For Quick Alerts
ALLOW NOTIFICATIONS  
For Daily Alerts

Year Ender 2022: ಈ ವರ್ಷ ಸಕತ್ ಟ್ರೆಂಡ್ ಆದ 5 ಬಗೆಯ ಸ್ಟೈಲಿಷ್ ಸ್ಯಾರಿಗಳಿವು , ನಿಮ್ಮಲ್ಲಿದೆಯೇ ಈ ಕಲೆಕ್ಷನ್?

|

ಸ್ಯಾರಿ ಎಂಬುವುದು ಎವರ್ ಗ್ರೀನ್‌ ಫ್ಯಾಷನ್‌. ನಮ್ಮ ಭಾರತೀಯ ನೀರೆಗೆ ಸ್ಯಾರಿಯಷ್ಟು ಒಪ್ಪುವ ಡ್ರೆಸ್‌ ಮತ್ತೊಂದಿಲ್ಲ ಎಂಬುವುದನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳುತ್ತಾರೆ, ಎಂಥದ್ದೇ ಫ್ಯಾಷನ್ ಬರಲಿ ಸೀರೆ ಮೀರಿಸುವ ಮತ್ತೊಂದು ಫ್ಯಾಷನ್ ಇಲ್ಲ.

Yearender 2022

ಅದಕ್ಕೆ ಆ ಕಾಲದಿಂದ ಈ ಕಾಲದವರೆಗೂ ಸೀರೆ ಬಳಕೆಯಲ್ಲಿರುವುದು. ಸೀರೆಯನ್ನು ನೀವು ಸಾಂಪ್ರದಾಯಿಕವಾಗಿ ಬಳಸಬಹುದು, ತುಂಬಾ ಮಾಡರ್ನ್ ಆಗಿಯೂ ಬಳಸಬಹುದು. ಆದ್ದರಿಂದ ಭಾರತೀಯ ನಾರಿಗೆ ಸೀರೆ ಸರಿ ಸಾಟಿಯಾದ ಮತ್ತೊಂದು ಉಡುಪು ಇಲ್ವೇ ಇಲ್ಲ ಅನ್ನಬಹುದು, ಈ ಸೀರೆಯಲ್ಲಿ ಪ್ರತೀ ವರ್ಷ ಕೆಲವೊಂದು ಬಗೆಯ ಸೀರೆಗಳು ತುಂಬಾನೇ ಟ್ರೆಂಡ್‌ ಆಗುವುದು.

2022ರಲ್ಲಿಈ ಬಗೆಯ ಸೀರೆಗಳು ತುಂಬಾನೇ ಟ್ರೆಂಡ್ ಆಗಿತ್ತು, ಈ ಕಲೆಕ್ಷನ್ ನಿಮ್ಮ ಬಳಿಯೂ ಇದೆಯೇ?

ಆರ್ಗಾಂಜಾ ಸೀರೆ

ಆರ್ಗಾಂಜಾ ಸೀರೆ

ಈ ಸೀರೆಯನ್ನು ರೇಷ್ಮೆಯಿಂದ ಮಾಡಲಾಗುವುದು. ಇದು ತುಂಬಾ ಲೈಟ್‌ವೇಯ್ಟ್ ಆಗಿರುವುದರಿಂದ ಮಹಿಳೆಯರ ಮೆಚ್ಚುಗೆಯ ಸೀರೆಯಾಗಿದೆ. ಇದನ್ನು ಸಾಂಪ್ರದಾಯಿಕವಾಗಿ ಧರಿಸಬಹುದು. ಮಾಡರ್ನ್‌ ಬ್ಲೌಸ್‌ ಧರಿಸಿ ಈ ಸೀರೆ ಉಟ್ಟರೆ ಅಲ್ಟ್ರಾ ಮಾಡರ್ನ್ ಆಗಿಯೂ ಕಾಣಿಸಬಹುದು. ಅದೇ ಈ ಸೀರೆಯ ವಿಶೇಷತೆ.

ಈ ಸೀರೆ ಈ ವರ್ಷದ ಸೀರೆ ಟ್ರೆಂಡ್‌ನಲ್ಲಿ ನಂ 1 ಸ್ಥಾನದಲ್ಲಿತ್ತು. ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯವರೆಗೆ ಈ ಸೀರೆ ಗಮನ ಸೆಳೆದಿತ್ತು. ಬೆಲೆ ಕೂಡ ಸುಮಾರು 2000 ರೂಯಿಂದ ಪ್ರಾರಂಭವಾಗಿ ದುಬಾರಿ ಬೆಲೆಯ ಸೀರೆ ಕೂಡ ಇದರಲ್ಲಿ ಸಿಗುವುದು.

ಮದುವೆಗೆ, ಪಾರ್ಟಿಗಳಿಗೆ ಧರಿಸಲು ಈ ಬಗೆಯ ಸೀರೆ ಕಲೆಕ್ಷನ್ ಬೆಸ್ಟ್ ಆಗಿದೆ.

