For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಕಾಡುವ ಮೊಡವೆಗಳಿಗೆ ಸರಳ ಪರಿಹಾರ ಟಿಪ್ಸ್‪ಗಳು

|

ಬೇಸಿಗೆಯ ಬಿಸಿ ಎಲ್ಲರಿಗೂ ಒಂದು ಬಗೆಯ ಕಿರಿಕಿರಿ ನೀಡುವುದು ಸಹಜ. ಮೂರು ತಿಂಗಳುಗಳ ಕಾಲ ಬೇಸಿಗೆಯನ್ನು ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗಿರುತ್ತದೆ. ಅತಿಯಾದ ಉಷ್ಣತೆಯಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದು ಸಹಜ. ಪ್ರತಿಯೊಂದು ಜೀವಿಗಳಿಗೂ ಉತ್ತಮ ಆರೋಗ್ಯ ಇರಬೇಕು ಎಂದರೆ ದೇಹದಲ್ಲಿ ನೀರಿನ ಪ್ರಮಾಣ ಸೂಕ್ತವಾಗಿರಬೇಕು. ಇಲ್ಲವಾದರೆ ಸಾಕಷ್ಟು ಆರೋಗ್ಯದ ಸಮಸ್ಯೆಗಳು ಕಾಡುತ್ತವೆ. ಜೀರ್ಣ ಕ್ರಿಯೆಯ ವ್ಯವಸ್ಥೆ, ರಕ್ತಗಳ ಸಂಚಾರ ಹಾಗೂ ಚರ್ಮದ ಆರೋಗ್ಯ ಎಲ್ಲವೂ ದೇಹದಲ್ಲಿ ನೀರಿನಂಶ ಎಷ್ಟಿದೆ ಎನ್ನುವುದರ ಮೇಲೆಯೇ ನಿರ್ಧಾರವಾಗುತ್ತದೆ.

ಚರ್ಮದ ಆರೋಗ್ಯ ಹಾಗೂ ಸೌಂದರ್ಯದ ವಿಷಯದಲ್ಲಿ ವಾತಾವರಣ ಹಾಗೂ ಜೀವನ ಶೈಲಿಯು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಚರ್ಮವು ನಮ್ಮ ದೇಹದ ವಿಶೇಷತೆ ಹಾಗೂ ಆರೋಗ್ಯಕ್ಕೆ ಕನ್ನಡಿಯನ್ನು ಹಿಡಿಯುತ್ತದೆ. ವ್ಯಕ್ತಿಯ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಅಥವಾ ಗಂಭೀರ ಸಮಸ್ಯೆ ಉಂಟಾದರೆ ಅದು ಬಹುಬೇಗ ಚರ್ಮದಿಂದ ವ್ಯಕ್ತವಾಗುತ್ತದೆ. ಮೊಡವೆಗಳು, ಕೆಂಪು ಗುಳ್ಳೆಗಳು, ಉರಿಯೂತ, ಶುಷ್ಕತೆಯಿಂದ ಚರ್ಮವು ಜೀವ ಕಳೆದುಕೊಳ್ಳುವುದು ಹೀಗೆ ಅನೇಕ ಸಮಸ್ಯೆಗಳು ತ್ವಚೆಯ ಮೇಲೆ ಬಹುಬೇಗ ಕಾಣಿಸಿಕೊಳ್ಳುತ್ತವೆ.

