For Quick Alerts
ALLOW NOTIFICATIONS  
For Daily Alerts

ಗೌರಿ-ಗಣೇಶ 2020: ವಿಭಿನ್ನ ಬಗೆಯ ಸೀರೆಯ ಉಡುವ ಶೈಲಿಗಳು

ಪ್ರತಿಯೊಂದು ಹಬ್ಬಗಳಲ್ಲೂ ವಿಭಿನ್ನವಾಗಿ ಕಾಣಬೇಕೆಂಬ ಹಂಬಲ ಎಲ್ಲಾ ಹೆಣ್ಣುಮಕ್ಕಳಲ್ಲಿರುತ್ತದೆ. ಹಬ್ಬಗಳ ದಿನ ವಿಭಿನ್ನ ಶೈಲಿಯಲ್ಲಿ ಹೇಗೆಲ್ಲಾ ಸೀರೆಯನ್ನು ಉಡಬಹುದು ಎಂಬ ವಿವರವಾದ ಮಾಹಿತಿ ಈ ಲೇಖನದಲ್ಲಿದೆ.

|

ಹೆಣ್ಣಿನ ಅಂದವನ್ನು ದುಪ್ಪಟ್ಟು ಹೆಚ್ಚಿಸುವ ಸೀರೆ ನಮ್ಮ ಭಾರತೀಯ ಸಾಂಸ್ಕೃತಿಕ ಉಡುಗೆ. ಸೀರೆಯನ್ನು ತಮ್ಮ ಮೈಗೆ ಒಪ್ಪುವಂತೆ ಉಡುವುದು ಸಹ ಒಂದು ಕಲೆಯೇ ಹೌದು. ಅದರಲ್ಲೂ ನಿತ್ಯ ಪಾಶ್ಚಾತ್ಯ ಧಿರಿಸುಗಳನ್ನು ಧರಿಸುವ ನಮ್ಮ ಹೆಣ್ಣುಮಕ್ಕಳಿಗೆ ಹಬ್ಬ-ಹರಿದಿನಗಳಲ್ಲಿ ಸೀರೆ ಉಡುವುದೆಂದರೆ ಎಲ್ಲಿಲ್ಲದ ಸಡಗರ. ಹಬ್ಬದ ದಿನದಂದು ಸೀರೆ ಉಡಲೆಂದೇ ವಾರದಿಂದಲೂ ಸಿದ್ಧತೆ ನಡೆಸಿರುತ್ತಾರೆ.

ಇದೀಗ ವಿಶ್ನ ನಿವಾರಕ ಗಣೇಶನ ಹುಟ್ಟು ಹಬ್ಬ ಇನ್ನೇನುನ ಎರಡು ದಿನಗಳಲ್ಲಿ ಬರಲಿದೆ. 2020ರ ಆಗಸ್ಟ್ 21ರಂದು ಶುಕ್ರವಾರ ಸ್ವರ್ಣ ಗೌರಿ ಮನೆಗೆ ಕಾಲಿಟ್ಟರೆ, ಮರುದಿನ 22ರಂದು ಶನಿವಾರ ಗಣೇಶ ಚತುರ್ಥಿಯಂದು ಅವಳ ಸುಪುತ್ರ ಡೊಳ್ಳು ಹೊಟ್ಟೆ ಗಣಪ ಬರುತ್ತಾನೆ.

ಗೌರಿ-ಗಣೇಶ ಹಬ್ಬದ ವಿಶೇಷ ಎರಡೂ ದಿನ ಹೇಗೆಲ್ಲಾ ವಿಭಿನ್ನ ಶೈಲಿಯಲ್ಲಿ ಸೀರೆಯನ್ನು ಉಡಬಹುದು ಎಂಬ ವಿವರವಾದ ಮಾಹಿತಿ ಈ ಲೇಖನದಲ್ಲಿದೆ.

ಮುಂಭಾಗದಲ್ಲಿ ಉದ್ದ ನೆರಿಗೆ

ಮುಂಭಾಗದಲ್ಲಿ ಉದ್ದ ನೆರಿಗೆ

ಸೀರೆಯ ಪಲ್ಲು ಭಾಗದಲ್ಲಿ ಸಣ್ಣದಾದ ನೆರಿಗೆಗಳನ್ನು ತೆಗೆದುಕೊಂಡು ಮಂಡಿಯವರೆಗೆ ಅಥವಾ ಮಂಡಿಗಿಂತ ಮೇಲೆ ನಿಮಗೆ ಅನುಕೂಲವಾದಂತೆ ಮುಂಭಾಗದಲ್ಲಿ ಉಡಬಹುದು. ಪಲ್ಲುಗೆ ಆಕರ್ಷಕ ವಿನ್ಯಾಸ (ಬಾರ್ಡರ್) ಇದ್ದರೆ ಅದು ನಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಚಿನ್ನದ ಬಣ್ಣದ ಸೀರೆಗೆ ಗಾಢ ಕೆಂಪು ಬಣ್ಣದ ರವಿಕೆ ಈ ವಿನ್ಯಾಸಕ್ಕೆ ಚೆನ್ನಾಗಿ ಒಪ್ಪುತ್ತದೆ.

