For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತ್ವಚೆ ಆರೈಕೆ: ಲೋಷನ್, ಸೋಪ್, ಸನ್‌ಸ್ಕ್ರೀನ್‌ ವಿಷಯದಲ್ಲಿ ಈ ಮಿಸ್ಟೇಕ್ಸ್ ಮಾಡಿದರಿ

|

ಚಳಿಗಾಲದಲ್ಲಿ ಪ್ರತಿಯೊಬ್ಬರಿಗೂ ಕಾಡುವ ಸಮಸ್ಯೆಯೆಂದರೆ ತ್ವಚೆ ಸಮಸ್ಯೆ, ಡ್ರೈ ಸ್ಕಿನ್(ಒಣ ತ್ವಚೆ) ಇರುವವರಿಗಂತೂ ಚಳಿಗಾಲ ಅಷ್ಟು ಪ್ರಿಯವಾದ ಕಾಲವಾಗಿರುವುದಿಲ್ಲ. ಒಣ ತ್ವಚೆಯಿಂದಾಗಿ ಕೈ-ಕಾಲುಗಳಲ್ಲಿ ಬಿರುಕು ಉಂಟಾಗುವುದು, ಕೆಲವರಿಗಂತೂ ಪಾದಗಳು ಒಡೆದು ರಕ್ತ ಕೂಡ ಬರುವುದು, ನಡೆದಾಡಲೂ ಕಷ್ಟವಾಗುವುದು. ಇನ್ನು ತುಂಬಾ ಚಳಿಯಿರುವ ಕಡೆ ಎಣ್ಣೆ ತ್ವಚೆ ಇರುವವರಿಗೆ ತ್ವಚೆ ಒಡೆಯಲಾರಂಭಿಸುವುದು, ಆದ್ದರಿಂದ ಈ ಸಮಯದಲ್ಲಿ ತ್ವಚೆಯನ್ನು ಎಷ್ಟು ಆರೈಕೆ ಮಾಡಿದರೂ ಸಾಲದು.

ಚಳಿಗಾಲದಲ್ಲಿ ತ್ವಚೆ ಮತ್ತಷ್ಟು ಡ್ರೈಯಾಗಲು ಈ ಅಂಶಗಳು ಕಾರಣ:

ಚಳಿಗಾಲದಲ್ಲಿ ತ್ವಚೆ ಮತ್ತಷ್ಟು ಡ್ರೈಯಾಗಲು ಈ ಅಂಶಗಳು ಕಾರಣ:

* ಒಣ ಹಬೆ, ಇದರಿಂದ ತ್ವಚೆಯಲ್ಲಿರುವ ತೇವಾಂಶ ಬೇಗನೆ ಆವಿಯಾಗುವುದು.

* ಇನ್‌ಡೋರ್‌ ಹೀಟಿಂಗ್‌, ಇದರಿಂದ ತ್ವಚೆ ಮತ್ತಷ್ಟು ಡ್ರೈಯಾಗುವುದು

* ಬಿಸಿ-ಬಿಸಿ ನೀರಿನ ಸ್ನಾನ

* ಕೆಲವೊಂದು ಬಗೆಯ ಸೋಪು

* ಆಗಾಗ ಕೈತೊಳೆಯುವುದು

* ಮಾಯಿಶ್ಚರೈರಸ್, ಬಾಡಿಲೋಷನ್‌ ಬಳಸದೇ ಇರುವುದು, ಕಡಿಮೆ ಬಳಸುವುದು

* ಬಟ್ಟೆ ತೊಳೆಯಲು ಬಳಸುವ ಡಿಟರ್ಜೆಂಟ್, ಸೋಪ್‌ಗಳು

ಚಳಿಗಾಲದಲ್ಲಿ ತ್ವಚೆ ಡ್ರೈಯಾಗುವುದನ್ನು ತಪ್ಪಿಸುವುದು ಹೇಗೆ?

