For Quick Alerts
ALLOW NOTIFICATIONS  
For Daily Alerts

ಕಾಲಿಗೆ ಬೆಳ್ಳಿ ಕಾಲ್ಗೆಜ್ಜೆ ಹಾಕಬೇಕು ಎನ್ನುವ ಸಂಪ್ರದಾಯದ ಹಿಂದಿದೆ ಈ 7 ವೈಜ್ಞಾನಿಕ ಕಾರಣಗಳು

|

ಮನೆಯಲ್ಲಿ ಒಂದು ಪುಟ್ಟ ಹೆಣ್ಮಗು ಇದ್ದರೆ ಅವಳ ಕಾಲಿಗೆ ಗೆಜ್ಜೆ ಹಾಕಬೇಕೆಂದು ಬಯಸುತ್ತೇವೆ, ಏಕೆಂದರೆ ಆ ಗಜ್ಜೆ ಕಟ್ಟಿಕೊಂಡು ಮಗು ಮನೆ ತುಂಬಾ ಓಡಾಡುತ್ತಿದ್ದರೆ ನೋಡಲು ಚೆಂದ, ಕೇಳಲು ಹಿತ. ಅದರಂತೆ ಹೆಜ್ಜೆ ಹೆಣ್ಣಿನ ಅಲಂಕಾರಿಕ ವಸ್ತುಗಳಲ್ಲಿ ಒಂದು, ಅದು ಅವಳ ಕಾಲಿನ ಅಂದ ಹೆಚ್ಚಿಸುವುದು.

ಬಹುತೇಕ ಭಾರತೀಯ ಮಹಿಳೆಯರು ಕಾಲ್ಗೆಜ್ಜೆ ಧರಿಸುತ್ತಾರೆ, ಅದರಲ್ಲೂ ಬೆಳ್ಳಿಯ ಕಾಲ್ಗೆಜ್ಜೆ ಹೆಚ್ಚಾಗಿ ಧರಿಸುತ್ತಾರೆ. ಸ್ತ್ರೀ ಕಾಲ್ಗೆಜ್ಜೆ ನಮ್ಮ ಸಂಪ್ರದಾಯ ಕೂಡ, ಆದರೆ ಇದರ ಹಿಂದಿರುವ ವೈಜ್ಞಾನಿಕ ಕಾರಣ ತಿಳಿದರೆ ಕಾಲ್ಗೆಜ್ಜೆ ಧರಿಸುವುದರಿಂದ ನಿಮಗೆ ಯಾವೆಲ್ಲಾ ಪ್ರಯೋಜನಗಳಿವೆ ಎಂಬುವುದು ತಿಳಿಯುತ್ತೆ:

ಕಾಲ್ಗೆಜ್ಜೆ ಧರಿಡುವುದರ ಹಿಂದಿರುವ ವೈಜ್ಞಾನಿಕ ಕಾರಣಗಳು:

1. ನೋವು ನಿವಾರಿಸುತ್ತೆ

1. ನೋವು ನಿವಾರಿಸುತ್ತೆ

ಆಗಾಗ ಕಾಲುನೋವು, ಪಾದಗಳು ಒಂದು ರೀತಿ ಮರಗಟ್ಟಿದಂತೆ ಅನಿಸುವುದು ಇವೆಲ್ಲಾ ಸಮಸ್ಯೆಗೆ ಪರಿಹಾರ ನೀವು ಕಾಲ್ಗೆಜ್ಜೆ ಬಳಸುವುದರಿಂದ ಕಂಡುಕೊಳ್ಳಬಹುದು.

ಕಾಲಿನ ಹಿಮ್ಮಡಿಯಲ್ಲಿ ತುಂಬಾ ನೋವು ಕಂಡು ಬರುತ್ತಿದ್ದರೆ ಬೆಳ್ಳಿಯ ಕಾಲ್ಗೆಜ್ಜೆ ಬಳಸಿ, ಬೆಳ್ಳಿ ಈ ರೀತಿಯ ನೋವು ಕಡಿಮೆ ಮಾಡುವುದು ಹಾಗೂ ದೇಹಕ್ಕೆ ಧನಾತ್ಮಕ ಶಕ್ತಿ ಹರಿಸುತ್ತದೆ.

ಬೆಳ್ಳಿಯ ಕಾಲ್ಗೆಜ್ಜೆ ಸಿಯಾಟಿಕ್‌ ನೋವು ಕಡಿಮೆ ಮಾಡುತ್ತದೆ. ಆ ನೋವು ನಮ್ಮ ಹಿಂಬದಿಯಿಂದ ಹರಿದು ಪಾದಗಳವರೆಗೆ ಬರುವುದು. ಕಾಲ್ಗೆಜ್ಜೆ ಧರಿಸುವುದರಿಂದಾ ನೋವು ಕಡಿಮೆಯಾಗುವುದು, ಕಾಲಿನ ಮಣಿಗಂಟಿನಲ್ಲಿರುವ ಊತ ಕಡಿಮೆಯಾಗುವುದು. ಅಲ್ಲದೆ ಪಾದಗಳಲ್ಲಿ ರಕ್ತ ಸಂಚಾರ ಹೆಚ್ಚುವುದು.

