For Quick Alerts
ALLOW NOTIFICATIONS  
For Daily Alerts

ಕಣ್ಣಿನ ಸುತ್ತಲಿರುವ ಕಪ್ಪು ಕಲೆ ನಿವಾರಣೆಗೆ 'ಬಾದಾಮಿ ಎಣ್ಣೆ' ಪರ್ಫೆಕ್ಟ್ ಮದ್ದು!

By Hemanth
|

ಮಹಿಳೆಯರ ಮುಖದ ಸೌಂದರ್ಯವು ಅವರ ಕಣ್ಣುಗಳಲ್ಲಿ ಅಡಗಿರುವುದು. ಕಣ್ಣುಗಳು ಸುಂದರವಾಗಿದ್ದರೆ, ಆಗ ಸಂಪೂರ್ಣ ಸೌಂದರ್ಯವು ಎಲ್ಲರನ್ನು ಸೆಳೆಯುವುದು. ಇಂತಹ ಸೌಂದರ್ಯ ಕಾಪಾಡಿಕೊಳ್ಳಲು ಪರಿಶ್ರಮ ವಹಿಸುವುದು ಅತೀ ಅಗತ್ಯ. ಸೌಂದರ್ಯದ ಕಾಳಜಿಗೆ ಹಿಂದಿನ ಕಾಲದ ಮಹಿಳೆಯರಂತೆ ಆಧುನಿಕ ಕಾಲದ ನಾರಿಯರಲ್ಲಿ ಸಮಯವಿಲ್ಲ. ಹಿಂದೆ ತಮ್ಮ ಮನೆಗೆಲಸಗಳನ್ನು ಮಾಡಿಕೊಂಡ ಬಳಿಕ ಮಹಿಳೆಯರು ತಮ್ಮ ದೇಹ ಸೌಂದರ್ಯದ ಕಡೆ ಗಮನಹರಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಒಂದು ಸ್ವಲ್ಪ ಶಾಂಪೂ ತಲೆಗೆ, ಮುಖಕ್ಕೆ ಬೇಕಾಗಿರುವ ಕ್ರೀಮ್ ಹಚ್ಚಿಕೊಂಡರೆ ಆಯ್ತು...

ಎಲ್ಲವೂ ಮುಗಿದಂತೆ. ಇದಕ್ಕಿಂತ ಹೆಚ್ಚಿನ ಆರೈಕೆ ಮಾಡಲು ಸಮಯವೆಲ್ಲಿದೆ ಹೇಳಿ? ಜೀವನಶೈಲಿ, ಒತ್ತಡ ಹಾಗೂ ನಿದ್ರೆಯ ಕೊರತೆಯಿಂದಾಗಿ ಕೆಲವರಿಗೆ ಕಣ್ಣಿನ ಕೆಳಗಡೆ ಕಪ್ಪು ವೃತ್ತಗಳು ಕಾಣಿಸಿಕೊಳ್ಳುವುದು. ಚರ್ಮ ಒಣಗುವುದು, ಮೊಡವೆ ಹಾಗೂ ಕಲೆಗಳೊಂದಿಗೆ ಕಣ್ಣಿನ ಕೆಳಗಡೆ ಮೂಡುವಂತಹ ಕಪ್ಪು ವೃತ್ತ(ಡಾರ್ಕ್ ಸರ್ಕಲ್)ಗಳು ಸೌಂದರ್ಯ ಕೆಡಿಸುವಲ್ಲಿ ಮೊದಲ ಸ್ಥಾನದಲ್ಲಿದೆ. ಈ ಕಪ್ಪು ವೃತ್ತಗಳಿಂದಾಗಿ ನಿಮಗೆ ವಯಸ್ಸಾದಂತೆ ಕಾಣಬಹುದು. ಇದನ್ನು ನೀವು ಮುಖದಿಂದ ಅಡಗಿಸಲು ಪ್ರಯತ್ನಿಸಿದರೂ ಅದಕ್ಕಾಗಿ ಹೆಚ್ಚಿನ ಮೇಕಪ್ ಬೇಕಾಗುವುದು.

