ಕಪ್ಪು ದಿರಿಸಿನಲ್ಲಿ ಗುಳಿಕೆನ್ನೆ ಹುಡುಗಿ ದೀಪಿಕಾರ ಸ್ಟೈಲಿಶ್ ಲುಕ್

By: Jaya subramanya
Subscribe to Boldsky

ಪ್ರಸ್ತುತ ಬಾಲಿವುಡ್‌ನಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿರುವ ಸಾಲಿನಲ್ಲಿ ಮೊದಲು ನಿಲ್ಲುವವರೇ ದೀಪಿಕಾ ಪಡುಕೋಣೆ. ಹಾಲಿವುಡ್ ಅಂಗಳದಲ್ಲೂ ಸಿನಿಮಾವನ್ನು ಪೂರೈಸಿ ವಿಶ್ವದ ಬೇಡಿಕೆಯ ನಟಿ ಎಂದೆನಿಸಿರುವ ದೀಪಿಕಾ ತಮ್ಮ ಗುಳಿಕೆನ್ನೆಯ ನಗುವಿನಲ್ಲೇ ಎಲ್ಲರನ್ನೂ ಬಂಧಿಸಿಬಿಡುತ್ತಾರೆ. ಹೆಚ್ಚಿನ ಪ್ರಖ್ಯಾತ ಬ್ರ್ಯಾಂಡ್‌ಗಳಲ್ಲಿ ಈಗ ಪ್ರಮುಖ ರಾಯಭಾರಿಯಾಗಿರುವ ದೀಪಿಕಾ ಫ್ಯಾಷನ್ ಪ್ರಿಯ ಮಹಿಳೆಯರಿಗೆ ಮಾದರಿ ಎಂದೆನಿಸಿದ್ದಾರೆ.

Deepika Padukone

ಇಂದಿನ ಲೇಖನದಲ್ಲಿ ದೀಪಿಕಾರ ವಾರ್ಡ್‌ರೋಬ್ ಸ್ಟೈಲ್‌ಗಳನ್ನು ನಾವು ನಿಮ್ಮೆದುರು ಉಣಬಡಿಸಲಿದ್ದು ಇದು ನಿಮ್ಮ ಮನವನ್ನು ಕದಿಯುವುದು ಖಂಡಿತ ಅಂತೆಯೇ ಈ ಸ್ಟೈಲ್ ಅನ್ನು ನೀವು ಕೂಡ ಅನುಸರಿಸುತ್ತೀರಿ ಎಂಬುದು ಖಚಿತ. ಲೇಬಲ್ ಮಿಲ್ಲಿಯ ಕಪ್ಪು ದಿರಿಸನ್ನು ನಯನ ಮನೋಹರವಾಗಿ ದೀಪಿಕಾ ಪ್ರದರ್ಶಿಸಿದ್ದಾರೆ.

ಅವರ ಟಾಪ್‌ನಲ್ಲಿ ಶೋಲ್ಡರ್ ಕಟ್‌ಔಟ್‌ಗಳನ್ನು ನಿಮಗೆ ಗಮನಿಸಬಹುದಾಗಿದ್ದು ಹೆಚ್ಚು ಸ್ಲೀವ್ ಇದರಲ್ಲಿದೆ. ಅಂತೆಯೇ ಪ್ಯಾಂಟ್ ಕೂಡ ಫ್ಲೇರ್‌ಗಳನ್ನು ಒಳಗೊಂಡಿದ್ದು ವಿಭಿನ್ನ ಮಾದರಿಯ ಕೇಶವಿನ್ಯಾಸ ಮತ್ತು ತೂಗಾಡುವ ಕಿವಿಯಾಭರಣವನ್ನು ದೀಪಿಕಾ ದಿರಿಸಿಗೆ ಮ್ಯಾಚ್ ಆಗುವಂತೆ ತೊಟ್ಟುಕೊಂಡಿದ್ದಾರೆ.

Deepika Padukone

ಅಂತೆಯೇ ಇನ್ನೊಂದು ಕಪ್ಪು ಉಡುಗೆಯ ದಿರಿಸಿನಲ್ಲಿ ಪಡುಕೋಣೆ ಮೋಡಿ ಮಾಡಿದ್ದು ಇದು ಪ್ಲಂಗಿಂಗ್ ನೆಕ್‌ಲೈನ್ ಅನ್ನು ಹೊಂದಿದೆ. ಅಂತೂ ಯಾವುದೇ ಉಡುಗೆಯಲ್ಲಿ ಕೂಡ ದೀಪಿಕಾ ಮಿಂಚುವಂತೆ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.

English summary

Deepika Padukone Shows Us How To Wear Black

Deepika showed up in an all black ensemble from the label Milly. The halter neck solid black top comes with shoulder cutouts and a peplum hem. You'll also see extended sleeve addition in this one.
Story first published: Friday, March 31, 2017, 23:31 [IST]
Subscribe Newsletter