ದೇಹದ ಆಯಾಸ ಮುಖದ ಮೇಲೆ ಕಾಣದಿರಲು ಈ ಸಲಹೆಗಳನ್ನು ಅನುಸರಿಸಿ ನೋಡಿ

Posted By: Annapoorna P
Subscribe to Boldsky

ಮಲಗಿ ಎದ್ದಾಗ ಎಷ್ಟು ತಾಜಾವಾಗಿ ಕಾಣುತ್ತಾರೆಯೋ ಅದೇ ರೀತಿ ದಿನ ತಾಜಾವಾಗಿ ದಿನ ಪೂರ್ತಿಕಾಣಬೇಕೆಂದು ಯಾರುತಾನೇ ಬಯಸುವುದಿಲ್ಲ?. ದಿನ ಪೂರ್ತಿ ಕೆಲಸ, ಗಂಟೆಗಟ್ಟಲೆ ಬಿಸಿಲಿನಲ್ಲಿ ಕಳೆಯುವುದು ನಿಮ್ಮ ತ್ವಚೆಯ ಮೇಲೆ ಪರಿಣಾಮ ಬೀರಬಹುದು. ಆದರೆ ಮುಖದ ಮೇಲೆ ಆಯಾಸ ಕಾಣದಿರಲು ನೀವು ಅನುಸರಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.

ದಿನವಿಡೀ ಕೆಲಸಮಾಡಿದ ನಂತರ ನಮ್ಮಲ್ಲಿ ಹಲವಾರು ಮಂದಿ ಸಂಜೆಯ ಹೊತ್ತಿನಲ್ಲಿ ವಿವಿಧ ಯೋಜನೆಯನ್ನು ಇಟ್ಟುಕೊಂಡಿರುತ್ತಾರೆ. ಅದು ಪಾರ್ಟಿಇರಬಹುದು, ಸಿನೆಮಾ ಅಥವಾ ಡಿನ್ನರ್ ಇರಬಹುದು. ದಿನವಿಡಿಯ ಅಯಾಸ ಸಂಜೆಯಾಗುತ್ತಲೇ ನಿಮ್ಮ ಮುಖಃದ ಮೇಲೆ ಕಾಣಲ್ಪಡುತ್ತದೆ. ನಿಮ್ಮ ಮುಖ ಹಾಗು ತ್ವಚೆ ಕಾಂತಿಯುಕ್ತವಾಗಿ ಮತ್ತು ತಾಜಾವಾಗಿ ಕಾಣುದವಂತೆ ಮಾಡಲು ಕೆಲವೊಂದು ಸಲಹೆಗಳನ್ನು ಕೊಡುತ್ತಿದ್ಡೇವೆ.

dull skin

ನೀವು ಬೆಳಗ್ಗೆ ಮುಖಪೂರ್ತಿ ಮೇಕಪ್ ಮಾಡಿದ್ದರೂ ಸಂಜೆಯಾಗುತ್ತಲೇ ಮೇಕಪ್ ಹೋಗಲಾರಂಬಿಸಬಹುದು. ಸಂಜೆ ಪ್ಲಾನ್ಸ್ ಇದ್ದಾಗ ಇದೇರೀತಿಯಾದರೆ, ಬೆಳಗ್ಗಿನ ಮೇಕಪ್ ನ ಪ್ರಯೋಜನವೇನು? ಹಾಗಾದರೆ ಬೆಳಗ್ಗೆ ಮಾಡಿದ ಮೇಕಪ್ ವ್ಯರ್ತವಾಯಿತೆ? ಪ್ರತಿ ದಿನವೂ ಬ್ಲೆಂಡರ್ ಮತ್ತು ಫೌಂಡೇಶನ್ನ್ ನನ್ನು ತೆಗೆದುಕೊಂಡು ಓಡಾಡುವುದು ನಿಜವಾಗಿಯೂ ಕಷ್ಟಕರಎಂದು ನಾವು ತಿಳಿದಿದ್ದೇವೆ, ಆದ್ದರಿಂದ ಅಗತ್ಯವಿರುವ ಕೆಲವು ಸಲಹೆಗಳನ್ನು ನಾವು ಸೂಚಿಸುತ್ತೇವೆ. ನಿಮಗೆ ಯಾವ ಉತ್ಪನ್ನದ ಅಗತ್ಯವಿದೆ ಹಾಗೂ ಯಾವುದು ಹೆಚ್ಚು ಸೂಕ್ತವೆಂದು ತೋರುತ್ತದೆ ಎಂಬುದನ್ನು ನೀವು ಆಯ್ಕೆ ಮಾಡಬಹುದು. ನಿಮ್ಮ ಮುಖದ ತ್ವಚೆಯನ್ನು ತುಂಬಾ ಹೊತ್ತು ತಾಜಾವಾಗಿಡಲು ಉಪಯೋಗಿಸಬಹುದಾದ ಕೆಲವು ಉತ್ಪನ್ನಗಳು ಇಲ್ಲಿವೆ. ಅವುಗಳನ್ನು ಯಾವಾಗಲೂ ನಿಮ್ಮ ಬ್ಯಾಗ್ ನಲ್ಲಿ ಕೊಂಡೊಯ್ಯಬಹುದು.

