For Quick Alerts
ALLOW NOTIFICATIONS  
For Daily Alerts

ಗುಂಗುರು ಕೂದಲು ಪಡೆಯುವ ಆಸೆಯೇ? ಸ್ಟ್ರೈಟ್ ನರ್ ಬಳಸಿ ಕರ್ಲಿ ಹೇರ್ ಮಾಡುವ ಸುಲಭ ವಿಧಾನ

|

ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೇಶರಾಶಿಯ ಪಾತ್ರ ಮಹತ್ವದ್ದು. ಪ್ರತಿಯೊಬ್ಬರು ಹುಟ್ಟಿನಿಂದಲೇ ವಿಶೇಷ ಬಗೆಯ ಕೇಶರಾಶಿಯನ್ನು ಹೊಂದಿರುತ್ತಾರೆ. ಅದೇ ಅವರ ಮೆರಗು ಹಾಗೂ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವುದು. ಕೆಲವು ಬಾರಿ ನಾವು ಕೇಶ ವಿನ್ಯಾಸವನ್ನು ಬದಲಿಸಿಕೊಂಡಾಗಲೂ ನಮ್ಮ ಆಕರ್ಷಣೆಯಲ್ಲಿ ವಿಭಿನ್ನತೆಯನ್ನು ಕಂಡುಕೊಳ್ಳಬಹುದು. ನೇರ ಕೇಶರಾಶಿಯ ರಚನೆಯನ್ನು ಹೊಂದಿದವರು ಗುಂಗುರು ಕೇಶ ವಿನ್ಯಾಸವನ್ನು, ಗುಂಗುರು ರಚನೆಯನ್ನು ಹೊಂದಿದವರು ನೇರ ಕೇಶರಾಶಿಯಾಗಿ ಬದಲಾಯಿಸಿಕೊಳ್ಳಬಹುದು. ಆದರೆ ಅದು ಕೃತಕ ವಿಧಾನ ಆಗಿರುವುದರಿಂದ ಕೇಶಗಳ ಗುಣಮಟ್ಟವನ್ನು ಹಾಗೂ ಆರೋಗ್ಯವನ್ನು ಹಾಳುಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಕೆಲವು ಸೌಂದರ್ಯ ತಜ್ಞರ ಸಹಾಯದಿಂದ ಕೇಶಗಳ ಬಣ್ಣ, ವಿನ್ಯಾಸ ಹಾಗೂ ರಚನೆಯನ್ನು ಬದಲಾಯಿಸಿಕೊಳ್ಳುವುದು ಇಂದು ಸಾಮಾನ್ಯವಾಗಿದೆ. ಆದರೆ ಅದು ದುಬಾರಿ ವೆಚ್ಚವನ್ನು ಹೊಂದುತ್ತದೆ. ಆ ಕಾರಣದಿಂದ ಬಹುತೇಕ ಮಂದಿ ಕೂದಲ ರಚನೆಯನ್ನು ಬದಲಿಸಿಕೊಳ್ಳುವ ಆಸೆಯನ್ನು ಹೊಂದಿದ್ದರೂ ದುಬಾರಿ ವೆಚ್ಚದ ಕಾರಣದಿಂದ ಹಿಂದೆ ಸರಿಯುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಗುಂಗುರು ಕೂದಲ ರಚನೆ ಹೊಂದಿರುವವರ ಸಂಖ್ಯೆ ಕಡಿಮೆ ಎಂದು ಹೇಳಬಹುದು. ಸಾಮಾನ್ಯವಾಗಿ ಬಹುತೇಕ ಮಂದಿ ನೇರ ಕೇಶ ರಚನೆಯನ್ನೇ ಹೊಂದಿರುತ್ತಾರೆ.