ಬೇಸಿಗೆಯ ಬಿಸಿ ಹಾಗೂ ಉರಿಗೆ

ಬೇಸಿಗೆಯ ಬಿಸಿ ಹಾಗೂ ಉರಿಗೆ

ಋತುಗಳಿಗೆ ಅನುಗುಣವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳು ಬಹು ಬೇಗ ಚರ್ಮದ ಮೇಲೆ ಗೋಚರಿಸುತ್ತವೆ. ಅದರಲ್ಲೂ ಬೇಸಿಗೆಯ ಬಿಸಿ ಹಾಗೂ ಉರಿಗೆ ತ್ವಚೆಯಲ್ಲಿ ಸಾಕಷ್ಟು ಬದಲಾವಣೆಗಳು ಹಾಗೂ ಹಾನಿ ಉಂಟಾಗುತ್ತವೆ ಎಂದು ಹೇಳಬಹುದು. ಸೂರ್ಯನ ಕಿರಣಗಳು ತ್ವಚೆಯ ಮೇಲೆ ನೇರವಾಗಿ ಹಾನಿಯನ್ನುಂಟು ಮಾಡುವುದರಿಂದ ಮೊಡವೆಗಳು ಹೆಚ್ಚಾಗುತ್ತವೆ. ಅಲ್ಲದೆ ವಾತಾವರಣದಲ್ಲಿ ಶುಷ್ಕತೆ ಹಾಗೂ ಸಾಕಷ್ಟು ಧೂಳುಗಳ ಪ್ರಭಾವದಿಂದ ಚರ್ಮದ ಮೇಲೆ ಸೂಕ್ಷ್ಮ ರೀತಿಯಲ್ಲಿಯೇ ಪ್ರಭಾವ ಬೀರುತ್ತವೆ. ಇವುಗಳ ಪ್ರಭಾವದಿಂದ ಮೊಡವೆಗಳು ಹೆಚ್ಚುವುದು.

ಬೇಸಿಗೆಯಲ್ಲಿ ಹೆಚ್ಚಾಗಿ ಬೆವರುವಿಕೆ

ಬೇಸಿಗೆಯಲ್ಲಿ ಹೆಚ್ಚಾಗಿ ಬೆವರುವಿಕೆ

ಬೇಸಿಗೆಯಲ್ಲಿ ಹೆಚ್ಚಾಗಿ ಬೆವರುವಿಕೆಯು ಇರುವುದರಿಂದ ಚರ್ಮದಲ್ಲಿ ರಂಧ್ರಗಳು ವಿಸ್ತರಣೆ ಪಡೆದುಕೊಳ್ಳುವುದು ಹಾಗೂ ಕೊಳೆಗಳ ಶೇಖರಣೆ, ಅಲರ್ಜಿ ಉಂಟಾಗುವುದು, ಪದೇ ಪದೇ ಮುಖವನ್ನು ಒರೆಸಿಕೊಳ್ಳುವುದು, ವಿವಿಧ ಕ್ರೀಮ್‍ಗಳ ಬಳಕೆ ಮಾಡುವುದು ಹೀಗೆ ಭಿನ್ನ ಕಾರಣಗಳಿಂದ ಮೊಡವೆಗಳ ವ್ಯಾಪ್ತಿ ಹೆಚ್ಚುವುದು. ಇಲ್ಲವೆ ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳಬಹುದು. ಹೀಗೆ ವಿವಿಧ ಕಾರಣಗಳಿಂದ ಮೊಡವೆಯ ಸಮಸ್ಯೆ ಉಲ್ಭಣವಾಗುತ್ತಲೇ ಹೋಗುತ್ತವೆ. ಈ ಕಾರಣಗಳಿಂದ ಮುಖದ ಸೌಂದರ್ಯವೂ ಹಾಳುಗತ್ತವೆ. ನಮ್ಮನ್ನು ಹೊರ ಪ್ರಪಂಚಕ್ಕೆ ಸುಂದರ ನೋಟದಿಂದ ಪ್ರದರ್ಶಿಸುವುದು ನಮ್ಮ ಮುಖ. ಮುಖದ ಮೇಲೆ ಅಥವಾ ತ್ವಚೆಯ ಮೇಲೆ ಉಂಟಾಗುವ ಹಾನಿಗಳು ಸೌಂದರ್ಯದ ಗುಣಮಟ್ಟವನ್ನು ಕುಗ್ಗುವಂತೆ ಮಾಡುತ್ತವೆ. ಆಗಲೇ ಆರಂಭವಾದ ಬೇಸಿಗೆಯ ಉರಿಗೆ ಹೇಗೆ ಪರಿಹಾರ ಕಾಣುವುದು? ಹೆಚ್ಚುವ ಮೊಡವೆಗಳಿಂದ ಹೇಗೆ ಮುಕ್ತಿ ಪಡೆಯುವುದು? ಮೊಡವೆಗಳ ನಿವಾರಣೆ ಹೇಗೆ? ಬೇಸಿಗೆಯಲ್ಲೂ ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಹೇಗೆ? ಎನ್ನುವುದರ ಕುರಿತು ಚಿಂತಿಸುತ್ತಿದ್ದೀರಿ ಅಥವಾ ಪರಿಹಾರಗಳ ಹುಡುಕಾಟದಲ್ಲಿದ್ದೀರಿ ಎಂದಾದರೆ ಬೋಲ್ಡ್ ಸ್ಕೈ ಸಾಕಷ್ಟು ಮಾಹಿತಿಯೊಂದಿಗೆ ಪರಿಹಾರವನ್ನು ಸೂಚಿಸುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವ ಆಸೆ ಅಥವಾ ಕುತೂಹಲವಿದ್ದರೆ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

