For Quick Alerts
ALLOW NOTIFICATIONS  
For Daily Alerts

ಬೀಟ್‌ರೂಟ್‌ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು

|

ಕಾಂತಿಯುತ ತ್ವಚೆಗೆ ದಿನನಿತ್ಯ ನೂರಾರು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇವೆ. ಅವುಗಳಲ್ಲಿ ಕೆಲವೊಂದು ಫಲಿತಾಂಶ ಕೊಟ್ಟರೆ, ಇನ್ನೂ ಕೆಲವು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತವೆ.

ಆದರೆ ಇಂದು ನಾವು ಕಾಂತಿಯುತ ತ್ವಚೆಗಾಗಿ ಹೇಳುವ ಈ ಒಂದು ಪದಾರ್ಥ ನಿಮಗೆ ನಿರೀಕ್ಷಿತ ಫಲಿತಾಂಶ ಕೊಡುವುದರಲ್ಲಿ ಸಂದೇಹವಿಲ್ಲ. ಅಂತಹ ಒಂದು ವಸ್ತುವೆಂದರೆ ಎಂದರೆ ಬೀಟ್ರೂಟ್.

face masks for glowing skin

ಹೌದು, ಆರೋಗ್ಯಕ್ಕೆ ಉತ್ತಮವಾಗಿರುವ ಬೀಟ್ರೂಟ್ ನಿಮ್ಮ ತ್ವಚೆಗೂ ಬಹಳ ಪ್ರಯೋಜನಕಾರಿ. ಅದರಲ್ಲಿರುವ ಪೋಷಕಾಂಶಗಳು ನಿಮ್ಮ ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಿ, ಕೋಮಲ ತ್ವಚೆ ನೀಡುತ್ತದೆ.

ಹಾಗಾದರೆ, ಬೀಟ್ರೂಟ್‌ನಿಂದ ಮಾಡಿಕೊಳ್ಳಬಹುದಾದ ಫೇಸ್ ಪ್ಯಾಕ್ ಅಥವಾ ಮಾಸ್ಕ್‌ಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ತ್ವಚೆಗೆ ಬೀಟ್ರೂಟ್‌ ಪ್ರಯೋಜನಗಳು ಹೀಗಿವೆ:

ತ್ವಚೆಗೆ ಬೀಟ್ರೂಟ್‌ ಪ್ರಯೋಜನಗಳು ಹೀಗಿವೆ:

ಬೀಟ್ರೂಟ್ ವಿಟಮಿನ್ ಸಿ, ಫೈಬರ್, ಕಬ್ಬಿಣ, ಕ್ಯಾರೊಟಿನಾಯ್ಡ್‌ಗಳು, ಪೊಟ್ಯಾಸಿಯಮ್, ವಿಟಮಿನ್ ಬಿ9 (ಫೋಲೇಟ್), ಮ್ಯಾಂಗನೀಸ್, ಎಲೆಕ್ಟ್ರೋಲೈಟ್‌ಗಳು ಮತ್ತು ಇತರ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಅದು ಈ ಕೆಳಗಿನ ಪ್ರಯೋಜನಗಳನ್ನು ನೀಡುವುದು.

ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ

ಉರಿಯೂತ ನಿವಾರಕ ಮತ್ತು ಚರ್ಮದ ನೋಟವನ್ನು ಸುಧಾರಿಸಿವುದು

ತ್ವಚೆಯನ್ನು ತೇವಾಂಶದಿಂದ ಇಡುತ್ತದೆ

ಡಾರ್ಕ್ ಸರ್ಕಲ್ ಕಡಿಮೆ ಮಾಡುತ್ತದೆ

ಚರ್ಮದ ಟೋನ್ ಸಮಗೊಳಿಸುತ್ತದೆ

ಕಪ್ಪು ಕಲೆಗಳನ್ನು ಕಡಿಮೆ ಮಾಡಿ ಚರ್ಮವನ್ನು ಕಾಂತಿಯುತವಾಗಿಸುತ್ತದೆ

ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ

ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ತೆಗೆದುಹಾಕುತ್ತದೆ

ಕೂದಲಿಗೆ ಹೊಳಪು ಮತ್ತು ಶಕ್ತಿಯನ್ನು ನೀಡುತ್ತದೆ

ತುಟಿಗಳನ್ನು ಎಫ್ಫೋಲಿಯೇಟ್ ಮತ್ತು ಅವುಗಳಿಗೆ ಸುಂದರವಾದ ಗುಲಾಬಿ ಬಣ್ಣವನ್ನು ನೀಡುತ್ತದೆ.