2. ದೇಹಕ್ಕೆ ಶಕ್ತಿಯನ್ನು ಹರಿಸುವುದು

2. ದೇಹಕ್ಕೆ ಶಕ್ತಿಯನ್ನು ಹರಿಸುವುದು

ಕಾಲಿಗೆ ಕಾಲ್ಗೆಜ್ಜೆ ಧರಿಸುವುದರಿಂದ ದೇಹಕ್ಕೆ ಧನಾತ್ಮಕ ಶಕ್ತಿಯನ್ನು ಹರಿಸುವುದು. ಇದು ನಿಮ್ಮ ದೇಹದಲ್ಲಿ ಶಕ್ತಿಯನ್ನು ತುಂಬುವುದು. ಬೆಳ್ಳಿಯಲ್ಲಿರುವ ಧನಾತ್ಮಕ ಅಯಾನುಗಳು ದೇಹಕ್ಕೆ ಧನಾತ್ಮಕ ಶಕ್ತಿಯನ್ನು ಹರಿಸುವುದರಿಂದ ದೇಹದಲ್ಲಿ ಒಂದು ಉಲ್ಲಾಸ, ಉತ್ಸಾಹ ತುಂಬುವುದು.

3. ಕಾಲಿನಲ್ಲಿ ಊತ ಕಡಿಮೆ ಮಾಡುತ್ತೆ

3. ಕಾಲಿನಲ್ಲಿ ಊತ ಕಡಿಮೆ ಮಾಡುತ್ತೆ

ಕಾಲುಗಳಲ್ಲಿ ಊತ ಇದ್ದರೆ ಅದು ನಮ್ಮ ದಿನನಿತ್ಯದ ಚಟುವಟಿಕೆಗೆ ತೊಂದರೆ ಉಂಟು ಮಾಡುವುದು, ಇದರಿಂದ ಪಾದಗಳಲ್ಲಿ ನೋವು ಕಂಡು ಬರುವುದು, ಕಾಲ್ಗಜೆ ಧರಿಸಿದರೆ ನೋವು ಕಡಿಮೆಯಾಗುವುದು, ಊತವೂ ಇರುವುದಿಲ್ಲ.

4. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ

4. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ

ಕಾಲ್ಗಜೆ ನಿಮ್ಮ ಕಾಲಿನ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ದುಗ್ಧರಸ ಗ್ರಂಥಿಗಳು ಚಟುವಟಿಕೆಯಿಂದ ಇರುವಂತೆ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ. ಅಲ್ಲದೆ ಬೆಳ್ಳಿ ಕಾಲ್ಗೆಜ್ಜೆ ಬ್ಯಾಕ್ಟಿರಿಯಾಗಳ ವಿರುದ್ಧವೂ ಹೋರಾಡುತ್ತೆ.

5. ಆ್ಯಂಟಿಬ್ಯಾಕ್ಟಿರಿಯಾ ಪ್ರಯೋಜನಗಳು

5. ಆ್ಯಂಟಿಬ್ಯಾಕ್ಟಿರಿಯಾ ಪ್ರಯೋಜನಗಳು

ಬೆಳ್ಳಿಯ ಕಾಲ್ಗೆಜ್ಜೆ ಬೆಳ್ಳಿಯ ಅಯಾನ್‌ಗಳನ್ನು ಉತ್ಪತ್ತಿ ಮಾಡುತ್ತವೆ, ಇದು ದೇಹವು ಬ್ಯಾಕ್ಟಿರಿಯಾಗಳ ವಿರುದ್ದ ಹೋರಾಡವ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಹಿಂದೆಯೆಲ್ಲಾ ಸಮುದ್ರಯಾನ ಮಾಡುವವರು ಬೆಳ್ಳಿ ಹಾಗೂ ರಮ್‌ ತೆಗೆದುಕೊಂಡು ಹೋಗುತ್ತಿದ್ದರು. ನೀರಿಗೆ ಇವೆರಡು ಹಾಕಿದರೆ ಆ ಶುದ್ಧ ನೀರು ಸಿಗುತ್ತಿತ್ತು.