1. ಫೇಸ್ ಮಿಸ್ಟ್

ಫೇಸ್ ಮಿಸ್ಟ್ಅನ್ನು ಬ್ಯಾಗ್ ನಲ್ಲಿ ಕೊಂಡೊಯ್ಯುವುದು ತುಂಬಾ ಸುಲಭವಾದದ್ದು. ಒಂದು ಸಣ್ಣ ಬಾಟಲಿ ಫೇಸ್ ಮಿಸ್ಟ್ ನಿಮ್ಮ ಚರ್ಮವನ್ನು ದಿನದ ಮಧ್ಯದಲ್ಲಿ ಸುಲಭವಾಗಿ ರಿಫ್ರೆಶ್ ಮಾಡಲು ಪರಿಣಾಮಕಾರಿಯಾಗಿದೆ. ನೀವು ಯಾವಗೆಲ್ಲಾ ಮೇಕಪ್ ಮಾಡಬೇಕೊ ಆವಾಗ ಸ್ವಲ್ಪ ಫೇಸ್ ಮಿಸ್ಟ್ಅನ್ನು ಮುಖದ ಮೇಲೆ ಸಿಂಪಡಿಸಿದರೆ ಸಾಕು. ನೀವು ನಿಮ್ಮ ಆಪೀಸಿನಲ್ಲಿ ಕುಳಿತುಕೊಂಡು ಅಥವಾ ಹೊರಗಡೆ ಎಲ್ಲೇ ಇದ್ದರೂ ಕೂಡಾ ಇದನ್ನು ಮಾಡಬಹುದು. ತಂಬಾ ಜನ ಮದ್ಯಾಹ್ನವಾದಂತೆ ತೂಕಡಿಸಲು ಪ್ರಾರಂಬಿಸುತ್ತಾರೆ. ಇಂತಾ ಸಮಯದಲ್ಲಿ ಫೇಸ್ ಮಿಸ್ಟ್ ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮನ್ನು ಚೆಯಿತನ್ಯ ಭರಿತವಾಗಿಸುತ್ತದೆ.

ವಿಭಿನ್ನ ರೂಪದ ಫೇಸ್ ಮಿಸ್ಟ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ವಿಟಮಿನ್ E ಮತ್ತು C ಭರಿತ ಫೇಸ್ ಮಿಸ್ಟ್ ಗಳು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಇದಲ್ಲದೇ ಗುಲಾಬಿ ಮತ್ತು ಲ್ಯಾವೆಂಡರ್ ಫೇಸ್ ಮಿಸ್ಟ್ ಗಳೂ ಇವೆ. ಲ್ಯಾವೆಂಡರ್ ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ಮುಖ ತಾಜಾ ಕಾಣುವಂತೆ ಮಾಡುತ್ತದೆ, ಮತ್ತು ವಿಟಮಿನ್ C ವಿಶೇಷವಾಗಿ ಚರ್ಮದ ಕಾಂತಿಗಾಗಿ ಉಪಯೋಗಿಸಲಾಗುತ್ತದೆ . ಆದ್ದರಿಂದ ಇದು ದಣಿವನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ.