Straightener

ಕೆಲವು ಆಧುನಿಕ ಉಡುಗೆ-ತೊಡುಗೆಗೆ ಗುಂಗರು ಕೂದಲಿನ ರಚನೆಯು ಹೆಚ್ಚು ಆಕರ್ಷಣೆಯಿಂದ ಕೂಡಿರುತ್ತದೆ. ಕೇಶರಾಶಿಯ ತುದಿಯ ಭಾಗ ಮಾತ್ರ ಗುಂಗುರು ವಿನ್ಯಾಸ ಹೊಂದಲು ಬಯಸುವವರು, ಸಂಪೂರ್ಣ ಗುಂಗುರು ಕೂದಲನ್ನು ಬಯಸುವವರು, ಅರೆ ಗುಂಗುರು ವಿನ್ಯಾಸ ಬಯಸುವವರು ಹೇರ್ ಸ್ಟ್ರೈಟ್ ನರ್ ಬಳಸುವುದರ ಮೂಲಕ ಮನೆಯಲ್ಲಿಯೇ ಕೇಶಗಳ ರಚನೆಯನ್ನು ಬದಲಿಸಿಕೊಳ್ಳಬಹುದು. ನೀವು ಸಹ ನಿಮ್ಮ ಕೇಶಗಳ ರಚನೆಯನ್ನು ತಾತ್ಕಾಲಿಕವಾಗಿ ಗುಂಗುರು ರಚನೆಯನ್ನು ಮಾಡಿಕೊಳ್ಳಲು ಬಯಸುತ್ತಿದ್ದರೆ ಈ ವಿಧಾನಗಳು ಬಲು ಸುಲಭವಾಗುತ್ತವೆ.

ಸ್ವಚ್ಛ ಮತ್ತು ಒಣ ಕೂದಲಿನಿಂದ ಪ್ರಾರಂಭಿಸಿ

ಸ್ವಚ್ಛ ಮತ್ತು ಒಣ ಕೂದಲಿನಿಂದ ಪ್ರಾರಂಭಿಸಿ

ಮೊದಲು ನಿಮ್ಮ ಕೇಶರಾಶಿಯನ್ನು ಸ್ವಚ್ಛಗೊಳಿಸಿ. ನಂತರ ಒಣಗಿಸಿಕೊಳ್ಳಿ. ಒದ್ದೆಯಾದ ಕೇಶರಾಶಿಯು ಗುಂಗುರು ರಚನೆಯನ್ನು ಹೊಂದಿರುವುದಿಲ್ಲ. ಹಾಗಾಗಿ ಕೂದಲನ್ನು ಮೊದಲು ಸಂಪೂರ್ಣವಾಗಿ ಒಣಗಿಸಿಕೊಳ್ಳಬೇಕು. ಕೇಶರಾಶಿಯನ್ನು 24 ಗಂಟೆಯ ಮೊದಲೇ ಸ್ವಚ್ಛವಾಗಿಸಿಕೊಂಡು ಒಣಗಿಸಿಕೊಂಡಿರಬೇಕು. ನೀವು ಕೇಶರಾಶಿಯನ್ನು ನೇರವಾಗಿಸಿಕೊಳ್ಳಲು ಬಳಸುವ ಮೌಸ್ (ಕೂದಲನ್ನು ಬಿಗಿಯಾಗಿ ನಿಲ್ಲಲು ಬಳಸುವ ಕ್ರೀಮ್) ಅನ್ನು ಬಳಸಿ. ಆಗ ನಿಮ್ಮ ಕೂದಲು ಗುಂಗುರು ವಿನ್ಯಾಸ ಹೊಂದದಂತೆ ಅದು ತಡೆಯುವುದು.

ಹೇರ್ ಸ್ಟ್ರೈಟ್ ‍ನರ್ ಬಳಸಿ

ಹೇರ್ ಸ್ಟ್ರೈಟ್ ‍ನರ್ ಬಳಸಿ

ನೀವು ಬಳಸುವ ಹೇರ್ ಸ್ಟ್ರೈಟ್ ನರ್ ನೇರವಾಗಿ, ತೆಳುವಾದ ಚಪ್ಪಟೆಯ ವಿನ್ಯಾಸವನ್ನು ಹೊಂದಿರಬೇಕು. ಅದರ ತುದಿಯು ದುಂಡಾದ ಅಂಚುಗಳಿಂದ ಕೂಡಿದ್ದರೆ, ಕೂದಲನ್ನು ಸುಲಭವಾಗಿ ಸುರುಳಿ ಸುತ್ತಲು ಸಹಾಯಮಾಡುತ್ತದೆ. ಫ್ಲಾಟ್, ಪ್ಯಾಡಲ್ ಶೈಲಿಯಲ್ಲಿರುವ ಹೇರ್ ಸ್ಟ್ರೈಟ್ ನರ್ ಅಲ್ಲಿ ಕೂದಲನ್ನು ಸುಲಭವಾಗಿ ಸುರುಳಿ ಸುತ್ತಲು ಸಾಧ್ಯವಾಗುವುದಿಲ್ಲ. ಕೂದಲುಗಳನ್ನು ಸೂಕ್ತರೀತಿಯಲ್ಲಿ ಸುರುಳಿ ಸುತ್ತಿ, ಹಿಡಿದಿಡಲು ಕಷ್ಟವಾಗುತ್ತದೆ.