6. ಸ್ತ್ರೀ ಸಂಬಂಧಿ ಸಮಸ್ಯೆ ಹೋಗಲಾಡಿಸುತ್ತೆ

6. ಸ್ತ್ರೀ ಸಂಬಂಧಿ ಸಮಸ್ಯೆ ಹೋಗಲಾಡಿಸುತ್ತೆ

ಬೆಳ್ಳಿಯ ಕಾಲ್ಗೆಜ್ಜೆ ದೇಹದಲ್ಲಿ ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು ಸಹಕಾರಿ. ಅನಿಯಮಿತ ಮುಟ್ಟಿನ ಸಮಸ್ಯೆ, ಒಬೆಸಿಟಿ ಮುಂತಾದ ತೊಂದರೆಗಳನ್ನು ತಡೆಗಟ್ಟುತ್ತೆ. ಗರ್ಭಿಣಿಯರು, ಬಾಣಂತಿಯರು ಬೆಳ್ಳಿಯ ಕಾಲ್ಗೆಜ್ಜೆ ಧರಿಸಿದರೆ ಒಳ್ಳೆಯದು.

ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ದೊರೆಯುವ ಇತರ ಪ್ರಯೋಜನಗಳು

ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ದೊರೆಯುವ ಇತರ ಪ್ರಯೋಜನಗಳು

* ದೇಹದ ಉಷ್ಣತೆ ಕಡಿಮೆ ಮಾಡುತ್ತೆ

ಈ ಒಂದು ಬೆಳ್ಳಿಯ ಸಾಧನ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತೆ. ಅಲ್ಲದೆ ಕೋಪವನ್ನೂ ಕಡಿಮೆ ಮಾಡುವುದು.

ಮನೆಗೂ ಒಳ್ಳೆಯದು

ಸ್ತ್ರೀಯರು ಬೆಳ್ಳಿ ಕಾಲ್ಗಜ್ಜೆ ಧರಿಸಿ ಓಡಾಡುತ್ತಿದ್ದರೆ ಲಕ್ಷ್ಮಿಯು ಆಕರ್ಷಿತಳಾಗುತ್ತಾಳೆ, ಇದರಿಂದ ಮನೆಗೆ ಒಳ್ಳೆಯದು ಎಂದು ಹೇಳಲಾಗುವುದು.

ಮುತ್ತೈದೆಯ ಲಕ್ಷಣ

ಕಾಲಿಗೆ ಕಾಲ್ಗೆಜ್ಜೆ ಧರಿಸುವುದು ಮುತ್ತೈದೆಯ ಲಕ್ಷಣ ಎಂದು ಕೂಡ ಹೇಳಲಾಗುವುದು. ಮುಯತ್ತೈದೆಯ ಆಭರಣಗಳಲ್ಲಿ ಇದೂ ಕೂಡ ಒಂದು.

ಸಮಸ್ಯೆಗಳನ್ನು ಬಗೆ ಹರಿಸುತ್ತೆ

ಬಂಜೆತನ, ಮುಟ್ಟಿನ ಸಮಸ್ಯೆ, ಹಾರ್ಮೋನ್‌ ಸಮಸ್ಯೆ ಇವೆಲ್ಲಾ ತಡೆಗಟ್ಟಲು ಸಹಕಾರಿ.

ಈ ಚಿನ್ನದ ಕಾಲ್ಗೆಜ್ಜೆ ಧರಿಸಬಹುದೇ?

ಈ ಚಿನ್ನದ ಕಾಲ್ಗೆಜ್ಜೆ ಧರಿಸಬಹುದೇ?

ಹಿಂದೂ ಸಂಪ್ರದಾಯ ಹಾಗೂ ನಂಬಿಕೆ ಪ್ರಕಾರ ಚಿನ್ನವನ್ನು ಸೊಂಟದ ಮೇಲೆ ಧರಿಸಬೇಕು, ಸೊಂಟದ ಕೆಳಗಡೆ ಧರಸಿಬಾರದು ಎಂದು ಹೇಳುತ್ತಾರೆ. ಚಿನ್ನದ ಕಾಲ್ಗೆಜ್ಜೆ ಅಥವಾ ಕಾಲುಂಗುರ ಧರಿಸಬಾರದು ಎಂದು ಹಿರಿಯರು ಹೇಳುತ್ತಾರೆ. ಚಿನ್ನ ಲಕ್ಷ್ಮಿ, ಆದ್ದರಿಂದ ಆದನ್ನು ಕಾಲಿಗೆ ಧರಿಸಬಾರದು ಎನ್ನುತ್ತಾರೆ.

ವೈಜ್ಞಾನಿಕವಾಗಿ ನೋಡುವುದಾದರೆ ಚಿನ್ನ ಕಾಲಿಗೆ ದೇಹದ ಉಷ್ಣತೆ ಹೆಚ್ಚುವುದು, ಅದೇ ಬೆಳ್ಳಿ ದೇಹವನ್ನು ತಂಪಾಗಿ ಇಡುವುದು.

English summary

Scientific Reasons and Benefits for Wearing Anklets in Kannada

Scientific Reasons and Benefits for Wearing Anklets in Kannada, read on....
Story first published: Friday, March 25, 2022, 17:58 [IST]
X
Desktop Bottom Promotion