Concealer

2. ಕನ್ಸೀಲರ್

ಕನ್ಸೀಲರ್ ಒಂದು ಮ್ಯಾಜಿಕ್ ಉತ್ಪನ್ನ ಎಂದೇ ಹೇಳಬಹುದು, ಸರಿಯಾಗಿ ನಿದ್ರೆ ಮಾಡಿರದಿದ್ದಲ್ಲಿ, ಒತ್ತಡ ಹೆಚ್ಹಿದ್ದಲ್ಲಿ ಕಣ್ಣಿನ ಕೆಳಭಾಗ ಕಪ್ಪಾಗಿ ಅಥವಾ ಮಂದವಾಗಿ ಕಾಣುತ್ತವೆ.ಇಂತಹ ಸಂದರ್ಭದಲ್ಲಿ ಕನ್ಸೀಲರ್ ನನ್ನು ಬಳಸಿ. ಇದಲ್ಲದೇ ಕನ್ಸೀಲರ್ಗಳು ಮುಖದಲ್ಲಿರುವ ಇತರ ಕಪ್ಪು ಕಲೆಗಳನ್ನು ಮರೆಮಾಚಿ ಹೊಳಪನ್ನು ನೀಡುತ್ತೆ. ಯಾವಾಗಲೂ ಕನ್ಸೀಲರ್ ನನ್ನು ಆಯ್ಕೆಮಾಡುವಾಗ ನಿಮ್ಮ ಚರ್ಮದ ಬಣ್ಣಕ್ಕಿಂತ ಒಂದು ಶೇಡ್ ಕಡಿಮೆಯಿರಲಿ. ಅಥವಾ ಪುಲ್ಲ್ ಕವರೇಜ್ ಕನ್ಸೀಲರನ್ನು ಆಯ್ಕೆಮಾಡಿ. ಇಲ್ಲವಾದಲ್ಲಿ ಕನ್ಸೀಲರ್ ಸರಿಯಾಗಿ ಚರ್ಮದೊಂದಿಗೆ ಹೊಂದಿಕೊಳ್ಳದಿರುವ ಸಾದ್ಯತೆಇದೆ.

3. ಬ್ಲಶ್(ಗುಲಾಬಿ)

ನೈಸರ್ಗಿಕವಾಗಿ ಕೆಂಪಾದ ಕೆನ್ನೆಯನ್ನು ಎಲ್ಲರೂ ಬಯಸುತ್ತಾರೆ ಅಲ್ವಾ? ಆದರೆ ಅದು ಬಹಳ ಅಪರೂಪ. ಬ್ಲಶ್ ಅನ್ನು ಬಳಸಿದಾಗ ಕೆನ್ನೆಗಳು ಕೆಂಪಾಗಿ ಕಾಣುತ್ತದೆ. ಬ್ಲಶ್ ಆಯ್ಕೆಮಾಡುವಾಗ ಪೀಚ್ ಅಥವಾ ಗುಲಾಬಿ ಬಣ್ಣವನ್ನು ಆರಿಸಿಕೊಳ್ಳಿ. ಅದು ಮ್ಯಾಟ್ ಬ್ಲಶ್ ಎಂದು ಖಚಿತಪಡಿಸಿಕೊಳ್ಳಿ, ಹಚ್ಹುವ ಪ್ರಮಾಣ ಸರಿಯಾಗಿರಲಿ ಇಲ್ಲವಾದಲ್ಲಿ ಮೇಕಪ್ ಕ್ರುತಕವಾಗಿ ಕಾಣುವಂತೆ ಮಾಡಬಹುದು.