ಹೊಳೆಯುವ ತ್ವಚೆಗಾಗಿ 5 ತ್ವರಿತ DIY ಬೀಟ್‌ರೂಟ್ ಫೇಸ್ ಮಾಸ್ಕ್‌ಗಳು ಇಲ್ಲಿವೆ:

ಹೊಳೆಯುವ ತ್ವಚೆಗಾಗಿ 5 ತ್ವರಿತ DIY ಬೀಟ್‌ರೂಟ್ ಫೇಸ್ ಮಾಸ್ಕ್‌ಗಳು ಇಲ್ಲಿವೆ:

1. ಬೀಟ್ರೂಟ್ ಮತ್ತು ಕ್ಯಾರೆಟ್ ಫೇಸ್ ಮಾಸ್ಕ್:

ಈ ಪ್ಯಾಕ್ ತ್ವಚೆಯನ್ನು ಕೋಮಲಗೊಳಿಸಿ, ಕೆಲವೇ ವಾರಗಳಲ್ಲಿ ನಿಮಗೆಗುಲಾಬಿಯಂತಹ ಹೊಳಪನ್ನು ನೀಡುತ್ತದೆ.

ಬಳಸುವ ವಿಧಾನ:

ಬೀಟ್ರೂಟ್ ರಸ ಮತ್ತು ಕ್ಯಾರೆಟ್ ರಸವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಿ.

ಈ ಮಿಶ್ರಣವನ್ನು ಐಸ್ ಕ್ಯೂಬ್ ಬಾಕ್ಸ್‌ಗೆ ಹಾಕಿ, ಫ್ರೀಜ್ ಮಾಡಿ.

ಪ್ರತಿದಿನ ಬೆಳಿಗ್ಗೆ, ತ್ವಚೆಯ ಮೇಲೆ ಈ ಐಸ್ ಕ್ಯೂಬ್ ಅನ್ನು ಉಜ್ಜಿ ಮತ್ತು 10-15 ನಿಮಿಷಗಳ ಕಾಲ ಬಿಡಿ.

ಉಗುರುಬೆಚ್ಚಗಿನ ನೀರಿನಿಂದ ತೊಳೆದು, ಮೃದುವಾದ ಮಾಯಿಶ್ಚರೈಸರ್ ಹಚ್ಚಿ.

2. ಬೀಟ್ರೂಟ್ ಮತ್ತು ಮೊಸರಿನ ಫೇಸ್ ಮಾಸ್ಕ್:

2. ಬೀಟ್ರೂಟ್ ಮತ್ತು ಮೊಸರಿನ ಫೇಸ್ ಮಾಸ್ಕ್:

ಈ ಪ್ಯಾಕ್ ತ್ವಚೆಯನ್ನು ಹೈಡ್ರೇಟ್ ಮಾಡಿ ನಯವಾಗಿಡುತ್ತದೆ.

ಬಳಸುವ ವಿಧಾನ:

ಒಂದು ತುರಿದ ಬೀಟ್ರೂಟ್ ತೆಗೆದುಕೊಂಡು ಅದನ್ನು ಎರಡು ಚಮಚ ಮೊಸರು ಮತ್ತು ಕೆಲವು ಹನಿ ಬಾದಾಮಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ.

ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.

ನೀರಿನಿಂದ ತೊಳೆಯುವ ಮೊದಲು 15-20 ನಿಮಿಷಗಳ ಕಾಲ ಬಿಡಿ.

3. ಬೀಟ್ರೂಟ್ ಮತ್ತು ಕ್ರೀಮ್ ಫೇಸ್ ಮಾಸ್ಕ್:

3. ಬೀಟ್ರೂಟ್ ಮತ್ತು ಕ್ರೀಮ್ ಫೇಸ್ ಮಾಸ್ಕ್:

ಡಲ್ ಆಗಿರುವ ತ್ವಚೆಗೆ ಮುಖ್ಯ ಕಾರಣವೆಂದರೆ ಟ್ಯಾನಿಂಗ್. ಆದ್ದರಿಂದ ಈ ಚರ್ಮದ ಟ್ಯಾನ್ ಹೋಗಲಾಡಿಸಲು, ಈ ಫೇಸ್ ಪ್ಯಾಕ್ ಬಳಸಿ.

ಬಳಸುವ ವಿಧಾನ:

1 ಚಮಚ ತಾಜಾ ಬೀಟ್ರೂಟ್ ರಸವನ್ನು 1 ಚಮಚ ಹುಳಿ ಕ್ರೀಮ್ನೊಂದಿಗೆ ಮಿಶ್ರಣ ಮಾಡಿ.

ಈ ಮಿಶ್ರಣವನ್ನು ಟ್ಯಾನ್ ಆಗಿರುವ ತ್ವಚೆಯ ಮೇಲೆ ಹಚ್ಚಿ, 20ನಿಮಿಷಗಳ ಕಾಲ ಬಿಡಿ.

