For Quick Alerts
ALLOW NOTIFICATIONS  
For Daily Alerts

ಸ್ಯಾನಿಟೈಸ್‌ ಮಾತ್ರವಲ್ಲ ನಿಮ್ಮ ಸೌಂದರ್ಯವನ್ನೂ ವೃದ್ಧಿಸುತ್ತೆ ವೆಟ್‌ವೈಪ್ಸ್‌

|

ಇದು ಇನ್ಸ್‌ಟಂಟ್‌ ಕಾಲ, ಎಲ್ಲವೂ ಅಂಗೈಯಲ್ಲೇ, ತತ್‌ಕ್ಷಣದಲ್ಲೇ ಆಗಬೇಕು ಎಂದು ಬಯಸುತ್ತೇವೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಇನ್ಸ್‌ಟಂಟ್‌ ಆಹಾರದ ಪ್ಯಾಕೆಟ್‌ಗಳೂ ಸೇರಿದಂತೆ, ಕೂತಲ್ಲೇ ಕೈತೊಳೆಯಲು ಹ್ಯಾಂಡ್‌ ಸ್ಯಾನಿಟೈಸರ್‌, ಇದ್ದಲ್ಲೇ ತ್ವಚೆ ಸ್ವಚ್ಛಗೊಳಿಸಲು ವೆಟ್‌ವೈಪ್ಸ್‌ ಹೀಗೆ ಹತ್ತು ಹಲವು ವಸ್ತುಗಳು ಲಗ್ಗೆ ಇಟ್ಟಿವೆ. ಪ್ರವಾಸ, ಪ್ರಯಾಣ, ತುರ್ತು ಸಂದರ್ಭಗಳಲ್ಲಿ ಇಂಥ ವಸ್ತುಗಳು ಸಾಕಷ್ಟು ಪ್ರಯೋಜನಕ್ಕೆ ಬರುತ್ತದೆ.

Benefits of Wet Wipes in Kannada

ಇನ್ನು ಕೋವಿಡ್‌ ಬಂದ ನಂತರವಂತೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಹ್ಯಾಂಡ್‌ ಸ್ಯಾನಿಟೈಸರ್‌, ವೆಟ್‌ವೈಪ್ಸ್‌ಗಳು ಎಲ್ಲರ ಮನೆಗಳು, ಬ್ಯಾಗ್‌ಗಳನ್ನು ಎಗ್ಗಿಲ್ಲದೆ ಪ್ರವೇಶಿಸಿದೆ. ಇದಿಲ್ಲದೆ ಮನೆಯಿಂದ ಹೊರಗಡೆ ಹೋಗುವಂತಿಲ್ಲ ಎಂಬಂತಾಗಿದೆ.

ವಿಶೇಷವಾಗಿ ಈ ವೆಟ್‌ವೈಪ್ಸ್‌ಗಳು ಸ್ವಚ್ಚತೆಗೆ ಮಾತ್ರವಲ್ಲದೆ ಸೌಂದರ್ಯ ವೃದ್ಧಿಗೂ ಸಾಕಷ್ಟು ಪ್ರಯೋಜನಕಾರಿ. ತ್ವಚೆಯ ಬಗ್ಗೆ ಕಾಳಜಿ ಮಾಡುವವರು ಮೊದಲಿನಿಂದಲೂ ಈ ವೆಟ್‌ವೈಪ್ಸ್‌ನ ಸದುಪಯೋಗಪಡಿಸಿಕೊಳ್ಳುತ್ತಿದ್ದರು. ಹಾಗಿದ್ದರೆ ವೆಟ್‌ವೈಪ್ಸ್‌ ತ್ವಚೆಯನ್ನು ಹೇಗೆ ಕಾಳಜಿ ಮಾಡುತ್ತದೆ, ಯಾವ ರೀತಿ ರಕ್ಷಿಸುತ್ತದೆ ಮುಂದೆ ತಿಳಿಯೋಣ:

