For Quick Alerts
ALLOW NOTIFICATIONS  
For Daily Alerts

ಈ ಟಿಪ್ಸ್‌ ಪಾಲಿಸಿದರೆ ಎಂಥ ಮೊಡವೆ ಕಲೆಯನ್ನೂ ಹೋಗಿಸಬಹುದು

|

ಮೊಡವೆ ಹಾಗೂ ಅದರ ಕಲೆಗಳು ಅದೆಷ್ಟೋ ಜನರ ಆತ್ಮವಿಶ್ವಾಸ ಕುಗ್ಗಿಸುವ ಒಂದು ಪ್ರಮುಖ ಅಂಶವಾಗಿದೆ. ಇದು ಪುರುಷರಿಗಾಗಲೀ ಅಥವಾ ಮಹಿಳೆಯರಿಗಾಗಲೀ ಮೊಡವೆ ಕಲೆಗಳಿಂದ ಸಾಕಷ್ಟು ನೋವನ್ನು ಎದುರಿಸಿರುತ್ತಾರೆ. ಏನೇ ಮಾಡಿದರೂ, ಕಲೆ ನಿವಾರಣೆಯಾಗದೇ ಸಾಕಷ್ಟು ಚಿಂತೆಗೀಡಾಗಿರುತ್ತಾರೆ. ಮೊಡವೆ ಕಲೆಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡುವುದು ಅಸಾಧ್ಯ. ಆದರೆ ಕೆಲವೊಂದು ವಿಧಾನಗಳಿಂದ ಕಲೆಗಳ ಗುರುತನ್ನು ಕಡಿಮೆ ಮಾಡಬಹುದು, ಅಂದರೆ ಕಲೆಯ ಗೋಚರತೆಯನ್ನು ಕಡಿಮೆ ಮಾಡಬಹುದು. ಹಾಗಾದ್ರೆ ವೈದ್ಯರು ಶಿಫಾರಸ್ಸು ಮಾಡುವ ಆ ವಿಧಾನಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ಮೊಡವೆ ಕಲೆಗಳನ್ನು ಕಡಿಮೆ ಮಾಡುವ ವಿಧಾನಗಳನ್ನು ಈ ಕೆಳಗೆ ನೀಡಲಾಗಿದೆ:

1. ಕೀಳುವುದು ನಿಲ್ಲಿಸಿ:

1. ಕೀಳುವುದು ನಿಲ್ಲಿಸಿ:

ಮೊಡವೆ ಬಂದಾಗ ಸಹಜವಾಗಿಯೇ ಪ್ರತಿಯೊಬ್ಬರೂ ಮಾಡುವ ತಪ್ಪು ಇದು. ಮೊಡವೆ ಬಂದಾಕ್ಷಣ ಅದನ್ನು ಕೀಳಲು ಮುಂದಾಗುತ್ತಾರೆ. ಇದೇ ಮುಂದೆ ಕಳೆಗಳಿಗೆ ಕಾರಣವಾಗುವುದು. ಆದ್ದರಿಂದ ಮೊಡವೆ ತಾಜಾವಾಗಿರುವಾಗ ಅದನ್ನ ಕೀಳಲು ಅಥವಾ ಚಿವುಟಲು ಹೋಗಬೇಡಿ. ಇದು ಹೆಚ್ಚೆಚ್ಚು ಮೊಡವೆಗಳಿಗೆ ಕಾರಣವಾಗುವುದು ಮಾತ್ರವಲ್ಲದೇ, ಕಲೆಗಳನ್ನ ಮಾಡಬಹುದು.

2. ಡಿಪಿಗ್ಮೆಂಟಿಂಗ್ ಕ್ರೀಮ್‌ಗಳನ್ನು ಬಳಸಿ:

2. ಡಿಪಿಗ್ಮೆಂಟಿಂಗ್ ಕ್ರೀಮ್‌ಗಳನ್ನು ಬಳಸಿ:

ಹೆಚ್ಚಿನವರು ಮೊಡವೆ ಒಣಗಿ ಕಲೆಯಾಗುವ ತನಕ ಯಾವುದೇ ಕಾಳಜಿಯನ್ನು ತೆಗೆದುಕೊಳ್ಳುವುದಿಲ್ಲ. ಇದರಿಂದ ಕಲೆ ನಿವಾರಣೆ ಮತ್ತಷ್ಟು ಜಟಿಲವಾಗಬಹುದು. ಆದ್ದರಿಂದ ಮುಖದಲ್ಲಿ ಆದ ಮೊಡವೆಗಳು ಕಡಿಮೆ ಆಗುವವರೆಗೆ ಕಾಯಬೇಡಿ. ಕಲೆ ಆದ ಪ್ರಾರಂಭದಿಂದಲೇ ಡಿಪಿಗ್ಮೆಂಟಿಂಗ್ ಕ್ರೀಮ್‌ಗಳನ್ನು ಬಳಸಿ. ಇದು ನಿಮ್ಮ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