ನಿದ್ರೆಯ ಕೊರತೆ, ಇಸಬು, ಒತ್ತಡ, ಧೂಮಪಾನ ಹಾಗೂ ಮದ್ಯಪಾನ ಮತ್ತು ಅನುವಂಶಿಯವಾಗಿಯೂ ಇದು ಬರಬಹುದು. ಆಹಾರ ಕ್ರಮದಲ್ಲಿ ಅತಿಯಾಗಿ ಉಪ್ಪು ಸೇವನೆ ಮಾಡಿದರೆ ಆಗ ದ್ರವ ಶೇಖರಣೆಯಿಂದಲೂ ಕಣ್ಣಿನ ಕೆಳಗಡೆ ಕಪ್ಪು ವೃತ್ತಗಳು ಕಾಣಿಸಿಕೊಳ್ಳುವುದು. ಕಪ್ಪು ವೃತ್ತಗಳು ದೇಹದೊಳಗಿನ ಸಮಸ್ಯೆಯಿಂದಾಗಿ ಬರುವ ಕಾರಣದಿಂದಾಗಿ ಇದನ್ನು ನಿವಾರಣೆ ಮಾಡುವುದು ತುಂಬಾ ಕಷ್ಟ. ನಿಮ್ಮ ಕಣ್ಣಿನ ಕೆಳಗಡೆ ಕಪ್ಪು ವೃತ್ತಗಳು ಇದ್ದರೆ ಈಗಾಗಲೇ ನೀವು ಇದಕ್ಕೆ ಹಲವಾರು ರೀತಿಯ ಔಷಧಿಗಳನ್ನು ಪ್ರಯೋಗಿಸಿರಬಹುದು. ಆಧುನಿಕ ಚಿಕಿತ್ಸೆಯಾದ ಲೇಸರ್ ಚಿಕಿತ್ಸೆ, ಚರ್ಮ ಕಿತ್ತು ಹಾಕುವುದು ಇತ್ಯಾದಿ ಕಾಸ್ಮೆಟಿಕ್ ಚಿಕಿತ್ಸೆಗಳನ್ನು ನೀವು ಪ್ರಯತ್ನಿಸಿರಬಹುದು.

ಆದರೆ ಕಣ್ಣಿನ ಸುತ್ತಲಿನ ಚರ್ಮವು ತುಂಬಾ ಸೂಕ್ಷ್ಮವಾಗಿರುವ ಕಾರಣದಿಂದ ಅತಿಯಾದ ರಾಸಾಯನಿಕ ಬಳಕೆಯು ತುಂಬಾ ಕಿರಿಕಿರಿ ಉಂಟು ಮಾಡುವುದು. ಇಂತಹ ಚಿಕಿತ್ಸೆಗೆ ಹಣ ಕೂಡ ಅತಿಯಾಗಿ ವ್ಯಯಿಸಬೇಕು. ಇದೆಲ್ಲವನ್ನು ನಿವಾರಣೆ ಮಾಡಿಕೊಂಡು ನೀವು ತುಂಬಾ ಸರಳ ವಿಧಾನದಿಂದ ಸಮಸ್ಯೆ ಬಗೆಹರಿಸಬೇಕೆಂದು ಬಯಸಿದ್ದರೆ ಈ ಲೇಖನವನ್ನು ಓದಲೇಬೇಕು. ಕೆಲವೊಂದು ನೈಸರ್ಗಿಕ ಚಿಕಿತ್ಸೆಗಳು ಕಣ್ಣಿನ ಕೆಳಗಿನ ಕಪ್ಪು ವೃತ್ತಗಳಿಗೆ ತುಂಬಾ ಪರಿಣಾಮಕಾರಿ.