ಹಾಗಾಗಿ ನೀವು ಗುಣಮಟ್ಟದ ಫ್ಲಾಟ್ ಹೇರ್‍ಸ್ಟ್ರೈಟ್ ‍ನರ್ ಪಡೆದುಕೊಳ್ಳಿ. ಅದು ನಿಮ್ಮ ಕೆಲಸವನ್ನು ಸುಲಭ ಹಾಗೂ ವೇಗದಲ್ಲಿ ಆಗುವಂತೆ ಮಾಡುತ್ತದೆ. ಇದು ಕಳಪೆ ಮಟ್ಟದ ಸ್ಟ್ರೈಟ್ ‍ನರ್ ಗಳಂತೆ ಕೂದಲನ್ನು ಹಾಳು ಮಾಡುವುದಿಲ್ಲ. ಬದಲಿಗೆ ಕೇಶರಾಶಿಗಳನ್ನು ಹೊಳಪು ಹಾಗೂ ಸುರುಳಿಯ ರಚನೆಯಲ್ಲಿ ಆಕರ್ಷಿಸುವಂತೆ ಮಾಡುತ್ತದೆ.

ಕೇಶ ರಾಶಿಗೆ ಒಗ್ಗುವಷ್ಟು ಹೇರ್ ಸ್ಟ್ರೈಟ್ ‍ನರ್ ಅನ್ನು ಬಿಸಿಮಾಡಿಕೊಳ್ಳಿ. ನಿಮ್ಮ ಕೇಶ ರಾಶಿಯು ತೆಳುವಾದ ಗುಣಮಟ್ಟವನ್ನು ಹೊಂದಿದ್ದರೆ ಹೇರ್ ಸ್ಟ್ರೈಟ್ ‍ನರ್ ಅನ್ನು 300 ಡಿಗ್ರಿಗಿಂತ ಕಡಿಮೆ ತಾಪಮಾನ ಇರುವಂತೆ ನೋಡಿಕೊಳ್ಳಿ. ಸಾಮಾನ್ಯ ಕೇಶ ರಾಶಿಗೆ 300 ರಿಂದ 380 ಡಿಗ್ರಿಯ ವರೆಗೆ ತಾಪಮಾನವನ್ನು ಹೊಂದಿಸಿಕೊಳ್ಳಬೇಕು. ನಿಮ್ಮ ಕೇಶರಾಶಿಯು ಅಧಿಕ ದಪ್ಪ, ಒರಟು ಅಥವಾ ಉಬ್ಬಸಗಳಂತಹ ವಿನ್ಯಾಸವನ್ನು ಹೊಂದಿದ್ದರೆ ಆಗ ನೀವು 350 ರಿಂದ 400 ಡಿಗ್ರಿಯಷ್ಟು ತಾಪಮಾನವನ್ನು ಹೊಂದಿಸಿಕೊಳ್ಳಬಹುದು.

