For Quick Alerts
ALLOW NOTIFICATIONS  
For Daily Alerts

ಅತ್ತ ಮೇಲೆ ಉಂಟಾಗುವ ಉಬ್ಬಿದ ಕಣ್ಣುಗಳಿಗೆ ಮನೆ ಮದ್ದುಗಳೇನು?

|

ನಮ್ಮ ಮನಸ್ಸಿನಲ್ಲಿರುವ ದುಃಖದ ಭಾವನೆಗಳನ್ನು ಹೊರಹಾಕಲು ಇರುವ ಸುಲಭ ಹಾಗೂ ಉತ್ತಮ ಮಾರ್ಗವೆಂದರೆ ಅಳುವುದು. ತಮಗಾದ ನೋವನ್ನು ಕಣ್ಣೀರಿನ ಮೂಲಕ ಹೊರಹಾಕಿದರೆ ಮನಸ್ಸು ಹಗುರವಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲೊಂದು ಸಮಸ್ಯೆಯಿದೆ, ಅದೇನಪ್ಪ ಅಂದ್ರೆ, ಈ ಕಣ್ಣೀರಿನಿಂದ ನೋವೇನೋ ಕಡಿಮೆ ಆಗಬಹುದು, ಆದರೆ ಕಣ್ಣೀರಿನ ಜತೆಗೆ ಊದಿಕೊಂಡ ಕಣ್ಣುಗಳು ಬಳುವಳಿಯಾಗಿ ಬರುವುದು.

ಈ ಊದಿಕೊಂಡ ಕಣ್ಣುಗಳೂ ಅಥವಾ ಪಫಿನೆಸ್ ಎನ್ನುವುದು ನಮ್ಮ ಸೌಂದರ್ಯಕ್ಕೆ ಅಡ್ಡಿಯುಂಟು ಮಾಡುತ್ತವೆ, ಹಾಗಾಗಿ ಇವುಗಳನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಮನೆಮದ್ದುಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇವೆ.

ರಾತ್ರಿಯಿಡೀ ಅತ್ತಿರುವುದರಿಂದ ಉಂಟಾಗಿರುವ ಕಣ್ಣಿನ ಪಫಿನೆಸ್ ಕಡಿಮೆ ಮಾಡುವ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

ಕೋಲ್ಡ್ ವಾಟರ್ ಕಂಪ್ರೆಸ್:

ಕೋಲ್ಡ್ ವಾಟರ್ ಕಂಪ್ರೆಸ್:

ಕಣ್ಣಿನ ಪಫಿನೆಸ್ ಮತ್ತು ಊತವನ್ನು ಕಡಿಮೆ ಮಾಡಲು, ನಿಮ್ಮ ಕಣ್ಣುಗಳಿಗೆ ತಣ್ಣೀರಿನ ಕಂಪ್ರೆಸ್ ಮಾಡಿ. ಒಂದು ಬಟ್ಟಲಿನಲ್ಲಿ, ಸ್ವಲ್ಪ ನೀರು ಮತ್ತು ಐಸ್ ಕ್ಯೂಬ್ ಗಳನ್ನು ಸೇರಿಸಿ. ಸ್ವಚ್ಛವಾದ ಟವಲ್ ಅನ್ನು ಈ ತಣ್ಣೀರಿನಲ್ಲಿ ಅದ್ದಿ, ಅದನ್ನು ನಿಮ್ಮ ಕಣ್ಣುಗಳಿಗೆ ಮೆಲ್ಲನೇ ಒತ್ತಿ, ಇದನ್ನು ಕೆಲವು ಬಾರಿ ಪುನರಾವರ್ತಿಸಿ.

