For Quick Alerts
ALLOW NOTIFICATIONS  
For Daily Alerts

ಥಟ್ಟನೇ ತ್ವಚೆಯನ್ನು ಬೆಳ್ಳಗಾಗಿಸುವ ಸರಳ ಫೇಸ್ ಪ್ಯಾಕ್

By Deepu
|

ನಿಸರ್ಗದತ್ತವಾಗಿ ಸೌಂದರ್ಯಪ್ರಜ್ಞೆ ಎನ್ನುವುದು ಮಹಿಳೆಯರಲ್ಲಿಯೇ ಹೆಚ್ಚಾಗಿ ನಾವು ಕಾಣುತ್ತೇವೆ. ಅದರಲ್ಲೂ ತಮ್ಮ ತ್ವಚೆ ಅತಿ ಕೋಮಲ, ಗೌರವರ್ಣ ಮತ್ತು ಕಲೆಯಿಲ್ಲಂದಿತಿರುವುದು ಪ್ರತಿಯೊಬ್ಬರ ಕನಸು. ಮೇಕಪ್‌ನಿಂದ ಕಲೆಗಳನ್ನು ಎದುರಿನವರ ನೋಟದಿಂದ ಮರೆಮಾಚಿದರೂ ಮನಸ್ಸಿನಿಂದ ಮರೆಮಾಚಲು ಸಾಧ್ಯವಿಲ್ಲ. ಇಂದಿನ ದಿನಚರಿ, ಬಿಸಿಲು, ಹೊಗೆ, ಅಲರ್ಜಿ, ನೀರಿನ ಗಡಸು, ವ್ಯಾಯಾಮದ ಕೊರತೆ. ಮದ್ಯಪಾನ, ಅತಿ ಧೂಮಪಾನ ಇಂತಹ ಹಲವಾರು ಕಾರಣದಿಂದ ಚರ್ಮ ತನ್ನ ಸಹಜ ಸ್ಥಿತಿಯನ್ನು ಕಳೆದುಕೊಂಡಿರುವುದನ್ನು ಸರಿಪಡಿಸಲು ಸಾಧ್ಯವಿದೆ.

ಈ ಕಾರಣಗಳನ್ನೇ ತೋರಿಸಿ ಬಹುರಾಷ್ಟ್ರೀಯ ಸಂಸ್ಥೆಗಳು ಕೋಟ್ಯಂತರ ರೂಪಾಯಿಗಳ ಜಾಹೀರಾತಿನಿಂದ ಜನರನ್ನು ಮರಳುಮಾಡಿ ಹಾನಿಕಾರಕ ರಾಸಾಯನಿಕಗಳಿಂದ ಥಟ್ಟನೇ ಈ ತೊಂದರೆಗಳನ್ನು ಸರಿಪಡಿಸಿಬಿಡುತ್ತೇವೆ ಎಂದು ಪ್ರಚಾರ ಮಾಡುತ್ತವೆ. ಆದರೆ ಇದು ಮೇಲ್ನೋಟಕ್ಕೆ ಚರ್ಮವನ್ನು ಸುಂದರಗೊಳಿಸಿದರೆ ಇನ್ನೊಂದೆಡೆ ಶಿಥಿಲಗೊಳಿಸುತ್ತದೆ. ಆದ್ದರಿಂದ ನೂರಾರು ವರ್ಷಗಳಿಂದ ಫಲಪ್ರದವೆಂದು ಸಾಬೀತುಪಡಿಸಿರುವ, ಯಾವುದೇ ಅಡ್ಡ ಪರಿಣಾಮವಿಲ್ಲದ, ನಿಧಾನವಾಗಿಯಾದರೂ ಉತ್ತಮ ಫಲಿತಾಂಶವನ್ನೇ ನೀಡುವ ಮನೆಮದ್ದುಗಳಿವೆ. ಕೆಳಗಿನ ಸ್ಲೈಡ್ ಶೋ ಮೂಲಕ ಇಂಥ ಹಲವು ಮನೆಮದ್ದುಗಳ ಬಗ್ಗೆ ವಿವರ ನೀಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ....