ಥರ್ಮಲ್ ಸ್ಪ್ರೇ ಬಳಸಿ

ಥರ್ಮಲ್ ಸ್ಪ್ರೇ ಬಳಸಿ

ಮೊದಲು ಹೀಟ್ ಪ್ರೊಟೆಕ್ಟೆಂಟ್ ಅಥವಾ ಧರ್ಮಲ್ ಸ್ಪ್ರೇ ಅನ್ನು ಅನ್ವಯಿಸಿ. ಅದು ಬಿಸಿಯಾದ ಹೇರ್ ಸ್ಟ್ರೈಟ್ ‍ನರ್ ಮತ್ತು ಕೇಶ ರಾಶಿಗಳ ನಡುವೆ ತಡೆ ಗೋಡೆಯಂತೆ ಕೆಲಸ ನಿರ್ವಹಿಸುತ್ತದೆ. ಇದರಿಂದ ಕೂದಲು ಸುಡುವುದಿಲ್ಲ. ಅಲ್ಲದೆ ಬಿಸಿಗೆ ಯಾವುದೇ ರೀತಿಯ ಹಾನಿಯನ್ನು ಪಡೆದುಕೊಳ್ಳುವುದಿಲ್ಲ. ಅದನ್ನು ಅನ್ವಯಿಸಿಕೊಂಡರೆ ಬಾಚಣಿಗೆಯ ಸಹಾಯದಿಂದ ಬಾಚುವ ಅಗತ್ಯವೂ ಇರುವುದಿಲ್ಲ. ಇದು ಬಹುಬೇಗ ಒಣಗುವ ಗುಣವನ್ನು ಒಳಗೊಂಡಿದೆ. ದಪ್ಪ ಕೂದಲನ್ನು ಹೊಂದಿದ್ದರೆ ನೀವು ಅದನ್ನು ಕೇಶರಾಶಿಯ ಪ್ರತಿ ಭಾಗದಲ್ಲೂ ತಗಲುವಂತೆ ಅನ್ವಯಿಸಿಕೊಳ್ಳಬೇಕು. ನಂತರ ಕೂದಲು ಗಂಟಾಗದೆ ಇರುವಂತೆ ಒಮ್ಮೆ ಬಾಚಣಿಕೆಯಿಂದ ಬಾಚಿಕೊಳ್ಳಬೇಕು.

ಎರಡು ಭಾಗವಾಗಿ ವಿಭಾಗಿಸಿಕೊಳ್ಳಿ

ಎರಡು ಭಾಗವಾಗಿ ವಿಭಾಗಿಸಿಕೊಳ್ಳಿ

ಸಂಪೂರ್ಣವಾಗಿ ಒಮ್ಮೆಲೇ ಕೇಶರಾಶಿಯನ್ನು ಸುರುಳಿ ಮಾಡಬಾರದು. ಮೊದಲು ಕೇಶರಾಶಿಯನ್ನು ಎರಡು ಭಾಗಗಳನ್ನಾಗಿ ವಿಭಾಗಿಸಿಕೊಳ್ಳಬೇಕು. ನಂತರ ಒಂದು ಭಾಗವನ್ನು ಕಿವಿಗಿಂತ ಮೇಲ್ಭಾಗದಲ್ಲಿ ಒಂದು ಬನ್ ವಿನ್ಯಾಸ ಮಾಡಿ ಕಟ್ಟಿಕೊಳ್ಳಿ. ಇನ್ನೊಂದು ಭಾಗದ ಕೇಶರಾಶಿಯಲ್ಲಿ ಸ್ವಲ್ಪ ಸ್ವಲ್ಪ ಕೂದಲುಗಳನ್ನು ಎಳೆ ಎಳೆಯಾಗಿ ಬಿಡಿಸಿಕೊಂಡು ಸುರುಳಿಯಾಗಿ ಸುತ್ತಿಕೊಳ್ಳಬೇಕು. ಸ್ಟ್ರೈಟ್ ‍ನರ್ ಅಲ್ಲಿ 1 ರಿಂದ 2 ಇಂಚ್ ‍ನಷ್ಟು ಕೇಶರಾಶಿಯ ತುದಿಯನ್ನು ಸುತ್ತಿಕೊಂಡು ಗುಂಗುರು ಅಥವಾ ಸುರುಳಿ ವಿನ್ಯಾಸವನ್ನು ಮಾಡಬೇಕು. ಸುರುಳಿ ಆಗದಿರುವ ಕೇಶರಾಶಿಯನ್ನು ಸಹ ಸ್ವಲ್ಪ ಸ್ವಲ್ಪವಾಗಿಯೇ ಸ್ಟ್ರೈಟ್ ‍ನರ್ ಅಲ್ಲಿ ಸುತ್ತಿ ಸುರುಳಿಯನ್ನು ಮಾಡಿಕೊಳ್ಳಬೇಕು.

ಸುರುಳಿ ಮತ್ತು ಗುಂಗುರು ವಿನ್ಯಾಸ

ಸುರುಳಿ ಮತ್ತು ಗುಂಗುರು ವಿನ್ಯಾಸ

ಫ್ಲಿಕ್ಸ್ ಮತ್ತು ಗುಂಗುರು ವಿನ್ಯಾಸ ಎನ್ನುವ ಎರಡು ಬಗೆಯಲ್ಲಿ ಕೇಶ ರಚನೆಯನ್ನು ಬದಲಿಸಬಹುದು. ನಿಮ್ಮ ಮುಖದ ಅಥವಾ ಸೌಂದರ್ಯದ ನೋಟವನ್ನು ಹೆಚ್ಚಿಸಿಕೊಳ್ಳಲು ಎರಡೂ ವಿಧಾನವನ್ನು ಪ್ರಯತ್ನಿಸಬಹುದು.