ದಕ್ಷಿಣ ಭಾರತದ ಶೈಲಿ

ದಕ್ಷಿಣ ಭಾರತದ ಶೈಲಿ

ದಕ್ಷಿಣ ಭಾರತದ ಶೈಲಿಯಲ್ಲಿ ಸೀರೆ ಉಡಬೇಕೆಂದರೆ ಕಾಂಜಿವರಂ ಸೀರೆ ಹೆಚ್ಚು ಸೂಕ್ತ. ದಕ್ಷಿಣ ಭಾರತದ ಶೈಲಿಯಲ್ಲಿ ಸೀರೆಯನ್ನುಟ್ಟು ಸೀರೆ ಅಂಚು ಇರುವಷ್ಟೇ ಭಾಗ ಪಲ್ಲುಭಾಗವನ್ನು ನೆರಿಗೆ ತೆಗೆದು, ಸೊಂಟಕ್ಕೆ ಡಾಬು ಹಾಕಿದರೆ ಹೆಣ್ಣುಮಕ್ಕಳು ದೇವೆತೆಯಂತೆ ಕಾಣುತ್ತಾರೆ. ಗುಲಾಬಿ ಅಥವಾ ಚಿನ್ನದ ಬಣ್ಣಗಳ ಅಂಚು ಇರುವ ಸೀರೆ ನಮ್ಮ ಅಂದವನ್ನು ಹೆಚ್ಚಿಸುತ್ತದೆ.

ಸಾಮಾನ್ಯ ನೆರಿಗೆ

ಸಾಮಾನ್ಯ ನೆರಿಗೆ

ಸೀರೆಯಲ್ಲೂ ವಿಶಿಷ್ಟವಾಗಿ ಕಾಣಬೇಕೆಂದು ಬಯಸಿದ್ದರೆ ಈ ವಿನ್ಯಾಸವನ್ನು ಪ್ರಯತ್ನಿಸಿ. ಪಲ್ಲು ಭಾಗವನ್ನು ಒಂದು ಅಂದಾಜಿನಲ್ಲಿ ತೆಗೆದುಕೊಂಡು ಪಿನ್ ಮಾಡಬಹುದು. ಇದಕ್ಕೆ ಡಾಬಿನ ಅವಶ್ಯಕತೆ ಇಲ್ಲ, ಅಲ್ಲದೇ ಹೆಚ್ಚಿನ ಆಭರಣಗಳೂ ಬೇಕಿಲ್ಲ. ಫ್ಯಾನ್ಸಿ ಸೀರೆಗಳಿಗೆ ಈ ವಿನ್ಯಾಸ ಹೆಚ್ಚು ಸೂಕ್ತ. ಹಬ್ಬ ಅಲ್ಲದೇ ಇತರೆ ಕಾರ್ಯಕ್ರಮಗಳಿಗೂ ಈ ವಿನ್ಯಾಸದಲ್ಲಿ ಸೀರೆ ಉಡಬಹುದು.

ಸೊಂಟಕ್ಕೆ ಡಾಬು

ಸೊಂಟಕ್ಕೆ ಡಾಬು

ಸಿಲ್ಕ್‌ ಬಾರ್ಡರ್ ವುಳ್ಳ ಸೀರೆಗಳಿಗೆ, ಸಿಂಗಲ್ ಪಿನ್ ಅಥವಾ ನೆರಿಗೆ ತೆಗೆದು ಉಟ್ಟಿದ್ದರೂ ಸೊಂಟಕ್ಕೆ ಡಾಬು ಹಾಕಿದರೆ ಸೀರೆ ಹಾಗೂ ನಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಲೆಹೆಂಗಾ ವಿನ್ಯಾಸ

ಲೆಹೆಂಗಾ ವಿನ್ಯಾಸ

ನಿಮ್ಮ ಬಳಿ ಲೆಹೆಂಗಾ ಅಥವಾ ಗ್ರಾಗ್ರ ಚೋಲಿ ಇಲ್ಲವೇ ಚಿಂತಿಸಬೇಡಿ. ಉತ್ತಮವಾದ ಅಂಚುಳ್ಳ ಕಾಂಜೀವರ ಸೀರೆಯನ್ನು ಗುಜರಾತಿ ಶೈಲಿಯಲ್ಲಿ ಉಟ್ಟುಕೊಳ್ಳಬಹುದು. ಆದರೆ ಸೀರೆಯ ಅಂಚು ಸೊಂಟದ ಸುತ್ತ ಮತ್ತು ಹೆಗಲ ಮೇಲೆ ಬರುವಂತೆ ನೋಡಿಕೊಳ್ಳಿ. ಈ ವಿನ್ಯಾಸದ ಸೀರೆಯನ್ನುಟ್ಟಾಗ ಬೋಟ್ ನೆಕ್ ರವಿಕೆ ಇದ್ದರೆ ಅದರ ಚೆಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಸಿಂಗಲ್ ಪಿನ್ ಸೀರೆ