ಚಳಿಗಾಲದಲ್ಲಿ ತ್ವಚೆ ಡ್ರೈಯಾಗುವುದನ್ನು ತಪ್ಪಿಸುವುದು ಹೇಗೆ?

ಚಳಿಯಲ್ಲಿ ಬಿಸಿ-ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ತುಂಬಾ ಹಿತ ಅನಿಸುವುದು, ಆದರೆ ಅದು ತ್ವಚೆಗೆ ಒಳ್ಳೆಯದಲ್ಲ, ಬಿಸಿ-ಬಿಸಿ ನೀರು ಮೈಗೆ ಬಿದ್ದಾಗ ತ್ವಚೆ ಮತ್ತಷ್ಟು ಡ್ರೈಯಾಗುವುದು, ಅಲ್ಲದೆ ಕೆಲವೊಂದು ಬಗೆಯ ಸೋಪ್‌ ಕೂಡ ತ್ವಚೆಯನ್ನು ಮತ್ತಷ್ಟು ಡ್ರೈಯಾಗಿಸುವುದು.

ಚಳಿಗಾಲದಲ್ಲಿ ಸ್ನಾನ ಮಾಡುವಾಗ ಈ ನಿಯಮಗಳನ್ನು ಪಾಲಿಸಿ:

ಚಳಿಗಾಲದಲ್ಲಿ ಸ್ನಾನ ಮಾಡುವಾಗ ಈ ನಿಯಮಗಳನ್ನು ಪಾಲಿಸಿ:

* ಚಳಿಗಾಲದಲ್ಲಿ ನೀವು ಸ್ನಾನ ಮಾಡುವಾಗ ಹದ ಬಿಸಿ ನೀರಿನಲ್ಲಿ ಸ್ನಾನ ಮಾಡಿ, ಸ್ನಾನಕ್ಕೆ ಲೋಷನ್ ಬಳಸಿದರೆ ಒಳ್ಳೆಯದು.

* ಸೋಪ್‌ ಬಳಸುವುದಾದರೂ ಸರಿಯಾದ pH ಪ್ರಮಾಣವಿರುವ ಸೋಪ್‌ ಬಳಸಿ.

* ಅಲ್ಲದೆ ಸ್ನಾನ ಮುಗಿಸಿ ಬಂದ ಬಾಡಿ ಲೋಷನ್‌ ಹಚ್ಚಿ.

ಆಗಾಗ ಕೈ ತೊಳೆಯುವಾಗ ಡ್ರೈಯಾಗದಿರಲು ಹೀಗೆ ಮಾಡಿ:

ಆಗಾಗ ಕೈ ತೊಳೆಯುವಾಗ ಡ್ರೈಯಾಗದಿರಲು ಹೀಗೆ ಮಾಡಿ:

* ಆಲ್ಕೋಹಾಲ್‌ ಅಂಶವಿರುವ ಸ್ಯಾನಿಟೈಸರ್‌ ಬಳಸುವುದರಿಂದ ಕೈ ತುಂಬಾನೇ ಟ್ರೈಯಾಗುವುದು, ಆಗಾಗ ಕೈ ತೊಳೆಯುವುದು ಆರೋಗ್ಯಕ್ಕೆ ಒಳ್ಳೆಯದು, ಆದರೆ ತ್ವಚೆ ತುಂಬಾ ಡ್ರೈಯಾಗುವುದು, ಇದನ್ನು ತಡೆಗಟ್ಟಲು ಪ್ರತಿ ಬಾರಿ ಕೈ ತೊಳೆದ ಬಳಿಕ ಲೋಷನ್ ಹಚ್ಚಿ.

ತುಟಿ ಒಣಗುತ್ತಿದೆಯೇ?

ತುಟಿ ಒಣಗುತ್ತಿದೆಯೇ?