ಅದರಲ್ಲೂ ಬಾದಾಮಿ ಎಣ್ಣೆಯು ಕಣ್ಣಿನ ಕೆಳಗಿನ ವೃತ್ತಗಳನ್ನು ನಿವಾರಣೆ ಮಾಡುವುದು. ಬೋಲ್ಡ್ ಸ್ಕೈ ಓದುತ್ತಿರುವವರಿಗೆ ಬಾದಾಮಿ ಎಣ್ಣೆಯಿಂದ ಕೂದಲು ಹಾಗೂ ಚರ್ಮಕ್ಕೆ ಆಗುವ ಲಾಭಗಳು ಏನು ಎಂದು ಖಂಡಿತವಾಗಿಯೂ ತಿಳಿದಿದೆ. ಇದು ಕಣ್ಣಿನ ಕೆಳಗಿನ ಕಪ್ಪು ವೃತ್ತಕ್ಕೂ ತುಂಬಾ ಪರಿಣಾಮಕಾರಿಯಾಗಿರಲಿದೆ. ಬಾದಾಮಿ ಎಣ್ಣೆಯು ಕಣ್ಣಿನ ಸುತ್ತಲಿನ ಚರ್ಮವನ್ನು ಬಿಳಿಯಾಗಿಸಿಕೊಂಡು ಕಪ್ಪು ಕಲೆ ನಿವಾರಣೆ ಮಾಡುವುದು. ಇದರಲ್ಲಿರುವಂತಹ ಪ್ರಭಾವಶಾಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಚರ್ಮಕ್ಕೆ ತುಂಬಾ ಲಾಭಕಾರಿಯಾಗಿರಲಿದೆ.

ಇಷ್ಟು ಮಾತ್ರವಲ್ಲದೆ ಇದರಲ್ಲಿ ವಿಟಮಿನ್ ಇ ಮತ್ತು ಕೆ, ರೆಟಿನಾಲ್ ಇದ್ದು, ಬಣ್ಣಗೆಡಿಸುವಂತಹ ರಕ್ತನಾಳಗಳನ್ನು ಇದು ಸರಿಪಡಿಸುವುದು. ಬಾದಾಮಿ ಎಣ್ಣೆಯನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಬೇಕಿದ್ದರೆ ಅದನ್ನು ಬೇರೆ ಕೆಲವು ಸಾಮಗ್ರಿಗಳ ಜತೆಗೆ ಬಳಸಿಕೊಳ್ಳಬೇಕು. ಇದರಿಂದ ವೇಗದ ಫಲಿತಾಂಶ ಸಿಗುವುದು. ಕಣ್ಣಿನ ಕೆಳಗಿನ ಕಪ್ಪು ವೃತ್ತಗಳ ನಿವಾರಣೆ ಮಾಡಲು ಬಾದಾಮಿ ಎಣ್ಣೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ತಿಳಿಯಿರಿ.

1. ಬಾದಾಮಿ ಎಣ್ಣೆ ಮತ್ತು ಜೇನುತುಪ್ಪ

1. ಬಾದಾಮಿ ಎಣ್ಣೆ ಮತ್ತು ಜೇನುತುಪ್ಪ

ಜೇನುತುಪ್ಪವು ಪ್ರಕೃತಿಯು ನಮಗೆ ನೀಡಿರುವಂತಹ ಶ್ರೇಷ್ಠ ಉಡುಗೊರೆ. ಇದು ಹಲವಾರು ರೋಗಗಳ ಶಮನ ಮಾಡುವುದು ಮಾತ್ರವಲ್ಲದೆ ಸೌಂದರ್ಯವನ್ನು ವೃದ್ಧಿಸುವುದು. ಆಯುರ್ವೇದದಲ್ಲಿ `ಸ್ವರ್ಣದ್ರವ' ಎಂದು ಕರೆಯಲ್ಪಡುವಂತಹ ಜೇನುತುಪ್ಪವು ಕಣ್ಣಿನ ಕೆಳಗಿನ ಊತ ಹಾಗೂ ಬಣ್ಣ ಮಾಸಿರುವುದನ್ನು ಸರಿಪಡಿಸುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ಜೇನುತುಪ್ಪ

4-5 ಹನಿ ಬಾದಾಮಿ ಎಣ್ಣೆ

ವಿಧಾನ

*ಒಂದು ಪಿಂಗಾಣಿಗೆ ಹಾಕಿ ಎರಡನ್ನು ಸರಿಯಾಗಿ ಮಿಶ್ರಣ ಮಾಡಿ.

