For Quick Alerts
ALLOW NOTIFICATIONS  
For Daily Alerts

ಅಂದವಾದ ತ್ವಚೆಗಾಗಿ ಬಾಳೆಹಣ್ಣು ಹೇಗೆ ಬಳಸಬೇಕು?

|

ತ್ವಚೆ ಆಕರ್ಷಕವಾಗಿ ಕಾಣಲು ನಾವು ತ್ವಚೆ ಕಡೆ ಗಮನ ನೀಡಲೇಬೇಕು. ಅದಕ್ಕಾಗಿ ನೀವೇನು ಪಾರ್ಲರ್ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕೆಲವೊಂದು ಬ್ಯೂಟಿ ಟಿಪ್ಸ್ ಫಾಲೋ ಮಾಡಿದರೆ ಸಾಕು ನಿಮ್ಮ ತ್ವಚೆಯ ಹೊಳಪು ಹೆಚ್ಚುವುದು.

ಮುಖದ ತ್ವಚೆ ಹೆಚ್ಚಿಸುವಲ್ಲಿ ಬಾಳೆಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಎಲ್ಲರ ತ್ವಚೆ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಬಗೆಯ ತ್ವಚೆ ಸಮಸ್ಯೆ ಇರುತ್ತದೆ. ಇಲ್ಲಿ ನಾವು ನಮ್ಮ ತ್ವಚೆಗೆ ತಕ್ಕಂತೆ ಬಾಳೆಹಣ್ಣು ಹೇಗೆ ಬಳಸಬೇಕು ಎಂಬುವುದನ್ನು ಹೇಳಿದ್ದೇವೆ ನೋಡಿ:

1. ಮುಖದಲ್ಲಿ ಮೊಡವೆ, ಕಲೆಗಳಿದ್ದರೆ

1. ಮುಖದಲ್ಲಿ ಮೊಡವೆ, ಕಲೆಗಳಿದ್ದರೆ

ಬಾಳೆಹಣ್ಣು ಹಾಗೂ ಅರಿಶಿಣ ಈ ಎರಡರ ಮಿಶ್ರಣ ಈ ರೀತಿಯ ತ್ವಚೆಯವರ ಮೇಲೆ ಅದ್ಭುತ ಪ್ರಭಾವ ಬೀರುತ್ತದೆ.

ಬಳಸುವುದು ಹೇಗೆ

ಅರ್ಧ ಬಾಳೆಹಣ್ಣು ಮ್ಯಾಶ್‌ ಮಾಡಿ ಅದಕ್ಕೆ 1 ಚಮಚ ಅರಿಶಿಣ ಪುಡಿ ಹಾಕಿ , ಅರ್ಧ ಚಮಚ ಮೊಸರು ಹಾಕಿ ಮಿಶ್ರ ಮಾಡಿ ತ್ವಚೆಗೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಈ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರೆ ಮೊಡವೆ ಹಾಗೂ ಮೊಡವೆ ಕಲೆಗಳು ಕಡಿಮೆಯಾಗುವುದು.

2. ಕಪ್ಪು ಕಲೆ ಹೋಗಲಾಡಿಸುವುದು ಹೇಗೆ?

2. ಕಪ್ಪು ಕಲೆ ಹೋಗಲಾಡಿಸುವುದು ಹೇಗೆ?

ಇನ್ನು ಮುಖದಲ್ಲಿ ಕಪ್ಪು ಕಲೆಗಳಿದ್ದರೆ ಈ ರೀತಿ ಬಾಳೆಹಣ್ಣನ್ನು ಬಳಸಿ.

ಬಾಳೆಹಣ್ಣನ್ನು ಮ್ಯಾಶ್‌ ಮಾಡಿ, ಅದಕ್ಕೆ ಒಂದು ಚಮಚ ನಿಂಬೆರಸ ಮತ್ತು ಜೇನು ಹಾಕಿ ಮಶ್ರ ಮಾಡಿ, ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ.

ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಮುಖದಲ್ಲಿರುವ ಕಲೆಯನ್ನು ಹೋಗಲಾಡಿಸಿ, ತ್ವಚೆಯ ಹೊಳಪು ಹೆಚ್ಚಿಸುತ್ತದೆ.

