For Quick Alerts
ALLOW NOTIFICATIONS  
For Daily Alerts

ನಟಿ ರಶ್ಮಿ ಪ್ರಭಾಕರ್‌ ಮತ್ತು ನಿಖಿಲ್‌ ನಿಶ್ಚಿತಾರ್ಥದ ಫೋಟೋಸ್‌

|

ಕನ್ನಡದ ಬಹುತೇಕರ ನೆಚ್ಚಿನ ಧಾರಾವಾಹಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟಿ, ಚಿನ್ನು ಎಂಬ ಹೆಸರಿನಿಂದಲೇ ಹೆಚ್ಚು ಹೆಸರುವಾಸಿಯಾದ ರಶ್ಮಿ ಪ್ರಭಾಕರ್‌ ಅವರು ಹಲವು ದಿನಗಳಿಂದ ಕಾದಿದ್ದ ಅಭಿಮಾನಿಗಳಿಗೆ ತಮ್ಮ ಜೀವನ ಸಂಗಾತಿಯ ಪೋಟೋವನ್ನು ಶುಭ ಸಂದರ್ಭದಲ್ಲಿ ರಿವೀಲ್‌ ಮಾಡಿದ್ದಾರೆ.

ಸೋಮವಾರವಷ್ಟೇ ನಿಖಿಲ್‌ ಭಾರ್ಗವ್‌ ಎಂಬುವರ ಜೊತೆ ಉಂಗುರ ಬದಲಿಸಿಕೊಂಡು ತಮ್ಮ ಜೀವನದ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ನಿಶ್ಚಿತಾರ್ಥ

ಪಿಂಕ್‌ ಬ್ಲೌಸ್‌ ಹಾಗೂ ಹಸಿರು ಸೀರೆಯುಟ್ಟ ರಶ್ಮಿ ಬಿಸ್ಕೆಟ್‌ ಕಲರ್‌ ನ ಶೇರ್ವಾನಿಯಲ್ಲಿ ನಿಖಿಲ್‌ ಇಬ್ಬರೂ ಮನೆಯವರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ವಿಡಿಯೋಶೂಟ್‌

ನಿಶ್ಚಿತಾರ್ಥಕ್ಕೂ ಮುನ್ನ ಮಾಡಿರುವ ವಿಡಿಯೋಶೂಟ್‌ ಸಹ ವೈರಲ್‌ ಆಗಿದೆ. ಕಾರಿನಲ್ಲಿ ಬರುವ ನಿಖಿಲ್‌ ರಶ್ಮಿ ಅವರಿಗೆ ನಡುರಸ್ತೆಯಲ್ಲಿ ಹೂಗುಚ್ಚ ನೀಡಿ ಪ್ರೇಮ ನಿವೇದನೆ ಮಾಡು ದೃಶ್ಯ ವಿಭಿನ್ನವಾಗಿ ಮೂಡಿಬಂದಿದೆ.

ಪೋಟೋಶೂಟ್‌ನ

ಪ್ರಿ ವೆಡ್ಡಿಂಗ್‌ ಪೋಟೋಶೂಟ್‌ನಲ್ಲೂ ಜೋಡಿ ಸಖತ್‌ ಮಿಂಚಿದೆ. ಹಸಿರು ಬಣ್ಣದ ಗೌನ್‌ನಲ್ಲಿ ರಶ್ಮಿ ಹಾಗೂ ಆಶ್‌ ಬಣ್ಣದ ಕೋಟ್‌ನಲ್ಲಿ ನಿಖಿಲ್‌ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ.

ತೆಲುಗಿನ ಬೇಡಿಕೆಯ ನಟಿ

ಕನ್ನಡ ಅಲ್ಲದೆ ತೆಲುಗಿನ ಧಾರಾವಾಹಿಗಳಲ್ಲೂ ಬಹುಬೇಡಿಕೆಯ ನಟಿ ರಶ್ಮಿ ಪೌರ್ಣಮಿ ಎಂದೇ ಹೆಸರುವಾಸಿಯಾಗಿದ್ದು, ಸದ್ಯ ತೆಲುಗಿನ ಕಾವ್ಯಾಂಜಲಿ ಧಾರಾವಾಹಿಯಲ್ಲಿ ಬ್ಯುಸಿ ಆಗಿದ್ದಾರೆ. ಈಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿರುವ ರಶ್ಮಿ ಹಾಗೂ ನಿಖಿಲ್‌ ಜೋಡಿಗೆ ಶುಭ ಹಾರೈಸೋಣ.

English summary

Kannada TV Actress Rashmi Prabhakar and Her Fiancé Nikhil Bhargav stunning Engagement Look

Here we are discussing about Kannada TV Actress Rashmi Prabhakar and Her Fiancé Nikhil Bhargav stunning Engagement Look. Read more.
X