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

*ಒಂದು ತುಂಡು ಪಪ್ಪಾಯಿ (ಚೆನ್ನಾಗಿ ಹಣ್ಣಾಗಿ ಕಳಿತ ತಿರುಳು)

*ಜೇನು

*ಹಸಿ ಹಾಲು

ತಯಾರಿಕಾ ವಿಧಾನ

ಸಮಪ್ರಮಾಣದಲ್ಲಿ ಈ ಮೂರೂ ಸಾಮಾಗ್ರಿಗಳನ್ನು ಚೆನ್ನಾಗಿ ಅರೆದು ಈಗತಾನೇ ತಣ್ಣೀರಿನಲ್ಲಿ ತೊಳೆದ ಮುಖಕ್ಕೆ ತೆಳುವಾಗಿ ಲೇಪಿಸಿಕೊಳ್ಳಿ. ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಬಿಟ್ಟು ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಬಳಸದಿರಿ.

ಎಣ್ಣೆಚರ್ಮದ ಸಮಸ್ಯೆ ಇದ್ದರೆ

ಎಣ್ಣೆಚರ್ಮದ ಸಮಸ್ಯೆ ಇದ್ದರೆ

*ಒಂದು ತುಂಡು ಪಪ್ಪಾಯಿ (ಚೆನ್ನಾಗಿ ಹಣ್ಣಾಗಿ ಕಳಿತ ತಿರುಳು)

*ಮುಲ್ತಾನಿ ಮಿಟ್ಟಿ

*ಕೊಂಚ ನೀರು ತಯಾರಿಕಾ ವಿಧಾನ:

*ಮೊದಲು ಎಲ್ಲಾ ಸಾಮಾಗ್ರಿಗಳನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಚೆನ್ನಾಗಿ ಅರೆಯಿರಿ. ಚರ್ಮದ ಎಣ್ಣೆಯಂಶವನ್ನು ತೊಲಗಿಸಲು ಮುಲ್ತಾನಿಮಿಟ್ಟಿ ಅತ್ಯಂತ ಸೂಕ್ತವಾಗಿದ್ದು ಚರ್ಮದ ಹೆಚ್ಚುವರಿ ಎಣ್ಣೆಯನ್ನು ಮಾತ್ರ ನಿವಾರಿಸುತ್ತದೆ. ಅಲ್ಲದೇ ಬಹಳ ಕಾಲದವರೆಗೆ ಮತ್ತೆ ಎಣ್ಣೆ ಪಸೆ ಮೂಡದಿರಲು ಸಾಧ್ಯವಾಗುತ್ತದೆ.

*ಈಗತಾನೇ ತಣ್ಣೀರಿನಲ್ಲಿ ತೊಳೆದ ಚರ್ಮಕ್ಕೆ ಈ ಲೇಪನವನ್ನು ಹಚ್ಚಿ ಸುಮಾರು ಇಪ್ಪತ್ತೈದು ನಿಮಿಷ ಒಣಗಲು ಬಿಡಿ. ಕೆಲವರ ಚರ್ಮ ಈ ಲೇಪವನ್ನು ಅತಿ ಬೇಗನೇ ಹೀರಿಕೊಂಡು ಲೇಪವನ್ನು ತೀರಾ ಒಣಗಿಸಿಬಿಡುತ್ತವೆ. ಇಂತಹವರು ನೀರನ್ನು ಕೊಂಚ ಹೆಚ್ಚು ಹಾಕಬೇಕು. ಅಂದರೆ ಇಪ್ಪತ್ತೈದು ನಿಮಿಷಗಳ ಬಳಿಕ ಈ ಲೇಪನ ಹಪ್ಪಳದಂತೆ ಆಗಿರಬಾರದು, ಕೊಂಚ ಮೃದುವಾಗಿರಬೇಕು. ಒಂದು ವೇಳೆ ಹೀಗಾದರೆ ಈ ಹಪ್ಪಳವನ್ನು ನಿವಾರಿಸುವಾಗ ಚರ್ಮದಲ್ಲಿ ತಾತ್ಕಾಲಿಕವಾಗಿ ನೆರಿಗೆಗಳು ಮೂಡಬಹುದು. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಮುಖವನ್ನು ಟವೆಲ್ ಒತ್ತಿಕೊಂಡು ಒರೆಸಿಕೊಳ್ಳಿ.