ಇನ್ಸ್‌ಟಂಟ್‌ ಫೇಶಿಯಲ್‌

ಇನ್ಸ್‌ಟಂಟ್‌ ಫೇಶಿಯಲ್‌

ವೆಟ್‌ವೈಪ್ಸ್‌ ದಿಢೀರ್‌ ಫೇಶಿಯಲ್‌ ಕಿಟ್‌ ಆಗಿ ಬಳಸಬಹುದು, ಇದು ಮೈಕ್ರೋ ಫೇಶಿಯಲ್‌ ಆಗಿ ಕೆಲಸ ಮಾಡುತ್ತದೆ. ಮಹಿಳೆಯರಿಗೆ ಮಾತ್ರ ಸೀಮಿತವಲ್ಲದೆ ಪುರುಷರು ಬಳಸುತ್ತಾರೆ. ಕೆಲಸದ ಒತ್ತಡ ಹೆಚ್ಚಿರುವಾಗ, ಬಿಸಿಲಿನ ಝಳಕ್ಕೆ ತ್ವಚೆ ಹಾಳಾಗದಂತೆ ತಡೆಯಲು ಸಹ ತಂಪಾದ ವೈಪ್ಸ್‌ ಸಹಕಾರಿ. ವೈಪ್ಸ್‌ ಬಳಸಿ ಸಂಪೂರ್ಣ ಮುಖವನ್ನು ಸ್ವಚ್ಚಗೊಳಿಸುವುದರಿಂದ ತಾಜಾ ಎನಿಸುವುದು ಅಲ್ಲದೆ, ತ್ವಚೆಯ ಶುಷ್ಕತೆಯನ್ನು ಕಾಪಾಡುತ್ತದೆ.

ತ್ವಚೆಯನ್ನು ಸದಾ ಸ್ವಚ್ಛವಾಗಿಡಲು

ತ್ವಚೆಯನ್ನು ಸದಾ ಸ್ವಚ್ಛವಾಗಿಡಲು

ಸೂರ್ಯನ ಯುವಿ ಕಿರಣಗಳಿಂದ ತ್ವಚೆಯ ಮೇಲಾದ ಹಾನಿ ಹಾಗೂ ಮಾಲಿನ್ಯದಿಂದ ತ್ವಚೆಯ ಮೇಲೆ ಇರುವ ಬ್ಯಾಕ್ಟೀರಿಯಾ, ಧೂಳು, ಜರ್ಮ್ಸ್‌ಗಳನ್ನು ಯಾವುದೇ ಗೋಜಿಲ್ಲದೆ ಕ್ಷಣಮಾತ್ರದಲ್ಲೇ ವೈಪ್ಸ್‌ ಹೋಗಲಾಡಿಸುತ್ತದೆ. ಇದು ನಿಮ್ಮ ತ್ವಚೆಗೆ ಉತ್ತಮ ಮ್ಯಾಶ್ಚಿರೈಸರ್‌ ಆಗಿ ಪೋಷಣೆ ಮಾಡುತ್ತದೆ.

ಇನ್ಸ್‌ಟಂಟ್‌ ತಂಪುಕಾರ

ಇನ್ಸ್‌ಟಂಟ್‌ ತಂಪುಕಾರ

ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಅಥವಾ ಸಾಕಷ್ಟು ಶೆಕೆ ಇರುವಾಗ ವೆಟ್‌ವೈಪ್ಸ್‌ ಅತ್ಯುತ್ತಮ ತಂಪುಕಾರಕ. ತ್ವಚೆಯನ್ನು ಸೂರ್ಯನ ಕಿರಣ ಹಾಗೂ ಬ್ಯಾಕ್ಟೀರಿಯಾದಿಂದ ರಕ್ಷಿಸುವುದಲ್ಲದೆ ತಂಪಾಗಿಸುತ್ತದೆ. ಇದರಲ್ಲಿ ಮೆಂಥಾಲ್‌ನ ಅಂಶಗಳನ್ನು ಬಳಸುವುದರಿಂದ ಇದು ತ್ವಚೆಯನ್ನು ದೀರ್ಘಕಾಲ ತಂಪಾಗಿರಿಸುತ್ತದೆ.

