ಬೆಳಿಗ್ಗೆ ಎದ್ದಾಗ ಮುಖ ಸುಂದರವಾಗಿ ಕಾಣಬೇಕೇ? ಹಾಗಾದರೆ ಹೀಗೆ ಮಾಡಿ

Posted By: Hemanth
Subscribe to Boldsky

ಬೆಳಗ್ಗೆ ಎದ್ದ ಬಳಿಕ ಮನೆಗೆಲಸ, ತಿಂಡಿ ಮಾಡುವುದು ಇತ್ಯಾದಿಗಳ ಬಳಿಕ ಕಚೇರಿಗೆ ತೆರಳಲು ಸಿದ್ಧತೆ ನಡೆಸಬೇಕು. ಈ ಮಧ್ಯೆ ಮೇಕಪ್ ಮಾಡಿಕೊಳ್ಳಲು ಸಮಯವೆಲ್ಲಿದೆ ಹೇಳಿ? ಇದು ಆಧುನಿಕ ಜಗತ್ತಿನಲ್ಲಿ ಪುರುಷರಿಗಿಂತಲೂ ಹೆಚ್ಚು ದುಡಿಯುತ್ತಿರುವ ಮಹಿಳೆಯರ ಸಮಸ್ಯೆ. ಯಾಕೆಂದರೆ ಬೆಳಗ್ಗೆ ಎದ್ದ ಬಳಿಕ ಹಲವಾರು ಕೆಲಸಕಾರ್ಯಗಳಿಂದ ದೇಹದ ಸೌಂದರ್ಯದ ಕಡೆ ಗಮನಹರಿಸಲು ಪುರುಸೊತ್ತು ಸಿಗಲ್ಲ. ಇನ್ನು ಕೆಲವರಿಗೆ ಬೇಕಾದಷ್ಟು ಸಮಯವಿರುವ ಕಾರಣದಿಂದ ಹಲವಾರು ರೀತಿಯ ಮೇಕಪ್ ಬಳಸಿಕೊಂಡು ಅದರಲ್ಲಿ ವಿವಿಧ ರೀತಿಯ ಸಂಶೋಧನೆ ಮಾಡುತ್ತಲಿರುವರು. ವಿವಿಧ ರೀತಿಯ ಲಿಪ್ ಸ್ಟಿಕ್, ಕಾಡಿಗೆ, ಮಸ್ಕರಾ ಇತ್ಯಾದಿಗಳ ಬಳಕೆ ಮಾಡುವರು.

ಆದರೆ ಇಲ್ಲಿ ನೀಡಿರುವಂತಹ ಕೆಲವೊಂದು ಸಲಹೆಗಳು ಬೆಳಗ್ಗಿನ ಮೇಕಪ್ ಗೆ ಸಂಬಂಧಿಸಿದ್ದಾಗಿದೆ. ಮೇಕಪ್ ಮಾಡಲು ಸಮಯವೇ ಇಲ್ಲವೆಂದು ಇರುವಾಗ ಇದನ್ನು ನೀವು ಕಡಿಮೆ ಸಮಯದಲ್ಲಿ ಮಾಡಬಹುದು. ಇದರಿಂದ ಮೇಕಪ್ ಇಲ್ಲದೆಯೂ ನೀವು ನೈಸರ್ಗಿಕವಾಗಿ ಸುಂದರವಾಗಿ ಕಾಣಿಸಿಕೊಳ್ಳಬಹುದು... 