 ನೆರಿಗೆ ಮುಕ್ತ ತ್ವಚೆಗಾಗಿ ಕಡಲೆಹಿಟ್ಟಿನ ಫೇಸ್ ಪ್ಯಾಕ್

ನೆರಿಗೆ ಮುಕ್ತ ತ್ವಚೆಗಾಗಿ ಕಡಲೆಹಿಟ್ಟಿನ ಫೇಸ್ ಪ್ಯಾಕ್

ಒಂದು ಬೌಲ್‌ನಲ್ಲಿ ಎರಡು ಚಮಚ ಕಡಲೆಹಿಟ್ಟನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಮೊಟ್ಟೆಯ ಬಿಳಿ ಭಾಗ ಹಾಗೂ ಒಂದು ಚಮಚ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ. ದಪ್ಪನೆಯ ಪೇಸ್ಟ್ ಸಿದ್ಧಪಡಿಸಿ. ನಿಮ್ಮ ಮುಖ ಮತ್ತು ಕತ್ತಿಗೆ ಪೇಸ್ಟ್ ರೂಪದಲ್ಲಿ ಹಚ್ಚಿಕೊಳ್ಳಿ. ಅಂತೆಯೇ ಕಣ್ಣುಗಳ ಕೆಳಗೆ ನೆರಿಗೆ ಇರುವ ಭಾಗದಲ್ಲಿ ಚೆನ್ನಾಗಿ ಹಚ್ಚಿ. ಇದನ್ನು 30 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಮೊಡವೆಯ ಸಮಸ್ಯೆ ಇದ್ದರೆ...

ಮೊಡವೆಯ ಸಮಸ್ಯೆ ಇದ್ದರೆ...

ಒಂದು ಚಮಚ ಕಡಲೆಹಿಟ್ಟನ್ನು ಒಂದು ಚಮಚ ಶ್ರೀಗಂಧದೊಂದಿಗೆ ಬೆರೆಸಿಕೊಳ್ಳಿ. ಇದಕ್ಕೆ ಒಂದು ಚಮಚ ಮೊಸರು ಬೆರೆಸಿ ಪೇಸ್ಟ್ ತಯಾರಿಸಿ. ನಿಮ್ಮ ಮುಖವನ್ನು ಮೊದಲು ತೊಳೆದುಕೊಂಡು ನಂತರ ಈ ಪೇಸ್ಟ್ ಹಚ್ಚಿಕೊಳ್ಳಿ. ಈ ಪ್ಯಾಕ್ ನಿಮ್ಮ ಮುಖದಲ್ಲಿ 20 ನಿಮಿಷ ಹಾಗೆಯೇ ಇರಲಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಹೀಗೆ ಬೇರೆ ಬೇರೆ ವಿಧದಲ್ಲಿ ಕಡಲೆ ಹಿಟ್ಟನ್ನು ಮುಖಕ್ಕೆ ಬಳಸಿಕೊಳ್ಳಬಹುದಾಗಿದೆ.

ನಿಂಬೆ ರಸ ಮತ್ತು ಬಾದಾಮಿ

ನಿಂಬೆ ರಸ ಮತ್ತು ಬಾದಾಮಿ

ಬಾದಾಮಿಯನ್ನು ಒಂದು ರಾತ್ರಿ ನೆನೆಹಾಕಿ ನಂತರ ಅದನ್ನು ಪೇಸ್ಟ್ ರೀತಿ ಮಾಡಿ ಕಡಲೆ ಹಿಟ್ಟಿಗೆ ಹಾಕಿ ಕಲೆಸಬೇಕು, ನಂತರ ನಿಂಬೆ ರಸ ಹಾಕಿ ಮಿಶ್ರಣ ಮಾಡಿ ಇದನ್ನು ಫೇಸ್ ಮಾಸ್ಕ್ ಆಗಿ ಬಳಸಿದರೆ ಕಪ್ಪುಕಲೆಗಳು ಕಡಿಮೆಯಾಗುವುದು ಹಾಗೂ ಮುಖದ ಬಿಳುಪು ಹೆಚ್ಚಾಗುವುದು.