3. ಸರಿಯಾದ ಪದಾರ್ಥಗಳನ್ನು ಆರಿಸಿ:

3. ಸರಿಯಾದ ಪದಾರ್ಥಗಳನ್ನು ಆರಿಸಿ:

ಕೋಜಿಕ್ ಆಸಿಡ್, ಗ್ಲೈಕೋಲಿಕ್ ಆಸಿಡ್, ಲ್ಯಾಕ್ಟಿಕ್ ಆಸಿಡ್ ಕೆಲವು ಪದಾರ್ಥಗಳು ಕಲೆಯನ್ನು ತ್ವರಿತವಾಗಿ ತೆಳುವಾಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಈ ಅಂಶಗಳು ಹೆಚ್ಚಿರುವ ಉತ್ಪನ್ನಗಳನ್ನು ಗಮನಿಸಿ ಖರೀದಿಸಿ, ಅವುಗಳನ್ನು ಕಲೆಗಳ ಮೇಲೆ ಬಳಸಿ. ಇದರಿಂದ ಕಲೆಗಳು ಬೇಗ ಮಸುಕಾಗುವುದು.

4. ಕಲೆಗಳ ನಿವಾರಣೆಗೆ ಇರುವ ಉತ್ಪನ್ನಗಳಲ್ಲಿ ಹೂಡಿಕೆ ಮಾಡಿ:

4. ಕಲೆಗಳ ನಿವಾರಣೆಗೆ ಇರುವ ಉತ್ಪನ್ನಗಳಲ್ಲಿ ಹೂಡಿಕೆ ಮಾಡಿ:

ಮಾರುಕಟ್ಟೆಯಲ್ಲಿ ಕಲೆ ನಿವಾರಣೆಗೆಂದು ಹಲವಾರು ಉತ್ಪನ್ನಗಳಿವೆ. ಅವುಗಳನ್ನು ಸರಿಯಾಗಿ ಗಮನಿಸಿ ಖರೀದಿಸಿ. ಮೊಡವೆ ಕಲೆ ನಿವಾರಣೆಯಲ್ಲಿ ಬ್ರೈಟ್ನಿಂಗ್ ಫೇಸ್ ವಾಶ್ ಸಹ ಉತ್ತಮ ಪಾತ್ರವನ್ನು ವಹಿಸುತ್ತದೆ. ನಿಯಾಸಿನಾಮೈಡ್, ಗ್ಲೈಕೋಲಿಕ್ ಆಮ್ಲ, ಸ್ಯಾಲಿಸಿಲಿಕ್ ಆಮ್ಲವನ್ನು ಹೊಂದಿರುವ ಫೇಸ್ ವಾಶ್‌ಗಳು ಕೆಮಿಕಲ್ ಎಫ್ಫೋಲಿಯೇಶನ್‌ಗೆ ಸಹಾಯ ಮಾಡುತ್ತದೆ. ಇದರಿಂದ ವೇಗವಾಗಿ ಕಲೆಗಳು ಹಗುರಾಗುತ್ತವೆ. ಆದ್ದರಿಂದ ಇಂತಹ ಉತ್ಪನ್ನಗಳನ್ನು ಖರೀದಿಸಿ.

5. ಮನೆಮದ್ದುಗಳು ಸಹಕಾರಿ:

5. ಮನೆಮದ್ದುಗಳು ಸಹಕಾರಿ:

ಮೊಡವೆಗಳ ಕಲೆ ಕಡಿಮೆ ಮಾಡುವಲ್ಲಿ ಮನೆಮದ್ದುಗಳು ಸಹ ಸಹಾಯ ಮಾಡುತ್ತವೆ. ಹಸಿ ಹಾಲು ಅಥವಾ ಆಲೂಗಡ್ಡೆ ರಸವನ್ನು ವಾರಕ್ಕೆ ಮೂರು ಬಾರಿ ಕಲೆಗಳ ಮೇಲೆ ಹಚ್ಚಿದರೆ, ಇದು ಖಂಡಿತವಾಗಿಯೂ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವು ಸಣ್ಣ ಮಟ್ಟದ ಆಸಿಡ್ ಅಂಶವನ್ನು ಹೊಂದಿರುವುದರಿಂದ ಮುಖಕ್ಕೆ ಯಾವುದೇ ಕಿರಿಕಿರಿಯನ್ನು ಉಂಟುಮಾಡುವುದಿಲ್ಲ.

