Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಕರಾವಳಿಯ ಬ್ಯೂಟಿ ಕ್ವೀನ್ ಶಿಲ್ಪಾ ಶೆಟ್ಟಿಯ ಫ್ಯಾಷನ್ ಝಲಕ್!
ಬಾಲಿವುಡ್‌ನ ಯುವ ತಾಯಿ ಎಂದೇ ಕರೆಯಿಸಿಕೊಂಡಿರುವ ಶಿಲ್ಪಾ ಶೆಟ್ಟಿ, ದಿನದಿಂದ ದಿನಕ್ಕೆ ತಮ್ಮ ಸೌಂದರ್ಯವನ್ನು ನಳನಳಿಸಿಕೊಳ್ಳುತ್ತಿದ್ದಾರೆ. ಈಗಲೂ ತಮ್ಮ ಅದೇ ದೇಹ ಸೌಂದರ್ಯವನ್ನು ಉಳಿಸಿಕೊಂಡು ಬಂದಿರುವ ನಟಿ ಯಾವುದೇ ದಿರಿಸಿನಲ್ಲು ಕೂಡ ಸೈ ಎಂದೆನ್ನಿಸಿಕೊಂಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದಕ್ಕಾಗಿ ಶಿಲ್ಪಾ ರಿಧಿ ಮೆಹ್ರಾ ಲೆಹೆಂಗಾವನ್ನು ಧರಿಸಿದ್ದರು. ಪೀಚ್ ಬಣ್ಣದ ಈ ಲೆಹೆಂಗಾದಲ್ಲಿ ಹೊಳೆಯುವ ಅಂಚುಗಳೂ ಇದ್ದು, ವಿ - ಆಕಾರದ ರವಿಕೆಯನ್ನು ಇದು ಹೊಂದಿದೆ. ಕೆಂಪು ಸಣ್ಣ ಗುಲಾಬಿ ವಿನ್ಯಾಸವನ್ನು ಇದು ಪಡೆದುಕೊಂಡಿದೆ.
ತಮ್ಮ ದಿರಿಸಿಗೆ ತಕ್ಕಂತೆ ಶಿಲ್ಪಾ ತಮ್ಮ ಮೇಕಪ್‌ಗೂ ಗಮನ ಕೊಟ್ಟಿದ್ದು ಲೈಟ್ ಮೇಕಪ್‌ನಿಂದ ಶಿಲ್ಪಾ ಸುಂದರಿಯಾಗಿ ಕಾಣುತ್ತಿದ್ದರು. ಕಣ್ಣು ಮತ್ತು ಕೆನ್ನೆಗೆ ತಿಳಿಯಾಗಿ ಮೇಕಪ್ ಮಾಡಿಕೊಂಡು, ಹೆಚ್ಚು ಆತ್ಮವಿಶ್ವಾಸದಿಂದ ಶಿಲ್ಪಾ ಹೊಳೆಯುತ್ತಿದ್ದರು.
ದುಬಾರಿ ಉಂಗುರ ಮತ್ತು ಬ್ರೇಸ್‌ಲೇಟ್ ಅನ್ನು ಲೆಹೆಂಗಾಗೆ ಸರಿಹೊಂದುವಂತೆ ಶಿಲ್ಪಾ ಆಯ್ಕೆಮಾಡಿಕೊಂಡಿದ್ದು ಪೀಚ್ ಬಣ್ಣದ ಕಿವಿಯಾಭರಣವನ್ನು ತೊಟ್ಟುಕೊಂಡಿದ್ದರು. ಅವರ ಡೈಮಂಡ್ ಆಕಾರದ ಮುಖಕ್ಕೆ ಇದು ಸೂಕ್ತ ಹೊಂದಿಕೆ ಎಂದೆನಿಸಿತ್ತು.
ತಮ್ಮ ಗುಂಗುರು ಮಾದರಿಯ ಕೇಶ ವಿನ್ಯಾಸವನ್ನು ಶಿಲ್ಪಾ ಮುಂದಕ್ಕೆ ಇಳಿಬಿಟ್ಟಿದ್ದು ತಿಳಿಯಾದ ಮೇಕಪ್‌ನಿಂದ ಶಿಲ್ಪಾ ಮುದ್ದಾಗಿ ಕಾಣಿಸಿಕೊಂಡಿದ್ದರು. ತಮ್ಮ ಲೆಹೆಂಗಾದಿಂದ ಇನ್ನಷ್ಟು ಸುಂದರವಾಗಿ ತಮ್ಮ ಸೆಕ್ಸಿ ದೇಹವಿನ್ಯಾಸವನ್ನು ಶಿಲ್ಪಾ ಪ್ರದರ್ಶಿಸಿದ್ದು ಆಕೆಯ ಸೌಂದರ್ಯ ಪ್ರಜ್ಞೆಗೆ ಮೆಚ್ಚಲೇಬೇಕು.



Click it and Unblock the Notifications