ಐ ರೋಲರ್ ಬಳಸಿ:

ಐ ರೋಲರ್ ಬಳಸಿ:

ವೀಕೆಂಡ್ ನಲ್ಲಿ ನಿದ್ದೆ ಬಿಟ್ಟಿದ್ದರೆ, ಈ ಐ ರೋಲರುಗಳು ಅತ್ಯಂತ ಪ್ರಯೋಜನಕಾರಿ. ರೋಲರ್ ಬಾಲ್ ನಿಮ್ಮ ಕಣ್ಣಿನಂತಹ ಸೂಕ್ಷ್ಮ ಪ್ರದೇಶವನ್ನು ಊತದಿಂದ ಸರಿಪಡಿಸಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಇತರ ವಯಸ್ಸಾದ ಚಿಹ್ನೆಗಳಾದ ಡಾರ್ಕ್ ಸರ್ಕಲ್ ಗಳು, ಸೂಕ್ಷ್ಮ ಗೆರೆಗಳು ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಬಹುದು.

ಕೋಲ್ಡ್ ಸೌತೆಕಾಯಿ ತುಂಡುಗಳು:

ಕೋಲ್ಡ್ ಸೌತೆಕಾಯಿ ತುಂಡುಗಳು:

ಸೌತೆಕಾಯಿಯನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ ರೆಫ್ರಿಜರೇಟರ್‌ನಲ್ಲಿ ಇಡಿ, ಇದನ್ನು ಕೋಲ್ಡ್ ಕಂಪ್ರೆಸ್ ಆಗಿ ನಿಮ್ಮ ಕಣ್ಣುಗಳ ಮೇಲೆ ಬಳಸಿ. ಸೌತೆಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಫ್ಲೇವೊನೈಡ್ ಗಳಿದ್ದು, ಇದು ಕಣ್ಣಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಣ್ಣಿನ ಮಾಸ್ಕ್ ಬಳಸಿ:

ಕಣ್ಣಿನ ಮಾಸ್ಕ್ ಬಳಸಿ:

ನಮ್ಮ ಕಣ್ಣಿನ ವಿಚಾರಕ್ಕೆ ಬಂದಾಗ, ಅತ್ಯಂತ ಜಾಗರೂಕರಾಗಿರಬೇಕು ಏಕೆಂದರೆ ಈ ಪ್ರದೇಶವು ಮುಖದ ಉಳಿದ ಭಾಗಗಳಿಗೆ ಹೋಲಿಸಿದರೆ ಸಾಕಷ್ಟು ತೆಳ್ಳಗಿರುತ್ತದೆ ಮತ್ತು ಸೂಕ್ಷ್ಮವಾಗಿರುತ್ತದೆ. ಈ ಪಫಿನೆಸ್ ನಿಮ್ಮ ನಿರಂತರ ಸಮಸ್ಯೆಯಾಗಿದ್ದರೆ ಕಣ್ಣಿನ ಮಾಸ್ಕ್ ಗಳನ್ನ ಬಳಸಿ, ಇವುಗಳು ನಿಮ್ಮ ಕಣ್ಣಿನ ಪಫಿನೆಸ್‌ಗೆ ಚಿಕಿತ್ಸೆ ನೀಡುತ್ತವೆ.

ಮಸಾಜ್ ಮಾಡಿ:

ಮಸಾಜ್ ಮಾಡಿ:

ಇದು ಅತ್ಯಂತ ಸುಲಭವಾದ ಪರಿಹಾರವಾಗಿದ್ದು, ತ್ವರಿತ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಕಣ್ಣುಗಳನ್ನು ಮುಚ್ಚಿ, ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ನಿಧಾನವಾಗಿ ಮಸಾಜ್ ಮಾಡಿ. ಇದು ನಿಮ್ಮ ಕಣ್ಣುಗಳ ಸುತ್ತ ರಕ್ತದ ಹರಿವನ್ನು ಹೆಚ್ಚಿಸಿ, ಊತವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಚಿಲ್ಡ್ ಸ್ಪೂನ್ ಹ್ಯಾಕ್:

ಚಿಲ್ಡ್ ಸ್ಪೂನ್ ಹ್ಯಾಕ್:

ಕಣ್ಣಿನ ಊತಕ್ಕೆ ಚಿಕಿತ್ಸೆ ನೀಡಲು ಇದು ಅತ್ಯಂತ ಸಾಮಾನ್ಯ ಪರಿಹಾರವಾಗಿದೆ. ಈ ಪರಿಹಾರವು ನಿಮ್ಮ ಕಣ್ಣುಗಳನ್ನು ಕುಗ್ಗಿಸಲು ಸಹಾಯ ಮಾಡುತ್ತದೆ. ಎರಡು ನಿಮಿಷಗಳ ಕಾಲ ಫ್ರೀಜರ್‌ನಲ್ಲಿ ಎರಡು ಸ್ವಚ್ಛವಾದ ಚಮಚಗಳನ್ನು ಇರಿಸಿ, ನಂತರ ಅವುಗಳನ್ನು ನಿಮ್ಮ ಕಣ್ಣುಗಳ ಸುತ್ತ ಇಡಿ, ಇದರ ಕೂಲಿಂಗ್ ಪರಿಣಾಮವು ಕಣ್ಣಿನ ನೋವು ಮತ್ತು ಊತದಿಂದ ನಿಮಗೆ ಉತ್ತಮ ಪರಿಹಾರ ನೀಡುತ್ತದೆ.

ಕೋಲ್ಡ್ ಐ ಕ್ರೀಮ್:

ಕೋಲ್ಡ್ ಐ ಕ್ರೀಮ್:

ಕಣ್ಣಿನ ಊತವನ್ನು ಕಡಿಮೆ ಮಾಡಲು ಕಣ್ಣಿನ ಕ್ರಿಮ್ ನ್ನು ಬಳಸಬಹುದು. ಆದರೆ, ಅದನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ, ನಂತರ ಅದನ್ನು ನಿಮ್ಮ ಕಣ್ಣುಗಳಡಿಯಲ್ಲಿ ಬಳಸಿ.

ತಣ್ಣಗಾದ ಗ್ರೀನ್ ಟೀ ಬ್ಯಾಗ್:

ತಣ್ಣಗಾದ ಗ್ರೀನ್ ಟೀ ಬ್ಯಾಗ್:

ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದ್ದು, ಪಫಿನೆಸ್ ಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಚಹಾದಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮದ ಕೆಳಗೆ ಇರುವ ರಕ್ತನಾಳಗಳನ್ನು ನಿಯಂತ್ರಿಸಿ, ಊತವನ್ನು ಕಡಿಮೆ ಮಾಡುತ್ತದೆ.

ನೆನಪಿಡಿ, ನಮ್ಮಲ್ಲಿ ಕೆಲವರಿಗೆ ಬೇಗನೆ ಪಫಿನೆಸ್ ಕಡಿಮೆಯಾಗಬಹುದು, ಇತರರಿಗೆ ಸಮಯ ತೆಗೆದುಕೊಳ್ಳಬಹುದು. ಜೊತೆಗೆ ಈ ಯಾವುದೇ ಪರಿಹಾರಗಳನ್ನು ಅನುಸರಿಸಿದ ನಂತರ ಕೆಂಪು ಗುಳ್ಳೆ ಅಥವಾ ನೋವಿನಿಂದ ಬಳಲುತ್ತಿದ್ದರೆ, ತಕ್ಷಣವೇ ನಿಲ್ಲಿಸಿ, ನಿಮ್ಮ ಕಣ್ಣುಗಳನ್ನು ತೊಳೆಯಿರಿ ಮತ್ತು ಯಾವುದೇ ಸಮಸ್ಯೆಗಳನ್ನು ತಡೆಗಟ್ಟಲು ವೈದ್ಯರನ್ನು ಸಂಪರ್ಕಿಸಿ.

English summary

Home Remedies to Get Rid Of Puffy Eyes After Crying in Kannada

There is nothing like a good cry session. Agree? It is always a great idea to let our emotions flow out with our tears but the only thing we hate about crying is that it leaves us with puffy, swollen eyes. Here we talking about Home Remedies to Get Rid Of Puffy Eyes After Crying in Kannada, read on
X
Desktop Bottom Promotion