*ಮುಖವನ್ನು ತೊಳೆದುಕೊಂಡ ಬಳಿಕ ಕಣ್ಣಿನ ಕೆಳಗಿನ ಭಾಗಕ್ಕೆ ಈ ಮಿಶ್ರಣ ಹಚ್ಚಿಕೊಳ್ಳಿ.

*ಮಲಗುವ ಮೊದಲು ಇದನ್ನು ಹಚ್ಚಿಕೊಳ್ಳಿ ಮತ್ತು ಬೆಳಗ್ಗೆ ಎದ್ದು ಮುಖ ತೊಳೆಯಿರಿ.

2. ರೋಸ್ ವಾಟರ್ ಮತ್ತು ಬಾದಾಮಿ ಎಣ್ಣೆ

2. ರೋಸ್ ವಾಟರ್ ಮತ್ತು ಬಾದಾಮಿ ಎಣ್ಣೆ

ರೋಸ್ ವಾಟರ್ ಚರ್ಮವನ್ನು ಪುನರ್ಯೌವನಗೊಳಿಸುವುದು ಮತ್ತು ಚರ್ಮಕ್ಕೆ ಕಾಂತಿ ನೀಡುವುದು. ಇದು ತುಂಬಾ ಸೂಕ್ಷ್ಮ ಚರ್ಮಗಳಿಗೆ ಪರಿಣಾಮಕಾರಿ. ಬಾದಾಮಿ ಎಣ್ಣೆಯ ಜತೆಗೆ ಸೇರಿಸಿಕೊಂಡಾಗ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ರೋಸ್ ವಾಟರ್

5 ಚಮಚ ಬಾದಾಮಿ ಎಣ್ಣೆ

ವಿಧಾನ

*ಒಂದು ಪಿಂಗಾಣಿಯಲ್ಲಿ ರೋಸ್ ವಾಟರ್ ತೆಗೆದುಕೊಂಡು ಅದಕ್ಕೆ ಬಾದಾಮಿ ಎಣ್ಣೆ ಮಿಶ್ರಣ ಮಾಡಿ.

* ಇದು ಒಳ್ಳೆಯ ರೀತಿ ಮಿಶ್ರಣವಾಗುವ ತನಕ ಕಲಸಿಕೊಳ್ಳಿ.

* ಹತ್ತಿ ಉಂಡೆ ಬಳಸಿಕೊಂಡು ಈ ಮಿಶ್ರಣವನ್ನು ಕಣ್ಣಿನ ಕೆಳಗಿನ ಭಾಗಕ್ಕೆ ಹಚ್ಚಿಕೊಳ್ಳಿ.

* ತಣ್ಣೀರಿನಿಂದ ತೊಳೆಯುವ ಮೊದಲು 15 ನಿಮಿಷ ಕಾಲ ಇದನ್ನು ಹಾಗೆ ಬಿಡಿ.

*ಕಣ್ಣಿನ ಕೆಳಗಿನ ಭಾಗದ ಕಪ್ಪು ವೃತ್ತಗಳು ಮಾಯವಾಗುವ ತನಕ ಪ್ರತಿನಿತ್ಯ ಇದನ್ನು ಬಳಸಿ.

