For Quick Alerts
ALLOW NOTIFICATIONS  
For Daily Alerts

ಮುಖದ ಕಾಂತಿ ಹೆಚ್ಚಿಸಲು ದಿಢೀರ್ ಉಪಾಯಗಳು

|

ವಾತಾವರಣ, ನೀರು ಅಥವಾ ಇನ್ನಾವುದೋ ಕಾರಣಗಳಿಂದ ಅನೇಕ ಬಾರಿ ಮುಖದ ಕಾಂತಿ ಮಾಯವಾಗಿ ಮುಖ ಕಳಾಹೀನವಾಗಿ ಕಾಣಿಸುತ್ತದೆ. ಅದರಲ್ಲೂ ಯಾವುದೋ ತೀರಾ ಮುಖ್ಯವಾದ ಕೆಲಸವಿರುವಾಗ ಅಥವಾ ಮುಖ್ಯ ವ್ಯಕ್ತಿಯನ್ನು ಭೇಟಿಯಾಗುವ ದಿನದಂದೇ ಮುಖದ ತ್ವಚೆ ಕಳೆಗುಂದಿದಂತಾಗಿ ಆತಂಕ ಮೂಡಿಸುತ್ತದೆ. ವಾಯು ಮಾಲಿನ್ಯ, ಧೂಳು ಮುಂತಾದುವುದಗಳಿಂದ ತ್ವಚೆ ಹಾಳಾಗುವುದು ಸಾಮಾನ್ಯವಾಗಿದೆ.

ಆದರೆ ಕೆಲ ಸುಲಭ ವಿಧಾನಗಳ ಮೂಲಕ ಶೀಘ್ರವಾಗಿ ಮುಖದ ಕಾಂತಿಯನ್ನು ಮರಳಿ ಪಡೆಯಬಹುದು ಎಂಬುದು ಖುಷಿಯ ವಿಚಾರಚಾಗಿದೆ. ನಿಮ್ಮ ಮನೆಯಲ್ಲೇ ಇರುವ ಕೆಲ ವಸ್ತುಗಳನ್ನು ಬಳಸಿ ಮುಖದ ಹೊಳಪು ಹೆಚ್ಚಿಸಲು ಅನೇಕ ವಿಧಾನಗಳಿವೆ. ಅಂಥ ಯಾವ ವಿಧಾನಗಳ ಮೂಲಕ ಮುಖದ ಹೊಳಪು ಹೆಚ್ಚಿಸಿ ಸೌಂದರ್ಯವಂತರಾಗಿ ಕಾಣಬಹುದು ಎಂಬುದನ್ನು ಈ ಅಂಕಣದಲ್ಲಿ ತಿಳಿಸಿಲಾಗಿದ್ದು ನೀವೂ ಟ್ರೈ ಮಾಡಿ ನೋಡಿ. ಮನೆಯಲ್ಲಿನ ವಸ್ತುಗಳನ್ನು ಬಳಸಿ ಸಹಜವಾಗಿ ಮುಖದ ಕಾಂತಿ ಹೆಚ್ಚಿಸುವ ದಿಢೀರ್ ಉಪಾಯಗಳು

ಬಾಳೆ ಹಣ್ಣಿನ ಫೇಸ್ ಪ್ಯಾಕ್

ಬಾಳೆ ಹಣ್ಣಿನ ಫೇಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು : 1 ಕಳಿತ ಬಾಳೆಹಣ್ಣು, 1 ಟೇಬಲ್ ಚಮಚೆ ನಿಂಬೆ ರಸ, 1 ಟೇಬಲ್ ಚಮಚೆ ಜೇನು ತುಪ್ಪ, ಟವೆಲ್.

ತಯಾರಿಕೆ ಅವಧಿ : 2 ನಿಮಿಷ

ಉಪಚರಿಸುವ ಅವಧಿ : 15 ನಿಮಿಷ

ಬಳಸುವ ವಿಧಾನ : ಬಾಳೆ ಹಣ್ಣು, ನಿಂಬೆರಸ, ಜೇನು ತುಪ್ಪಗಳೆಲ್ಲವನ್ನೂ ಮಿಕ್ಸ್ ಮಾಡಿ ಚೆನ್ನಾಗಿ ಬ್ಲೆಂಡ್ ಮಾಡಿ ನುಣುಪಾದ ಪೇಸ್ಟ್ ತಯಾರಿಸಿಕೊಳ್ಳಿ. ಮುಖವನ್ನು ಮೃದುವಾದ ಕ್ಲೆನ್ಸರ್ ನಿಂದ ತೊಳೆದುಕೊಂಡು ಟವೆಲ್‌ನಿಂದ ಪೂರ್ಣ ಒಣಗಿಸಿಕೊಳ್ಳಿ. ಈಗ ಬಾಳೆಹಣ್ಣಿನ ಮಿಶ್ರಣದ ಪೇಸ್ಟ್ ಅನ್ನು ಮುಖಕ್ಕೆ ಲೇಪಿಸಿ 15 ನಿಮಿಷ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಂಡು ಒಣಗಿಸಿಕೊಳ್ಳಿ.

