For Quick Alerts
ALLOW NOTIFICATIONS  
For Daily Alerts

ವಿಶ್ವ ಸುಂದರಿ ಸ್ಪರ್ಧಿಗಳಲ್ಲಿ ಈ ಸಲಿಂಗಿಯದ್ದೇ ಸದ್ದು

|

ವಿಶ್ವ ಸುಂದರಿ ಸ್ಪರ್ಧೆಯನ್ನು ಫ್ಯಾಷನ್ ಲೋಕ ಮಾತ್ರವಲ್ಲ ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತಿರುತ್ತದೆ. ವಿಶ್ವ ಸುಂದರಿ ಕಿರೀಟವನ್ನು ತಮ್ಮ ಮುಡಿಗೇರಿಸುವುದು ಸ್ಪರ್ಧಿಗಳ ಕನಸ್ಸಾದರೆ ದೇಶದ ಹೆಮ್ಮೆಯೂ ಕೂಡ ಹೌದು. 2019ರ ವಿಶ್ವ ಸುಂದರಿ ಸ್ಪರ್ಧೆ ಅಂಟ್ಲಾಂಟದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಆ ದಕ್ಷಿಣ ಆಫ್ರಿಕಾದ ಜೋಜಿಬಿನಿ ತುಂಜಿ ವಿಶ್ವ ಸುಂದರಿ ಕಿರೀಟವನ್ನು ಧರಿಸಿದ್ದಾರೆ.

ಈ ಸ್ಪರ್ಧೆಯಲ್ಲಿ 90 ಸುಂದರಿಯರು ಭಾಗವಹಿಸಿದ್ದರು, ಅದರಲ್ಲಿ ಮಯನ್ಮಾರ್‌ನ ಒಬ್ಬ ಸ್ಪರ್ಧಿ ಮಾತ್ರ ವಿಶೇಷ ಕಾರಣಕ್ಕೆ ಗಮನ ಸೆಳೆದಿದ್ದಾರೆ. ಈ ವರ್ಷದ ವಿಶ್ವ ಸುಂದರಿ ಸ್ಪರ್ಧೆ ಈ ಸುಂದರಿಯಿಂದಾಗಿ ಮತ್ತಷ್ಟು ವಿಶೇಷ ಅನಿಸಿದೆ. ಆ ಸುಂದರಿ ಹೆಸರು ಸ್ವೀ ಜಿನ್ ಹೆಟೆಟ್. ಇವರು ಮಿಸ್‌ ಮಯನ್ಮಾರ್‌, ಆ ದೇಶದಲ್ಲಿ ಸಲಿಂಗ ಕಾಮ ಕಾನೂನು ಬಾಹಿರ. ಅಂಥ ದೇಶವನ್ನು ಪ್ರತಿನಿಧಿಸಿದ ಸ್ವೀ ಜಿನ್ ಹೆಟೆಟ್ ತಾನೊಬ್ಬ ಸಲಿಂಗಿ ಎಂಬ ಬೋಲ್ಡ್ ಸ್ಟೇಟ್‌ಮೆಂಟ್‌ ನೀಡುವ ಮೂಲಕ ಸಲಿಂಗಿ ಸಮುದಾಯದ ಮೇಲೆ ಪ್ರಭಾವ ಬೀರಿದ್ದಾರೆ.

Miss Universe

21 ವರ್ಷದ ಮಿಸ್‌ ವಿಶ್ ಸುಂದರಿ ಮಯನ್ಮಾರ್ ಮ್ಯಾಗ್‌ಜಿನ್‌ನೊಂದಿಗೆ ಮಾತನಾಡುತ್ತಾ ತಾನೊಬ್ಬ ಸಲಿಂಗಿ ಎಂಬುವುದನ್ನು ಹೇಳಿಕೊಂಡಿದ್ದಾರೆ. ನನಗೆ ಸಿಕ್ಕಿರುವ ಫ್ಲ್ಯಾಟ್‌ಫಾರಂ (ಅವಕಾಶ) ಉಪಯೋಸಲು ಬಯಸುತ್ತೇನೆ. ನಾನೊಬ್ಬಳು ಸಲಿಂಗಿ ಎಂದು ಗೊತ್ತಾದರೆ ಅದು ಬರ್ಮಾ (ಮಯನ್ಮಾರ್)ದಲ್ಲಿರುವ ಎಲ್‌ಜಿಬಿಟಿಕ್ಯೂ ಸಮುದಾಯ ತುಂಬಾ ಪ್ರಭಾವ ಬೀಳುವಂತಾಗುವುದು. ಸಲಿಂಗಿಗಳು ಬರ್ಮಾದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳುತ್ತಾ ದೇಶದಲ್ಲಿ ನಮ್ಮಂಥವರನ್ನು ಸ್ವೀಕರಿಸುವ ಪರಿಸ್ಥಿತಿಗಾಗಿ ಲೆಸೆಬಿಯನ್ಸ್ ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ಸಲಿಂಗಿಗಳನ್ನು ಬರ್ಮಾದಲ್ಲಿ ತುಂಬಾ ಕೀಳಾಗಿ ನೋಡುತ್ತಾರೆ, ಭೇದಭಾವ ಮಾಡುತ್ತಾರೆ, ಅದು ಬದಲಾಗಬೇಕಾಗಿದೆ ಎಂದು ಹೇಳಿದರು.