ಸಿಂಗಲ್ ಪಿನ್ ಸೀರೆ

ಸಿಂಗಲ್ ಪಿನ್ ಸೀರೆ ಅಥವಾ ಫ್ರೀ ಸ್ಟೈಲ್ ಪಲ್ಲು ವಿನ್ಯಾಸದಲ್ಲಿ ಸೀರೆ ಉಡಬಹುದು. ಸಾಮಾನ್ಯವಾಗಿ ಹೆಚ್ಚು ಜನರು ಈ ವಿನ್ಯಾಸವನ್ನು ಇಷ್ಟ ಪಡುತ್ತಾರೆ ಮತ್ತು ಶೀಘ್ರದಲ್ಲಿ ಉಡಬಹುದಾದ ಶೈಲಿ ಇದಾಗಿದೆ. ಕಾಟಲ್ ಸಿಲ್ಕ್, ಫ್ಯಾನ್ಸಿ ಸೀರೆಗಳು ಈ ವಿನ್ಯಾಸಕ್ಕೆ ಹೆಚ್ಚು ಒಪ್ಪುತ್ತದೆ.

ಸಣ್ಣ ನೆರಿಗೆಯ ವಿನ್ಯಾಸ

ಸಣ್ಣ ನೆರಿಗೆಯ ವಿನ್ಯಾಸ

ಸಾಮಾನ್ಯ ಶೈಲಿಯಲ್ಲಿ ಸೀರೆಯನ್ನು ಉಡುವ ಬದಲು ಈ ವಿನ್ಯಾಸವನ್ನು ಪ್ರಯತ್ನಿಸಿ. ಪಲ್ಲು ಭಾಗದಲ್ಲಿ ಅತೀ ಸಣ್ಣದಾದ ನೆರಿಗೆಗಳನ್ನು ತೆಗೆದುಕೊಂಡು ಅಲ್ಲಲ್ಲಿ ಪಿನ್ ಮಾಡಿ. ಈ ವಿನ್ಯಾಸದಲ್ಲಿ ಹಬ್ಬದ ಕೆಲಸಗಳನ್ನು ಮಾಡಲು ಸಹ ಹೆಚ್ಚು ತ್ರಾಸದಾಯಕ ಎನಿಸುವುದಿಲ್ಲ.

ದೂರ ದೂರ ನೆರಿಗೆ ವಿನ್ಯಾಸ

ದೂರ ದೂರ ನೆರಿಗೆ ವಿನ್ಯಾಸ

ದೂರ ದೂರ ನೆರಿಗೆ ತೆಗೆದು ಪಿನ್ ಮಾಡಿ ಸಿಂಪಲ್ ಆಭರಣಗಳನ್ನು ಧರಿಸಬಹುದು. ಈ ವಿನ್ಯಾಸದಲ್ಲಿ ನೆರಿಗೆ ದೊಡ್ಡದಾಗಿರಬೇಕು. ಈ ವಿನ್ಯಾಸ ಹೆಣ್ಣನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಗುಜರಾತಿ ವಿನ್ಯಾಸ

ಗುಜರಾತಿ ವಿನ್ಯಾಸ

ಸಾಮಾನ್ಯ ಶೈಲಿಯಲ್ಲಿ ಸೀರೆ ಉಡುವುದು ಬೇಸರ ಎನಿಸಿದರೆ ಗುಜರಾತಿ ಶೈಲಿಯಲ್ಲಿ ಪ್ರಯತ್ನಿಸಿ. ಈ ಶೈಲಿಯ ವಿನ್ಯಾಸಕ್ಕೆ ಪಲ್ಲು ಸಂಪೂರ್ಣ ವಿನ್ಯಾಸವಿದ್ದರೆ (ವರ್ಕ್) ಒಳ್ಳೆಯದು. ಈ ವಿನ್ಯಾಸದಲ್ಲಿ ಸೀರೆ ಉಟ್ಟರೆ ಶೀಘ್ರವಾಗಿಯೇ ಸಾಮಾನ್ಯ ಶೈಲಿಯಲ್ಲೂ ಸೀರೆ ಉಡಲು ಸಹ ನೆರವಾಗುತ್ತದೆ.

English summary

Ganesh Chaturthi 2020: Ganesha chaturthi Different Saree Draping Styles

Vara Mahalakshmi is considered as the women's festival because the rituals include worshipping Goddess Lakshmi. Women get decked up on this occasion wearing pretty and beautiful traditional outfits, especially saress.
X
Desktop Bottom Promotion