 ಅಡುಗೆ ಸೋಡಾ

ಅಡುಗೆ ಸೋಡಾ

ಬೇಕಾಗುವ ಸಾಮಗ್ರಿಗಳು : 1 ಟೇಬಲ್ ಚಮಚೆ ಅಡುಗೆ ಸೋಡಾ, ಒಂದೂವರೆ ಟೇಬಲ್ ಚಮಚೆ ನೀರು, ಟವೆಲ್.

ತಯಾರಿಕೆ ಅವಧಿ : 2 ನಿಮಿಷ

ಉಪಚರಿಸುವ ಅವಧಿ : 5 ನಿಮಿಷ

ಬಳಸುವ ವಿಧಾನ : ಅಡುಗೆ ಸೋಡಾಗೆ ನೀರು ಸೇರಿಸಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ. ಮೃದುವಾದ ಕ್ಲೆನ್ಸರ್‌ನಿಂದ ಮುಖ ತೊಳೆದು ಟವೆಲ್‌ನಿಂದ ಸಂಪೂರ್ಣ ಒಣಗಿಸಿಕೊಳ್ಳಿ. ಈಗ ಸೋಡಾದ ಪೇಸ್ಟ್ ಅನ್ನು ವೃತ್ತಾಕಾರವಾಗಿ ಮುಖದ ಮೇಲೆ ಮೃದುವಾಗಿ ಲೇಪಿಸಿಕೊಳ್ಳಿ. 5 ನಿಮಿಷ ಹಾಗೆಯೇ ಇರಲು ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಟವೆಲ್‌ನಿಂದ ಮುಖವನ್ನು ಸಂಪೂರ್ಣ ಒಣಗಿಸಿಕೊಳ್ಳಿ. ವಾರದಲ್ಲಿ 2 ರಿಂದ 3 ಬಾರಿ ಈ ವಿಧಾನ ಅನುಸರಿಸುವುದರಿಂದ ಒಳ್ಳೆಯ ಫಲಿತಾಂಶ ಕಾಣಬಹುದು.

ಕಡಲೆ ಹಿಟ್ಟು

ಕಡಲೆ ಹಿಟ್ಟು

ಬೇಕಾಗುವ ಸಾಮಗ್ರಿಗಳು ; 2 ಟೇಬಲ್ ಚಮಚೆ ಕಡಲೆ ಹಿಟ್ಟು, 4 ಟೇಬಲ್ ಚಮಚೆ ರೋಸ್ ವಾಟರ, ಟವೆಲ್

ತಯಾರಿಕೆ ಅವಧಿ : 2 ನಿಮಿಷ

ಉಪಚರಿಸುವ ಅವಧಿ : 20 ನಿಮಿಷ

ಬಳಸುವ ವಿಧಾನ : ಕಡಲೆ ಹಿಟ್ಟಿಗೆ ರೋಸ್ ವಾಟರ ಸೇರಿಸಿ ನುಣುಪಾದ ಮಿಶ್ರಣ ತಯಾರಿಸಿಕೊಳ್ಳಿ. ಮೃದುವಾದ ಕ್ಲೆನ್ಸರ್‌ನಿಂದ ಮುಖ ತೊಳೆದುಕೊಂಡು ಟವೆಲ್‌ನಿಂದ ಸಂಪೂರ್ಣ ಒಣಗಿಸಿ. ಈಗ ಕಡಲೆ ಹಿಟ್ಟಿನ ಮಿಶ್ರಣವನ್ನು ಫೇಸ್ ಪ್ಯಾಕ್ ರೀತಿಯಲ್ಲಿ ಮುಖಕ್ಕೆ ಹಚ್ಚಿಕೊಳ್ಳಿ. ಬಾಯಿ ಹಾಗೂ ಕಣ್ಣುಗಳಿಗೆ ಮಿಶ್ರಣ ತಾಗದಂತೆ ನೋಡಿಕೊಳ್ಳಿ. ಇದನ್ನು 20 ನಿಮಿಷ ಹಾಗೆಯೇ ಇರಲು ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಮುಖವನ್ನು ಟವೆಲ್‌ನಿಂದ ಒರೆಸಿಕೊಂಡು ಸಂಪೂರ್ಣ ಒಣಗಿಸಿಕೊಳ್ಳಿ. ವಾರಕ್ಕೆ 2 ರಿಂದ 3 ಬಾರಿ ಈ ವಿಧಾನವನ್ನು ಅನುಸರಿಸಬಹುದು.