ಮೇಕಪ್‌ ತೆಗೆಯಲು

ಮೇಕಪ್‌ ತೆಗೆಯಲು

ನಿತ್ಯ ಮೇಕಪ್‌ ಬಳಸುವವರಿಗೆ ಅದನ್ನು ತೆಗೆಯುವುದೂ ಸಹ ದೊಡ್ಡ ತಲೆನೋವಾಗಿರುತ್ತದೆ. ಆದರೆ ವೆಟ್‌ವೈಪ್ಸ್‌ಗಳು ನಿಮ್ಮ ತ್ವಚೆಗೆ ಯಾವುದೇ ಹಾನಿ ಇಲ್ಲದೆ ಸುಲಭವಾಗಿ, ಶುದ್ಧವಾಗಿ ತ್ವಚೆಯಿಂದ ಮೇಕಪ್‌ ಅನ್ನು ನಿವಾರಿಸುತ್ತದೆ. ಅದರಲ್ಲೂ ಕಣ್ಣಿನ ಮೇಕಪ್‌ ನಿವಾರಿಸಲು ಇದು ಬೆಸ್ಟ್‌ ಎನ್ನಲಾಗುತ್ತದೆ. ವೈಪ್ಸ್‌ ಮೂಲಕ ಮೇಕಪ್‌ ತೆಗದ ನಂತರ ಪುನಃ ಮುಖ ತೊಳೆಯುವ ಅಗತ್ಯವೇ ಇರುವುದಿಲ್ಲ ಅದ್ದರಿಂದ ಯಾವುದೇ ಇದ್ದಲ್ಲೇ ಮೇಕಪ್‌ ತೆಗೆಯಬಹುದು.

ಟ್ಯಾನ್‌ ನಿವಾರಕ

ಟ್ಯಾನ್‌ ನಿವಾರಕ

ನಿಮ್ಮ ತ್ವಚೆ ಸೂರ್ಯನ ಕಿರಣಗಳಿಗೆ ಹೆಚ್ಚು ತೆರೆದುಕೊಳ್ಳುತ್ತಿದ್ದಾಗ ಚರ್ಮದ ಕಾಂತಿ ಹಾಳಾಗಿ ಅತಿಯಾಗಿ ಟ್ಯಾನ್‌ ಆಗುವ ಸಾಧ್ಯತೆ ಇರುತ್ತದೆ. ಆದರೆ ಈ ವೆಟ್‌ವೈಪ್ಸ್‌ಗಳು ನಿಮ್ಮ ತ್ವಚೆಯನ್ನು ಟ್ಯಾನ್‌ನಿಂದ ರಕ್ಷಿಸುತ್ತದೆ. ನಿಮ್ಮ ತ್ವಚೆಯನ್ನು ನಿರಂತರವಾಗಿ ವೆಟ್‌ವೈಪ್ಸ್‌ನಿಂದ ಶುಚಿಗೊಳಿಸುತ್ತಿದ್ದರೆ ಟ್ಯಾನ್‌ನಿಂದ ರಕ್ಷಿಸಬಹುದು ಎನ್ನಲಾಗಿದೆ.

ಮೊಡವೆ ನಿವಾರಕ

ಮೊಡವೆ ನಿವಾರಕ

ನಿರಂತರವಾಗಿ ವೆಟ್‌ವೈಪ್ಸ್‌ ಬಳಸುವುದರಿಂದ ತ್ವಚೆಯಲ್ಲಿ ಧೂಳಿನಿಂದ ಉಂಟಾಗಬಹುದಾದ ಸಮಸ್ಯೆಗಳು ಹಾಗೂ ಮೊಡವೆಗಳು ಬರದಂತೆ ತಡೆಯುತ್ತದೆ. ವೈಪ್ಸ್‌ನ್ನು ಆಗಾಗ್ಗೆ ಬಳಸುವ ಮೂಲಕ ತ್ವಚೆಯನ್ನು ಶುದ್ಧವಾಗಿಡಬಹುದಾಗಿದ್ದು, ಇದು ಧೂಳಿನ ಕಣಗಳನ್ನು ನಿವಾರಿಸುತ್ತಾ ತ್ವಚೆಯ ಹಾನಿಯನ್ನು ತಪ್ಪಿಸುತ್ತದೆ.

English summary

Benefits of Wet Wipes in Kannada

Here we are discussing about Benefits of Wet Wipes. wet wipes could do more for your skin by keeping them away from many issues. Read more.
Story first published: Thursday, May 20, 2021, 12:32 [IST]
X
Desktop Bottom Promotion