 3. ತ್ವಚೆ ಮತ್ತಷ್ಟು ಹೊಳಪು ಹೆಚ್ಚಿಸಲು

3. ತ್ವಚೆ ಮತ್ತಷ್ಟು ಹೊಳಪು ಹೆಚ್ಚಿಸಲು

  • ಬಾಳೆಹಣ್ಣನ್ನು ಮ್ಯಾಶ್ ಮಾಡಿ, ಅದಕ್ಕೆ 2 ಚಮಚ ಹಾಲು ಹಾಕಿ ಮಿಶ್ರ ಮಾಡಿ ಅದನ್ನು ಮುಖಕ್ಕೆ ಹಚ್ಚಿ. ಈ ರೀತಿ ವಾರದಲ್ಲಿ 2-3 ಬಾರಿ ಮಾಡುತ್ತಿದ್ದರೆ ಮುಖದ ಹೊಳಪು ಹೆಚ್ಚುವುದು.
  • ತ್ವಚೆಯ ಮಾಯಿಶ್ಚರೈಸರ್ ಹೆಚ್ಚಿಸಲು ಬಾಳೆಹಣ್ಣು ಹಾಗೂ ಜೇನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ.
  • 4. ಬ್ಲ್ಯಾಕ್‌ಹೆಡ್ಸ್ ಹಾಗೂ ವೈಟ್‌ಹೆಡ್ಸ್ ಸಮಸ್ಯೆಯಿದ್ದರೆ

    4. ಬ್ಲ್ಯಾಕ್‌ಹೆಡ್ಸ್ ಹಾಗೂ ವೈಟ್‌ಹೆಡ್ಸ್ ಸಮಸ್ಯೆಯಿದ್ದರೆ

    ಬಾಳೆಹಣ್ಣು ಮ್ಯಾಶ್‌ ಮಾಡಿ ಅದಕ್ಕೆ 1 ಚಮಚ ಕಡಲೆ ಹಿಟ್ಟು, ಅರ್ಧ ಚಮಚ ನಿಂಬೆರಸ ಹಾಕಿ ಮಿಶ್ರ ಮಾಡಿ, ಮಿಶ್ರ ಮಾಡಿ ಫೇಸ್‌ಪ್ಯಾಕ್‌ ರೀತಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದನ್ನು ಮೊಣಕೈ, ಮೊಣಕಾಲು, ಮಣಿಗಂಟು ಈ ಭಾಗದಲ್ಲೂ ಹಚ್ಚಿ ಕಪ್ಪು ಕಲೆ ಹೋಗಲಾಡಿಸಬಹುದು.

    5. ಒಣತ್ವಚೆಗೆ

    5. ಒಣತ್ವಚೆಗೆ

    ಬಾಳೆಹಣ್ಣು, ಬೆಣ್ಣೆಹಣ್ಣು ಮತ್ತು ಜೇನು ಈ ಮೂರನ್ನು ಮಿಶ್ರ ಮಾಡಿ ಅದನ್ನು ಮುಖಕ್ಕೆ ಹಚ್ಚಿದರೆ ಒಣತ್ವಚೆ ಸಮಸ್ಯೆ ಇಲ್ಲವಾಗುವುದು. ಈ ಫೇಸ್‌ಪ್ಯಾಕ್‌ ಒಂದು ಬಾರಿ ಆಡಿ. ಇನ್ನು ಪಾದಗಳು ಒಡೆದಿದ್ದರೆ ಕೂಡ ಈ ಫೇಸ್‌ಪ್ಯಾಕ್‌ ಬಳಸಬಹುದು.

    6. ನೆರಿಗೆ ತಡೆಗಟ್ಟಲು

    6. ನೆರಿಗೆ ತಡೆಗಟ್ಟಲು

    ಇನ್ನು ವಯಸ್ಸು 30 ದಾಟಿದ ಮೇಲೆ ಮುಖದ ನೆರಿಗೆ ತಡೆಗಟ್ಟಲು ತ್ವಚೆ ಆರೈಕೆ ಕಡೆ ಹೆಚ್ಚಿನ ಗಮನ ನೀಡುತ್ತದೆ.

    ಬಾಳೆಹಣ್ಣನ್ನು ಮ್ಯಾಶ್‌ ಮಾಡಿ ಅದಕ್ಕೆ 1 ಚಮಚ ಕಿತ್ತಳೆ ರಸ, 1 ಚಮಚ ಮೊಸರು ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಈ ಫೇಸ್‌ಪ್ಯಾಕ್‌ ಮಾಡುವುದರಿಂದ ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟಬಹುದು.

English summary

How To Use Banana For Glowing Skin

Banana is the best home remedy to pamper your skin. Here are beauty tips to use banana for glowing skin, have a look,
Story first published: Saturday, September 5, 2020, 16:12 [IST]
X
Desktop Bottom Promotion