Most Read: ಒಣ ಹಣ್ಣುಗಳನ್ನು ಸೌಂದರ್ಯವರ್ಧಕವಾಗಿ ಬಳಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್

ಎಣ್ಣೆಯುಕ್ತ ಕ್ರೀಮ್‍ಗಳನ್ನು ಬಳಸಬಾರದು

ಎಣ್ಣೆಯುಕ್ತ ಕ್ರೀಮ್‍ಗಳನ್ನು ಬಳಸಬಾರದು

ಬೇಸಿಗೆಯಲ್ಲಿ ಸಾಮಾನ್ಯವಾಗಿ ಬೆವರುವಿಕೆಯು ಹೆಚ್ಚಾಗಿಯೇ ಇರುತ್ತದೆ. ಇಂತಹ ಸಮಯದಲ್ಲಿ ಎಣ್ಣೆಯುಕ್ತ ಕ್ರೀಮ್‍ಗಳನ್ನು ಬಳಸಿದರೆ ಬೆವರುವಿಕೆಯು ಹೆಚ್ಚಾಗುತ್ತದೆ. ಜೊತೆಗೆ ಜಿಡ್ಡಿನಂಶವು ಚರ್ಮದಲ್ಲಿಯೇ ಉಳಿದುಕೊಳ್ಳುತ್ತವೆ. ಇವುಗಳ ಪರಿಣಾಮದಿಂದ ಕೊಳೆಗಳು ಚರ್ಮದಲ್ಲಿ ಶೇಖರಣೆಯಾಗುತ್ತವೆ. ಅವು ನಿಧಾನವಾಗಿ ಮೊಡವೆ ಹಾಗೂ ಇನ್ನಿತರ ಚರ್ಮ ಸಂಬಂಧಿ ಸಮಸ್ಯೆಯನ್ನು ಸೃಷ್ಟಿಸುತ್ತವೆ. ಎಣ್ಣೆ ಮತ್ತು ಬೆವರು ಚರ್ಮದಲ್ಲಿ ಮಾಲಿನ್ಯ ಅಥವಾ ಕೊಳೆ ಹೆಚ್ಚಾಗುವಂತೆ ಮಾಡುತ್ತವೆ. ಹಾಗಾಗಿ ಆದಷ್ಟು ಇಂತಹ ಕ್ರೀಮ್‍ಗಳ ಬಳಕೆಯನ್ನು ಬೇಸಿಗೆಯಲ್ಲಿ ಮಾಡದಿರಿ.

ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಾಥಮಿಕ ಹಂತ ಎನ್ನುವುದನ್ನು ಮರೆಯಬಾರದು

ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಾಥಮಿಕ ಹಂತ ಎನ್ನುವುದನ್ನು ಮರೆಯಬಾರದು

ನಿತ್ಯವೂ ಮುಖ ಹಾಗೂ ಚರ್ಮದ ಆರೋಗ್ಯದ ಬಗ್ಗೆ ಕೊಂಚ ಕಾಳಜಿ ಇರಬೇಕು. ಆಗಾಗ ಮುಖವನ್ನು ತೊಳೆಯುವುದು, ಸೂಕ್ತ ಉತ್ಪನ್ನಗಳ ಬಳಕೆಯಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು, ಉರಿಯೂತ, ಶುಷ್ಕ ತ್ವಚೆ, ಎಣ್ಣೆಯ ಕಿರಿಕಿರಿ ಹೀಗೆ ಅನೇಕ ಚರ್ಮ ಸಮಸ್ಯೆಗಳನ್ನು ನಿಯಂತ್ರಿಸಬೇಕು. ಚರ್ಮದ ಮೇಲ್ಮೈ ಮೇಲೆ ಇರುವ ದೊಡ್ಡ ರಂಧ್ರಗಳಲ್ಲಿ ಶೇಖರಣೆಗೊಳ್ಳುವ ಕೊಳೆಯನ್ನು ಸ್ವಚ್ಛಗೊಳೆಸಬೇಕು. ಮುಖವು ಸದಾ ತಾಜಾ ಹಾಗೂ ಶುದ್ಧತೆಯಿಂದ ಕೂಡಿರುವಂತೆ ನೋಡಿಕೊಳ್ಳುವುದರಿಂದ ಬೇಸಿಗೆಯಲ್ಲೂ ಮೊಡವೆಗಳಿಂದ ಮುಕ್ತಿ ಹೊಂದಬಹುದು.

ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ ಮುಖವನ್ನು ನೀರಿನಲ್ಲಿ ಆಗಾಗ ಶುದ್ಧೀಕರಿಸಿ

ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ ಮುಖವನ್ನು ನೀರಿನಲ್ಲಿ ಆಗಾಗ ಶುದ್ಧೀಕರಿಸಿ

ಶುದ್ಧೀಕರಿಸಿದ ನಂತರ ಟೋನರ್‍ಗಳನ್ನು ಬಳಸಿ. ಹತ್ತಿಯ ಸಹಾಯದಿಂದ ಮುಖದ ಮೇಲಿರುವ ಕೊಳೆಯನ್ನು ನಿಧಾನವಾಗಿ ತೆಗೆಯಿರಿ. ಮನೆಯಲ್ಲಿಯೇ ಸಿಗುವ ಕೆಲವು ಆರೋಗ್ಯಕರ ವಸ್ತುಗಳನ್ನು ಚರ್ಮದ ಆರೋಗ್ಯಕ್ಕೆ ಬಳಸಬಹುದು. ಗುಲಾಬಿ ನೀರು ಮತ್ತು ಸೌತೆಕಾಯಿ ರಸವನ್ನು ಬೆರೆಸಿ, ಮುಖದ ಮೇಲೆ ಅನ್ವಯಿಸಬಹುದು. ಸ್ವಲ್ಪ ಸಮಯದ ನಂತರ ಸ್ವಚ್ಛಗೊಳಿಸಿದರೆ ಮುಖವು ಶುದ್ಧತೆಯಿಂದ ಕೂಡಿರುತ್ತದೆ. ರಾತ್ರಿ ಮಲಗುವ ಮುನ್ನ ಮುಖವನ್ನು ತೊಳೆಯುವುದು ಅಥವಾ ಮುಖದಲ್ಲಿರುವ ಕೊಳೆಯನ್ನು ತೆಗೆಯಬೇಕು. ಇದರಿಂದ ಚರ್ಮವು ಆರೋಗ್ಯಕರವಾಗಿ ಮೊಡವೆಯಿಂದ ಮುಕ್ತವಾಗಿರುತ್ತದೆ.

ಶುದ್ಧ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ

ಶುದ್ಧ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ

ಬೇಸಿಗೆಯಲ್ಲಿ ಸಾಮಾನ್ಯವಾಗಿ ಅಧಿಕ ಜನರು ಸಾಬೂನು ಬಳಸುವುದರ ಮೂಲಕ ಮುಖವನ್ನು ತೊಳೆಯಲು ಬಯಸುತ್ತಾರೆ. ಹೀಗೆ ಮಾಡುವುದರಿಂದ ಚರ್ಮದ ಮೇಲಿರುವ ಆಸಿಡ್ ಕ್ಷಾರೀಯ ಸಮತೋಲನವನ್ನು ನಾಶಪಡಿಸುತ್ತದೆ. ಬೇಸಿಗೆಯಲ್ಲಿ ಚರ್ಮದ ಮೇಲೆ ದದು, ಗುಳ್ಳೆ ಮತ್ತು ಮೊಡವೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ ವೈದ್ಯರ ಸಲಹೆ ಪಡೆದು. ಚರ್ಮದ ಆರೋಗ್ಯವನ್ನು ಕಾಪಾಡುವ ಹಾಗೂ ಮೊಡವೆಗಳಿಂದ ಮುಕ್ತಿ ಸಿಗುವಂತಹ ಸಾಬೂನುಗಳು ಅಥವಾ ಫೇಸ್ ವಾಷ್ ಗಳನ್ನು ಬಳಸುವುದು ಸೂಕ್ತ. ಇಲ್ಲವಾದರೆ ದಿನದಲ್ಲಿ ಆಗಾಗ ಶುದ್ಧ ನೀರಿನಿಂದ ಮಾತ್ರ ಮುಖವನ್ನು ತೊಳೆಯುತ್ತಲಿರಿ. ಇದು ಮುಖದ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ಮೊಡವೆಗಳನ್ನು ಗಮನಾರ್ಹ ರೀತಿಯಲ್ಲಿ ನಿಯಂತ್ರಿಸುತ್ತವೆ.