ಫ್ಲಿಕ್ಸ್: ಫ್ಲಿಕ್ಸ್ ಮಾದರಿಯ ಕೇಶ ರಚನೆ ಹೊಂದಲು ಬಯಸಿದರೆ ನೀವು ಕೂದಲಿನ ಉದ್ದದಲ್ಲಿ ಮಧ್ಯದಿಂದಲೇ ಹೇರ್ ಸ್ಟ್ರೈಟ್ ‍ನರ್ ಬಳಸಿ ಸುತ್ತಿಕೊಳ್ಳಬೇಕು. ಆಗ ಯು ಆಕಾರದಲ್ಲಿ ಸ್ಟ್ರೈಟ್ ‍ನರ್ ಅನ್ನು ಸುತ್ತಿ ನಿಧಾನಮವಾಗಿ ಕೂದಲ ತುದಿಯವರೆಗೆ ಜಾರಿಸುತ್ತಾ ಬರಬೇಕು. ನೀವು ದೊಡ್ಡ ದೊಡ್ಡ ವಿನ್ಯಾಸದ ಫ್ಲಿಕ್ಸ್ ಹೊಂದಲು ಬಯಸಿದರೆ ಸ್ಟ್ರೈಟ್ ‍ನರ್ ಅನ್ನು ನಿಧಾನವಾಗಿ ಜಾರಿಸಬೇಕು.

ಗುಂಗುರು ವಿನ್ಯಾಸಕ್ಕೆ

ಗುಂಗುರು ವಿನ್ಯಾಸಕ್ಕೆ

ಹೆಚ್ಚು ಗುಂಗುರು ರಚನೆಯನ್ನು ಬಯಸಿದರೆ, ನೆತ್ತಿಯ ಭಾಗದಿಂದಲೇ ಕೂದಲನ್ನು ಸುತ್ತಿಕೊಂಡು ನಿಧಾನವಾಗಿ ಸುರುಳಿಯನ್ನು ಜಾರಿಸುತ್ತಾ ಬನ್ನಿ. ವೇಗವಾಗಿ ಸುರುಳಿಯನ್ನು ಸುತ್ತಿ ಜಾರಿಸುತ್ತಾ ಬಂದರೆ ದೊಡ್ಡ ದೊಡ್ಡ ರಚನೆಯ ಗುಂಗುರು ಕೂದಲನ್ನು ಪಡೆಯಬಹುದು. ಸುಲಭವಾಗಿ ನಿಮಗೆ ಇಷ್ಟವಾಗುವ ರೀತಿಯಲ್ಲಿ ಗುಂಗುರು ಕೇಶ ರಚನೆಯನ್ನು ಪಡೆಯಬಹುದು.

ಹೇರ್ ಸ್ಪ್ರೇ ಬಳಸಿ

ಹೇರ್ ಸ್ಪ್ರೇ ಬಳಸಿ

ನಿಮ್ಮ ಕೂದಲು ಸುಲಭವಾಗಿ ಸುರಳಿಯಾಗದಿದ್ದರೆ ಅಥವಾ ಸುರುಳಿ ವಿನ್ಯಾಸವನ್ನು ಹಿಡಿದಿಡಲು ಕಷ್ಟವಾಗುತ್ತಿದ್ದರೆ, ಸುರುಳಿ ವಿನ್ಯಾಸದ ಕ್ರಮ ಅನ್ವಯಿಸುವ ಮೊದಲು ಹೇರ್ ಸ್ಪ್ರೇ ಅನ್ನು ಬಳಸಬೇಕು. ಆಗ ಸುಲಭವಾಗಿ ಸುರುಳಿ ರಚನೆಯನ್ನು ಮಾಡಬಹುದು. ಕೂದಲು ಗಂಟಾಗಿದ್ದರೆ ಅಥವಾ ಬಾಚಣಿಗೆಯಿಂದ ಸೂಕ್ತ ರೀತಿಯಲ್ಲಿ ಬಾಚಿಕೊಳ್ಳದೆ ಇದ್ದಾಗ ಹೇರ್ ಸ್ಪ್ರೇ ಸಿಂಪಡಿಸಬಾರದು. ಹಾಗೊಮ್ಮೆ ಸಿಂಪಡಿಸಿದರೆ ಕೂದಲು ಗಟ್ಟಿಯಾಗುವುದು. ಕೂದಲು ಒರಟಾದ ವಿನ್ಯಾಸಕ್ಕೆ ತಿರುಗುತ್ತದೆ.