4. ಬ್ರೋನ್ಜರ್ 

ನಿಮ್ಮ ಮುಖದಲ್ಲಿ ಹೊಳಪನ್ನು ಪಡೆಯಲು ಬ್ರೋನ್ಜರ್ ಬಳಕೆಮಾಡುವುದು ಒಂದು ಅತ್ಯುತ್ತಮ ವಿಧಾನ. ಕೊಂಟೂರಿಂಗ್ಗಾಗಿ (ಮುಖದ ರಚನೆಯನ್ನು ಅಥವಾ ಬಾಹ್ಯರೇಖೆಯನ್ನು ಹೆಚ್ಚಿಸಲು ಅಥವಾ ಎದ್ದು ಕಾಣಲು ಬಳಸುವ ವಿಧಾನ) ಬ್ರೋಂಜರ್ಸ್ ಅನ್ನು ಈ ದಿನಗಳಲ್ಲಿ ಬಳಸಲಾಗುತ್ತದೆ. ಬಾಹ್ಯರೇಖೆಗಳು ನಿಮ್ಮಮುಖದ ಕೆಲವು ಭಾಗಗಳನ್ನು ತೀಕ್ಷ್ಣವಾಗಿ ಕಾಣುವಂತೆ ಮಾಡಿ ಮುಖದ ಅಂದವನ್ನು ಹೆಚ್ಹಿಸುತ್ತದೆ. ನೀವು ಇಷ್ಟಪಡುವ ನಟಿಯರ ಮತ್ತು ಮಾಡೆಲ್ ಗಳ ಮುಖ ಎಷ್ಟು ಅಂದವಾಗಿ ಪರಿಪೂರ್ಣವಾಗಿದೆ ಎಂದುಕೊಂಡಿದ್ದೀರಾ? ಯಾಕೆಂದರೆ ಅವರು ಬ್ರೋನ್ಜರ್ ಅನ್ನು ಬಳಸುತ್ತಾರೆ.

5. ಮಾಯಿಶ್ಚರೈಸರ್ 

ಅನೇಕ ಜನರು ಮಾಡುವ ತಪ್ಪೇನೆಂದರೆ, ಮೇಕಪ್ ಹಾಕುವ ಮೊದಲು,ಮಾಯಿಶ್ಚೈಸರ್ ಬಳಸದಿರುವುದು. ನೀವೂ ಕೂಡ ಈ ತಪ್ಪನ್ನು ಮಾಡಿರಬಹುದು. ಯಾವುದೇ ರೀತಿಯ ಮೇಕ್ಅಪ್ ಅನ್ನು ಹಾಕುವ ಮೊದಲು, ಮಾಯಿಶ್ಚರೈಸರ್ ಬಳಸಿ. ಆದರೆ ಮೇಕಪ್ ಗೆ ಮುಂಚಿತವಾಗಿ ಮಾಯಿಶ್ಚರೈಸರ್ ಬಳಸದೆ ಇದ್ದಲ್ಲಿ ತ್ವಚೆಯೊಂದಿಗೆ ಮೇಕಪ್ ಸರಿಯಾಗಿ ಹೊಂದಿಕೊಳ್ಳದೇ ಅಲ್ಲಲ್ಲಿ ಮೇಕಪ್ ಅಂಟಿಕೊಂಡಂತೆ ಕಾಣಬಹುದು.

6. ನೈಟ್ ಕ್ರೀಮ್ ಗಳ ಬಳಕೆ

ಮುಖದ ಚರ್ಮ, ನಾವು ಮಲಗಿದ್ದಾಗ ಸಾಕಷ್ಟು ಗುಣಪಡಿಸುವ ಕಾರ್ಯಗಳನ್ನು ಮಾಡುವುದು. ದಿನಪೂರ್ತಿ ಹೊರಗಿದ್ದುದರಿಂದ ನಿಮ್ಮ ತ್ವಚೆ ಆಯಾಸ ಮತ್ತು ಮಾಲಿನ್ಯದಿಂದ ಕೂಡಿರುತ್ತದೆ. ಮಲಗಿದ್ದಾಗ ತ್ವಚೆಯ ಸೂಕ್ಷ್ಮ ರಂಧ್ರಗಳು ತೆರೆದುಕೊಳ್ಳುತ್ತದೆ. ತ್ವಚೆಯ ಆಯಾಸ ಮತ್ತು ಮಾಲಿನ್ಯವನ್ನು ತೆಗೆದು ನೈಸರ್ಗಿಕವಾಗಿ ಮುಖ ಹೊಳಪಾಗಲು ಮುಖಕ್ಕೆ ತೇವಾಂಶದ ಅಗತ್ಯವಿರುತ್ತದೆ. ಆದುದರಿಂದ ನೈಟ್ ಕ್ರೀಮ್ ಅಥವಾ ಮಾಸ್ಕ್ ಬಳಸುವುದು ಉತ್ತಮ. ವಯಸ್ಸಾದಂತೆ ನಮ್ಮ ಚರ್ಮ ತೇವಾಂಶ ಕಳೆದುಕೊಂಡು ಸುಕ್ಕು ಕಟ್ಟಲು ಪ್ರಾರಂಭಿಸುತ್ತದೆ. ಈ ಕ್ರೀಮ್ ಗಳು ತ್ವಚೆಯಲ್ಲಿನ ತೇವಾಂಶವನ್ನು ಹಿಡಿದಿಡುತ್ತದೆ ಮತ್ತು ವಯಸ್ಸಾದಂತೆ ಕಾಣದಿರಲು ಸಹಕಾರಿಯಾಗಿದೆ.