ಹಲ್ಲುಜ್ಜುವ ಬ್ರಶ್ ನಿಂದ ತುಟಿಗಳ ಸತ್ತ ಚರ್ಮ ಕಿತ್ತುಹಾಕಿ

ಹಲ್ಲುಜ್ಜುವ ಬ್ರಶ್ ನಿಂದ ತುಟಿಗಳ ಸತ್ತ ಚರ್ಮ ಕಿತ್ತುಹಾಕಿ

ಬೆಳಗ್ಗೆ ಎದ್ದ ಬಳಿಕ ಪ್ರತಿಯೊಬ್ಬರು ಹಲ್ಲುಜ್ಜುವುದು ಸಾಮಾನ್ಯ. ಈ ವೇಳೆ ಹಲ್ಲುಜ್ಜುವ ವೇಳೆ ಬ್ರಶ್ ನಿಂದ ತುಟಿಗಳನ್ನು ಉಜ್ಜಿಕೊಳ್ಳಿ. ಇದರಿಂದ ತುಟಿಯ ಮೇಲಿನ ಭಾಗದಲ್ಲಿ ಇರುವಂತಹ ಸತ್ತ ಚರ್ಮಗಳು ಕಿತ್ತುಹೋಗುವುದು. ಆದರೆ ತುಟಿಗಳನ್ನು ತುಂಬಾ ಮೃದುವಾಗಿ ಉಜ್ಜಿಕೊಳ್ಳಿ.

ಸಾಮಾನ್ಯ ಸ್ಕ್ರಬ್ ಬಳಸಿ ಸತ್ತ ಚರ್ಮ ತೆಗೆಯಿರಿ

ಸಾಮಾನ್ಯ ಸ್ಕ್ರಬ್ ಬಳಸಿ ಸತ್ತ ಚರ್ಮ ತೆಗೆಯಿರಿ

ಈ ಕ್ರಮದಿಂದ ಚರ್ಮವು ತುಂಬಾ ತಾಜಾ, ನೈಸರ್ಗಿಕ ಮತ್ತು ಶುದ್ಧವಾಗಿ ಕಾಣಿಸುವುದು. ಸ್ಕ್ರಬ್ ಮಾಡುವುದರಿಂದ ಮುಖದಲ್ಲಿನ ಸತ್ತ ಚರ್ಮಗಳು ಕಿತ್ತು ಹೋಗುವುದು. ಸಾಮಾನ್ಯ ಸ್ಕ್ರಬ್ ನಿಂದ ನೀವು ಹೀಗೆ ಮಾಡಿಕೊಳ್ಳಿ. ಸ್ಕ್ರಬ್ ನಿಂದ ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿ. ಇದಕ್ಕೆ ಸಾಮಾನ್ಯವಾದ ಬ್ರಶ್ ಬಳಸಿಕೊಳ್ಳಿ.

ಚರ್ಮವು ಕಾಂತಿಯುತವಾಗಿರಲು

ಚರ್ಮವು ಕಾಂತಿಯುತವಾಗಿರಲು

ಇದು ತುಂಬಾ ಮುಖ್ಯವಾದ ವಿಧಾನ. ಮುಖದ ಮೇಲೆ ತುಂಬಾ ನಿಧಾನವಾಗಿ ಬಡಿಯಿರಿ. ಗಲ್ಲವನ್ನು ನೀವು ನಿಧಾನವಾಗಿ ಎಳೆಯಬಹುದು. ಇದರಿಂದ ರಕ್ತ ಪರಿಚಲನೆಯು ಉತ್ತಮವಾಗುವುದು ಮತ್ತು ನಿಮ್ಮ ಚರ್ಮವು ಕಾಂತಿಯುತ ಹಾಗೂ ಸುಂದರವಾಗಿ ಕಾಣುವುದು.

ಚರ್ಮದ ಕಾಂತಿ ಹೆಚ್ಚಿಸಲು ಇನ್ನೊಂದು ಸುಲಭ ಮನೆಮದ್ದು ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಒಂದು ಚಮಚ ಲಿಂಬೆರಸ

ಎರಡು ಚಮಚ ಕಡಲೆಹಿಟ್ಟು

ಒಂದು ಚಮಚ ಮೊಸರು

 ಬಳಸುವುದು ಹೇಗೆ

ಬಳಸುವುದು ಹೇಗೆ

ಎಲ್ಲವನ್ನು ಸರಿಯಾಗಿ ಜತೆಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಬೆಳಗ್ಗೆ ಬೇಗ ಎದ್ದ ಬಳಿಕ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಮುಖದಲ್ಲಿ ಹಾಗೆ ಸ್ಕ್ರಬ್ ಮಾಡಿ ಮತ್ತು ಇದರಿಂದ ಮುಖದಲ್ಲಿ ಕಾಂತಿ ಬರುವುದು.