Most Read: ಬರೀ ಐದೇ ದಿನಗಳಲ್ಲಿ ಕಾಂತಿಯುತ ಚರ್ಮಕ್ಕಾಗಿ 'ಜೇನುತುಪ್ಪ' ಬಳಸಿ!

ಮೊಡವೆ ಮತ್ತು ಬ್ಲ್ಯಾಕ್‍ಹೆಡ್ಸ್‍ಗಳಿಂದ ಮುಕ್ತಿ ಹೊಂದಿ

ಮೊಡವೆ ಮತ್ತು ಬ್ಲ್ಯಾಕ್‍ಹೆಡ್ಸ್‍ಗಳಿಂದ ಮುಕ್ತಿ ಹೊಂದಿ

ಮೊಡವೆಯಿಂದ ಮತ್ತು ಬ್ಲ್ಯಾಕ್‍ಹೆಡ್ಸ್‍ಗಳಿಂದ ಮುಕ್ತಿ ಪಡೆಯಬೇಕು ಎಂದರೆ ಫೇಷಿಯಲ್‍ಗಳನ್ನು ಬಳಸಬೇಕು. ಫೇಷಿಯಲ್ ಅನ್ನು ವಾರದಲ್ಲಿ ಆಗಾಗ ನಿಯಮಿತವಾಗಿ ಬಳಸುವುದರಿಂದ ಬ್ಲ್ಯಾಕ್‍ಹೆಡ್ಸ್ ಮತ್ತು ಮೊಡವೆಗಳನ್ನು ನಿಯಂತ್ರಿಸಬಹುದು ಎಂದು ಹೇಳಲಾಗುವುದು. ಜೊತೆಗೆ ಚರ್ಮವು ತೇವಾಂಶದಿಂದ ಆರೋಗ್ಯಕರವಾಗಿರುತ್ತದೆ. ದಪ್ಪದಾದ ಮೊಡವೆ ಗಳು ಅಥವಾ ಚರ್ಮದ ಮೇಲೆ ಹಾನಿಯುಂಟಾಗಿರುವ ಸ್ಥಳಗಳಲ್ಲಿ ಫೇಷಿಯಲ್ ಮಿಶ್ರಣವನ್ನು ಬಳಸಬೇಡಿ. ಗುಲಾಬಿ ನೀರಿಗೆ ಸ್ವಲ್ಪ ಅಕ್ಕಿ ಹಿಟ್ಟನ್ನು ಬೆರೆಸಿ ಫೇಷಿಯಲ್ ಮಿಶ್ರಣವನ್ನು ತಯಾರಿಸಿಕೊಳ್ಳಿ. ನಂತರ ಮಿಶ್ರಣವನ್ನು ಪೀಡಿತ ಪ್ರದೇಶ ಹಾಗೂ ಬ್ಲ್ಯಾಕ್‍ಹೆಡ್ಸ್‍ಗಳ ಜಾಗದಲ್ಲಿ ದಪ್ಪವಾಗಿ ಅನ್ವಯಿಸಿ. ವೃತ್ತಾಕಾರದ ವಿಧಾನದಲ್ಲಿ ಮೃದುವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯದ ಬಳಿಕ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ಹೀಗೆ ಗಣನೀಯವಾಗಿ ಮಾಡುವುದರಿಂದ ಮೊಡವೆಗಳಿಂದ ಹಾಗೂ ಕೊಳೆಗಳಿಂದ ಚರ್ಮವನ್ನು ರಕ್ಷಿಸಬಹುದು.