ಕೆಲವು ವಿಧಾನ ಅನ್ವಯಿಸಿ

ಕೆಲವು ವಿಧಾನ ಅನ್ವಯಿಸಿ

ಕೂದಲನ್ನು ಸುರಳಿ ಮಾಡುವಾಗ ಯಾವ ಬಗೆಯ ಸುರಳಿ ವಿನ್ಯಾಸ ಎನ್ನುವುದನ್ನು ಮೊದಲು ನಿರ್ಧರಿಸಿಕೊಳ್ಳಿ. ನಂತರ ಕೇಶ ರಾಶಿಯನ್ನು ಸೂಕ್ತ ವಿಭಾಗಗಳಾಗಿ ವಿಂಗಡಿಸಿಕೊಂಡು ಸುರಳಿ ಆಕಾರಕ್ಕೆ ಬದಲಾಯಿಸಿ. ನೀವು ಗುಂಗುರು ವಿನ್ಯಾಸ ಮಾಡುವಾಗ ಸೂಕ್ತ ಪ್ರಮಾಣದಲ್ಲಿ ಕೇಶವನ್ನು ಬಳಸಿಕೊಳ್ಳಬೇಕು. ಆಗಲೇ ನಿಮ್ಮ ಎಲ್ಲಾ ಕೇಶರಾಶಿಯು ಒಂದೇ ವಿನ್ಯಾಸದಲ್ಲಿ ಕಂಗೊಳಿಸುವುದು.

ಮುಕ್ತಾಯದ ಹಂತ

ಮುಕ್ತಾಯದ ಹಂತ

ಕರ್ಲಿಂಗ್ ಅಥವಾ ಸುರುಳಿ ವಿನ್ಯಾಸವನ್ನು ಮುಗಿಸಿದ ಬಳಿಕ ನಿಮಗೆ ಬೇಕಾದ ರೀತಿಯಲ್ಲಿ ಕೇಶ ರಾಶಿಯನ್ನು ಕಟ್ಟಬಹುದು. ಕೂದಲನ್ನು ಬೇರೆ ಬೇರೆ ಬಗೆಯಲ್ಲಿ ಕೇಶ ವಿನ್ಯಾಸಕ್ಕೆ ಒಡ್ಡಬಹುದು. ಇಲ್ಲವೇ ಫ್ರೀ ಆಗಿ ಬಿಟ್ಟುಕೊಳ್ಳಬಹುದು. ನೀವು ಈ ಕ್ರಮದ ಮೂಲಕ ಸುರುಳಿ ವಿನ್ಯಾಸ ಹೊಂದಿರುವಾಗ ಆದ್ರತೆ ಇರುವ ಸ್ಥಳಕ್ಕೆ ಹೋಗದಿರಿ. ಕೂದಲು ಒದ್ದೆ ಆದರೆ ಅಥವಾ ಮಂಜಿನಂತಹ ನೀರಿನ ಸ್ಪರ್ಶ ಪಡೆದರೆ ಸುರುಳಿ ವಿನ್ಯಾಸ ಹೋಗುತ್ತದೆ. ಹಾಗೊಮ್ಮೆ ನೀವು ಆದ್ರತೆ ಇರುವ ಪ್ರದೇಶಕ್ಕೆ ಹೋಗುತ್ತಿದ್ದೀರಿ ಎಂದರೆ ನೀರಿನಿಂದ ನಿಮ್ಮ ಕೇಶರಾಶಿಯನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡಿರಬೇಕು.

English summary

How To Curl Your Hair With a Straightener?

Curling hair with a straightener can create full, bouncy curls that won't look like ringlets. It takes a little practice, but once you get the technique down, you will look amazing and practically red-carpet ready. Follow along to learn how to get the beautiful curls you've always wanted – without using a curling iron.
X
Desktop Bottom Promotion