ಮಾಯಿಶ್ಚರೈಸರ್ ಹಚ್ಚಿ

ಮಾಯಿಶ್ಚರೈಸರ್ ಹಚ್ಚಿ

ಮೇಕಪ್ ಹಾಕಿದರೂ ಅಥವಾ ಹಾಕದೆ ಇದ್ದರೂ ಚರ್ಮಕ್ಕೆ ಮೊಶ್ಚಿರೈಸರ್ ನೀಡುವುದು ಅತೀ ಅಗತ್ಯವಾಗಿದೆ. ಮೊಶ್ಚಿರೈಸರ್ ಅನ್ನು ಹಚ್ಚಿಕೊಂಡು ಅದನ್ನು ಚರ್ಮಕ್ಕೆ ಒತ್ತಿಕೊಳ್ಳಿ. ಇದು ಚರ್ಮದಲ್ಲಿ ಸಂಪೂರ್ಣವಾಗಿ ಹೀರಿಕೊಳ್ಳಲಿ. ಸಾಮಾನ್ಯ ತುಟಿಯ ಮಲಾಮ್ ನಿಂದ ಮಾಯಿಶ್ಚರೈಸ್ ಮಾಡಬಹುದು.

ಕಣ್ಣುಗಳಿಗೆ ಹೊಳಪು ನೀಡಿ

ಕಣ್ಣುಗಳಿಗೆ ಹೊಳಪು ನೀಡಿ

ನೀವು ಯಾವುದೇ ರೀತಿಯ ಮೇಕಪ್ ಹಚ್ಚಿಕೊಳ್ಳದೆ ಇದ್ದರೆ ಈ ಹಂತ ಅತೀ ಮುಖ್ಯವಾದದ್ದು. ಹೊರಗಡೆ ಹೋಗುವ ಮೊದಲು ನಿಮ್ಮ ಹುಬ್ಬುಗಳನ್ನು ಸುಂದರವಾಗಿಸಿ. ಇದರ ಬಳಿಕ ಬ್ರಶ್ ಹಿಡಿದುಕೊಂಡು ಕಣ್ಣಿನ ಹುಬ್ಬುಗಳನ್ನು ಮೇಲಿನ ಭಾಗಕ್ಕೆ ತಿರುಗಿಸಿ. ಇದರಿಂದ ಮತ್ತಷ್ಟು ಹೊಳಪು ಬರುವುದು.

ಕಣ್ಣ ರೆಪ್ಪೆಗಳನ್ನು ಗುಂಗುರಾಗಿಸಿ

ಕಣ್ಣ ರೆಪ್ಪೆಗಳನ್ನು ಗುಂಗುರಾಗಿಸಿ

ನೈಸರ್ಗಿಕವಾಗಿ ಸುಂದರವಾಗಿ ಕಾಣಬೇಕಾಗಿರುವ ಕಾರಣದಿಂದ ನಾವು ಇಲ್ಲಿ ಮಸ್ಕರಾ ಬಳಸಲು ಹೇಳುವುದಿಲ್ಲ. ನಿಮ್ಮ ಕಣ್ಣ ರೆಪ್ಪೆಗಳನ್ನು ಗುಂಗುತು ಮಾಡಿಕೊಳ್ಳಿ. ಕಣ್ಣರೆಪ್ಪೆ ಗುಂಗುರು ಮಾಡುವ ಸಾಧನದಿಂದ ಇದನ್ನು ಮಾಡಿ. ಆಗ ದೊಡ್ಡ ಮಟ್ಟದ ಪರಿಣಾಮ ಕಂಡುಬರುವುದು. ಉತ್ತಮ ಫಲಿತಾಂಶಕ್ಕಾಗಿ ಎರಡು ಸಲ ಇದನ್ನು ಗುಂಗುರು ಮಾಡಿಕೊಳ್ಳಿ.

English summary

How To Make Your Skin Look Beautiful Every Morning

However, it's not necessary that we have to apply makeup in order to look presentable. Yes, you read that right! One can look beautiful naturally even without applying any makeup on their face. The tips that we are going to share here are specifically for the mornings, when we are out of time to do any makeup. So, let's see some of the natural and simple tips to look fabulous without makeup.
Story first published: Saturday, March 31, 2018, 7:01 [IST]