ನಿಂಬೆ ರಸ

ನಿಂಬೆ ರಸ

ಬೇಕಾಗುವ ಸಾಮಗ್ರಿಗಳು : 2 ಟೇಬಲ್ ಚಮಚೆ ನಿಂಬೆ ರಸ, 1 ಟೇಬಲ್ ಚಮಚೆ ಜೇನು ತುಪ್ಪ, ಟವೆಲ್

ತಯಾರಿಕೆ ಅವಧಿ : 2 ನಿಮಿಷ

ಉಪಚರಿಸುವ ಅವಧಿ : 15 ನಿಮಿಷ

ಬಳಸುವ ವಿಧಾನ : ನಿಂಬೆ ರಸ ಹಾಗೂ ಜೇನು ತುಪ್ಪಗಳೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮೃದುವಾದ ಕ್ಲೆನ್ಸರ್‌ನಿಂದ ಮುಖ ತೊಳೆದುಕೊಂಡು ಟವೆಲ್‌ನಿಂದ ಸಂಪೂರ್ಣ ಒಣಗಿಸಿಕೊಳ್ಳಿ. ಈಗ ಫೇಸ್ ಪ್ಯಾಕ್ ರೀತಿಯಲ್ಲಿ ನಿಂಬೆ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಕಣ್ಣು ಹಾಗೂ ಬಾಯಿಗೆ ಮಿಶ್ರಣ ತಾಗದಂತೆ ಎಚ್ಚರಿಕೆ ವಹಿಸಿ. 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಂಡು ಟವೆಲ್‌ನಿಂದ ಒಣಗಿಸಿಕೊಳ್ಳಿ.

ವಾರಕ್ಕೆರಡು ಬಾರಿ ಈ ವಿಧಾನ ಅನುಸರಿಸಬಹುದು.

 ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿ

ಬೇಕಾಗುವ ಸಾಮಗ್ರಿಗಳು : 5 ರಿಂದ 6 ಹೋಳು ಸವತೆಕಾಯಿ ಹೋಳುಗಳು, 2 ಟೇಬಲ್ ಚಮಚೆ ಮುಲ್ತಾನಿ ಮಣ್ಣು, 1 ಟೇಬಲ್

ಚಮಚೆ ರೋಸ್ ವಾಟರ, ಟವೆಲ್

ತಯಾರಿಕೆ ಅವಧಿ : 5 ನಿಮಿಷ

ಉಪಚರಿಸುವ ಅವಧಿ : 15 ನಿಮಿಷ

ಬಳಸುವ ವಿಧಾನ : ಎಲ್ಲ ಸಾಮಗ್ರಿಗಳನ್ನು ಬೆರೆಸಿ ನುಣುಪಾದ ಪೇಸ್ಟ್ ತಯಾರಿಸಿಕೊಳ್ಳಿ. ಮೃದುವಾದ ಕ್ಲೆನ್ಸರ್‌ನಿಂದ ಮುಖ ತೊಳೆದು ಟವೆಲ್‌ನಿಂದ ಮುಖವನ್ನು ಒಣಗಿಸಿಕೊಳ್ಳಿ. ಈಗ ಮುಲ್ತಾನಿ ಮಿಟ್ಟಿಯ ಮಿಶ್ರಣವನ್ನು ಮುಖಕ್ಕೆ ಫೇಸ್ ಪ್ಯಾಕ್ ರೀತಿಯಲ್ಲಿ ಹಚ್ಚಿಕೊಳ್ಳಿ. 15 ನಿಮಿಷ ಹಾಗೆಯೇ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಮುಖವನ್ನು ಟವೆಲ್ ನಿಂದ ಒರೆಸಿ ಒಣಗಿಸಿಕೊಳ್ಳಿ.

ವಾರದಲ್ಲಿ 2 ರಿಂದ 3 ಬಾರಿ ಈ ವಿಧಾನವನ್ನು ಅನುಸರಿಸಬಹುದು.