3. ಬಾದಾಮಿ ಎಣ್ಣೆ ಮತ್ತು ಆಲಿವ್ ತೈಲ

3. ಬಾದಾಮಿ ಎಣ್ಣೆ ಮತ್ತು ಆಲಿವ್ ತೈಲ

ನಿಮ್ಮ ಚರ್ಮ ಹಾಗೂ ಕೂದಲಿಗೆ ಕಾಂತಿ ನೀಡುವಂತಹ ಮತ್ತೊಂದು ಅದ್ಭುತವೆಂದರೆ ಅದು ಆಲಿವ್ ತೈಲ. ಇದು ಕಣ್ಣಿನ ಕೆಳಗಿನ ಭಾಗದ ಕಪ್ಪು ವೃತ್ತಗಳ ನಿವಾರಣೆ ಮಾಡುವುದು. ಇದರಲ್ಲಿ ಇರುವಂತಹ ಕೊಬ್ಬಿನಾಮ್ಲಗಳು ಚರ್ಮಕ್ಕೆ ಪೋಷಣೆ ನೀಡುವುದು ಮತ್ತು ಹಾನಿಗೊಳಗಾಗಿರುವ ಚರ್ಮವನ್ನು ಸರಿಪಡಿಸಲು ನೆರವಾಗುವುದು. ಇದರಿಂದ ಕಣ್ಣಿನ ಸುತ್ತಲಿನ ಚರ್ಮವು ಆರೋಗ್ಯವಾಗಿರುವುದು. ಬಾದಾಮಿ ಎಣ್ಣೆ ಜತೆಗೆ ಸೇರಿಸಿದರೆ ಇದು ಅದ್ಭುತವಾಗಿ ಕೆಲಸ ಮಾಡುವುದು.

ಬೇಕಾಗುವ ಸಾಮಗ್ರಿಗಳು

½ ಚಮಚ ಆಲಿವ್ ತೈಲ

½ ಚಮಚ ಬಾದಾಮಿ ಎಣ್ಣೆ

ವಿಧಾನ

*ಒಂದು ಪಿಂಗಾಣಿಯಲ್ಲಿ ಎರಡನ್ನು ಸರಿಯಾಗಿ ಮಿಶ್ರಣ ಮಾಡಿ.

*ಇದನ್ನು ಕಣ್ಣ ಕೆಳಗಿನ ಭಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

* ಸ್ವಲ್ಪ ಸಮಯ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ.

*ಎರಡು ನಿಮಿಷ ಕಾಲ ಹೀಗೆ ಮಸಾಜ್ ಮಾಡಿ.

*ಶುದ್ಧ ಬಟ್ಟೆಯಿಂದ ಇದನ್ನು ಒರೆಸಿಕೊಳ್ಳಿ.

* ಒಂದು ವಾರ ತನಕ ಪ್ರತಿನಿತ್ಯ ಇದನ್ನು ಬಳಸಿ.

4. ಲಿಂಬೆರಸ ಮತ್ತು ಬಾದಾಮಿ ಎಣ್ಣೆ

4. ಲಿಂಬೆರಸ ಮತ್ತು ಬಾದಾಮಿ ಎಣ್ಣೆ

ಈ ಮಿಶ್ರಣವು ಕಣ್ಣಸುತ್ತಲಿನ ಕಪ್ಪು ವೃತ್ತಗಳ ನಿವಾರಣೆ ಮಾಡಿಕೊಂಡು, ಕಾಂತಿಯುತ ಚರ್ಮ ಪಡೆಯಲು ನೆರವಾಗುವುದು. ಲಿಂಬೆರಸದಲ್ಲಿರುವ ನೈಸರ್ಗಿಕ ಬ್ಲೀಚಿಂಗ್ ಗುಣಗಳೊಂದಿಗೆ ಬಾದಾಮಿ ಎಣ್ಣೆಯಲ್ಲಿನ ಮೊಶ್ಚಿರೈಸ್ ಗುಣಗಳು ಸೇರಿ ಚರ್ಮದ ಬಣ್ಣ ಕುಂದುವುದನ್ನು ತಡೆಯುವುದು ಮತ್ತು ಕಣ್ಣ ಕೆಳಗಿನ ಸೂಕ್ಷ್ಮ ಚರ್ಮಕ್ಕೆ ಪೋಷಣೆ ನೀಡುವುದು.

ಬೇಕಾಗುವ ಸಾಮಗ್ರಿಗಳು

½ ಚಮಚ ತಾಜಾ ಲಿಂಬೆಯ ರಸ

3-4 ಚಮಚ ಬಾದಾಮಿ ಎಣ್ಣೆ

ವಿಧಾನ

*ಎರಡನ್ನು ಪಿಂಗಾಣಿಗೆ ಹಾಕಿಕೊಂಡು ಮಿಶ್ರಣ ಮಾಡಿ.