ಕಡಲೆಹಿಟ್ಟು ಮತ್ತು ಮಜ್ಜಿಗೆ

ಕಡಲೆಹಿಟ್ಟು ಮತ್ತು ಮಜ್ಜಿಗೆ

ಚರ್ಮದ ಬಣ್ಣವನ್ನು ತಿಳಿಗೊಳಿಸಲು ಕಡಲೆಹಿಟ್ಟು ತುಂಬಾ ಒಳ್ಳೆಯದು. ಮಜ್ಜಿಗೆ ಜತೆ ಸೇರಿಸಿದರೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ಬೇಕಾಗುವ ಸಾಮಗ್ರಿಗಳು

2 ಚಮಚ ಕಡಲೆಹಿಟ್ಟು

1 ಚಮಚ ಮಜ್ಜಿಗೆ

1 ಚಮಚ ಟೊಮೆಟೊ ಜ್ಯೂಸ್

½ ಚಮಚ ಅರಿಶಿನ ಹುಡಿ

ವಿಧಾನ

1. ಕಡಲೆಹಿಟ್ಟು ಮತ್ತು ಮಜ್ಜಿಗೆಯನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.

2. ಟೊಮೆಟೊ ಜ್ಯೂಸ್ ಮತ್ತು ಅರಿಶಿನ ಹುಡಿಯನ್ನು ಇದಕ್ಕೆ ಹಾಕಿ. ಪೇಸ್ಟ್ ತುಂಬಾ ದಪ್ಪಗಿದ್ದರೆ ಸ್ವಲ್ಪ ಮಜ್ಜಿಗೆ ಹೆಚ್ಚು ಹಾಕಿ

3. ಇನ್ನು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು 15 ನಿಮಿಷ ಕಾಲ ಹಾಗೆ ಬಿಡಿ.

4. ನಂತರ ಈ ಮಿಶ್ರಣವನ್ನು ಪ್ರತೀ ದಿನ ಬಳಸಿಕೊಳ್ಳಿ. ನಿಯಮಿತವಾಗಿ ಬಳಸಿಕೊಂಡರೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

 ಕಡಲೆ ಹಿಟ್ಟು ಹಾಗೂ ಮೊಟ್ಟೆಯ ಬಿಳಿ

ಕಡಲೆ ಹಿಟ್ಟು ಹಾಗೂ ಮೊಟ್ಟೆಯ ಬಿಳಿ

ಕಡಲೆ ಹಿಟ್ಟಿಗೆ ಮೊಟ್ಟೆಯ ಬಿಳಿ ಹಾಕಿ ಚೆನ್ನಾಗಿ ಕಲೆಸಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು. ಈ ರೀತಿಯಲ್ಲಿ ಫೇಸ್ ಮಾಸ್ಕ್ ಮಾಡುವುದಾದರೆ ವಾರದಲ್ಲಿ 2 ಎರಡು ಬಾರಿ ಮಾಡಿ.

