Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ವಯಸ್ಸು 55 ಆದ ನಂತರ ಬೇವನ್ನು ಹೀಗೆ ಹಚ್ಚಿದರೆ ತ್ವಚೆ ಸುಕ್ಕಾಗುವುದೇ ಇಲ್ಲ
ನಮ್ಮ ತ್ವಚೆ ಆಕರ್ಷಕವಾಗಿ ಕಾಣಬೇಕೆಂಬ ಆಸೆ ಯಾರಿಗೆ ತಾನೆ ಇರುವುದಿಲ್ಲ. ಹದಿಹರೆಯದಲ್ಲಿ ಯಾವುದೇ ಕಾಳಜಿ ವಹಿಸದಿದ್ದರೂ ತ್ವಚೆಯ ಅಂದವಾಗಿ ಕಾಣುತ್ತದೆ, ಆದರೆ ವಯಸ್ಸಾಗುತ್ತಾ ತ್ವಚೆಯ ಆಕರ್ಷಣೆ, ಹೊಳಪು ಕ್ಷೀಣಿಸುತ್ತಾ ಹೋಗುತ್ತದೆ. ಅದರಲ್ಲೂ ಹೆಚ್ಚು ರಾಸಾಯನಿಕಯುಕ್ತ ಸೌಂಧರ್ಯ ಪ್ರಾಡಕ್ಟ್‌ಗಳನ್ನು ಬಳಸುವವರಿಗೆ ಇದು ಇನ್ನೂ ಬೇಗ ಪರಿಣಾಮ ಬೀರುತ್ತದೆ.

ನಾವಿಂದು ಈ ಲೇಖನದಲ್ಲಿ ವಯಸ್ಸು 55 ವರ್ಷ ಆದ ನಂತರ ನಮ್ಮ ತ್ವಚೆ ಇನ್ನೂ ಯೌವ್ವನದಂತೆ ಕಾಣಲು ಏನು ಮಾಡಬೇಕು, ಅದರಲ್ಲೂ ಬಹಳ ಪರಿಣಾಮಕಾರಿ ಮನೆಮದ್ದುಗಳಲ್ಲಿ ಒಂದಾದ ಬೇವಿನ ಸೊಪ್ಪಿನಿಂದ ನಾವು ನಮ್ಮ ತ್ವಚೆಯನ್ನು ಹೇಗೆ ಇನ್ನಷ್ಟು ಹೊಳೆಯುವಂತೆ ಮಾಡಬಹುದು ಮುಂದೆ ನೋಡೋಣ:

ಬೇವು ಮತ್ತು ಅಲೋವೆರಾ
ಒಂದು ಚಮಚ ಬೇವಿನ ಪುಡಿ ಮತ್ತು ಒಂದು ಚಮಚ ಅಲೋವೆರಾ ಜೆಲ್ ಅನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ತಯಾರಿಸಿ. ಮುಖಕ್ಕೆ ರೋಸ್ ವಾಟರ್ ಚಿಮುಕಿಸಿದ ನಂತರ ಈ ಪೇಸ್ಟ್ ಅನ್ನು ಚೆನ್ನಾಗಿ ಹಚ್ಚಿಕೊಳ್ಳಿ. ಸುಮಾರು 10 ನಿಮಿಷಗಳ ನಂತರ ಸರಳ ನೀರಿನಿಂದ ಮುಖವನ್ನು ತೊಳೆಯಿರಿ. ಚರ್ಮವು ಸ್ವಚ್ಛ ಮತ್ತು ಸುಂದರವಾಗಿ ಕಾಣುತ್ತದೆ.

ಬೇವು ಮತ್ತು ಶ್ರೀಗಂಧ
ಒಂದು ಚಮಚ ಬೇವಿನ ಎಲೆಯ ಪುಡಿ, ಅರ್ಧ ಚಮಚ ಶ್ರೀಗಂಧದ ಪುಡಿ ಮತ್ತು ರೋಸ್ ವಾಟರ್ ಅನ್ನು ಬೆರೆಸಿ ಪೇಸ್ಟ್ ತಯಾರಿಸಿ. ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಪ್ಯಾಕ್ ಅನ್ನು ನಿಯಮಿತವಾಗಿ ಅನ್ವಯಿಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಬೇವು ಮತ್ತು ನಿಂಬೆ
ಎರಡು ಚಮಚ ಬೇವಿನ ಎಲೆಯ ಪುಡಿ, ಎರಡು ಚಮಚ ರೋಸ್ ವಾಟರ್ ಮತ್ತು ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮತ್ತು ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಚರ್ಮವು ಎಣ್ಣೆಯುಕ್ತವಾಗಿದ್ದರೆ, ಈ ಪೇಸ್ಟ್ ಅನ್ನು ವಾರಕ್ಕೆ 3 ಅಥವಾ 4 ಬಾರಿ ಬಳಸಿ.

ಬೇವು ಮತ್ತು ಮುಲ್ತಾನಿ ಮಿಟ್ಟಿ
ಒಂದು ಚಮಚ ಬೇವಿನ ಎಲೆಯ ಪೇಸ್ಟ್, ಒಂದು ಚಮಚ ಮುಲ್ತಾನಿ ಮಿಟ್ಟಿ, ಒಂದು ಚಮಚ ತುಳಸಿ ಪುಡಿ, ಒಂದು ಚಮಚ ಜೇನುತುಪ್ಪ ಮತ್ತು ಸ್ವಲ್ಪ ರೋಸ್ ವಾಟರ್ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದ ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಕೆಲವೇ ದಿನಗಳಲ್ಲಿ ಚರ್ಮದ ಕಾಂತಿ ಹೆಚ್ಚುತ್ತದೆ.

ಬೇವು ಮತ್ತು ಟೊಮೆಟೊ
ಒಂದು ಚಮಚ ಟೊಮೆಟೊ ತಿರುಳು ಮತ್ತು ಒಂದು ಚಮಚ ಬೇವಿನ ಪುಡಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ. ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ನೀರಿನಿಂದ ಮುಖವನ್ನು ತೊಳೆಯಿರಿ. ಕೆಲವೇ ದಿನಗಳಲ್ಲಿ, ಚರ್ಮದ ಟೋನ್ ಸುಧಾರಿಸಲು ಪ್ರಾರಂಭವಾಗುತ್ತದೆ.



Click it and Unblock the Notifications