*ಹತ್ತಿ ಉಂಡೆ ಬಳಸಿಕೊಂಡು ಕಣ್ಣಿನ ಕೆಳಗಿನ ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ.

*15 ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ.

*ಲಿಂಬೆಯು ನಿಮ್ಮ ಕಣ್ಣಿನಲ್ಲಿ ಉರಿ ಉಂಟು ಮಾಡಬಹುದು. ನೀವು ಇದರ ಬಗ್ಗೆ ಎಚ್ಚರ ವಹಿಸಿ. ಪ್ರತೀ ಸಲ ಬಳಸುವಾಗ ತಾಜಾ ಲಿಂಬೆ ಬಳಸಿ.

5. ಅಲೋವೆರಾ ಲೋಳೆ ಮತ್ತು ಬಾದಾಮಿ ಎಣ್ಣೆ

5. ಅಲೋವೆರಾ ಲೋಳೆ ಮತ್ತು ಬಾದಾಮಿ ಎಣ್ಣೆ

ಅಲೋವೆರಾ ಲೋಳೆಯಲ್ಲಿ ಇರುವಂತಹ ಉನ್ನತ ಮಟ್ಟದ ವಿಟಮಿನ್ ಇ ಅಂಶವು ಕಣ್ಣ ಸುತ್ತಲು ಇರುವ ವೃತ್ತಗಳು ಮತ್ತು ಬಣ್ಣ ಕಳೆದುಕೊಂಡಿರುವ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

½ ಚಮಚ ತಾಜಾ ಅಲೋವೆರಾ ಲೋಳೆ

½ ಚಮಚ ಬಾದಾಮಿ ಎಣ್ಣೆ

ವಿಧಾನ

*ಬಾದಾಮಿ ಎಣ್ಣೆಯನ್ನು ಅಲೋವೆರಾ ಲೋಳೆಯೊಂದಿಗೆ ಸರಿಯಾಗಿ ಮಿಶ್ರಣ ಮಾಡಿ.

*ಎರಡು ನಿಮಿಷ ಕಾಲ ಈ ಮಿಶ್ರಣವನ್ನು ಕಣ್ಣಿನ ಸುತ್ತಲು ಮಸಾಜ್ ಮಾಡಿ ½ ಗಂಟೆ ಕಾಲ ಹಾಗೆ ಬಿಡಿ.

*ಹತ್ತಿ ಉಂಡೆ ಬಳಸಿ ಇದನ್ನು ಒರೆಸಿಕೊಳ್ಳಿ. ರಾತ್ರಿ ಮಲಗುವ ಮೊದಲು ಹಚ್ಚಿಕೊಂಡು ಬೆಳಗ್ಗೆ ತೊಳೆದುಕೊಳ್ಳಬಹುದು.

* ಇದನ್ನು ನೀವು ಪ್ರತಿನಿತ್ಯ ಬಳಸಬೇಕು.

6. ವ್ಯಾಸಲಿನ್ ಮತ್ತು ಬಾದಾಮಿ ಎಣ್ಣೆ

6. ವ್ಯಾಸಲಿನ್ ಮತ್ತು ಬಾದಾಮಿ ಎಣ್ಣೆ

ನಿಮ್ಮ ಸೌಂದರ್ಯದ ಆರೈಕೆಯ ಜೋಳಿಗೆಯಲ್ಲಿ ವ್ಯಾಸಲಿನ್ ಇದ್ದೇ ಇರುವುದು. ಇದರಿಂದ ಹಲವಾರು ರೀತಿಯ ಲಾಭಗಳು ಇವೆ ಮತ್ತು ಇದನ್ನು ತುಂಬಾ ಭಿನ್ನವಾಗಿ ಬಳಸಿಕೊಳ್ಳಬಹುದು. ಇದರಲ್ಲಿರುವಂತಹ ಮೊಶ್ಚಿರೈಸರ್ ನಿಸ್ತೇಜ ಚರ್ಮವನ್ನು ಸರಿಪಡಿಸುವುದು. ನೆರಿಗೆ ಹಾಗೂ ವಯಸ್ಸಾಗುವ ಲಕ್ಷಣ ತೋರುವ ಇತರ ಕೆಲವು ಚಿಹ್ನೆಗಳನ್ನು ತೆಗೆಯುವುದು.

