತಿವೆ.
ಕಾ ಷಾ ರವರು ತಮ್ಮ ಸಂಗ್ರಹವನ್ನು ಈ ಬಾರಿ ಕೆಲವೇ ವಿಶಿಷ್ಟ ವಿನ್ಯಾಸಗಳಿಗೆ ಮೀಸಲಾಗಿರಿಸಿದ್ದಾರೆ. ಇದರಲ್ಲಿ ಕೆಲವೇ ವಸ್ತ್ರಗಳಿದ್ದರೂ ಇದರಲ್ಲಿ ಬಳಸಿರುವ ಬಣ್ಣಗಳ ಮುದ್ರಿತ ವಿನ್ಯಾಸ ಮಾತ್ರ ಇವರೇಕೆ ಕೆಲವೇ ಉಡುಗೆಗಳಿಗೆ ತಮ್ಮ ವಿನ್ಯಾಸ ಮೀಸಲಿಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ದೊರಕುತ್ತದೆ.



Click it and Unblock the Notifications





