ಸೂಕ್ತ ಕ್ರಮವನ್ನು ಕೈಗೊಳ್ಳುವುದರ ಮೂಲಕ ಪರಿಹಾರ ಕಂಡುಕೊಳ್ಳಿ

ಸೂಕ್ತ ಕ್ರಮವನ್ನು ಕೈಗೊಳ್ಳುವುದರ ಮೂಲಕ ಪರಿಹಾರ ಕಂಡುಕೊಳ್ಳಿ

ಚರ್ಮವು ಎಣ್ಣೆಯಿಂದ ಹಾಗೂ ಬೆವರಿನಿಂದ ಕೂಡಿದೆ ಎಂದಾಗ ಸಾಕಷ್ಟು ಕೊಳೆ ಹಾಗೂ ಧೂಳನ್ನು ಆಕರ್ಷಿಸುತ್ತವೆ. ಇದರಿಂದ ಮೊಡವೆಗಳು ಸಾಮಾನ್ಯವಾಗಿ ಹೆಚುವುದು. ಹಾಗಾಗಿ ಆಗಾಗ ಮುಖವನ್ನು ತೊಳೆದು ಶುದ್ಧವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಆಗ ಮುಖದ ಚರ್ಮವು ತೇವಾಂಶದಿಂದ ಆರೋಗ್ಯಭರಿತವಾಗಿರುತ್ತದೆ. ತ್ವಚೆಯ ಆರೋಗ್ಯ ಹಾಗೂ ಮೊಡವೆಗಳ ನಿವಾರಣೆಗೆ ಕೆಲವು ಮನೆ ಆರೈಕೆಯನ್ನು ಮಾಡಬಹುದು. ಅವು ಉತ್ತಮ ಪರಿಹಾರವನ್ನು ನೀಡುತ್ತವೆ.

* ಒಂದು ಟೀ ಚಮಚಮ ಜೇನುತುಪ್ಪ ಮತ್ತು ಮೊಸರನ್ನು ಸೇರಿಸಿ, ಮಿಶ್ರಗೊಳಿಸಿ. ನಂತರ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 20 ನಿಮಿಷಗಳ ಕಾಲ ಬಿಡಬೇಕು. ಬಳಿಕ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ.

* ಶುದ್ಧ ಹಾಗೂ ತಾಜಾ ಮೆಂತ್ಯಾ ಸೊಪ್ಪನ್ನು ಪೇಸ್ಟ್‍ನಂತೆ ಮಾಡಿ ಮುಖಕ್ಕೆ ಅನ್ವಯಿಸಿಕೊಳ್ಳಬೇಕು. ನಂತರ 15-20 ನಿಮಿಷಗಳ ಕಾಲ ಆರಲು ಬಿಡಬೇಕು. ಒಣಗಿದ ಬಳಿಕ ಶುದ್ಧ ನೀರಿನಲ್ಲಿ ಸ್ವಚ್ಛಗೊಳಿಸಬೇಕು.

* ಬೇವಿನ ಎಲೆಯು ಮುಡವೆಗೆ ದಿವ್ಯ ಔಷಧಿಯಾಗಿ ಆರೈಕೆ ಮಾಡುವುದು. ಒಂದು ಹಿಡಿ ಬೇವಿನ ಎಲೆಗೆ ಒಂದು ಗ್ಲಾಸ್ ನೀರನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಒಂದು ಗಂಟೆ ಉರಿಯಲ್ಲಿ ಕುದಿಸಿ. ಬಳಿಕ ಒಂದು ರಾತ್ರಿ ಅದನ್ನು ವಿಶ್ರಮಿಸಲು ಬಿಡಿ. ಮುಂಜಾನೆ ನೀರನ್ನು ಸೋಸಿ ಮುಖವನ್ನು ತೊಳೆಯಿರಿ. ಸೊಪ್ಪುಗಳನ್ನು ಪೇಸ್ಟನಂತೆ ರುಬ್ಬಿಕೊಳ್ಳಿ. ಆ ಪೇಸ್ಟ್‍ಅನ್ನು ಮೊಡವೆಯ ಮೇಲೆ ಅನ್ವಯಿಸಿ. ಈ ಕ್ರಮವನ್ನು ಗಣನೀಯವಾಗಿ ಮಾಡುತ್ತಾ ಬಂದರೆ ಮೊಡವೆಗಳು ಬಹುಬೇಗ ಶಮನವಾಗುತ್ತವೆ.