ಈ ವಿಧಾನ ಹೇಗೆ ಕೆಲಸ ಮಾಡುತ್ತದೆ? : ಸೌತೆಕಾಯಿ ರಸದೊಂದಿಗೆ ಮುಲ್ತಾನಿ ಮಿಟ್ಟಿ ಸೇರಿಕೊಂಡಾಗ ಅದು ಮುಖದ ಕಾಂತಿಯನ್ನು ಹೆಚ್ಚಿಸಿ ಕಳೆಗುಂದುವಿಕೆಯನ್ನು ಕಡಿಮೆ ಮಾಡುತ್ತದೆ. ಇನ್ನು ಮಿಶ್ರಣದಲ್ಲಿರುವ ರೋಸ್ ವಾಟರನಿಂದ ಮುಖದ ಚರ್ಮಕ್ಕೆ ತಕ್ಷಣ ಗುಲಾಬಿ ಹೊಳಪು ಸಿಗುತ್ತದೆ. ಮುಲ್ತಾನಿ ಮಿಟ್ಟಿಯಲ್ಲಿರುವ ಖನಿಜಾಂಶಗಳಿಂದ ಚರ್ಮಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ. ಚರ್ಮದ ಮೇಲಿನ ಕೊಳೆಯನ್ನು ತೊಡೆದು ಹಾಕಿ ಮುಖಕ್ಕೆ ಕಾಂತಿ ನೀಡುವ ಹಾಗೂ ಜಿಡ್ಡು ತೆಗೆದು ಹಾಕುವ ಗುಣವನ್ನು ಮುಲ್ತಾನಿ ಮಿಟ್ಟಿ ಹೊಂದಿರುವುದರಿಂದ ಮುಖದ ಚರ್ಮ ಆರೋಗ್ಯಪೂರ್ಣವಾಗುತ್ತದೆ.

ಪಪ್ಪಾಯಿ

ಪಪ್ಪಾಯಿ

ಬೇಕಾಗುವ ಸಾಮಗ್ರಿಗಳು : 1 ಹೋಳು ಪಪ್ಪಾಯಿ, 1 ಟೇಬಲ್ ಚಮಚೆ ನಿಂಬೆ ರಸ, 1 ಟೇಬಲ್ ಚಮಚೆ ಹಾಲು

ತಯಾರಿಕೆ ಅವಧಿ : 2 ನಿಮಿಷ

ಉಪಚರಿಸುವ ಅವಧಿ : 20 ನಿಮಿಷ

ಬಳಸುವ ವಿಧಾನ : ಎಲ್ಲ ಸಾಮಗ್ರಿಗಳನ್ನು ಬ್ಲೆಂಡ್ ಮಾಡಿಕೊಂಡು ನುಣುಪಾದ ಪೇಸ್ಟ್ ತಯಾರಿಸಿಕೊಳ್ಳಿ. ಮೃದುವಾದ ಕ್ಲೆನ್ಸರ್‌ನಿಂದ ಮುಖ ತೊಳೆದು ಟವೆಲ್‌ನಿಂದ ಒಣಗಿಸಿಕೊಳ್ಳಿ. ಈಗ ಪಪ್ಪಾಯಿ ಮಿಶ್ರಣವನ್ನು ಫೇಸ್ ಪ್ಯಾಕ್ ರೀತಿಯಲ್ಲಿ

ಮುಖಕ್ಕೆ ಹಚ್ಚಿಕೊಳ್ಳಿ. ಕಣ್ಣು ಹಾಗೂ ಬಾಯಿಗೆ ಮಿಶ್ರಣ ತಾಗದಂತೆ ಎಚ್ಚರಿಕೆ ವಹಿಸಿ. 20 ನಿಮಿಷ ಹಾಗೆಯೇ ಬಿಟ್ಟು ಉಗುರು

ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಈಗ ಟವೆಲ್‌ನಿಂದ ಮುಖವನ್ನು ಚೆನ್ನಾಗಿ ಒರೆಸಿ ಒಣಗಿಸಿಕೊಳ್ಳಿ.ವಾರಕ್ಕೆ 1 ರಿಂದ 2 ಬಾರಿ ಈ ವಿಧಾನ ಅನುಸರಿಸಬಹುದು.

English summary

Top Methods To Get Instant Fairness

Everyone has days when they wake up to dull, lifeless skin. And if your luck is as bad as mine, you probably catch yourself looking this way on days when you really can’t afford to. With the amount of grime, dust, and pollution that our skin is exposed to, dullness and skin darkening is inevitable. But what if I told you that there are ways to reverse this? In fact, you can achieve instant fairness with ingredients from your pantry. Following are 10 simple methods to get instant fairness with the help of natural ingredients.
X
Desktop Bottom Promotion