ತದನಂತರ ಉಗುರುಬೆಚ್ಚನೆಯ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಬಳಸಿ.

4. ಬೀಟ್ರೂಟ್ ಮತ್ತು ಮೊಸರು ಫೇಸ್ ಮಾಸ್ಕ್:

4. ಬೀಟ್ರೂಟ್ ಮತ್ತು ಮೊಸರು ಫೇಸ್ ಮಾಸ್ಕ್:

ಈ ಫೇಸ್ ಮಾಸ್ಕ್ ನಿಮ್ಮ ಚರ್ಮವನ್ನು ನಯವಾಗಿಸುವುದಲ್ಲದೇ, ತ್ವಚೆಗೆ ತಾಜಾತನ ನೀಡುವುದು.

ಬಳಸುವ ವಿಧಾನ:

ಮೂರು ಟೇಬಲ್ಸ್ಪೂನ್ ಮೊಸರು ಜೊತೆಗೆ 4 ಟೇಬಲ್ಸ್ಪೂನ್ ಬೀಟ್ರೂಟ್ ರಸವನ್ನು ಮಿಶ್ರಣ ಮಾಡಿ.

ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಬಿಡಿ.

ನಂತರ, ಉಗುರುಬೆಚ್ಚನೆಯ ನೀರಿನಿಂದ ತೊಳೆದರೆ, ನಿಮ್ಮ ತ್ವಚೆಯು ಕೆಲವೇ ಸಮಯದಲ್ಲಿ ಪಾರ್ಟಿಗೆ ಸಿದ್ಧವಾಗುತ್ತದೆ.

5. ಬೀಟ್ರೂಟ್ ಮತ್ತು ಕಿತ್ತಳೆ ಸಿಪ್ಪೆಯ ಫೇಸ್ ಮಾಸ್ಕ್:

5. ಬೀಟ್ರೂಟ್ ಮತ್ತು ಕಿತ್ತಳೆ ಸಿಪ್ಪೆಯ ಫೇಸ್ ಮಾಸ್ಕ್:

ನಿಮ್ಮ ಮುಖಕ್ಕೆ ತ್ವರಿತ ಮತ್ತು ನೈಸರ್ಗಿಕ ಹೊಳಪನ್ನು ಸೇರಿಸಲು, ಈ ಫೇಸ್ ಮಾಸ್ಕ್ ಅನ್ನು ಪ್ರಯತ್ನಿಸಿ.

ಬಳಸುವ ವಿಧಾನ:

2 ಚಮಚ ಕಿತ್ತಳೆ ಸಿಪ್ಪೆಯ ಪುಡಿ ಮತ್ತು 1 ಚಮಚ ಬೀಟ್‌ರೂಟ್ ರಸವನ್ನು ಮಿಶ್ರಣ ಮಾಡಿ.

ಈ ದಪ್ಪ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ ಮತ್ತು ಅದು ಒಣಗುವವರೆಗೆ ಬಿಡಿ.

ಒಣಗಿದ ನಂತರ, ತಣ್ಣೀರಿನಿಂದ ತೊಳೆಯಿರಿ, ಎರಡು ದಿನಕ್ಕೊಮ್ಮೆ ಪುನರಾವರ್ತಿಸಿ.

ಗಮನಿಸಿ: ಬೀಟ್ರೂಟ್ ತುಂಬಾ ತ್ವಚೆ ಸ್ನೇಹಿ ತರಕಾರಿ. ಆದರೆ ಚರ್ಮದ ಮೇಲೆ ಬಳಸುವ ಮೊದಲು ನೀವು ಪ್ಯಾಚ್ ಪರೀಕ್ಷೆಯನ್ನು ಮಾಡಲು ಸಲಹೆ ನೀಡಲಾಗುತ್ತದೆ. ಅಲ್ಲದೆ, ನೀವು ದೀರ್ಘಕಾಲದ ಚರ್ಮದ ಸಮಸ್ಯೆ ಹೊಂದಿದ್ದರೆ, ಬೀಟ್ರೂಟ್ ಅನ್ನು ಚರ್ಮ ಮತ್ತು ಕೂದಲಿನ ಮೇಲೆ ಬಳಸುವ ಮೊದಲು ದಯವಿಟ್ಟು ನಿಮ್ಮ ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ.

English summary

DIY beetroot face masks for glowing skin

Here we talking about DIY beetroot face masks for glowing skin, read onHere we talking about DIY beetroot face masks for glowing skin, read on
Story first published: Thursday, January 26, 2023, 12:32 [IST]
X
Desktop Bottom Promotion