7. ಹೈಲೈಟ್

ಮುಖದ ಕೆಲವೊಂದು ಭಾಗಗಳನ್ನು ಎದ್ದು ಕಾಣುವಂತೆ ಮಾಡಲು ಹೈಲೈಟ್ ಅನ್ನು ಬಳಸಿ. ನೈಸರ್ಗಿಕವಾಗಿ ಸೂರ್ಯನ ಕಿರಣಗಳು ಹೈಲೈಟ್ ಮಾಡಿದ ಭಾಗಕ್ಕೆ ಬಿದ್ದಾಗ ಆ ಭಾಗವು ಎದ್ದುಕಂಡು ನಿಮ್ಮ ಸ್ವಂದರ್ಯವನ್ನು ಹೆಚ್ಚಿಸುತ್ತದೆ. ಮೂಗಿನ ಸೇತುವೆ, ಹಣೆ ಮತ್ತು ಕೆನ್ನೆಗಳ ಉನ್ನತ ಅಂಕಗಳಅಲ್ಲಿ ಸಾಮಾನ್ಯವಾಗಿ ಹೈಲೈಟ್ ಅನ್ನು ಬಳಸಲಾಗುತ್ತದೆ . ದ್ರವ್ಯ ರೂಪದ ಹೈಲೈಟ್ ಚರ್ಮದೊಂದಿ ಗೆ ಚೆನ್ನಾಗಿ ಬೆರೆಯುತ್ತದೆ ಹಾಗೂ ನೈಸರ್ಗಿಕವಾದ ನೋಟ ಕೊಡುತ್ತದೆ, ಆದರೆ ಹೈಲೈಟ್ ಪುಡಿ ಹೊಂದಿಕೊಳ್ಳುವುದು ಕಷ್ಟ ಮತ್ತು ನಾಜೂಕಾದ ಮೇಕಪ್ ನೀಡುವುದಿಲ್ಲ

lip balm

8. ಬಣ್ಣದ ಲಿಪ್ ಬಾಮ್

ಡ್ರೈ ತುಟಿಗಳು ನಿಮ್ಮ ಸಂಪೂರ್ಣ ಮುಖವನ್ನು ಮಂದಗೊಳಿಸಬಹುದು. ಬಣ್ಣಹೊಂದಿದ ತುಟಿಗಳು ನಿಮ್ಮ ತುಟಿಗಳು ಹೊಳೆಯುವಂತೆ ಮತ್ತು ನೈಸರ್ಗಿಕವಾಗಿ ಗುಲಾಬಿ ಬಣ್ಣವನ್ನು ಹೊಂದುವಂತೆ ಮಾಡುತ್ತದೆ. ಲಿಪ್ ಬಾಮ್ ತುಟಿಗಳಲ್ಲಿ ತೇವಾಂಶ ಉಳಿದುಕೊಂಡು ತುಟಿಗಳು ಒಣಗದಂತೆ ನೋಡಿಕೊಳ್ಳುತ್ತದೆ. ಸಂಜೆಯ ಪ್ಲ್ಯಾನ್ ಗಳಿಗೆ ನಾವು ಕೊಟ್ಟಿರುವ ಮೇಕಪ್ ಸಲಹೆಗಳು ಉತ್ತಮವಾಗಿದೆ ಎಂದು ನಾವು ಭಾವಿಸುತ್ತೇವೆ. 

English summary

Tips To Avoid Fatigue From Showing Up On Skin

Here are some products you should carry in your bag to avoid your skin from looking tired and to instantly brighten up your skin for a day out.