ಚರ್ಮದ ಹೊಳಪು ಹೆಚ್ಚಿಸಲು

ಚರ್ಮದ ಹೊಳಪು ಹೆಚ್ಚಿಸಲು

50 ಗ್ರಾಂನಷ್ಟು ಹೆಸರುಕಾಳನ್ನು ಒಂದು ರಾತ್ರಿ ನೀರಿನಲ್ಲಿ ಹಾಕಿ ನೆನಸಿಡಿ. ಮಾರನೇ ದಿನ ಬೆಳಿಗ್ಗೆ ಅದನ್ನು ಮಿಕ್ಸಿ ಅಥವಾ ಗ್ರೈಂಡರ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟಿಗೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು 1 ಟೇಬಲ್ ಸ್ಪೂನ್ ಬಾದಾಮಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.. ಮಿಕ್ಸ್ ಮಾಡಿದ ಕೂಡಲೇ ಮುಖಕ್ಕೆ ಅಪ್ಲೈ ಮಾಡಿ., ಸುಮಾರು ಹದಿನೈದರಿಂದ ಇಪತ್ತು ನಿಮಿಷ ಹಾಗೆಯೇ ಬಿಡಿ. ನಂತ್ರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಪ್ರತಿ ಎರಡು ದಿನಗಳಿಗೊಮ್ಮೆ ಈ ಪ್ಯಾಕ್ ಅಪ್ಲೈ ಮಾಡಿ ಮತ್ತು ಕಾಂತಿಯುತವಾದ ಹೊಳಪಿನ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಚರ್ಮ ಒಣಗಲು ಮತ್ತು ಕಳಾಹೀನವಾಗಲು ಮುಖ್ಯ ಕಾರಣ ಚರ್ಮದ ನೈಸರ್ಗಿಕ ತೈಲಗಳು ಆವಿಯಾಗುವುದು. ಇದಕ್ಕೆ ಬಿಸಿನೀರಿನ ಸ್ನಾನ ಮತ್ತು ವಾತಾವರಣದ ಏರುಪೇರು ಪ್ರಮುಖ ಕಾರಣವಾಗಿವೆ. ಇದನ್ನು ಸರಿಪಡಿಸಲು ಬಾದಾಮಿ ಎಣ್ಣೆ ಅತ್ಯಂತ ಸೂಕ್ತವಾಗಿದೆ. ಇದಕ್ಕಾಗಿ ಕೊಂಚ ಬಾದಾಮಿ ಎಣ್ಣೆಯನ್ನು ನಯವಾಗಿ ಮಸಾಜ್ ಮಾಡುತ್ತಾ ಒಣಗಿರುವ ಚರ್ಮದ ಮೇಲೆ ಹಚ್ಚುತ್ತಾ ಬನ್ನಿ. ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ಚರ್ಮ ಕೋಮಲ ಮತ್ತು ತುಂಬಿಕೊಂಡಂತಿರುತ್ತದೆ.

ಹೆಸರು ಬೇಳೆ

ಹೆಸರು ಬೇಳೆ

ಎರಡು ಟೀ ಚಮಚಗಳಷ್ಟು ಹೆಸರು ಬೇಳೆಯನ್ನು ಒ೦ದಿಷ್ಟು ಹಾಲಿನಲ್ಲಿ ರಾತ್ರಿಯಿಡೀ ನೆನೆಸಿಡಿರಿ ಮಾರನೆಯ ಬೆಳಗ್ಗೆ ಹೆಸರು ಬೇಳೆಯನ್ನು ಅರೆದು ಜರಿಜರಿಯಾದ ಪೇಸ್ಟ್ ನ ರೂಪಕ್ಕೆ ತನ್ನಿರಿ ಈ ಪೇಸ್ಟ್ ಅನ್ನು ನಿಮ್ಮ ಮುಖ ಹಾಗೂ ಕುತ್ತಿಗೆಯ ಮೇಲೆ ಲೇಪಿಸಿಕೊಳ್ಳಿರಿ ಇಪ್ಪತ್ತು ನಿಮಿಷಗಳ ಕಾಲ ಆ ಪೇಸ್ಟ್ ಅನ್ನು ಮುಖದ ಮೇಲೆ ಹಾಗೆಯೇ ಇರಗೊಳಿಸಿರಿ ಹಾಗೂ ತದನ೦ತರ ಪೇಸ್ಟ್ ಅನ್ನು ತಣ್ಣೀರಿನಿ೦ದ ಚೆನ್ನಾಗಿ ತೊಳೆದುಬಿಡಿರಿ. ನಿಮ್ಮ ಶುಷ್ಕ ತ್ವಚೆಯು ಜಲಪೂರಣಗೊಳ್ಳುವ೦ತಾಗಲು ಈ ವಿಧಾನವನ್ನು ವಾರಕ್ಕೆ ಮೂರು ಬಾರಿ ಕೈಗೊಳ್ಳಿರಿ.

English summary

Simple natural Methods To Get Instant Fairness

we tend to use lots of products that claim healthy glow and smooth skin. These products will eventually ruin your skin. Therefore, instead of relying on these products, you can use home remedies. Since these products are natural, they don't harm your skin in the long run and they provide effective results. In this article, we at Boldsky have listed out some of the home remedies that keep your skin fresh and glowing.
Story first published: Wednesday, April 25, 2018, 12:31 [IST]
X
Desktop Bottom Promotion