* ಅತಿಯಾದ ತಲೆ ಹೊಟ್ಟು ಹಾಗೂ ಎಣ್ಣೆಯನ್ನು ಬಳಸುವುದರಿಂದಲೂ ಕೆಲವರಿಗೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಮೊದಲು ಹೊಟ್ಟಿನ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳಿ. ತಲೆಗೆ ಎಣ್ಣೆಯ ಬಳಕೆ ಮಾಡಿದ ನಂತರ ಸೂಕ್ತ ರೀತಿಯಲ್ಲಿ ಸ್ವಚ್ಛವಾಗಿರಿಸಿಕೊಳ್ಳಲು ಪ್ರಯತ್ನಿಸಿ.

Most Read: ತ್ವರಿತವಾಗಿ ಮೊಡವೆ ಹಾಗೂ ಮೊಡವೆಯಿಂದಾಗುವ ಕಲೆಗಳನ್ನು ಮಾಯ ಮಾಡೋ ಮನೆಮದ್ದುಗಳು

ಶುಚಿತ್ವವು ಅತ್ಯಂತ ಪ್ರಮುಖವಾದ ಸಂಗತಿ

ಶುಚಿತ್ವವು ಅತ್ಯಂತ ಪ್ರಮುಖವಾದ ಸಂಗತಿ

ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದರಿಂದ ನಾವು ಸಾಕಷ್ಟು ರೋಗಗಳಿಂದ ಹಾಗೂ ಸಮಸ್ಯೆಗಳಿಂದ ದೂರ ಸರಿಯಬಹುದು. ಮುಖವನ್ನು ತೊಳೆಯುವುದರ ಜೊತೆಗೆ ನೀವು ಬಳಸುವ ಕಾಸ್ಮೆಟಿಕ್ ಬ್ರಶ್, ಟವೆಲ್, ತಲೆದಿಂಬು, ಹಾಸಿಗೆ ವಸ್ತ್ರಗಳು ಸಹ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಇವುಗಳನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯುವುದು, ಡೆಟಾಲ್ ಬಳಕೆ ಮಾಡುವುದು ಹಾಗೂ ನಂಜು ನಿರೋಧಕ ದ್ರಾವಣ ಬಳಸುವುದರ ಮೂಲಕ ಸ್ವಚ್ಛಗೊಳಿಸಿ.

ಹೆಚ್ಚೆಚ್ಚು ನೀರನ್ನು ಕುಡಿಯಿರಿ

ಹೆಚ್ಚೆಚ್ಚು ನೀರನ್ನು ಕುಡಿಯಿರಿ

ಮೊಡವೆಯು ಸಂಕುಚಿತ ವ್ಯವಸ್ಥೆಯಿಂದಲೂ ಚರ್ಮದ ಮೇಲೆ ಹೊರಹೊಮ್ಮುತ್ತವೆ. ಹಾಗಾಗಿ ದೈನಂದಿನ ಆಹಾರದಲ್ಲಿ ತಾಜಾ ಹಣ್ಣುಗಳು, ತರಕಾರಿಗಳನ್ನು ಸೇರಿಸಿಕೊಳ್ಳಲು ಮರೆಯದಿರಿ. ಜೊತೆಗೆ ದಿನಕ್ಕೆ 6-8 ಗ್ಲಾಸ್ ನೀರನ್ನು ಕುಡಿಯಿರಿ. ಮಜ್ಜಿಗೆ ಸೇವನೆ, ಸಲಾಡ್ ಸೇವನೆಗಳಂತಹ ತಂಪಾದ ಆಹಾರವನ್ನು ಸೇವಿಸಿ ದೇಹದ ಆರೋಗ್ಯವನ್ನು ಕಾಯ್ದುಕೊಳ್ಳಿ. ನಿತ್ಯವೂ ಮುಂಜಾನೆ ಒಂದು ಗ್ಲಾಸ್ ನೀರಿಗೆ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಇದು ದೇಹದ ಆರೋಗ್ಯವನ್ನು ಕಾಯ್ದುಕೊಳ್ಳುವುದರ ಜೊತೆಗೆ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಮುಖದಲ್ಲಿ ಮೊಡವೆಯನ್ನು ನಿಯಂತ್ರಿಸಿ, ಕಾಂತಿಯುತವಾಗಿರುವಂತೆ ಮಾಡುತ್ತದೆ.

English summary

Tips for acne troubles in summer

During summers, sweat and oil secretion increases and get deposited on the skin. An oily and sweaty skin also attracts more dirt and pollutants. Which is why summers aggravate acne problem because of heat and sweat.Following are some tips to prevent skin from acne during the heated climate
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X