6. ಸನ್‌ಸ್ಕ್ರೀನ್ ಮರೆಯದಿರಿ:

6. ಸನ್‌ಸ್ಕ್ರೀನ್ ಮರೆಯದಿರಿ:

ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಲು ಸನ್‌ಸ್ಕ್ರೀನ್ ಬಳಸುವುದು ತುಂಬಾ ಮುಖ್ಯ. ಇದು ಕಲೆಗಳನ್ನು ಕಡಿಮೆ ಮಾಡಲಾರದು. ಆದ್ರೆ ಆ ಕಲೆಗಳು ಮತ್ತಷ್ಟು ಡಾರ್ಕ್ ಆಗುವುದನ್ನು ತಡೆಯುತ್ತವೆ. ಆದ್ದರಿಂದ ಸೂರ್ಯನ ಬೆಳಕು ಅಥವಾ ಮೋಡ ಕವಿದ ದಿನಗಳಲ್ಲಿ ನೇರಳಾತೀತ ಹಾನಿಕಾರಕ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಸನ್‌ಸ್ಕ್ರೀನ್ ಅನ್ನು ಬಳಸುವುದು ಮುಖ್ಯವಾಗಿದೆ.

7. ಚಿಕಿತ್ಸೆ ಮುಖ್ಯ:

7. ಚಿಕಿತ್ಸೆ ಮುಖ್ಯ:

ಮೊಡವೆ ಕಲೆಗಳನ್ನು ಹಾಗೆಯೇ ಬಿಡುವ ಬದಲು ಅವುಗಳಿಗೆ ಚಿಕಿತ್ಸೆ ಕೊಡಿಸುವುದು ಸಹ ಮುಖ್ಯವಾಗಿದೆ. ಕಲೆಗಳನ್ನು ಕಡಿಮೆ ಮಾಡುವ ಹೈಡ್ರೋಕ್ವಿನೋನ್‌ನಂತಹ ಏಜೆಂಟ್‌ನೊಂದಿಗೆ ವಾರಕ್ಕೆ ಎರಡು ಬಾರಿ ಕೆಮಿಕಲ್ ಪೀಲಿಂಗ್ ಮಾಡಿಸುವುದು ನಿಮ್ಮ ಕಲೆಗಳನ್ನು ಕಡಿಮೆ ಮಾಡಲು ಹಾಗೂ ಮುಖಕ್ಕೆ ಹೊಳಪು ನೀಡಲು ಸಹಾಯ ಮಾಡುತ್ತವೆ. ಆದ್ದರಿಂದ ಮೊಡವೆಗಳ ಕಲೆ ನಿವಾರಣೆಗಿರುವ ಚಿಕಿತ್ಸೆಯನ್ನ ಪ್ರಯತ್ನಿಸಿ.

ವೈದ್ಯರನ್ನು ಭೇಟಿ ಮಾಡಿ:

ವೈದ್ಯರನ್ನು ಭೇಟಿ ಮಾಡಿ:

ಮೊಡವೆ ಕಲೆಗಳನ್ನು ಕಡಿಮೆ ಮಾಡಲು ಸೂಕ್ತ ಚರ್ಮ ರೋಗ ತಜ್ಞರನ್ನು ಭೇಟಿ ಮಾಡಬಹುದು. ಅವರು ಕೆಮಿಕಲ್ ಪೀಲ್ಸ್, ಕಾರ್ಬನ್ ಲೇಸರ್ ಪೀಲ್ಸ್, ಫೋಟೋ ಫೇಶಿಯಲ್, ಹೈಡ್ರಾ ಫೇಶಿಯಲ್ ಸೇರಿದಂತೆ ಹಲವಾರು ಗುರುತುಗಳನ್ನು ತೊಡೆದುಹಾಕಲು ಸಹಾಯ ಮಾಡುವ ವಿಧಾನಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಬಹುದು. ಇವುಗಳ ಸಹಾಯದಿಂದ ನೀವು ಮೊಡವೆ ಕಲೆಗಳಿಂದ ಮುಕ್ತ ಹೊಂದಬಹುದು.

ಈ ಮೇಲೆ ಹೇಳಿರುವ ವಿಧಾನಗಳ ಜೊತೆಗೆ ನಿಮ್ಮ ಜೀವನಶೈಲಿಯೂ ಸಹ ಕಲೆ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ. ಆರೋಗ್ಯಕರ ಆಹಾರದ ಜೊತೆಗೆ ಸಾಕಷ್ಟು ನೀರಿನ ಸೇವನೆಯು ಮೊಡವೆ ಹುಟ್ಟಿದಿರಲು ಹಾಗೂ ಕಲೆ ಕಡಿಮೆಯಾಗುವಲ್ಲಿ ಪರೋಕ್ಷವಾಗಿ ಸಹಕರಿಸುತ್ತವೆ.

English summary

How To Remove Pimple Marks: Ways to Get Rid Of Pimple Marks in kannada

Here we talking about How To Remove Pimple Marks: Ways to Get Rid Of Pimple Marks in kannada, read on
X
Desktop Bottom Promotion