ಸ್ವೀ ಜಿನ್ ಬರ್ಮಾ ಗಾಯಕಿ ಗೇ ಗೇ ಜತೆ ಮೂರು ವರ್ಷದಿಂದ ಸಂಬಂಧದಲ್ಲಿದ್ದಾರೆ. ಅವರು ಸಲಿಂಗಿಯಾದ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಯಿತು. ಸಮಾಜ ತಿರಸ್ಕಾರದಿಂದ ನೋಡಿತು, ಮನೆಯವರೂ ಅವರಿಂದ ದೂರವಾದರು. 'ಮೊದಲು ಅವರು ನನ್ನನ್ನು ಸ್ವೀಕರಿಸಲಿಲ್ಲ, ನಂತರ ಲೆಸಿಬಿಯನ್‌ ಸಮುದಾಯದ ಬಗ್ಗೆ ಹೆಚ್ಚೆಚ್ಚು ತಿಳಿಯುತ್ತಿದ್ದಂತೆ ನನ್ನನ್ನು ಸ್ವೀಕರಿಸಿದರು' ಎಂದಿದ್ದಾರೆ ಸ್ವೀ ಜಿನ್ .

ಸ್ವೀ ಜಿನ್ ಅನ್ನು ವಿಶ್ವ ಸುಂದರಿ ಸ್ಪರ್ಧೆಯ ಅಧ್ಯಕ್ಷರಾದ ಪೌಲಾ ಸುಗ್ರತ್‌ ಕೂಡ ಹೊಗಳಿದ್ದಾರೆ. ಗೌರಾನ್ವಿತ ಹಾಗೂ ಸ್ಪೂರ್ತಿದಾಯಕ ಮಹಿಳೆಗೆ ಅವಕಾಶ ಕೊಟ್ಟಿರುವುದಕ್ಕೆ ನಮಗೆ ಹೆಮ್ಮಯಿದೆ ಎಂದಿದ್ದಾರೆ. ಅವರ ಕತೆಯನ್ನು ಹೇಳಲು ಧೈರ್ಯ ತೋರಿದ್ದಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸ್ವೀ ಜಿನ್ ಅಭಿಮಾನಿಗಳು ಆಕೆಗೆ ಸೂಪರ್‌ಮ್ಯಾನ್ ಅಂತ ನಿಕ್‌ನೇಮ್ ಹಾಕಿದ್ದಾರೆ. ತನ್ನ ಸಮುದಾಯಕ್ಕೆ ಒಳಿತು ಮಾಡಬೇಕೆಂದು ಬಯಸಿರುವ ಲೆಸೆಬಿಯನ್ ಕಡೆಗಿರುವ ಜನರ ಆಲೋಚನೆಗಳನ್ನು ಬದಲಾಯಿಸಿ ಅವರಿಗೂ ಒಂದು ಗೌರವ ತಂದು ಕೊಡಲು ಬಯಸಿದ್ದಾರೆ.

'15-16 ವರ್ಷದವಳಾಗಿದ್ದಾಗ ನನ್ನದೇ ಲಿಂಗದವರ ಕಡೆಗೆ ನನ್ನ ಆಕರ್ಷಣೆ ಇರುವುದು ಗೊತ್ತಾಯಿತು, ಅದನ್ನು ತಿಳಿದಾಗ ಮೊದಲಿಗೆ ಸ್ವಲ್ಪ ಕಷ್ಟವಾಯಿತು, ನಂತರ ನಾನು ಲೆಸೆಬಿಯನ್‌ ಎನ್ನುವುದನ್ನು ಸ್ವೀಕರಿಸಿದೆ' ಎಂದಿದ್ದಾರೆ.

ನಾನು ನನ್ನ ಭಾವನೆಗಳನ್ನು ಪೋಷಕರಿಗೆ ಹೇಳಿದೆ. ನನಗೆ ಕ್ಲೋಸ್‌ ಆಗಿರುವವರಿಗೆ ಮಾತ್ರ ನನಗೆ ಮಹಿಳೆಯರೆಂದರೆ ಆಕರ್ಷಣೆ ಎಂಬುವುದು ಗೊತ್ತಿತ್ತು ಎಂದು ಹೇಳಿದ್ದಾರೆ. 2018ರಲ್ಲಿ ಮೊದಲ ಬಾರಿಗೆ ಏಂಜಲಿನಾ ಪೋನ್ಸ್ ಎಂಬ ಟ್ರಾನ್ಸ್‌ಜೆಂಡರ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Read more about: beauty ಸೌಂದರ್ಯ
English summary

Miss Universe Contestant Swe Zin Htet is Lesbian

Miss Swe Zin Htet went on the stage of the Miss Universe and shared the precarious condition of people from the lesbian, gay, bisexual, transgender and queer community back in her country Myanmar
X
Desktop Bottom Promotion