ಬೇಕಾಗುವ ಸಾಮಗ್ರಿಗಳು

½ ಚಮಚ ವ್ಯಾಸಲಿನ್

3-4 ಹನಿ ಬಾದಾಮಿ ಎಣ್ಣೆ

ವಿಧಾನ

*ವ್ಯಾಸಲಿನ್ ಗೆ ಬಾದಾಮಿ ಎಣ್ಣೆ ಹಾಕಿಕೊಂಡು ಮಿಶ್ರಣ ಮಾಡಿ.

* ಇದನ್ನು ಕಣ್ಣಿನ ಸುತ್ತಲಿನ ಭಾಗಕ್ಕೆ ಮಸಾಜ್ ಮಾಡಿಕೊಳ್ಳಿ ಮತ್ತು ಕಣ್ಣಿನಿಂದ ದೂರವಿರಿಸಿ.

* ರಾತ್ರಿ ಮಲಗುವ ಮೊದಲು ಹಚ್ಚಿಕೊಂಡರೆ ಅದ್ಭುತ ಪರಿಣಾಮ ಸಿಗುವುದು.

ಬಾದಾಮಿ ಎಣ್ಣೆಯಿಂದ ಚರ್ಮಕ್ಕೆ ಇತರ ಹಲವಾರು ರೀತಿಯ ಲಾಭಗಳು ಇವೆ. ಇದರಲ್ಲಿರುವ ವಿಟಮಿನ್ ಇ ಅಂಶವು ವಯಸ್ಸಾಗುವ ಲಕ್ಷಣಗಳನ್ನು ಕಾಣಿಸದಂತೆ ಮಾಡುವುದು. ಚರ್ಮದ ರಂಧ್ರಗಳಿಂದ ಧೂಳು ಹಾಗೂ ಕಲ್ಮಷ ತೆಗೆದುಹಾಕಲು ಇದನ್ನು ಕ್ಲೆನ್ಸರ್ ಆಗಿ ಬಳಸಬಹುದು. ನಿಯಮಿತವಾಗಿ ಬಾದಾಮಿ ಎಣ್ಣೆ ಬಳಸಿಕೊಂಡರೆ ಅದರಿಂದ ಬಿಸಿಲಿನಿಂದ ಚರ್ಮದ ಮೇಲಾಗುವ ಹಾನಿಕಾರಕ ಕಿರಣಗಳ ಪರಿಣಾಮ ಕಡಿಮೆ ಮಾಡುವುದು. ಮುಂದಿನ ಸಲ ನೀವು ಶಾಪಿಂಗ್ ಗೆ ಹೋದಾಗ ಒಂದು ಬಾಟಲಿ ಬಾದಾಮಿ ಎಣ್ಣೆ ಖರೀದಿ ಮಾಡಲು ಮರೆಯಬೇಡಿ. ಇದರಿಂದ ನಿಮ್ಮ ಚರ್ಮಕ್ಕೆ ನೈಸರ್ಗಿಕವಾಗಿ ಕಾಂತಿ ಸಿಗುವುದರಲ್ಲಿ ಸಂಶಯವೇ ಇಲ್ಲ.

English summary

Get Rid Of Dark Circles Using Almond Oil

Dark circles are patches that appear just under the eyes. What makes them unwanted is the fact that they can make you older than you are. Also, it is quite difficult to hide them as they need to lot of colour correcting precision and the best make-up products. Get rid of dark circles instantly at home using almond oil, honey, or rosewater.
Story first published: Saturday, August 4, 2018, 14:58 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more