 2. ಪ್ಯಾಸ್ಟೆಲ್ ಸಿಲ್ಕ್‌ ಸೀರೆ'

2. ಪ್ಯಾಸ್ಟೆಲ್ ಸಿಲ್ಕ್‌ ಸೀರೆ'

ಇದು ಫ್ಯಾಬ್ರಿಕೇಟಡ್‌ ಡಿಸೈನ್ ಸೀರೆಯಾಗಿದ್ದು ಇದನ್ನು ಸಿಂಪಲ್ ಪ್ಯಾಸ್ಟೆಲ್‌ ಕಲರ್‌ನಿಂದ ಮಾಡಲಾಗಿದೆ. ಈ ಸೀರೆ ಕೂಡ ಫ್ಯಾಷನ್‌ ಪ್ರಿಯರ, ಸೆಲೆಬ್ರಿಟಿಗಳ ಮನಗೆದ್ದಿತು. ಈ ಸೀರೆ ಕೂಡ ಉಡಲು ತುಂಬಾನೇ ಸುಲಭವಾಗಿದೆ. ಸೀರೆಯಲ್ಲಿ ಸ್ಟೈಲ್‌ ಅಂಡ್‌ ಗ್ರೇಸ್‌ ಲುಕ್‌ನಲ್ಲಿ ಕಾಣಲು ಇಷ್ಟಪಡುವವರು ಈ ಸೀರೆ ತುಂಬಾನೇ ಇಷ್ಟಪಡುವುದರಲ್ಲಿ ನೋ ಡೌಟ್.

 3. ಪ್ಲೀಟೆಡ್ ಸೀರೆ

3. ಪ್ಲೀಟೆಡ್ ಸೀರೆ

ಈ ಹಿಂದೆ ಕೂಡ ಈ ಸೀರೆ ಟ್ರೆಂಡ್ ಆಗಿತ್ತು, ಇದೀಗ ಆ ಟ್ರೆಂಡ್‌ ಮರು ಚಾಲ್ತಿಗೆ ಬಂದಿದೆ. ಇದರಲ್ಲಿ ಮೊದಲೇ ನೆರಿಗೆ ರೆಡಿ ಮಾಡಿರುವುದರಿಂದ ಧರಿಸಲು ಕೂಡ ತುಂಬಾನೇ ಸುಲಭ. ಈ ಪ್ಲೀಟೆಡ್ ಸೀರೆ ನೋಡಲು ಭಿನ್ನ ಹಾಗೂ ಸಕತ್‌ ಸ್ಟೈಲಿಷ್ ಕೂಡ. ಈ ಬಗೆಯ ಸೀರೆ ಯಂಗ್‌ ಜನರೇಷನ್‌ನವರ ಫೇವರೆಟ್‌. ಏಕೆಂದರೆ ಕಾಲೇಜ್‌ ಫಂಕ್ಷನ್‌ಗಳಿಗೆ ಸುಲಭವಾಗಿ ಧರಿಸಬಹುದು ಅಲ್ಲದೆ ಸಕತ್ ಸ್ಟೈಲಿಷ್ ಆಗಿಯೂ ಕಾಣಿಸಬಹುದು.

 ಓಂಬ್ರೆ ಸೀರೆ

ಓಂಬ್ರೆ ಸೀರೆ

ಇದು ಬೇರೆ ಬೇರೆ ಬಣ್ಣದಲ್ಲಿ ಲಭ್ಯವಿದೆ, ಇದರ ಯೂನಿಕ್‌ ಶೇಡ್‌ ತುಂಬಾನೇ ಗಮನ ಸೆಳೆಯುವುದರಿಂದ ನಾರಿಯರ ಗಮನ ಸೆಳೆದಿದೆ. ಓಂಬ್ರೆ ಅಂದ್ರೆ ಫ್ರೆಂಚ್ ಭಾಷೆಯಲ್ಲಿ ಶೇಡಡ್ ಎಂಬರ್ಥ. ಈ ಸೀರೆ ಕೂಡ ಡಿಫರೆಂಟ್‌ ಶೇಡ್‌ನಿಂದಾಗಿ ಆಕರ್ಷಕ ಅನಿಸುವುದು.

ಸೀಕ್ವಿನ್‌ ಸೀರೆ

ಸೀಕ್ವಿನ್‌ ಸೀರೆ

ಇದು ನಿಮಗೆ ಸಿಲ್ಕ್, ಮೆಷಿಂಗ್, ಜಾರ್ಜೆಟ್, ಕ್ರೇಪೆ ಹೀಗೆ ಅನೇಕ ಡೆಕೋರೇಷನ್‌ನಲ್ಲಿ ದೊರೆಯುವುದು, ಈ ಸೀರೆ ಪಾರ್ಟಿಗೂ, ಮದುವೆ, ನಾಮಕರಣ ಮುಂತಾದ ಕಾರ್ಯಕ್ರಮಕ್ಕೂ ಸೈ. ಸೆಲೆಬ್ರಿಟಿಗಳು ಈ ಸೀರೆಯಲ್ಲಿ ಗಮನ ಸೆಳೆಯುವ ಮುಲಕ ಜನ ಸಾಮಾನ್ಯರಿಗೂ ಈ ಸೀರೆ ಇಷ್ಟವಾದ ಕಾರಣ ಈ ವರ್ಷದ ಸೀರೆ ಟ್ರೆಂಡ್‌ನಲ್ಲಿ ಇದು ಒಂದಾಗಿದೆ.

English summary

Yearender 2022: Tops 5 Saree Trend In 2022

Yearender 2022: This year have a look at more stylish saree trends,
X
Desktop Bottom Promotion