ತುಂಬಾ ಸುವಾಸನೆ ಬೀರುವ ಲಿಪ್‌ಬಾಮ್‌ ಬಳಸಬೇಡಿ, ಬದಲಿಗೆ ಪ್ಲೈಯಿನ್ ಲಿಪ್‌ ಬಾಮ್‌ ಅಥವಾ ಪೆಟ್ರೋಲಿಯಂ ಜೆಲ್ಲಿ, ವ್ಯಾಸ್ಲೈನ್ ಹಚ್ಚಿ. ನೀವು ಗ್ಲಿಸರಿನ್ ಬೇಕಾದರೂ ಹಚ್ಚುತ್ತಾ ಇರಬಹುದು, ಹೀಗೆ ಮಾಡುವುದರಿಂದ ತ್ವಚೆ ಡ್ರೈಯಾಗುವುದಿಲ್ಲ.

ಬಟ್ಟೆ

ಬಟ್ಟೆ

ಕೆಲವೊಂದು ಡಿಟರ್ಜೆಂಟ್‌ ಬಳಸಿ ತೊಳೆದ ಬಟ್ಟೆ ಧರಿಸುವುದರಿಂದ ತ್ವಚೆಯಲ್ಲಿ ತುರಿಕೆ ಕಂಡು ಬರುವುದು. ಆ ರೀತಿ ಅನಿಸುತ್ತಿದ್ದರೆ ಅವುಗಳನ್ನು ಬಳಸಬೇಡಿ, ಕೆಮಿಕಲ್ ಫ್ರೀ ಕ್ಲೀನರ್ ಬಳಸಿ, ಇದರಲ್ಲಿ ಯಾವುದೇ ಡೈ ಅಥವಾ ಪರ್ಫ್ಯೂಮ್‌ ಇರುವುದಿಲ್ಲ, ಅಲ್ಲದ ಡ್ರೈಯರ್‌ ಶೀಟ್‌ನಲ್ಲಿ ಕೆಮಿಕಲ್‌ ಇರುವುದರಿಂದ ಇದನ್ನು ಬಳಸಬೇಡಿ.

ಚಳಿಗಾಲದಲ್ಲಿ ಬಳಸುವ ಸನ್‌ಸ್ಕ್ರೀನ್‌

ಚಳಿಗಾಲದಲ್ಲಿ ಬಳಸುವ ಸನ್‌ಸ್ಕ್ರೀನ್‌

ಚಳಿಗಾಲದಲ್ಲೂ ತ್ವಚೆಯ ಆರೈಕೆಗೆ ಸನ್‌ಸ್ಕ್ರೀನ್‌ ಲೋಷನ್ ಬಳಸಬೇಕು. ನೀವು ಡ್ರೈವ್ ಮಾಡುವಾಗ, ಹೊರಗಡೆ ಬಿಸಿಲಿನಲ್ಲಿ ಓಡಾಡುವಾಗ ಚಳಿಗಾಲದ ಬಿಸಿಲಿನ ಉರಿ ಅಧಿಕವಿರುತ್ತದೆ, ಇದರಿಂದ ಸನ್‌ಟ್ಯಾನ್‌ ಉಂಟಾಗುವುದು, ಆದ್ದರಿಂದ ಸನ್‌ಸ್ಕ್ರೀನ್ ಲೋಷನ್ ಬಳಸಿ.

ನೀವು ಹೆಚ್ಚು ಹೊರಗಡೆ ಬಿಸಿಲಿನಲ್ಲಿ ಓಡಾಡುತ್ತಿಲ್ಲ ಎಂದಾದರೆ SPF 15 ಅಥವಾ 30 ಇರುವುದು ಬಳಸಿ. ನಿಮಗೆ ಬಿಸಿಲಿನಲ್ಲಿಯೇ ಕೆಲಸ ಎಂದಾದರೆ 30 ಅಥವಾ 45 ಸನ್‌ಸ್ಕ್ರೀನ್ ಲೋಷನ್ ಬಳಸಿ.

English summary

Winter Skin Care: Do's and Don'ts of Lotion, Soap and Sunscreen in Kannada

Winter Skin Care: Do's and Don'ts of Lotion, Soap and Sunscreen in Kannada,Read on...
Story first published: Wednesday, December 22, 2021, 9:31 [IST]
X
Desktop Bottom Promotion